• Home
 • »
 • News
 • »
 • tech
 • »
 • Xiaomi 12 Pro Smartphone: ಶಿಯೋಮಿ 12 ಪ್ರೋ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್​! ಇಲ್ಲಿದೆ ಕಂಪ್ಲೀಟ್ ಮಾಹಿತಿ

Xiaomi 12 Pro Smartphone: ಶಿಯೋಮಿ 12 ಪ್ರೋ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್​! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಶಿಯೋಮಿ 12 ಪ್ರೋ ಸ್ಮಾರ್ಟ್​​ಫೋನ್

ಶಿಯೋಮಿ 12 ಪ್ರೋ ಸ್ಮಾರ್ಟ್​​ಫೋನ್

ಇದೀಗ ಅಮೆಜಾನ್​ ಪ್ರೈಮ್​ ಫೋನ್ಸ್​ ಪಾರ್ಟಿ ಸೇಲ್​​ನಲ್ಲಿ ಭರ್ಜರಿ ಡಿಸ್ಕೌಂಟ್​ನೊಂದಿಗೆ ಸ್ಮಾರ್ಟ್​​ಫೋನ್​ಗಳನ್ನು ಮಾರಾಟ ಮಾಡುತ್ತಿದೆ. ಈ ಮೂಲಕ ಶಿಯೋಮಿ ಕಂಪನಿಯ ಶಿಯೋಮಿ 12 ಪ್ರೋ ಮೊಬೈಲ್​ ಅನ್ನು ಕೂಡಾ ಭಾರಿ ರಿಯಾಯಿತಿಯನ್ನು ಘೋಷಿಸಿದ್ದು, ಜನವರಿ 8 ರವರೆಗೆ ಮಾತ್ರ ಈ ಆಫರ್​​ ಲಭ್ಯವಿರುತ್ತದೆ.

ಮುಂದೆ ಓದಿ ...
 • Share this:

  ಶಿಯೋಮಿ ಕಂಪೆನಿಯೆಂದರೆ (Xiaomi Company) ಯಾರಿಗೆ ಗೊತ್ತಿಲ್ಲ ಹೇಳಿ. ಮಾರುಕಟ್ಟೆಯಲ್ಲಿ ನಂಬರ್​ ಒನ್​ ಕಂಪನಿಯೆಂದು (Number 1 Company) ಗುರುತಿಸಿಕೊಂಡಿರುವ ಶಿಯೋಮಿ ಕಂಪನಿ ತನ್ನ ಬ್ರಾಂಡ್​ನ ಅಡಿಯಲ್ಲಿ ಇದುವರೆಗೆ ಸಾಕಷ್ಟು ಸ್ಮಾರ್ಟ್​​ಫೋನ್​​ಗಳನ್ನು ಬಿಡುಗಡೆ ಮಾಡಿದೆ. ಅದೇ ರೀತಿ 2022ರ ವರ್ಷದಲ್ಲಿ ಅತೀಹೆಚ್ಚು ಮಾರಾಟವಾದ ಸ್ಮಾರ್ಟ್​ಫೋನ್​ಗಳ ಪಟ್ಟಿಯಲ್ಲಿ ಶಿಯೋಮಿ ಕಂಪನಿಯ ಸ್ಮಾರ್ಟ್​​ಫೋನ್ ಕೂಡ ಒಂದಾಗಿದೆ. ಇದೀಗ ಈ ಕಂಪನಿ ಇತ್ತೀಚೆಗೆ ಶಿಯೋಮಿ 12 ಪ್ರೋ (Xiaomi 12 Pro) ಎಂಬ ಸ್ಮಾರ್ಟ್​ಫೋನ್ ಅನ್ನು ಪರಿಚಯಿಸಿತ್ತು. ಈ ಸ್ಮಾರ್ಟ್​ಫೋನ್​ ಮೇಲೆ ಜನಪ್ರಿಯ ಇಕಾಮರ್ಸ್​ ವೆಬ್​ಸೈಟ್​ ಆಗಿರುವ ಅಮೆಜಾನ್ (Amazon)​​ ಭರ್ಜರಿ ಆಫರ್ಸ್​​ ಅನ್ನು ಘೋಷಿಸಿದೆ. ಹೊಸ ಸ್ಮಾರ್ಟ್​​ಫೋನ್​ ಖರೀದಿ ಮಾಡುವ ಪ್ಲ್ಯಾನ್​ನಲ್ಲಿದ್ದವರಿಗೆ ಇದು ಉತ್ತಮ ಆಯ್ಕೆಯಾಗಿದೆ.


  ಇದೀಗ ಅಮೆಜಾನ್​ ಪ್ರೈಮ್​ ಫೋನ್ಸ್​ ಪಾರ್ಟಿ ಸೇಲ್​​ನಲ್ಲಿ ಭರ್ಜರಿ ಡಿಸ್ಕೌಂಟ್​ನೊಂದಿಗೆ ಸ್ಮಾರ್ಟ್​​ಫೋನ್​ಗಳನ್ನು ಮಾರಾಟ ಮಾಡುತ್ತಿದೆ. ಈ ಮೂಲಕ ಶಿಯೋಮಿ ಕಂಪನಿಯ ಶಿಯೋಮಿ 12 ಪ್ರೋ ಮೊಬೈಲ್​ ಅನ್ನು ಕೂಡಾ ಭಾರಿ ರಿಯಾಯಿತಿಯನ್ನು ಘೋಷಿಸಿದ್ದು, ಜನವರಿ 8 ರವರೆಗೆ ಮಾತ್ರ ಈ ಆಫರ್​​ ಲಭ್ಯವಿರುತ್ತದೆ.


  ಅಮೆಜಾನ್​ ಪ್ರೈಮ್​ ಫೋನ್ಸ್​ ಪಾರ್ಟಿ ಸೇಲ್ ಆಫರ್ಸ್​


  ಪ್ರಸಿದ್ಧ ಇಕಾಮರ್ಸ್​ ವೆಬ್​ಸೈಟ್​ ಅಮೆಜಾನ್ ಆಯೋಜಿಸಿರುವ ಪ್ರೈಮ್‌ ಫೋನ್ಸ್‌ ಪಾರ್ಟಿ ಸೇಲ್‌ನಲ್ಲಿ ಶಿಯೋಮಿ 12 ಪ್ರೋ ಫೋನ್ ಮೇಲೆ 1,000 ರೂ. ರಿಯಾಯಿತಿಯತಿಯನ್ನು ಘೋಷಿಸಿದೆ. ಈ ಸ್ಮಾರ್ಟ್​​ಫೋನ್​ನ ಮೂಲ ಬೆಲೆ 66,999 ರೂಪಾಯಿ ಆದರೆ ರಿಯಾಯಿತಿಯೊಂದಿಗೆ ಇದನ್ನು 55,999 ರೂ. ಗಳಿಗೆ ಖರೀದಿಸಬಹುದು. ಹಾಗೆಯೇ ಕೆಲವು ಬ್ಯಾಂಕ್‌ ಕಾರ್ಡ್‌ಗಳಿಂದ ಸುಮಾರು 8,000 ರೂ. ವರೆಗೂ ಡಿಸ್ಕೌಂಟ್‌ ಅನ್ನು ಸಹ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್​​ಫೋನ್​ ಅನ್ನು ನೋ ಕಾಸ್ಟ್‌ ಇಎಮ್‌ಐ ಮೂಲಕ ಖರೀದಿಸುವ ಅವಕಾಶವಿದೆ. ಅಂದಹಾಗೆ ಪ್ರೈಮ್‌ ಫೋನ್ಸ್‌ ಪಾರ್ಟಿ ಜ. 8, 2023 ರ ವರೆಗೆ ಮಾತ್ರ ಇರುತ್ತದೆ.


  ಇದನ್ನೂ ಓದಿ: ಲೆನೋವೋ ಕಂಪನಿಯ ಹೊಸ ಲ್ಯಾಪ್​ಟಾಪ್​ ಅನಾವರಣ! ಫೀಚರ್ಸ್​ ಬಗ್ಗೆ ಮಾಹಿತಿ ಇಲ್ಲಿದೆ


  ಡಿಸ್​​ಪ್ಲೇ ಫೀಚರ್ಸ್ 


  ಶಿಯೋಮಿ 12 ಪ್ರೋ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಸಾಮರ್ಥ್ಯವನ್ನು ಹೊಂದಿರಲಿದೆ. ಇನ್ನು ಈ ಸ್ಮಾರ್ಟ್​ಫೋನ್​ನ ಡಿಸ್‌ಪ್ಲೇ OLED ಪ್ಯಾನೆಲ್ ಆಗಿದ್ದು, 10 ಬಿಟ್ ಡೆಪ್ತ್‌ ಕಲರ್‌ ಅನ್ನು ಹೊಂದಿದೆ.


  ಶಿಯೋಮಿ 12 ಪ್ರೋ ಸ್ಮಾರ್ಟ್​​ಫೋನ್


  ಕ್ಯಾಮೆರಾ ಫೀಚರ್ಸ್​


  ಶಿಯೋಮಿ 12 ಪ್ರೋ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX766 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿರಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಇದರಲ್ಲಿ ಅಳವಡಿಸಲಾಗಿದೆ.


  ಬ್ಯಾಟರಿ ಫೀಚರ್ಸ್​


  ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್​ನೊಂದಿಗೆ ಪ್ಯಾಕ್​ ಮಾಡಲಾಗಿದೆ. ಇದು 67W ವೇಗದ ಚಾರ್ಜಿಂಗ್‌ ಸಾಮರ್ಥ್ಯವನ್ನು ಹೊಂದಿರಲಿದೆ.


  ಶಿಯೋಮಿ 12 ಪ್ರೋ ಸ್ಮಾರ್ಟ್​​ಫೋನ್


  ಕನೆಕ್ಟಿವಿಟಿ ಫೀಚರ್ಸ್​


  ಇನ್ನು ಈ ಸ್ಮಾರ್ಟ್​​ಫೋನ್​ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5ಜಿ, ವೈಫೈ 6,  ಮತ್ತು ಯುಎಸ್​ಬಿ ಟೈಪ್ ಸಿ ಪೋರ್ಟ್​​ಗಳು ಸೇರಿವೆ. ಇದಲ್ಲದೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಐಆರ್ ಬ್ಲಾಸ್ಟರ್, ಎಕ್ಸ್ ಆಕ್ಸಿಸ್ ಲೀನಿಯರ್ ವೈಬ್ರೇಶನ್ ಮೋಟಾರ್, ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳು ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ ಅನ್ನು ಒಳಗೊಂಡಿವೆ.

  Published by:Prajwal B
  First published: