ಸ್ಮಾರ್ಟ್ಫೋನ್ (Smartphone) ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎನ್ನುವವರು ಎಷ್ಟೋ ಮಂದಿ ಇದ್ದಾರೆ. ಅದ್ರಲ್ಲೂ ಕೋವಿಡ್ (Covid) ಸಾಂಕ್ರಾಮಿಕ ರೋಗ ಬಂದ ನಂತರವಂತೂ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಯಾರ ಕೈಯಲ್ಲಿ ನೋಡಿದ್ರೂ ಮೊಬೈಲ್ ಇದ್ದೇ ಇದೆ. ಮೊಬೈಲ್ ಎಂಬು ಮಾನವನ ಜೀವನದ ಒಂದು ಪ್ರಮುಖ ಭಾಗವಾಗಿಬಿಟ್ಟಿದೆ ಎಂದು ಹೇಳ್ಬಹುದು. ಮಾರುಕಟ್ಟೆಯಲ್ಲಿ ಹಲವಾರು ಮೊಬೈಲ್ ಕಂಪನಿಗಳಿವೆ. ಅದ್ರಲ್ಲಿ ವಿವೋ ಕೂಡ ಒಂದು. ವಿವೋ ಕಂಪನಿ (Vivo Company) ತನ್ನ ಬ್ರಾಂಡ್ನ ಅಡಿಯಲ್ಲಿ ಹಲವಾರು ಮೊಬೈಲ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು. ಈಗ ಈ ಕಂಪನಿ ಸ್ಮಾರ್ಟ್ಫೋನ್ಗಳನ್ನು ಭಾರೀ ಅಗ್ಗದ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.
ವಿವೋ ಕಂಪನಿ ಇದುವರೆಗೆ ಬಹಳಷ್ಟು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಇದೀಗ ವಿವೋ ಕಂಪನಿ ವಿವೋ ವೈ01 ಎಂಬ ಸ್ಮಾರ್ಟ್ಫೋನ್ ಮೇಲೆ ರಿಯಾಯಿತಿಯನ್ನು ಘೋಷಿಸಿದೆ. ಇದು ಕೆಲವು ದಿನಗಳವರೆಗೆ ಮಾತ್ರ ಲಭ್ಯವಿದ್ದು, ಇದರ ಫೀಚರ್ಸ್, ಆಫರ್ ಬೆಲೆ ಹೇಗಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಏನೆಲ್ಲಾ ಆಫರ್ಸ್ ಲಭ್ಯ?
ಇಕಾಮರ್ಸ್ ವೆಬ್ಸೈಟ್ಗಳಲ್ಲಿ ಜನಪ್ರಿಯತೆಯನ್ನು ಪಡೆದ ಕಂಪನಿಯೆಂದರೆ ಅದು ಅಮೆಜಾನ್. ಇದೀಗ ಅಮೆಜಾನ್ ವಿವೋ ಕಂಪನಿಯ ವಿವೋ ವೈ01 ಸ್ಮಾರ್ಟ್ಫೋನ್ನ 2ಜಿಬಿ ರ್ಯಾಮ್ ಮತ್ತು 32 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದ ಮೊಬೈಲ್ನ ಮೇಲೆ ಶೇಕಡಾ 38% ರಿಯಾಯಿತಿಯನ್ನು ಘೋಷಿಸಿದೆ.
ಇದನ್ನೂ ಓದಿ: ಭಾರತೀಯರು ಮೊಬೈಲ್ ಖರೀದಿಸುವಾಗ ಈ ಕೆಲಸ ಗ್ಯಾರಂಟಿ ಮಾಡ್ತಾರೆ! ಏನದು ಗೊತ್ತಾ?
ಅಂದರೆ ಈ ಫೋನಿನ ಮೂಲ ಬೆಲೆ 12,999 ರೂಪಾಯಿ ಆಗಿದೆ ಆದರೆ ರಿಯಾಯಿತಿ ದರದಲ್ಲಿ 7,999 ರೂಪಾಯಿಗೆ ಖರೀದಿಸಬಹುದಾಗಿದೆ.ಹಾಗೆಯೇ ಈ ಸ್ಮಾರ್ಟ್ಫೋನ್ನ ಮೇಲೆ ಕೆಲ ಆಯ್ದ ಬ್ಯಾಂಕ್ಗಳಿಂದ ರಿಯಾಯಿತಿ ಹಾಗೂ ಇಎಮ್ಐ ಸೌಲಭ್ಯದ ಆಫರ್ಸ್ಗಳನ್ನು ಸಹ ಗ್ರಾಹಕರಿಗೆ ಸಿಗಲಿದೆ.
ವಿವೋ ವೈ01 ಸ್ಮಾರ್ಟ್ಫೋನ್ನ ಫೀಚರ್ಸ್
ವಿವೋ ವೈ01 ಸ್ಮಾರ್ಟ್ಫೋನ್ 6.51 ಇಂಚಿನ ಹೆಚ್ಡಿ+ ಡಿಸ್ಪ್ಲೇ ಯನ್ನು ಹೊಂದಿದೆ. ಈ ಡಿಸ್ಪ್ಲೇ 720 x 1600 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇ ಐ ಪ್ರೊಟೆಕ್ಷನ್ ಮೋಡ್ ಅನ್ನು ಪಡೆದಿದೆ. ಈ ಸ್ಮಾರ್ಟ್ಫೋನ್ ಸ್ಕ್ರೀನ್ 8.28 ಮಿಮೀ ಥಿಕ್ನೆಸ್ ಹೊಂದಿರುವ ಪ್ಲಾಸ್ಟಿಕ್ ಪ್ಯಾನೆಲ್ನಿಂದ ಸುತ್ತುವರಿಯಲ್ಪಟ್ಟಿದೆ. ಜೊತೆಗೆ ಫೇಸ್ ವೇಕ್ ಅನ್ನು ಹೊಂದಿದೆ.
ಕ್ಯಾಮೆರಾ ಫೀಚರ್ಸ್
ವಿವೋ ಕಂಪನಿ ಹೆಚ್ಚಾಗಿ ಗುರುತಿಸಿಕೊಂಡಿದ್ದು ತನ್ನ ಕ್ಯಾಮೆರಾ ಫೀಚರ್ಸ್ ಮೂಲಕ. ವಿವೋ ತನ್ನ ಕ್ಯಾಮೆರಾ ವೈಶಿಷ್ಟ್ಯದಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಇದೀಗ ವಿವೋ ವೈ01 ಸ್ಮಾರ್ಟ್ಫೋನ್ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದಲ್ಲದೆ ಇದರಲ್ಲಿ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಬ್ಯಾಟರಿ ಫೀಚರ್ಸ್
ವಿವೋ ವೈ01 ಸ್ಮಾರ್ಟ್ಫೋನ್ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಬ್ಯಾಕಪ್ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಉತ್ತಮ ಚಾರ್ಜಿಂಗ್ ಸಾಮರ್ಥ್ಯವನ್ನು ಸಹ ಹೊಂದಿದೆ. ಇದು ಯಾವುದೇ ಗ್ಲಿಚ್ ಇಲ್ಲದೆ ಬಹಳಷ್ಟು ಗಂಟೆಗಳ ಕಾಲ ಬಳಕೆ ಮಾಡಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್ಸ್ಪಾಟ್, ಬ್ಲೂಟೂತ್, ವೈಫೈ ಅನ್ನು ಈ ರೀತಿಯ ಹಲವು ಫೀಚರ್ಸ್ ಅನ್ನು ಒಳಗೊಂಡಿದೆ.
ಮೆಮೊರಿ ಹಾಗೂ ಲಭ್ಯತೆ
ವಿವೋ ವೈ01 ಸ್ಮಾರ್ಟ್ಫೋನ್ 2 ಜಿಬಿ ರ್ಯಾಮ್ ಮತ್ತು 32 ಜಿಬಿ ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ದೊರೆಯಲಿದೆ. ಇದು ಎಲಿಗಂಟ್ ಬ್ಲ್ಯಾಕ್ ಮತ್ತು ಸಫೈರ್ ಬ್ಲೂ ಕಲರ್ ಆಯ್ಕೆಗಳಲ್ಲಿ ಖರೀದಿಸುವ ಅವಕಾಶವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ