ಸ್ಮಾರ್ಟ್‌ಫೋನ್‌ಗಳು (Smartphones) ಇತ್ತೀಚೆಗೆ ಪ್ರತಿಯೊಬ್ಬರು ಅಗತ್ಯ ಸಾಧನವಾಗಿಬಿಟ್ಟಿದೆ. ಯಾವುದೇ ಕೆಲಸಗಳನ್ನು ಕ್ಷಣಮಾತ್ರದಲ್ಲಿ ಮಾಡಲು ಈ ಸ್ಮಾರ್ಟ್‌ಫೋನ್‌ಗಳು ಬಹಳಷ್ಟು ಸಹಕಾರಿಯಾಗಙಲಿದೆ. ಈ ಮಧ್ಯೆ ಹೊಸ ಹೊಸ ಕಂಪೆನಿಗಳ ಜೊತೆಗೆ ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ಬೆಲೆಯವರೆಗೆ ಮಾರುಕಟ್ಟೆಯಲ್ಲಿ ಮೊಬೈಲ್ಗಳು ಬಿಡುಗಡೆಯಾಗುತ್ತಲೇ ಇದೆ. ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನ (Valentines Day. ಈ ಸಂದರ್ಭದಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಎಂದು ಯೋಚಿಸುತ್ತಿರುವವರಿಗೆ ಜನಪ್ರಿಯ ಇಕಾಮರ್ಸ್ ವೆಬ್ಸೈಟ್ಗಳು ಮೊಬೈಲ್ಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ. ಅದರಲ್ಲೂ ಅಮೆಜಾನ್ (Amazon) ಕೆಲವು ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ಬೆಲೆಯಲ್ಲಿ ನೀಡುತ್ತಿದೆ.
ಜನಪ್ರಿಯ ಇಕಾಮರ್ಸ್ ಕಂಪೆನಿಯಾಗಿರುವ ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್ನಲ್ಲಿ ಫೆಬ್ರವರಿ 14 ರವರೆಗೆ ಮಾತ್ರ ಲಭ್ಯವಿದ್ದು, ಸ್ಮಾರ್ಟ್‌ಫೋನ್ ಖರೀದಿಸುವ ಪ್ಲ್ಯಾನ್ನಲ್ಲಿರುವವರಿಗೆ ಈ ಸೇಲ್ ಉತ್ತಮವಾಗಿದೆ.
ರಿಯಲ್‌ಮಿ ಸ್ಮಾರ್ಟ್ಫೋನ್ಸ್
ರಿಯಲ್‌ಮಿ ಕಂಪೆನಿ ಗುಣಮಟ್ಟದ ಫೀಚರ್ಸ್ಗಳನ್ನು ಹೊಮದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿದೆ. ಸದ್ಯ ಅಮೆಜಾನ್ ರಿಯಲ್‌ಮಿ ಸ್ಮಾರ್ಟ್ಫೋನ್ಗಳ ಮೇಲೆ ಆಫರ್ಸ್ ನೀಡುತ್ತಿದೆ. ಇದರಲ್ಲಿ ರಿಯಲ್‌ಮಿ 50i ಪ್ರೈಮ್ ಮತ್ತು ರಿಯಲ್‌ಮಿ 50ಎ ಪ್ರೈಮ್ ಸ್ಮಾರ್ಟ್‌ಫೋನ್ ಕ್ರಮವಾಗಿ 6,299 ರೂಪಾಯಿ ಹಾಗೂ 8,999 ರೂಪಾಯಿಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ರಿಯಲ್‌ಮಿ 50 5ಜಿ ಸ್ಮಾರ್ಟ್‌ಫೋನ್ ಅನ್ನು 12,999 ರೂಪಾಯಿಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
ಇದನ್ನೂ ಓದಿ: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್! ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ರೀಚಾರ್ಜ್ ಬೆಲೆಯಲ್ಲಿ ಭಾರೀ ರಿಯಾಯಿತಿ
ಶಿಯೋಮಿ ಸ್ಮಾರ್ಟ್‌ಫೋನ್‌ಗಳು
ಶಿಯೋಮಿ ಬ್ರ್ಯಾಂಡ್ ಮಾರುಕಟ್ಟೆಗೆ ವಿಭಿನ್ನ ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ತನ್ನದೇ ಆದಂತಹ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಈ ಕಂಪೆನಿಯ ರೆಡ್ಮಿ 10 ಪವರ್, ರೆಡ್ಮಿ 10A, ಮತ್ತು ರೆಡ್ಮಿ A1 ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 10,749 ರೂಪಾಯಿ, 7,862 ರೂಪಾಯಿ, ಹಾಗೂ 6,499 ರೂಪಾಯಿಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇನ್ನು ಈ ಬ್ರಾಂಡ್ನ ಸ್ಮಾರ್ಟ್‌ಫೋನ್‌ಗಳನ್ನು ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದ್ರೆ ಇನ್ನಷ್ಟು ರಿಯಾಯಿತಿಗಳು ಸಿಗಲಿದೆ.
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು
ಪ್ರೇಮಿಗಳ ದಿನದಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಮ್ ಸೀರಿಸ್ನ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡುವ ಪ್ಲ್ಯಾನ್ನಲ್ಲಿದ್ರೆ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ. ಅದರಂತೆ ಫೆಡರಲ್ ಬ್ಯಾಂಕ್‌ನ ಕೊಡುಗೆ ಮೂಲಕ ಗ್ಯಾಲಕ್ಸಿ M13, ಗ್ಯಾಲಕ್ಸಿ M33 ಮತ್ತು ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ಗಳನ್ನು 8,699 ರೂಪಾಯಿ, 13,999 ರೂಪಾಯಿ, ಮತ್ತು 7,499 ರೂಪಾಯಿಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
ಟೆಕ್ನೋ ಸ್ಮಾರ್ಟ್‌ಫೋನ್‌ಗಳು
ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವಲ್ಲಿ ಟೆಕ್ನೋ ಕಂಪೆನಿ ಬಹಳಷ್ಟು ಬೇಡಿಕೆಯಲ್ಲಿದೆ. ಈ ಫೋನ್‌ಗಳಲ್ಲಿ ಅತ್ಯುತ್ತಮ ಎನಿಸಿಕೊಂಡಿರುವ ಟೆಕ್ನೋ ಸ್ಪಾರ್ಕ್ 9 ಸ್ಮಾರ್ಟ್‌ಫೋನ್ 4ಜಿಬಿ ರ್‍ಯಾಮ್ ಹಾಗೂ 64ಜಿಬಿ ಇಂಟರ್ನಲ್ ಸ್ಟೋರೇಜ್ ನೊಂದಿಗೆ 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು AI ಮೋಡ್ ಫೀಚರ್ ಅನ್ನು ಒಳಗೊಂಡಿದೆ. ಅದರಂತೆ ಟೆಕ್ನೋ ಪಾಪ್ 6 ಪ್ರೋ ಸ್ಮಾರ್ಟ್‌ಫೋನ್ ಸಹ ಹೆಚ್ಚಿನ ಆಫರ್‌ನಲ್ಲಿ ಲಭ್ಯವಿದ್ದು, ಈ ಫೋನ್ ನಿಮಗೆ 5,399 ರೂ. ಗಳ ಬೆಲೆಯಲ್ಲಿ ಲಭ್ಯವಿದೆ ಮತ್ತು ಟೆಕ್ನೋ ಸ್ಪಾರ್ಕ್ 9 ಫೋನ್ ಅನ್ನು 7,019 ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಐಕ್ಯೂ ಸ್ಮಾರ್ಟ್‌ಫೋನ್‌ಗಳು
ಐಕ್ಯೂ ಕಂಪೆನಿ ಇತ್ತೀಚೆಗೆ ಮಾರುಕಟ್ಟೆಗೆ ಹಲವಾರು 5ಜಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಅದರಲ್ಲಿ ಐಕ್ಯೂ Z6 5ಜಿ, ಐಕ್ಯೂ Z6 ಲೈಟ್ 5ಜಿ, ಮತ್ತು ಐಕ್ಯೂ ನಿಯೋ 6 5ಜಿ ಸ್ಮಾರ್ಟ್‌ಫೋನ್‌ಗಳಾಗಿದ್ದು, ಇದಕ್ಕೆ ಕ್ರಮವಾಗಿ 14,499 ರೂಪಾಯಿ, 11,999 ರೂಪಾಯಿ ಹಾಗೂ 24,990 ರೂಪಾಯಿಗಳ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಎಸ್‌ಬಿಐ ಹಾಗೂ ಫೆಡರಲ್ ಬ್ಯಾಂಕ್ ಮೂಲಕ ಖರೀದಿ ಮಾಡಿದರೆ ಇನ್ನಷ್ಟು ರಿಯಾಯಿತಿಗಳು ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ