ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ (Smartphone Market) ಹೊಸ ಹೊಸ ಮಾದರಿಯ ಸ್ಮಾರ್ಟ್ಫೋನ್ಗಳು ಬರುತ್ತಲೇ ಇರುತ್ತವೆ. ಅದೇ ರೀತಿ ಹಳೆಯ ಸ್ಮಾರ್ಟ್‌ಫೋನ್ (Old Smartphones) ಗಳಿಗೆ ಮಾರುಕಟ್ಟೆಯಲ್ಲಿ ಈಗಲೂ ಬೇಡಿಕೆಯಿದೆ. ಇದಕ್ಕೆ ಕಾರಣ ಆ ಸ್ಮಾರ್ಟ್ಫೋನ್ಗಳಲ್ಲಿರುವಂತಹ ಫೀಚರ್ಸ್ಗಳಂತಾನೇ ಹೇಳ್ಬಹುದು. ಮೊಬೈಲ್ ಮಾರುಕಟ್ಟೆಯಲ್ಲಿ ಇನ್ನೂ ಮೊಬೈಲ್ಗಳಿಗೆ ಬೇಡಿಕೆ ಹೆಚ್ಚಾಗಲು ಮುಖ್ಯ ಕಾರಣ ಇಕಾಮರ್ಸ್ ವೆಬ್ಸೈಟ್ಗಳು ಎಂದು ಹೇಳ್ಬಹುದು. ಈ ವೆಬ್ಸೈಟ್ಗಳು ತನ್ನ ಗ್ರಾಹಕರಿಗಾಗಿ ಪ್ರತೀ ಬಾರಿ ಏನಾದರೊಂದು ವಿಶೇಷ ಸೇಲ್ಗಳನ್ನು ಆರಂಭಿಸುತ್ತಲೇ ಇರುತ್ತದೆ. ಇದರಲ್ಲಿ ವಿಶೇಷವಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚು ಕೊಡುಗೆಗಳನ್ನು ನೀಡುತ್ತಾರೆ. ಇದೀಗ ಫ್ಲಿಪ್ಕಾರ್ಟ್ಎಲೆಕ್ಟ್ರಾನಿಕ್ಸ್ ಸೇಲ್ (Flipkart Electronic Sale) ಆರಂಭವಾಗಿದ್ದು, ಈ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್ ಆಫರ್ಸ್ಗಳು ಲಭ್ಯವಿದೆ.
ಫ್ಲಿಪ್ಕಾರ್ಟ್ ಇದೀಗ ತನ್ನ ವೆಬ್ಸೈಟ್ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್‌ನಲ್ಲಿ ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿಯನ್ನು ಘೋಷಿಸಿದ್ದು, ಸ್ಮಾರ್ಟ್‌ಫೋನ್ ಖರೀದಿ ಮಾಡುವ ಪ್ಲ್ಯಾನ್ನಲ್ಲಿದ್ದವರಿಗೆ ಇದು ಉತ್ತಮ ಸಮಯವಾಗಿದೆ. ಹಾಗಿದ್ರೆ ಫ್ಲಿಪ್ಕಾರ್ಟ್ನ ಈ ಸೇಲ್‌ನಲ್ಲಿ ಯಾವ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ರಿಯಾಯಿತಿ ಇದೆ, ಏನೆಲ್ಲಾ ಆಫರ್ಸ್ಗಳಿವೆ ಎಂಬದನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.
ಶಿಯೋಮಿ 11ಐ ಹೈಪರ್ಚಾರ್ಜ್ ಸ್ಮಾರ್ಟ್‌ಫೋನ್
ಫ್ಲಿಪ್ಕಾರ್ಟ್ನ ಈ ಎಲೆಕ್ಟ್ರಾನಿಕ್ ಸೇಲ್‌ನಲ್ಲಿ ಶಿಯೋಮಿ 11ಐ ಹೈಪರ್ಚಾರ್ಜ್ ಅನ್ನು ಭಾರೀ ಅಗ್ಗದಲ್ಲಿ ಮಾರಾಟ ಮಾಡುತ್ತಿದೆ. ಶಿಯೋಮಿ ಕಂಪೆನಿಯಿಂದ ಬಿಡುಗಡೆಯಾದ ಈ ಸ್ಮಾರ್ಟ್ಫೋನ್ನ ಮೂಲ ಬೆಲೆ 31,999 ರೂಪಾಯಿ ಆಗಿದೆ. ಆದರೆ ಫ್ಲಿಪ್ಕಾರ್ಟ್ನ ಆಫರ್ ಮೂಲಕ ಈ ಸ್ಮಾರ್ಟ್‌ಫೋನ್ ಅನ್ನು ಕೇವಲ 24,999 ರೂಪಾಯಿಗೆ ಖರೀದಿ ಮಾಡಬಹುದು.
ಅಂದರೆ ಈ ಫೋನ್ ಮೇಲೆ ಬರೋಬ್ಬರಿ 7 ಸಾವಿರ ರೂಪಾಯಿವರೆಗೆ ರಿಯಾಯಿತಿ ಲಭ್ಯವಿದೆ. ಇದಲ್ಲದೆ ಈ ಸ್ಮಾರ್ಟ್ಫೋನ್ನಲ್ಲಿ ಬ್ಯಾಂಕ್ ಹಾಗೂ ಎಕ್ಸ್ಚೇಂಜ್ ಆಫರ್ ಸಹ ಲಭ್ಯವಿದೆ. ಈ ಮೂಲಕ ಇನ್ನೂ ಅಗ್ಗದಲ್ಲಿ ಶಿಯೋಮಿ 11ಐ ಹೈಪರ್ಚಾರ್ಜ್ ಸ್ಮಾರ್ಟ್‌ಫೋನ್ ಅನ್ನು ಪಡೆಯಬಹುದು.
ಎಕ್ಸ್ಚೇಂಜ್ ಆಫರ್ ಹೇಗಿದೆ?
ಶಿಯೋಮಿ 11ಐ ಹೈಪರ್ಚಾರ್ಜ್ ಸ್ಮಾರ್ಟ್‌ಫೋನ್ ಅನ್ನು ಎಕ್ಸ್ಚೇಂಜ್ ಆಫರ್ ಮೂಲಕವೂ ಖರೀದಿ ಮಾಡಬಹುದು. ಹಳೆಯ ಸ್ಮಾರ್ಟ್‌ಫೋನ್ ಅನ್ನು ಎಕ್ಸ್ಚೇಂಜ್ ಮಾಡಿ ಹೊಸ ಫೋನ್ ಖರೀದಿಸಲು ಬಯಸಿದರೆ ನಿಮ್ಮ ಹಳೆಯ ಫೋನ್ಗೆ 23,000 ರೂಪಾಯಿಯ ಎಕ್ಸ್ಚೇಂಜ್ ಆಫರ್ ಸಿಗಲಿದೆ. ಆದರೆ ಈ 23 ಸಾವಿರ ರೂಪಾಯಿ ನೀವು ಎಕ್ಸ್ಚೇಂಜ್ ಮಾಡಲು ಬಯಸುವ ಹಳೆಯ ಫೋನ್ನ ಗುಣಮಟ್ಟ ಮತ್ತು ಮಾದರಿಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಈ ಎಕ್ಸ್ಚೇಂಜ್ ಆಫರ್ ಅನ್ನು ಸಂಪೂರ್ಣವಾಗಿ ಪಡೆದರೆ ಕೇವಲ 2000 ರೂಪಾಯಿ ಶಿಯೋಮಿಯ ಹೊಸ ಫೋನ್ ಅನ್ನು ನಿಮ್ಮದಾಗಿಸಬಹುದು.
ಬ್ಯಾಂಕ್ ಆಫರ್ಸ್ ಹೇಗಿದೆ?
ಇನ್ನು ನಿಮಗೆ ಸ್ಮಾರ್ಟ್‌ಫೋನ್ ಅನ್ನು ಎಕ್ಸ್ಚೇಂಜ್ ಮಾಡಲು ಇಷ್ಟವಿಲ್ಲದಿದ್ದರೆ, ಬ್ಯಾಂಕ್ ರಿಯಾಯಿತಿ ಮೂಲಕ ಖರೀದಿಸಿ ಶಿಯೋಮಿ 11ಐ ಹೈಪರ್ಚಾರ್ಜ್ ಸ್ಮಾರ್ಟ್‌ಫೋನ್ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು. ಇನ್ನು ಯಾವುದೇ ಬ್ಯಾಂಕ್ನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದಾದರೆ, 3 ಸಾವಿರ ರೂಪಾಯಿಗಳಷ್ಟು ರಿಯಾಯಿತಿ ದೊರೆಯುತ್ತದೆ. ಹಾಗೆಯೇ ಕೋಟಕ್ ಬ್ಯಾಂಕ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದಾದರೆ 750 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.
ಇದನ್ನೂ ಓದಿ: ವಾಟ್ಸಾಪ್ ಬಳಕೆದಾರರಿಗೆ ಗುಡ್ನ್ಯೂಸ್! ಮತ್ತೊಂದು ಹೊಸ ಫೀಚರ್ ಬಿಡುಗಡೆ ಮಾಡಿದ ಕಂಪೆನಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ