• Home
  • »
  • News
  • »
  • tech
  • »
  • Smart Tv: ಕೇವಲ 6 ಸಾವಿರ ರೂಪಾಯಿಗೆ 32 ಇಂಚಿನ ಸ್ಮಾರ್ಟ್​ಟಿವಿ ಖರೀದಿಸಿ

Smart Tv: ಕೇವಲ 6 ಸಾವಿರ ರೂಪಾಯಿಗೆ 32 ಇಂಚಿನ ಸ್ಮಾರ್ಟ್​ಟಿವಿ ಖರೀದಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈಗಿನ ಕಾಲದ ಸ್ಮಾರ್ಟ್​ಟಿವಿಗಳ ಫೀಚರ್ಸ್​ಗಳು ಕೂಡ ಮೊಬೈಲ್​ನಂತೆಯೇ ಫೀಚರ್ಸ್​ ಅನ್ನು ಹೊಂದಿದೆ. ಯಾವುದೇ ಸಿನೆಮಾ, ವೆಬ್​ಸೀರಿಸ್​, ಧಾರವಾಹಿ ಇವುಗಳನ್ನು ನೋಡಬೇಕಾದರು ಈಗ ಸ್ಮಾರ್ಟ್​ಟಿವಿಗಳಲ್ಲೇ ನೋಡಬಹುದು. ಇದೀಗ 32 ಇಂಚಿನ ಸ್ಮಾರ್ಟ್​ಟಿವಿ ಕೇವಲ 6 ಸಾವಿರ ರೂಪಾಯಿಗೆ ಲಭ್ಯವಿದೆ. ಹಾಗಿದ್ರೆ ಆ ಸ್ಮಾರ್ಟ್​ಟಿವಿ ಯಾವುದು? ಫೀಚರ್ಸ್​ ಏನೇನಿದೆ?

ಮುಂದೆ ಓದಿ ...
  • Share this:

    ಹೊಸ ಸ್ಮಾರ್ಟ್ ​ಟಿವಿ (Smart Tv ಖರೀದಿಸುವವರಿಗೆ ಸ್ಮಾರ್ಟ್​ ಟಿವಿ ಕಂಪನಿ ಹೊಸ ಆಫರ್ (Offer)​​ ಬಿಡುಗಡೆ ಮಾಡಿದೆ. ಈಗಿನ ದಿನಗಳಲ್ಲಿ ಟಿವಿಯನ್ನು ನೋಡದವರೇ ಇಲ್ಲ. ಈಗ ಪ್ರತಿಯೊಬ್ಬರ ಮನೆಯಲ್ಲೂ ಟಿವಿ ಇದ್ದೇ ಇದೆ. ಹಿಂದೆಲ್ಲಾ ಕೇವಲ ಟಿವಿಗಳಲ್ಲಿ ಸಿನೆಮಾ, ಸೀರಿಯಲ್ ಬನೋಡುವಂತಹ ಚಾನೆಲಗಳಿತ್ತು. ಆದರೆ ಈಗಿನ ಟಿವಿಗಳು ಸ್ಮಾರ್ಟ್​ಟಿವಿಗಳಾಗಿವೆ. ಇದು ಸ್ಮಾರ್ಟ್​ಫೋನ್​ಗಳಂತೆಯೇ ಕಾರ್ಯನಿರ್ವಹಿಸುತ್ತದೆ. ಮೊಬೈಲ್​ನಲ್ಲಿ (Mobile) ಇರುವಂತಹ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್​ಗಳು (Video Streaming) ಇತ್ತೀಚಿನ ಸ್ಮಾರ್ಟ್ ​ಟಿವಿಗಳಲ್ಲೂ ಬಂದಿದೆ. ಅದ್ದರಿಂದ ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ​ಟಿವಿಗಳ ಮೇಲೆ ಬಹಳಷ್ಟು ಬೇಡಿಕೆಯಿದೆ. ಅದಕ್ಕಾಗಿಯೇ ಸ್ಮಾರ್ಟ್​ಟಿವಿಯ ಕೆಲವೊಂದು ಕಂಪನಿಗಳು ತನ್ನ ಗ್ರಾಹಕರಿಗೆ ವಿಶೇಷ ರಿಯಾಯಿತಿಯೊಂದಿಗೆ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. 


    ಈಗಿನ ಕಾಲದ ಸ್ಮಾರ್ಟ್​ಟಿವಿಗಳ ಫೀಚರ್ಸ್​ಗಳು ಕೂಡ ಮೊಬೈಲ್​ನಂತೆಯೇ ಫೀಚರ್ಸ್​ ಅನ್ನು ಹೊಂದಿದೆ. ಯಾವುದೇ ಸಿನೆಮಾ, ವೆಬ್​ಸೀರಿಸ್​, ಧಾರವಾಹಿ ಇವುಗಳನ್ನು ನೋಡಬೇಕಾದರು ಈಗ ಸ್ಮಾರ್ಟ್​ಟಿವಿಗಳಲ್ಲೇ ನೋಡಬಹುದು. ಇದೀಗ 32 ಇಂಚಿನ ಸ್ಮಾರ್ಟ್​ಟಿವಿ ಕೇವಲ 6 ಸಾವಿರ ರೂಪಾಯಿಗೆ ಲಭ್ಯವಿದೆ. ಹಾಗಿದ್ರೆ ಆ ಸ್ಮಾರ್ಟ್​ಟಿವಿ ಯಾವುದು? ಫೀಚರ್ಸ್​ ಏನೇನಿದೆ?


    ಯಾವುದು ಸ್ಮಾರ್ಟ್​ಟಿವಿ?


    ಫಾಕ್ಸ್​​ಸ್ಕೈ ಎಂಬ ಹೆಸರಿನ ಸ್ಮಾರ್ಟ್​ಟಿವಿ ಇತ್ತೀಚಿಗೆ ಬಿಡುಗಡೆಯಾದ ಬ್ರಾಂಡ್ ಆಗಿದೆ. ಇದು ಬಹಳಷ್ಟು ಫೀಚರ್ಸ್​ ಅನ್ನು ಹೊಂದಿದ್ದು ಮಾರಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ಸ್ಮಾರ್ಟ್​ಟವಿಗಳಲ್ಲಿ ಇದು ಒಂದಾಗಿದೆ.


    ಇದನ್ನೂ ಓದಿ: ಈ ಸಿಮ್​ ಖರೀದಿಸಿದರೆ ಉಚಿತ ಲಂಡನ್​ ಪ್ರವಾಸ ಮಾಡ್ಬಹುದಂತೆ!


    ಕ್ರೋಮಾ ವೆಬ್​ಸೈಟ್​​ನಲ್ಲಿ ಲಭ್ಯ:


    ಕ್ರೋಮಾ ವೆಬ್‌ಸೈಟ್‌ನಲ್ಲಿ ಫಾಕ್ಸ್‌ಸ್ಕೈ ಸ್ಮಾರ್ಟ್ ಟಿವಿ ಕೇವಲ ರೂ. 6740 ಸಾವಿರ ರೂಪಾಯಿಗೆ ಲಭ್ಯವಿದೆ. ಇದು ಕೆಲವು ದಿನಗಳವರೆಗೆ ಮಾತ್ರ ಇರುವ ಕೊಡುಗೆಯಾಗಿದೆ. ಈ ಟಿವಿಯ ಎಮ್​ಆರ್​​ಪಿ 22,499 ರೂಪಾಯಿಯಾಗಿದೆ. ಅಂದರೆ ನೀವು ಈ ಟಿವಿಯನ್ನು ಶೇಕಡಾ 70% ರಷ್ಟು ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಫಾಕ್ಸ್​ಸ್ಕೈ 32 ಇಂಚಿನ ಹೆಚ್​​ಡಿ LED ಸ್ಮಾರ್ಟ್​​ಟಿವಿಯ ಫೀಚರ್ಸ್​ 2021 ರ ಮಾದರಿಗೆ ಹೋಲುತ್ತದೆ.


    ಸಾಂಕೇತಿಕ ಚಿತ್ರ


    ಬ್ಯಾಂಕ್ ಆಫರ್ಸ್​:


    ಈ ಸ್ಮಾರ್ಟ್​​ಟಿವಿ ಮೇಲೆ ವಿಶೇಷವಾಗಿ ಬ್ಯಾಂಕ್ ಕೊಡುಗೆಗಳೂ ಇವೆ. ಹೆಚ್​ಎಸ್​​ಬಿಸಿ ಬ್ಯಾಂಕ್ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ಮೂಲಕ ಈ ಟಿವಿಯನ್ನು ಖರೀದಿಸಿದರೆ ಶೇಕಡಾ 7.5% ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಫೆಡರಲ್ ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಆಫರ್ಸ್​ ಅನ್ನು ನೀಡಿದೆ.


    ನೀವು ಈ ಟಿವಿಯನ್ನು ಫೆಡರಲ್​​ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇಕಡಾ 10% ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಐಸಿಐಸಿಐ ಬ್ಯಾಂಕ್ ಗ್ರಾಹಕರು ಕೂಡ ಬ್ಯಾಂಕ್​ಗಳ ಆಧಾರದಲ್ಲಿ ಖರೀದಿಸಿದರೆ ಆಫರ್​ ಅನ್ನು ಪಡೆಯಬಹುದಾಗಿದೆ. ಈ ಎಲ್ಲಾ ಆಫರ್ಸ್​ ಅನ್ನು ಸೇರಿಸಿದರೆ ಸ್ಮಾರ್ಟ್​ಟಿವಿ ಬಹಳಷ್ಟು ಕಡಿಮೆ ಬೆಲಯಲ್ಲಿ ಪಡೆಯಬಹುದಾಗಿದೆ.


    ಸಾಂಕೇತಿಕ ಚಿತ್ರ


    ಈ ಸ್ಮಾರ್ಟ್​​ಟಿವಿಯ ಫೀಚರ್ಸ್​:


    ಈ ಫಾಕ್ಸ್​​ಸ್ಕೈ ಸ್ಮಾರ್ಟ್​​ಟಿವಿಯು 60 Hz ರಿಫ್ರೆಶ್ ರೇಟ್, 2 HDMI ಪೋರ್ಟ್‌ಗಳು, 2 USB ಪೋರ್ಟ್‌ಗಳು, ವೈಫೈ, ಆಂಡ್ರಾಯ್ಡ್ ಓಎಸ್, 30 ವ್ಯಾಟ್ ಸ್ಪೀಕರ್‌ಗಳು, ಡಾಲ್ಬಿ ಆಡಿಯೋ, ಎ ಪ್ಲಸ್ ಗ್ರೇಡ್ ಪ್ಯಾನೆಲ್‌ನಂತಹ ಫೀಚರ್ಸ್​​ಗಳನ್ನು ಹೊಂದಿದೆ. ಹಾಗೆಯೇ ಈ ಟಿ.ವಿ ನೆಟ್​​ಫ್ಲಿಕ್ಸ್​​, ಅಮೆಜಾನ್​ ಪ್ರೈಮ್ ವಿಡಿಯೋ, G5, Eros Now, ಜಿಯೋ ಸಿನಿಮಾ ಮತ್ತು ಸೋನಿಯಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಕೂಡ ಇದರಲ್ಲಿ ಲಭ್ಯವಿದೆ.


    ಈ ಸ್ಮಾರ್ಟ್​​ಟಿವಿಯನ್ನು ಇಎಮ್​ಐ ನಲ್ಲೂ ಖರೀದಿಸಬಹುದು


    ಅಲ್ಲದೆ ಈ ಟಿವಿಯನ್ನುಇಎಮ್​ಐ ನಲ್ಲೂ ಖರೀದಿಸಬಹುದು. ತಿಂಗಳ ಇಎಮ್​ಐ 317 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು 24 ತಿಂಗಳ ಇಎಮ್​ಐ ಅವಧಿಗೆ ಅನ್ವಯಿಸುತ್ತದೆ. ವರ್ಷದ ಇಎಮ್​ಐ ಅನ್ನು ಆಯ್ಕೆ ಮಾಡಿದರೆ ತಿಂಗಳಿಗೆ ಇಎಮ್​ಐ ರೂ. 605 ಪಾವತಿಸಬೇಕು. ಆರು ತಿಂಗಳ ಇಎಂಐ ನಲ್ಲಿ ರೂ. 1170 ಪಾವತಿಸಬೇಕು. ಒಂದು ವೇಳೆ ಮೂರು ತಿಂಗಳ ಇಎಮ್​ಐ ಅನ್ನು ಆರಿಸಿದರೆ, ತಿಂಗಳಿಗೆ  2295 ರೂಪಾಯಿ ಕಟ್ಟಬೇಕು.

    Published by:Prajwal B
    First published: