ಶಿಯೋಮಿ ಕಂಪನಿಯಿಂದ (Xiaomi Company) ಇದುವರೆಗೆ ಬಿಡುಗಡೆಯಾದಂತಹ ಎಲ್ಲಾ ಸ್ಮಾರ್ಟ್ಫೋನ್ಗಳು (Smartphones) ಬಹಳಷ್ಟು ಫೀಚರ್ಸ್ಗಳನ್ನು ಒಳಗೊಂಡಂತಹ ಮೊಬೈಲ್ ಆಗಿದೆ. ಇದುವರೆಗೆ ಶಿಯೋಮಿ ಕಂಪನಿಯಿಂದ ಬಂದಂತಹ ಎಲ್ಲಾ ಸ್ಮಾರ್ಟ್ಫೋನ್ಗಳು ಕೂಡ ಬೇಡಿಕೆಯ ಸಾಧನಗಳಾಗಿವೆ. ಶಿಯೋಮಿ ಕಂಪನಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದ ಕಂಪನಿಯೆಂದು ಹೇಳಬಹುದಾಗಿದೆ. ಇತ್ತೀಚೆಗೆ ಶಿಯೋಮಿ ಕಂಪನಿ ತನ್ನ ರೆಡ್ಮಿ ಸೀರಿಸ್ನಲ್ಲಿ ರೆಡ್ಮಿ 11 ಪ್ರೈಮ್ 5ಜಿ (Redmi 11 Prime 5G) ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಮಾರುಕಟ್ಟೆಯಲ್ಲಿ ಈ ಮೊಬೈಲ್ ಅನ್ನು ಭಾರೀ ಅಗ್ಗದಲ್ಲಿ ಖರೀದಿಸಬಹುದಾಗಿದೆ. ಹಾಗಿದ್ರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ಫೋನ್ನ ಬೆಲೆ ಎಷ್ಟಿದೆ ಎಂಬುದನ್ನು ಇಲ್ಲಿ ತಿಳಿಯಿರಿ.
ಇದೀಗ ಶಿಯೋಮಿ ಕಂಪನಿಯ ರೆಡ್ಮಿ 11 ಪ್ರೈಮ್ 5ಜಿ ಸ್ಮಾರ್ಟ್ಫೋನ್ ಭರ್ಜರಿ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಹಾಗಿದ್ರೆ ಈ ಮೊಬೈಲ್ ಪ್ರಸ್ತುತ ಮಾರುಕಟ್ಟೆಯಲ್ಲಿ ಎಷ್ಟಕ್ಕೆ ಖರೀದಿಸಬಹುದು? ಫೀಚರ್ಸ್ ಏನು ಎಂಬುದನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.
ರೆಡ್ಮಿ 11 ಪ್ರೈಮ್ 5ಜಿ ಸ್ಮಾರ್ಟ್ಫೋನ್ ಫೀಚರ್ಸ್
ರೆಡ್ಮಿ 11 ಪ್ರೈಮ್ 5ಜಿ ಸ್ಮಾರ್ಟ್ಫೋನ್ 6.58 ಇಂಚಿನ ಫುಲ್ ಹೆಚ್ಡಿ+ ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಮತ್ತು 20.7:9 ರಚನೆಯ ಅನುಪಾತವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ ಆಕ್ಟಾ ಕೋರ್ 7nm ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ನಲ್ಲಿ ಚಾಲಿತವಾಗುತ್ತದೆ. ಜೊತೆಗೆ ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 6ಜಿಬಿ ರ್ಯಾಮ್ ಮತ್ತು 128ಜಿಬಿ ಇಂಟರ್ನಲ್ ಸ್ಟೊರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬಳಸಿ 512ಜಿಬಿ ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಇದನ್ನೂ ಓದಿ: ವಾಟ್ಸಪ್ ಐಕಾನ್ ಮೇಲೆ ಕ್ರಿಸ್ಮಸ್ ಟೋಪಿ ಹಾಕ್ಬೇಕಾ? ಇಲ್ಲಿದೆ ಟ್ರಿಕ್ಸ್
ಕ್ಯಾಮೆರಾ ಫೀಚರ್ಸ್
ರೆಡ್ಮಿ 11 ಪ್ರೈಮ್ 5ಜಿ ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋಟ್ರೇಟ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಫೀಚರ್ಸ್
ಇನ್ನು ಈ ಸ್ಮಾರ್ಟ್ಫೋನ್ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರ ಬಂಡಲ್ ಚಾರ್ಜರ್ 22.5W ವರೆಗೆ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಈ ಸ್ಮಾರ್ಟ್ಫೋನ್ ಮೇಲಿರುವ ಆಫರ್ಸ್
ಇನ್ನು ಬೆಲೆ ಇಳಿಕೆಯ ಬಳಿಕ ರೆಡ್ಮಿ 11 ಪ್ರೈಮ್ 5ಜಿ ಫೋನಿನ 4ಜಿಬಿ ರ್ಯಾಮ್ + 64ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ ಅನ್ನು 12,999ರೂಪಾಯಿ ಪ್ರೈಸ್ಟ್ಯಾಗ್ ನಲ್ಲಿ ಖರೀದಿಸಬಹುದಾಗಿದ್ದು, ಹಾಗೆಯೇ 6ಜಿಬಿ ರ್ಯಾಮ್ + 128ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್ಫೋನ್ ಅನ್ನು 14,999ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಫೋನ್ ಮೆಡೋ ಗ್ರೀನ್, ಕ್ರೋಮ್ ಸಿಲ್ವರ್ ಮತ್ತು ಥಂಡರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಕನೆಕ್ಟಿವಿಟಿ ಫೀಚರ್ಸ್
ರೆಡ್ಮಿ 11 ಪ್ರೈಮ್ 5ಜಿ ಸ್ಮಾರ್ಟ್ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ, ವೈಫೈ 802.11 a/b/g/n/ac, ಯುಎಸ್ಬಿ OTG, IR ಬ್ಲಾಸ್ಟರ್, ಬ್ಲೂಟೂತ್ v5.1, GPS/ A-GPS, USB ಟೈಪ್-C, ಮತ್ತು 3.5 ಹಾಗೂ ಎಂಎಂ ಹೆಡ್ಫೋನ್ ಜ್ಯಾಕ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಇ-ಕಂಪಾಸ್, ಆಂಬಿಯೆಂಟ್ ಲೈಟ್ ಸೆನ್ಸಾರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರೊಂದಿಗೆ 1.7W ಔಟ್ಪುಟ್ನೊಂದಿಗೆ ಕೆಳಭಾಗದಲ್ಲಿ ಜೋಡಿಸಲಾದ ಸ್ಪೀಕರ್ ಅನ್ನು ಕೂಡ ಅಳವಡಿಸಲಾಗಿದೆ. ಇದು ಫೇಸ್ ಅನ್ಲಾಕ್ ಫೀಚರ್ಸ್ ಅನ್ನು ಸಹ ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ