• Home
  • »
  • News
  • »
  • tech
  • »
  • Washing Mechine: ಕೇವಲ 5 ಸಾವಿರ ರೂಪಾಯಿಗೆ ಖರೀದಿಸಿ ವಾಷಿಂಗ್ ಮೆಷಿನ್! ಬಂದಿದೆ ನೋಡಿ ಬಂಪರ್​ ಆಫರ್​

Washing Mechine: ಕೇವಲ 5 ಸಾವಿರ ರೂಪಾಯಿಗೆ ಖರೀದಿಸಿ ವಾಷಿಂಗ್ ಮೆಷಿನ್! ಬಂದಿದೆ ನೋಡಿ ಬಂಪರ್​ ಆಫರ್​

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ನಮಗೆ ಮಾರುಕಟ್ಟೆಯಲ್ಲಿ ಹೊಸ ಹೊಸ ಆಫರ್ಸ್​ಗಳನ್ನು ಪರಿಚಯ ಮಾಡ್ತಾ ಇದ್ದಾರೆ. ಇದೀಗ ವಾಷಿಂಗ್​ ಮೆಷಿನ್​ಗಳ ಮೇಲೆ ಪ್ರತಿಷ್ಠಿತ ಇಕಾಮರ್ಸ್​ ಕಂಪನಿಯಾಗಿರುವ ಫ್ಲಿಪ್​ಕಾರ್ಟ್​​ ಭಾರೀ ಡಿಸ್ಕೌಂಟ್​ನಲ್ಲಿ ವಾಷಿಂಗ್ ಮೆಷಿನ್​ಗಳನ್ನು ಮಾರಾಟ ಮಾಡುತ್ತಿದೆ.

ಮುಂದೆ ಓದಿ ...
  • Share this:

    ಬಿಡುವಿಲ್ಲದ ಸಮಯವಿದು ಎಲ್ಲವೂ ಕಾಲಡಿಗೆ ತಂದು ಕೊಡುವಂತಹ ಟೆಕ್ನಾಲಜಿಗಳು (Technology) ಇದೀಗ ಮಾರುಕಟ್ಟೆಯಲ್ಲಿ ಬಂದಿವೆ. ಅದ್ರಲ್ಲೂ ಕೊರೊನಾ ಬಂದ ನಂತರವಂತೂ ತಂತ್ರಜ್ಞಾನ ಕಂಪನಿಗಳು ಸಾಕಷ್ಟು ಅಭಿವೃದ್ಧಿಯನ್ನು ಕಂಡಿವೆ. ಇತ್ತೀಚೆಗೆ ಪಾತ್ರೆ ತೊಳೆಯುವುದರಿಂದ ಹಿಡಿದು ಬಟ್ಟೆ ತೊಳೆಯುವವರೆಗೂ ಕ್ಷಣಮಾತ್ರದಲ್ಲಿ ಕೆಲಸ ಮಾಡಿ ಮುಗಿಸುವಂತಹ ಸಾಧನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ಸಾಧನಗಳಲ್ಲಿ ವಾಷಿಂಗ್​ ಮೆಷಿನ್ (Washing Machine) ಕೂಡ ಒಂದು ಅಂತಾನೂ ಹೇಳ್ಬಹುದು. ಇತ್ತೀಚಿನ ದಿನಗಳಲ್ಲಿ ವಾಷಿಂಗ್​ ಮೆಷಿನ್​​ ಇಲ್ಲದ ಮನೆಯೇ ಇಲ್ಲ. ಯಾಕೆಂದರೆ ಎಲೆಕ್ಟ್ರಾನಿಕ್ಸ್​ (Electronics) ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆಯಲ್ಲಿರುವ ಸಾಧನಗಳಲ್ಲಿ ವಾಷಿಂಗ್​ ಮೆಷಿನ್​ ಕೂಡ ಒಂದಾಗಿದೆ. ಇದೀಗ ಈ ವಾಷಿಂಗ್​ ಮೆಷಿನ್​ಗಳನ್ನು ಭರ್ಜರಿ ಆಫರ್ಸ್​ನೊಂದಿಗೆ ಮಾರಾಟ ಮಾಡುತ್ತಿದ್ದಾರೆ.


    ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ನಮಗೆ ಮಾರುಕಟ್ಟೆಯಲ್ಲಿ ಹೊಸ ಹೊಸ ಆಫರ್ಸ್​ಗಳನ್ನು ಪರಿಚಯ ಮಾಡ್ತಾ ಇದ್ದಾರೆ. ಇದೀಗ ವಾಷಿಂಗ್​ ಮೆಷಿನ್​ಗಳ ಮೇಲೆ ಪ್ರತಿಷ್ಠಿತ ಇಕಾಮರ್ಸ್​ ಕಂಪನಿಯಾಗಿರುವ ಫ್ಲಿಪ್​ಕಾರ್ಟ್​​ ಭಾರೀ ಡಿಸ್ಕೌಂಟ್​ನಲ್ಲಿ ವಾಷಿಂಗ್ ಮೆಷಿನ್​ಗಳನ್ನು ಮಾರಾಟ ಮಾಡುತ್ತಿದೆ. ವಾಷಿಂಗ್ ಮೆಷಿನ್​ಗಳನ್ನು ಖರೀದಿ ಮಾಡಬೇಕೆಂದು ಅಂದುಕೊಂಡವರಿಗೆ ಇದು ಉತ್ತಮ ಆಯ್ಕೆಯಾಗಿದೆ.


    ಫ್ಲಿಪ್​ಕಾರ್ಟ್​ ಆಫರ್ಸ್​


    ಫ್ಲಿಪ್​ಕಾರ್ಟ್​​ ಇದೇ ಡಿಸೆಂಬರ್​​ನಲ್ಲಿ ಬಿಗ್​ ಸೇವಿಂಗ್​​ ಡೇಸ್​ ಸೇಲ್​ ಅನ್ನು ಆರಂಭಿಸಿತ್ತು. ಈ ಸೇಲ್​ನಲ್ಲಿ ಫ್ಲಿಪ್​ಕಾರ್ಟ್​​ ಹಲವಾರು ಗ್ಯಾಜೆಟ್​​ಗಳನ್ನು, ಎಲೆಕ್ಟ್ರಾನಿಕ್ಸ್​ ಸಾಧನಗಳನ್ನು ಬಹಳಷ್ಟು ಆಫರ್ಸ್​ನಲ್ಲಿ ಸೇಲ್​ ಮಾಡಿತ್ತು. ಇದೀಗ ಫ್ಲಿಪ್​ಕಾರ್ಟ್​ ವಾಷಿಂಗ್​ ಮೆಷಿನ್​ಗಳ ಮೇಲೆ ರಿಯಾಯಿತಿ ಸೇಲ್​ ಅನ್ನು ಪ್ರಾರಂಭಿಸಿದೆ. ಈ ಸೇಲ್​ನಲ್ಲಿ ಗ್ರಾಹಕರು ಉತ್ತಮ ಗುಣಮಟ್ಟದ ವಾಷಿಂಗ್​ ಮೆಷಿನ್​ಗಳನ್ನು 6 ಸಾವಿರ ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಪಡೆಯಬಹುದಾಗಿದೆ.


    ಇದನ್ನೂ ಓದಿ: ದೇಶದೆಲ್ಲೆಡೆ ಜಿಯೋ 5ಜಿ ಸೇವೆ ಲಭ್ಯ! ನಿಮ್ಮ ಮೊಬೈಲ್​ನಲ್ಲಿ ಈ ಸೇವೆಯನ್ನು ಆ್ಯಕ್ಟಿವ್​ ಮಾಡುವುದು ಹೇಗೆ?


    ಸದ್ಯ ಫ್ಲಿಪ್​ಕಾರ್ಟ್​ನಲ್ಲಿ ಆಫರ್​ ಸೇಲ್​ನಲ್ಲಿರುವ ಸಾಧನ ಯಾವುದು?


    ಫ್ಲಿಪ್​ಕಾರ್ಟ್​ ಸದ್ಯ ತನ್ನ ವೆಬ್​ಸೈಟ್​ನಲ್ಲಿ ವಾಷಿಂಗ್​ ಮೆಷಿನ್​ಗಳನ್ನು ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಇದೀಗ ಥಾಮ್ಸನ್ ಕಂಪನಿಯ ವಾಷಿಂಗ್​ ಮೆಷಿನ್​ ಅನ್ನು ಭಾರೀ ಅಗ್ಗದಲ್ಲಿ ಖರೀದಿಸುವ ಅವಕಾಶವಿದೆ.


    ಥಾಮ್ಸನ್​ ವಾಷಿಂಗ್​ ಮೆಷಿನ್​ ಫೀಚರ್ಸ್​


    ಈ ವಾಷಿಂಗ್​ ಮೆಷಿನ್​ ಬಹಳಷ್ಟು ಗುಣಮಟ್ಟದ್ದಾಗಿದೆ. ಜೊತೆಗೆ ಇದರಲ್ಲಿ ಶಕ್ತಿಯುತವಾದ ಮೋಟಾರ್ಸ್​ ಅನ್ನು ಅಳವಡಿಸಿದ್ದು, ಬಹಳ ಚೆನ್ನಾಗಿ ಬಟ್ಟಗಳನ್ನು ಸ್ವಚ್ಛಗೊಳಿಸುತ್ತದೆ. ಇನ್ನು ಇದು ಸೆಮಿ ಆಟೋಮ್ಯಾಟಿಕ್​ ವಾಷಿಂಗ್​ ಮೆಷಿನ್ ಆಗಿದ್ದು, ಗಾತ್ರದಲ್ಲಿ ಬಹಳ ಸಣ್ಣದಾಗಿದೆ. ಆದ್ದರಿಂದ ಇದನ್ನು ಇಡಲು ಸಹ ಹೆಚ್ಚಿ ಜಾಗದ ಅವಶ್ಯಕತೆಯಿಲ್ಲ.


    ಪ್ರಸ್ತುತವಾಗಿ ಸೇಲ್​ನಲ್ಲಿರುವ ಈ ವಾಷಿಂಗ್ ಮೆಷಿನ್​ನಲ್ಲಿ ಒಂದೇ ಚೇಂಬರ್​ ಲಭ್ಯವಿರುತ್ತದೆ. ಹೆಚ್ಚಿನ ಜನರ ದೂರು ಏನೆಂದರೆ ವಾಷಿಂಗ್ ಮೆಷಿನ್​ನಲ್ಲಿ ಬಟ್ಟೆ ಹಾಳಾಗುತ್ತದೆ ಎಂಬುದು. ಆದರೆ ಇದರಲ್ಲಿ ಅಂತಹ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಮತ್ತು ಬಹಳ ಕಡಿಮೆ ಸಮಯದಲ್ಲಿ ಬಟ್ಟೆಯನ್ನು ಶುಚಿಯಾಗಿ ಸ್ವಚ್ಛಗೊಳಿಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ.


    ಬೆಲೆ ಮತ್ತು ಲಭ್ಯತೆ


    ಸಾಮಾನ್ಯವಾಗಿ ಈ ವಾಷಿಂಗ್​ ಮೆಷಿನ್​ನ ಬೆಲೆ 7999 ರೂಪಾಯಿ ಆಗಿದೆ. ಆದರೆ ಹೊಸ ವರ್ಷದ ಆಫರ್​ ಮೂಲಕ ಫ್ಲಿಪ್​ಕಾರ್ಟ್​ ಈ ಸಾಧನದ ಮೇಲೆ ಶೇಕಡಾ 33% ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿ ಮೂಲಕ ಗ್ರಾಹಕರು ಕೇವಲ 5490 ರೂಪಾಯಿಗೆ ಖರೀದಿ ಮಾಡಬಹುದು.


    ಇನ್ನು ಈ ವಾಷಿಂಗ್​ ಮೆಷಿನ್​ ಪ್ರಮುಖ ಇ ಕಾಮರ್ಸ್​ ವೆಬ್​ಸೈಟ್​ ಆಗಿರುವ ಫ್ಲಿಪ್​ಕಾರ್ಟ್​​ನಲ್ಲಿ ಸುಲಭದಲ್ಲಿ ಖರೀದಿ ಮಾಡಬಹುದಾಗಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು