• Home
 • »
 • News
 • »
 • tech
 • »
 • Cheapest Smartphones: ಕೇವಲ 599 ರೂಪಾಯಿಗೆ ಖರೀದಿಸಿ ಮೊಟೊರೊಲಾ ಮತ್ತು ರೆಡ್​ಮಿ ಸ್ಮಾರ್ಟ್​​ಫೋನ್ಸ್​!

Cheapest Smartphones: ಕೇವಲ 599 ರೂಪಾಯಿಗೆ ಖರೀದಿಸಿ ಮೊಟೊರೊಲಾ ಮತ್ತು ರೆಡ್​ಮಿ ಸ್ಮಾರ್ಟ್​​ಫೋನ್ಸ್​!

ರೆಡ್​ಮಿ 10 ಸ್ಮಾರ್ಟ್​ಫೋನ್​ ಮತ್ತು ಮೊಟೊರೊಲಾ ಜಿ32 ಸ್ಮಾರ್ಟ್​​ಫೋನ್​

ರೆಡ್​ಮಿ 10 ಸ್ಮಾರ್ಟ್​ಫೋನ್​ ಮತ್ತು ಮೊಟೊರೊಲಾ ಜಿ32 ಸ್ಮಾರ್ಟ್​​ಫೋನ್​

ಇದೀಗ ಫ್ಲಿಪ್​ಕಾರ್ಟ್​​ ಮೊಟೊರೊಲಾ ಮತ್ತು ರೆಡ್​ಮಿ 10 ಸ್ಮಾರ್ಟ್​ಪೋನ್​ ಅನ್ನು ಊಹೆಯೂ ಮಾಡದಷ್ಟು ಆಫರ್​ನಲ್ಲಿ ಮಾರಾಟ ಮಾಡುತ್ತಿದೆ. ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್​ ಖರೀದಿ ಮಾಡಬೇಕೆಂದುಕೊಂಡವರಿಗೆ ಇದು ಉತ್ತಮ ಆಯ್ಕೆಯಾಗಿದೆ.

 • Share this:

  ಸ್ಮಾರ್ಟ್​​​ ಫೋನ್​ಗಳು (Smartphones) ಟೆಕ್ನಾಲಜಿ​ ಜಗತ್ತನ್ನು ಅಗಾಧವಾಗಿ ಬದಲಾವಣೆ ಮಾಡಿದ ಒಂದು ಸಾಧನ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್ ​​ಫೋನ್​ಗಳು ಬಿಡುಗಡೆಯಾಗುತ್ತಲೇ ಇದೆ. ಕಂಪೆನಿಗಳು ಕೂಡ ಉತ್ತಮ ಫೀಚರ್ಸ್​ಗಳನ್ನು ಒಳಗೊಂಡಂತಹ ಮೊಬೈಲ್​ಗಳನ್ನು ಪರಿಚಯ ಮಾಡುತ್ತಿದೆ. ಅದೇ ರೀತಿ ಜನಪ್ರಿಯ ಇಕಾಮರ್ಸ್​​ ಕಂಪೆನಿಗಳು ಯಾವುದೇ ಹಬ್ಬ, ಸಂಭ್ರಮಾಚರಣೆಗಳು ಬಂದಾಗ ಗ್ಯಾಜೆಟ್ಸ್​​ಗಳ (Gadgets) ಮೇಲೆ, ಸ್ಮಾರ್ಟ್​​ಫೋನ್​ಗಳ ಮೇಲೆ ವಿಶೇಷ ಆಫರ್​ ಅನ್ನು ಬಿಡುಗಡೆ ಮಾಡುತ್ತವೆ. ಇದೀಗ ಫ್ಲಿಪ್ ​​ಕಾರ್ಟ್​​​ನಲ್ಲಿ (Flipkart)​​ ಎರಡು ಸ್ಮಾರ್ಟ್​ ಫೋನ್​ಗಳನ್ನು ಬಂಪರ್ ಆಫರ್​​ನಲ್ಲಿ ಖರೀದಿಸಬಹುದಾಗಿದೆ. 


  ಹೌದು, ಇದೀಗ ಫ್ಲಿಪ್​ ಕಾರ್ಟ್​​ ಮೊಟೊರೊಲಾ ಮತ್ತು ರೆಡ್​ಮಿ 10 ಸ್ಮಾರ್ಟ್​ಪೋನ್​ ಅನ್ನು ಊಹೆಯೂ ಮಾಡದಷ್ಟು ಆಫರ್​ನಲ್ಲಿ ಮಾರಾಟ ಮಾಡುತ್ತಿದೆ. ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್​ ಖರೀದಿ ಮಾಡಬೇಕೆಂದುಕೊಂಡವರಿಗೆ ಇದು ಉತ್ತಮ ಆಯ್ಕೆಯಾಗಿದೆ.


  ಮೊಟೊರೊಲಾ ಜಿ32 ಸ್ಮಾರ್ಟ್​​ಫೋನ್​ 


  ಮೊಟೊರೊಲಾ ಜಿ32 ಸ್ಮಾರ್ಟ್​​ಫೋನ್ ಇದೀಗ ಫ್ಲಿಪ್​ ಕಾರ್ಟ್​ನಲ್ಲಿ ಖರೀದಿ ಮಾಡುವ ಮೂಲಕ ಭಾರೀ ಉಳಿತಾಯವನ್ನು ಪಡೆಯಬಹುದಾಗಿದೆ. ಫ್ಲಿಪ್ ​ಕಾರ್ಟ್​​ ತನ್ನ ಗ್ರಾಹಕರಿಗಾಗಿ ಇದುವರೆಗೆ ನೀಡದ ಕೊಡುಗೆಗಳನ್ನು ಇದೀಗ ನೀಡಿದೆ. ಈ ಆಫರ್​ ಮೂಲಕ ಗ್ರಾಹಕರು 16,999 ರೂಪಾಯಿ ಬೆಲಯ ಸ್ಮಾರ್ಟ್ ​ಫೋನ್​ ಅನ್ನು ಬಹಳಷ್ಟು ಅಗ್ಗದ ಬೆಲೆಯಲ್ಲಿ ಹೊಂದಬಹುದಾಗಿದೆ. ಅಂದರೆ ಈ ಸ್ಮಾರ್ಟ್​​ ಫೋನ್​ ಮೇಲೆ ಫ್ಲಿಪ್​​ ಕಾರ್ಟ್​​ 41% ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿ ಮೂಲಕ ಮೊಟೊರೊಲಾ ಜಿ32 ಸ್ಮಾರ್ಟ್​​​​ ಫೋನ್​ ಅನ್ನು ಕೇವಲ 9999 ರೂಪಾಯಿಗೆ ಖರೀದಿ ಮಾಡಬಹುದು.
  ಇನ್ನು ಈ ಸ್ಮಾರ್ಟ್​​ ಫೋನ್​ ಮೇಲೆ ಎಕ್ಸ್​​​ಚೇಂಜ್​ ಆಫರ್​ ಸಹ ಲಭ್ಯವಿದೆ. ಒಂದು ವೇಳೆ ನಿಮ್ಮ ಹಳೆಯ ಫೋನ್ ಅನ್ನು ಈ ಹೊಸ ಫೋನ್​ನ ಖರೀದಿಯೊಂದಿಗೆ ವಿನಿಮಯ ಮಾಡಿಕೊಳ್ಳುವುದಾದರೆ 9400 ರೂಪಾಯಿಯಷ್ಟು ಎಕ್ಸ್​​ಚೇಂಜ್​ ಆಫರ್​​ ಅನ್ನು ಪಡೆಯುತ್ತೀರಿ. ಈ ಆಫರ್​ ಅನ್ನು ಲೆಕ್ಕ ಹಾಕುವ ಮೂಲಕ  ಮೊಟೊರೊಲಾ ಜಿ32 ಸ್ಮಾರ್ಟ್​​ ಫೋನ್ ಅನ್ನು ಕೇವಲ 599 ರೂಪಾಯಿಗೆ ಖರೀದಿಸಬಹುದು. ಆದರೆ ಈ ಎಕ್ಸ್​​ಚೇಂಜ್ ಆಫರ್​ನ ಬೆಲೆ ನೀವು ವಿನಿಮಯ ಮಾಡಲು ಬಯಸುವ ಮೊಬೈಲ್​ನ ಮಾದರಿ ಮತ್ತು ಗುಣಮಟ್ಟದ ಆಧಾರದ ಮೇಲೆ ನಿರ್ಧಾರವಾಗುತ್ತದೆ.


  ಫೀಚರ್ಸ್​ ಹೇಗಿದೆ?


  ಇನ್ನು ಈ ಸ್ಮಾರ್ಟ್​ ಫೋನ್​ ಫೀಚರ್ಸ್​ ಬಗ್ಗೆ ನೋಡುವುದಾದರೆ, ಇದು 4 ಜಿಬಿ ರ್‍ಯಾಮ್ + 64ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಫೋನ್  6.55 ಇಂಚಿನ ಫುಲ್ ಹೆಚ್​ಡಿ+ ಡಿಸ್ಪ್ಲೇ ಹೊಂದಿದೆ. ಜೊತೆಗೆ 50ಎಮ್​ಪಿ + 8ಎಮ್​ಪಿ + 2ಎಮ್​​ಪಿ ಕ್ಯಾಮೆರಾವನ್ನು ಒಳಗೊಂಡಿದೆ. ಮೊಟೊರೊಲಾ ಜಿ32 ಸ್ಮಾರ್ಟ್​​ಫೋನ್​ನಲ್ಲಿ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್​ ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಫೋನ್ 5000 mAh ನ ದೊಡ್ಡ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.


  ರೆಡ್​ಮಿ 10 ಸ್ಮಾರ್ಟ್​ಫೋನ್​ ಮತ್ತು ಮೊಟೊರೊಲಾ ಜಿ32 ಸ್ಮಾರ್ಟ್​​ಫೋನ್​


  ರೆಡ್​ಮಿ 10 ಸ್ಮಾರ್ಟ್​ಫೋನ್​ 


  ಇದೀಗ ಫ್ಲಿಪ್​ ಕಾರ್ಟ್​​  ರೆಡ್​ಮಿ ಕಂಪೆನಿಯಿಂದ ಇತ್ತೀಚೆಗೆ ಬಿಡುಗಡೆಯಾದಂತಹ ರೆಡ್​​ಮಿ 10 ಸ್ಮಾರ್ಟ್ ​​​ಫೋನ್​ ಮೇಲೆ ಆಫರ್​ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್​​ ಫೋನ್​ನ ಮೂಲ ಬೆಲೆ  14,999 ರೂಪಾಯಿ. ಆದರೆ ಈಗ ಫ್ಲಿಪ್​ ಕಾರ್ಟ್​​ನಲ್ಲಿ ಈ  ಫೋನ್ ಮೇಲೆ  33% ರಿಯಾಯಿತಿಯನ್ನು ಪಡೆಯಬಹುದಾಗಿದೆ. ಅಂದರೆ ರಿಯಾಯಿತಿ ಮೂಲಕ ಈ ಸ್ಮಾರ್ಟ್‌ ಫೋನ್‌ ಅನ್ನು ಸಹ ಕೇವಲ 9999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.


  ಇದನ್ನೂ ಓದಿ: ಟೆಕ್ನೋ ಕಂಪೆನಿಯಿಂದ ಹೊಸ ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್ ಅನಾವರಣ! ಫೀಚರ್ಸ್​ ಹೇಗಿದೆ?


  ವಿಶೇಷವಾಗಿ ಈ ಸ್ಮಾರ್ಟ್​​​ ಫೋನ್​ನಲ್ಲಿ ಎಕ್ಸ್​​ಚೇಂಜ್​ ಆಫರ್​ ಸಹ ಲಭ್ಯವಿದೆ. ಫ್ಲಿಪ್​ ಕಾರ್ಟ್​​ ಈ ಸ್ಮಾರ್ಟ್​​ ಫೋನ್​ನಲ್ಲಿ 9400 ರೂಪಾಯಿಯಷ್ಟು ಎಕ್ಸ್​​ಚೇಂಜ್ ಆಫರ್​ ಲಭ್ಯವಿದೆ. ನಿಮ್ಮ, ಹಳೆಯ ಫೋನ್​ ಅನ್ನು ಕೊಟ್ಟು ಈ ರೆಡ್​ಮಿ 10 ಫೋನ್ ಅನ್ನು ಖರೀದಿಸುವುದಾದರೆ ಕೇವಲ 599 ರೂಪಾಯಿಗೆ ಪಡೆಯಬಹುದು. ಆದರೆ ಈ ಎಕ್ಸ್​​​ಚೇಂಜ್​ ಆಫರ್​ ಮಾತ್ರ ನೀವು ವಿನಿಮಯ ಮಾಡಲು ಬಯಸುವ ಸ್ಮಾರ್ಟ್​​ಫೋನ್​ನ ಮಾದರಿ ಮತ್ತು ಗುಣಮಟ್ಟದ ಆಧಾರದ ಮೇಲೆ ನಿರ್ಧಾರವಾಗುತ್ತದೆ.

  Published by:Prajwal B
  First published: