ಟೆಕ್ನಾಲಜಿ ಮಾರುಕಟ್ಟೆಯಲ್ಲಿ (Technology) ಹೊಸ ಹೊಸ ಸ್ಮಾರ್ಟ್ಫೋನ್ಗಳು (New Smartphones) ಬಿಡುಗಡೆಯಾಗುತ್ತಲೇ ಇದೆ. ಯಾವುದೇ ಒಂದು ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರು ಖರೀದಿಸಬೇಕಾದರೂ ಮೊದಲಿಗೆ ಅದರ ಬೆಲೆ ಮತ್ತು ಫೀಚರ್ಸ್ ಅನ್ನು ನೋಡೇ ನೋಡುತ್ತಾರೆ. ಇದೀಗ ಲಾವಾ ಕಂಪನಿಯಿಂದ (Lava Company) ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಈ ಸ್ಮಾರ್ಟ್‌ಫೋನ್ 10 ಸಾವಿರಕ್ಕಿಂತಲೂ ಕಡಿಮೆ ಬೆಲೆಯೊಂದಿಗೆ ಉತ್ತಮ ಸ್ಮಾರ್ಟ್‌ಫೋನ್ ಎಂದು ಮಾರುಕಟ್ಟೆಯಲ್ಲಿ ಗುರುತಿಸಲಿದೆ. ಇದು ಈ ವರ್ಷದ ಆರಂಭದಲ್ಲಿ ದೇಶದಲ್ಲಿ ಬಿಡುಗಡೆಯಾದ ಲಾವಾ ಎಕ್ಸ್2ನ (Lava X2) ಅಪ್‌ಗ್ರೇಡ್ ಮಾಡೆಲ್ ಆಗಿರುತ್ತದೆ. ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ಮೊದಲೇ ಅಮೆಜಾನ್‌ನಲ್ಲಿ ಮೈಕ್ರೋ-ಸೈಟ್‌ನಲ್ಲಿ ಈ ಮೊಬೈಲ್ನ ಕೆಲವು ವಿಶೇಷಣಗಳ ಬಗ್ಗೆ ಮಾಹಿತಿಯನ್ನು ಸೈಟ್‌ನಲ್ಲಿ ನೀಡಲಾಗಿದೆ.
ಲಾವಾ ಕಂಪನಿಯಿಂದ ಬಿಡುಗಡೆಯಾಗುತ್ತಿರುವಂತಹ ಸ್ಮಾರ್ಟ್ಫೋನ್ಗೆ ಲಾವಾ ಎಕ್ಸ್3 ಎಂದು ಹೆಸರಿಡಲಾಗಿದೆ. ಇದು ಇದೇ ಡಿಸೆಂಬರ್ 20ರ ನಂತರ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು, 10 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಈ ಮೊಬೈಲ್ ಅನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ ಇದರ ಸ್ಪೆಷಲ್ ಫೀಚರ್ಸ್ ಎಂಬುದನ್ನು ಇಲ್ಲಿ ಓದಿ.
ಲಾವಾ ಎಕ್ಸ್3 ಸ್ಮಾರ್ಟ್‌ಫೋನ್ ಫೀಚರ್ಸ್
ಈ ಲಾವಾ ಎಕ್ಸ್3 ಸ್ಮಾರ್ಟ್‌ಫೋನ್ ಅನ್ನು ಪ್ರಿಬುಕ್ಕಿಂಗ್ ಅನ್ನು ಮಾಡುವ ಅವಕಾಶವನ್ನು ಡಿಸೆಂಬರ್ 20 ರಂದು ಅಮೆಜಾನ್‌ನಲ್ಲಿ ಪ್ರಾರಂಭವಾಗುತ್ತದೆ. 10,000 ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಪ್ರಾರಂಭಿಸಲಾಗುವುದು. ಕಂಪನಿಯು ಈ ಸ್ಮಾರ್ಟ್ ಫೋನ್‌ನಲ್ಲಿ 3ಜಿಬಿ ರ್‍ಯಾಮ್ ಅನ್ನು ನೀಡುತ್ತದೆ. ಸದ್ಯಕ್ಕೆ ಈ ಲಾವಾ ಎಕ್ಸ್3 ಫೋನ್ ಕೇವಲ ಒಂದು ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ.
ಇದನ್ನೂ ಓದಿ: 2022 ಟಾಪ್ 5 ಸ್ಮಾರ್ಟ್ವಾಚ್ಗಳು ಯಾವುದು? ಇಲ್ಲಿದೆ ಕಂಪ್ಲೀಟ್ ಮಾಹಿತಿ
ನೆಕ್‌ಬ್ಯಾಂಡ್ ಫ್ರೀ
ಡಿಸೆಂಬರ್ 20 ರಂದು ಫೋನ್ ಅನ್ನು ಮುಂಗಡವಾಗಿ ಆರ್ಡರ್ ಮಾಡುವ ಗ್ರಾಹಕರು 2,999 ರೂಪಾಯಿ ಮೌಲ್ಯದ ಲಾವಾ ಪ್ರೋಬಡ್ಸ್ ಎನ್11 ನೆಕ್‌ಬ್ಯಾಂಡ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಇನ್ನು ಲಾವಾ ಎಕ್ಸ್3 ಸ್ಮಾರ್ಟ್‌ಫೋನ್ ನೀಲಿ, ಕಪ್ಪು ಮತ್ತು ಹಸಿರು ಈ ರೀತಿ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಬರುವ ನಿರೀಕ್ಷೆಯಿದೆ.
ಡಿಸ್ಪ್ಲೇ ಫೀಚರ್ಸ್
ಲಾವಾ ಎಕ್ಸ್3 ಸ್ಮಾರ್ಟ್‌ಫೋನ್ ಹೆಚ್ಡಿ ಪ್ಲಸ್ ರೆಸಲ್ಯೂಶನ್ ಜೊತೆಗೆ 6.5-ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು ಬಜೆಟ್ ಸ್ಮಾರ್ಟ್‌ಫೋನ್ ಆಗಿರುವುದರಿಂದ, ಇದು ವಾಟರ್-ಡ್ರಾಪ್ ನಾಚ್ ಪ್ಯಾನೆಲ್ ಅನ್ನು ಒಳಗೊಂಡಿದೆ. ಕ್ಯಾಮೆರಾಗಳ ಬಗ್ಗೆ ಹೇಳುವುದಾದರೆ, ಸೆಲ್ಫಿಗಳನ್ನು ತೆಗೆದುಕೊಳ್ಳಲು ಮುಂಭಾಗದಲ್ಲಿ 5ಮೆಗಾಪಿಕ್ಸೆಲ್ ಸಿಂಗಲ್ ಶೂಟರ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್ ಮತ್ತು AI ಸೆನ್ಸಾರ್ನೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ.
ಸ್ಟೋರೇಜ್
ವರದಿಗಳಲ್ಲಿ ಸ್ಮಾರ್ಟ್ಫೋನ್ನಲ್ಲಿ ಕಾರ್ಯನಿರ್ವಹಿಸುವಂತಹ ಪ್ರೊಸೆಸರ್ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಕೆಲವೊಂದು ವರದಿಯ ಪ್ರಕಾರ, ಇದು ಯುನಿಸೊಕ್ ಅಥವಾ ಮೀಡಿಯಾ ಟೆಕ್ ಚಿಪ್‌ಸೆಟ್ ಅನ್ನು ಹೊಂದಿರುತ್ತದೆ. ಇದಲ್ಲದೆ, ಲಾವಾ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹೆಲಿಯೊ ಚಿಪ್‌ಸೆಟ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಇದು 3ಜಿಬಿ ರ್‍ಯಾಮ್ ಅನ್ನು ಹೊಂದಿರುತ್ತದೆ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿರಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬ್ಯಾಟರಿ ಫೀಚರ್ಸ್
ಸಾಧನವು 4,000mAh ಬ್ಯಾಟರಿಯನ್ನು ಹೊಂದಿರುತ್ತದೆ. ಮತ್ತು ವೇಗದ ಚಾರ್ಜಿಂಗ್ ಬೆಂಬಲವನ್ನು ಈ ಸ್ಮಾರ್ಟ್‌ಫೋನ್ ಹೊಂದಿಲ್ಲ. ಇನ್ನು ಈ ಸ್ಮಾರ್ಟ್ಫೋನ್ನ ಭದ್ರತೆಗಾಗಿ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ ಎಂದು ವರದಿ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ