ವಿವೋದವರ 44,000 ಮೊಬೈಲ್​ ರೂ.1,947ಕ್ಕೆ ಲಭ್ಯ!


Updated:August 6, 2018, 1:58 PM IST
ವಿವೋದವರ 44,000 ಮೊಬೈಲ್​ ರೂ.1,947ಕ್ಕೆ ಲಭ್ಯ!

Updated: August 6, 2018, 1:58 PM IST
ಚೀನಾದ ಮೊಬೈಲ್​ ಸಂಸ್ಥೆ ವಿವೋ ಸ್ವಾತಂತ್ರ್ಯ ದಿನದ ಪ್ರಯುಕ್ತ ಹೊಸ ಆಫರ್​ ನೀಡಿದ್ದು, ನಿಮ್ಮ ಲಕ್​ ಚೆನ್ನಾಗಿದ್ದರೆ ಇತ್ತೀಚೆಗೆ ಬಿಡುಗಡೆ ಹೊಂದಿದ 44,000 ಮೌಲ್ಯದ ವಿವೋ ನೆಕ್ಸ್​ ಮೊಬೈಲ್​ ಕೇವಲ 1,947 ರೂ ಗೆ ಖರೀದಿ ಮಾಡಬಹುದು.

ಹೌದು! ಈ ಆಫರ್​ ಕೇವಲ ವಿವೋದವರ shop.vivo.com ನಲ್ಲಿ ಮಾತ್ರಾ ಆ.7- ಆ.9ರ ವರೆಗೆ ಲಭ್ಯವಿದೆ. ಇದರಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದ ವಿವೋದವರ ವಿವೋ ನೆಕ್ಸ್​ ಮತ್ತು ವಿವೋ ವಿ9 ಮೊಬೈಲ್​ ಕೂಡಾ ಆಫರ್​ಗೆ ಒಳಪಡಿಸಲಾಗಿದೆ. ಇನ್ನು ಫ್ಲಾಶ್ ಸೇಲ್​ನಲ್ಲಿ​ XE100 ಇಯರ್​ಫೋನ್​, ಯುಎಸ್​ಬಿ ಕೇಬಲ್​, XE680 ಪ್ರೀಮಿಯಂ ಇಯರ್​ಫೋನ್​ ಕೂಡಾ ದೊರಕುತ್ತದೆ. ಇವೆಲ್ಲವೂ ಕೇವಲ 72 ರೂ.ಗೆ ದೊರಕುತ್ತದೆ.

ಇನ್ನು ಹೆಚ್​ಡಿಎಫ್​ಸಿ ಕಾರ್ಡ್​ ಬಳಕೇದಾರರಿಗೆ ವಿವೋ ನೆಕ್ಸ್​ ಮೊಬೈಲ್ ಖರೀದಿಸಿದರೆ 4000 ಕ್ಯಾಶ್​ಬ್ಯಾಕ್​ ಲಭ್ಯವಿದೆ. ಇನ್ನು ಇಎಂಐ ಆಯ್ಕೆ ಮಾಡಲಾಗಿದೆ. ಜೀರೋ ಕಾಸ್ಟ್​ ಇಎಂಐ ಸೌಲಭ್ಯ ಕೂಡಾ ಎಲ್ಲಾ ವಿವೋ ಮೊಬೈಲ್​ಗಳಿಗೆ ನೀಡಲಾಗಿದೆ. ವಿವೋ ನೆಕ್ಸ್​, ವಿವೋ ವಿ9 ಮತ್ತು ವಿವೋ ವಿ21 ಮೊಬೈಲ್​ ಖರೀದಿಸಿದವರಿಗೆ 1,200 ಮೌಲ್ಯದ ಬ್ಲೂಟೂತ್​ ಇಯರ್​ಫೊನ್​ ಉಚಿತವಾಗಿ ನೀಡಲಾಗುತ್ತದೆ.

72ನೇ ಸ್ವಾತಂತ್ರ್ಯ ದಿನ ಅಂಗವಾಗಿ ನಾವು ಈ ಆಫರ್​ಗಳನ್ನು ನೀಡುತ್ತಿದ್ದೇವೆ, ಈ ಮೂಲಕ ನಮ್ಮ ಗ್ರಾಹಕರು ಫ್ರೀಡಂ ಕಾರ್ನಿವಲ್​ನ್ನು ವಿಭಿನ್ನವಾಗಿ ಆಚರಿಸಲಿ ಎಂದು ಆಶಿಸುವುದಾಗಿ ವಿವೋ ಭಾರತದ ಜೆರೊಮಿ ಚೆನ್​ ಹೇಳಿದ್ದಾರೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...