• Home
 • »
 • News
 • »
 • tech
 • »
 • Redmi 6A: ಇಂಥ ಆಫರ್‌ ಹಿಂದೆಂದೂ ಕಂಡಿಲ್ಲ! ಜಸ್ಟ್ ‌3999 ರೂಪಾಯಿಗೆ ಈ ಮೊಬೈಲ್‌ ಖರೀದಿಸಿ

Redmi 6A: ಇಂಥ ಆಫರ್‌ ಹಿಂದೆಂದೂ ಕಂಡಿಲ್ಲ! ಜಸ್ಟ್ ‌3999 ರೂಪಾಯಿಗೆ ಈ ಮೊಬೈಲ್‌ ಖರೀದಿಸಿ

ರೆಡ್ಮಿ 6ಎ

ರೆಡ್ಮಿ 6ಎ

ಇದೀಗ ಮಾರುಕಟ್ಟೆಗೆ ರೆಡ್ಮಿ ಸ್ಮಾರ್ಟ್‌ಫೋನ್‌ ಹಲವಾರು ಫೀಚರ್ಸ್‌ ಅನ್ನು ಹೊಂದಿದೆ. ಇದು ಗ್ರಾಹಕರಿಗೆ ಕಡಿಮೆ ದರದಲ್ಲಿ ಖರೀದಿಸಬಹುದಾಗಿದೆ. ಎಷ್ಟಿದರ ಬೆಲೆ? ಫೀಚರ್ಸ್‌ ಹೇಗಿದೆ? ಇಲ್ಲಿದೆ ಮಾಹಿತಿ.

 • Share this:

  ದಿನದಿಂದ ದಿನಕ್ಕೆ ಮೊಬೈಲ್‌ (Mobile) ಜಗತ್ತಿನಲ್ಲಿ ಹೊಸ ಹೊಸ ಬೆಲೆಯಲ್ಲಿ ಮೊಬೈಲನ್ನು ಉತ್ಪಾದಿಸುವ ಮೂಲಕ ಜನರನ್ನು ಆಕರ್ಷಿಸುತ್ತಲೇ ಇರುತ್ತದೆ. ಇದನ್ನೇ ಗ್ರಾಹಕರು ಕೂಡ ಕಾಯುತ್ತಿರುವುದರಿಂದ ಜನರು ಇಂತಹ ಆಫರ್‌ಗಳು (Offer) ಬಂದ ತಕ್ಷಣ ಕೊಳ್ಳಲು ತಯಾರಾಗುತ್ತಾರೆ. ಈಗ ರೆಡ್ಮಿ (Redmi) ಗ್ರಾಹಕರಿಗಾಗಿ ಒಂದು ವಿಶೇಷ ಬೆಲೆಯಲ್ಲಿ ಮತ್ತು ಫೀಚರ್‌ನಲ್ಲಿ (Feature) ಗ್ರಾಹಕರಿಗೆ ಲಭ್ಯವಾಗುತ್ತದೆ. ಇತ್ತೀಚಿನ ದಿಗಳಲ್ಲಿ ಮೊಬೈಲ್‌ ಇಲ್ಲದವರೇ ಇಲ್ಲ ಹಾಗಾಗಿ ಸ್ಮಾರ್ಟ್‌ಫೋನ್‌ (Smartphone) ಕಂಪನಿಗಳು (Company) ಈ ಎಲ್ಲಾ ಬದಲಾವಣೆಗಳನ್ನು ಗಮನಿಸಿ ಈ ಸಂಸ್ಥೆಗಳು ಈ ರೀತಿಯ ಯೋಜನೆಗಳನ್ನು ತರಲು ಪ್ರಯತ್ನಿಸುತ್ತದೆ.


  ಇದೀಗ ಮಾರುಕಟ್ಟೆಗೆ ರೆಡ್ಮಿ ಸ್ಮಾರ್ಟ್‌ಫೋನ್‌ ಹಲವಾರು ಫೀಚರ್ಸ್‌ ಅನ್ನು ಹೊಂದಿದೆ. ಇದು ಗ್ರಾಹಕರಿಗೆ ಕಡಿಮೆ ದರದಲ್ಲಿ ಖರೀದಿಸಬಹುದಾಗಿದೆ. ಎಷ್ಟಿದರ ಬೆಲೆ? ಫೀಚರ್ಸ್‌ ಹೇಗಿದೆ? ಇಲ್ಲಿದೆ ಮಾಹಿತಿ.


  ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಈ ಬೆಲೆಯಲ್ಲಿ ಲಭ್ಯವಿದೆ:


  ಭಾರತದಲ್ಲಿ  5000 ರೂಪಾಯಿಗಿಂತ ಕಡಿಮೆ ಸ್ಮಾರ್ಟ್‌ಫೋನ್ ಈಗಿನ ಕಾಲದಲ್ಲಿ ಪಡೆಯುವುದೇ ತುಂಬಾ ಕಷ್ಟವಾಗಿದೆ. ಆದರೆ ಇಷ್ಟು ವೆಚ್ಚದಲ್ಲಿ ಖಂಡಿತವಾಗಿಯೂ ಸಾಧ್ಯವಿಲ್ಲ. ಆದರೆ ಎಮ್‌ಐ (Mi) ಯ ಕ್ಲಿಯರೆನ್ಸ್ ಮಾರಾಟದೊಂದಿಗೆ ಖರೀದಿದಾರರಿಗೆ 3999 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿದೆ. ಇ ಕಾಮರ್ಸ್ ವೆಬ್‌ಸೈಟ್‌ಗಳು ಭಾರತದಲ್ಲಿ 6000 ರೂಪಾಯಿಗಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ನೋಡುತ್ತಿರುತ್ತದೆ.‌


  Buy Redmi mobile for just 3999 rupees Such an offer has never been seen before
  ರೆಡ್ಮಿ 6ಎ ಮೊಬೈಲ್


  ಇದನ್ನೂ ಓದಿ: ಗ್ರಾಹಕರ ಮನಕದ್ದ ರೆಡ್​ಮಿ 11 ಪ್ರೈಮ್​ 5G ಫೋನ್​! ಇದರ ಬೆಲೆ ಎಷ್ಟು?


  ಹೊಸದಾಗಿ ಬಿಡುಗಡೆಯಾದ ರೆಡ್ಮಿ ಫೋನ್‌ಗಳು ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಆದ್ದರಿಂದ ಇನ್ನು ಬರುವಂತಹ ಪ್ರೈಮ್ ಅಥವಾ ಇತರ ಸಾಧನಗಳು 6000 ರೂಪಾಯಿಗಿಂತ ಕಡಿಮೆ ಲಭ್ಯವಾಗುತ್ತದೆ ಎಂದು ನಿರೀಕ್ಷಿಸಬೇಡಿ. ಅವುಗಳ ಅರ್ಧದಷ್ಟು ಬೆಲೆಯಲ್ಲಿ ಲಭ್ಯವಿರುವ ಕೆಲವು ಫೋನ್‌ಗಳಲ್ಲಿ ರೆಡ್ಮಿ 6ಎ, ರೆಡ್ಮಿ ವೈ3, ರೆಡ್ಮಿ ನೋಟ್‌ 7 ಪ್ರೊ ಗಳು ಇವೆ. ಇದನ್ನು ಈ ಬೆಲೆಗೆ ಖರೀದಿಸಬಹುದು.


  REDMI 6A ರೂ 3999 ರೂಗಳಿಗೆ ಲಭ್ಯ


  ಕಂಪನಿಯ ಬಜೆಟ್ ಫೋನ್ ಆಗಿರುವ ರೆಡ್ಮಿ 6ಎ ಇದುವರೆಗೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ರೆಡ್ಮಿ 6ಎ ಮೂಲ ಬೆಲೆ 6999 ರೂಪಾಯಿಗಳಾಗಿದೆ. ಆದರೆ ಈಗ 3999 ರೂಪಾಯಿಗಳಿಗೆ ಲಭ್ಯವಿದೆ. ಇದರ ವಿಶೇಷ ಬೆಲೆ ಎಮ್‌ಐ ಕ್ಲಿಯರೆನ್ಸ್ ಮಾರಾಟದ ಸಮಯದಲ್ಲಿ ಮಾತ್ರ ಅನ್ವಯಿಸುತ್ತದೆ. ರೆಡ್ಮಿ 6ಎ ಅತ್ಯಂತ ವಿಶೇಷ ಫೀಚರ್‌ಗಳನ್ನು ಒಳಗೊಂಡ ಫೋನ್ ಆಗಿದೆ. ಇದು 2 ಜಿಬಿ ರ್‍ಯಾಮ್ ಮತ್ತು 16GB ಇಂಟರ್ನಲ್‌ ಸ್ಟೋರೇಜ್‌ನೊಂದಿಗೆ ಎ 22 ಪ್ರೊಸೆಸರ್‌ನಿಂದ ಲಭ್ಯವಿದೆ.


  ಈ ಮೊಬೈಲ್‌ನ ಉಪಯೋಗ:


  ನೀವು ಬಹು ಸಿಮ್ ಕಾರ್ಡ್‌ಗಳನ್ನು ಹೊಂದಿದ್ದರೆ ರೆಡ್ಮಿ 6ಎ ಉತ್ತಮ ಸೆಕೆಂಡರಿ ಫೋನ್ ಆಗಬಹುದು. ಈ ರೆಡ್ಮಿ 6ಎ ಫೋನ್ ಗುಣಮಟ್ಟದ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ ಮತ್ತು 3999 ರೂಪಾಯಿನಲ್ಲಿ ಖರೀದಿಸಬಹುದಾಗಿದೆ. ರಿಯಾಯಿತಿಯಲ್ಲಿ ಖರೀದಿಸಿದ ಫೋನ್‌ಗಳಿಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಹಾಗಾಗಿ ರೆಡ್ಮಿ 6ಎ ಅನ್ನು ರಿಯಾಯಿತಿ ದರದಲ್ಲಿ ಖರೀದಿಸುವ ಮೊದಲು ನೀವು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ.‌


  ರೆಡ್ಮಿ 6ಎ ಮೊಬೈಲ್


  ಇದೇ ರೀತಿ ಶಿಯೋಮಿ ಸಂಸ್ಥೆ ಇನ್ನೊಂದು ಸ್ಮಾರ್ಟ್‌ಫೋನ್‌ ಅನ್ನು ಇದೇ ರೀತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿತ್ತು. ಆ ಸ್ಮಾರ್ಟ್‌ಫೋನ್‌ ಯಾವುದೆಂದರೆ ರೆಡ್ಮಿ ಎ1+ ಎಂಬುದು.


  ಹೆಂಗಿದೆ ಗೊತ್ತಾ Redmi A1+ ನ ಫೀಚರ್:‌ 


  ಈ ಸ್ಮಾರ್ಟ್‌ಫೋನಿನಲ್ಲಿ ವಾಟರ್‌ಡ್ರಾಪ್  ನಾಚ್ ಶೈಲಿಯ 6.52-ಇಂಚಿನ HD+ (1,600x700 ಪಿಕ್ಸೆಲ್‌ಗಳು) ಡಿಸ್‌ಪ್ಲೇ ನೀಡಲಾಗಿದೆ. 20:9 ರೇಶಿಯೋ ಈ ಡಿಸ್‌ಪ್ಲೇಯು 120Hz ಟಚ್ ಸ್ಯಾಂಪ್ಲಿಂಗ್ ರೇಟ್, 400 nits ಹೈ ಬ್ರೈಟ್‌ನೆಸ್ ಮತ್ತು 70 ಪ್ರತಿಶತ NTSC ಕಲರ್ ಗ್ಯಾಮೆಟ್ ಫೀಚರ್‌ಅನ್ನು  ಹೊಂದಿದೆ.


  ಇದನ್ನೂ ಓದಿ: 6,999 ರೂ.ಗೆ Redmi A1+ ಸ್ಮಾರ್ಟ್‌ಫೋನ್ ರಿಲೀಸ್ ಫೀಚರ್ಸ್ ಹೇಗಿದೆ ಗೊತ್ತಾ?


  ಬೆಲೆ ಎಷ್ಟು?


  ದೇಶದಲ್ಲಿ Redmi A1+ ಸ್ಮಾರ್ಟ್‌ಫೋನಿನ ಬೆಲೆ 6,999 ರೂ.ಗಳಿಂದ ಪ್ರಾರಂಭವಾಗಿದೆ. ಇದರ ಬೇಸ್ 2GB RAM + 32GB ಸ್ಟೋರೇಜ್ ಮಾದರಿಯು 6,999 ರೂ. ಹಾಗೂ 3GB + 32GB ಮಾದರಿಯು 7,999 ರೂ. ಬೆಲೆ ಹೊಂದಿದೆ.  ಕಪ್ಪು, ತಿಳಿ ನೀಲಿ ಮತ್ತು ತಿಳಿ ಹಸಿರು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.

  Published by:Harshith AS
  First published: