ಆ್ಯಪಲ್ ಕಂಪೆನಿಯ (Apple Company) ಡಿವೈಸ್ಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಸ್ಮಾರ್ಟ್ಫೋನ್ಗಳಂತೂ ಮಾರುಕಟ್ಟೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದೆ ಅಂತಾನೇ ಹೇಳ್ಬಹುದು. ಅನೇಕ ಜನರಿಗೆ ಆ್ಯಪಲ್ ಕಂಪೆನಿಯ ಸ್ಮಾರ್ಟ್ಫೋನ್ (Apple Smartphone), ಹೆಡ್ಫೋನ್, ಮ್ಯಾಕ್ ಲ್ಯಾಪ್ಟಾಪ್ (Mac Laptop) ಈ ರೀತಿಯ ಡಿವೈಸ್ಗಳನ್ನುಹೊಂದಬೇಕು ಎಂದು ಅಂದಾಜು ಮಾಡುತ್ತಿರುತ್ತಾರೆ. ಆದರೆ ಕೆಲವೊಂದು ಜನರಿಗೆ ಇದನ್ನು ಹೊಂದಲು ಸಾಧ್ಯವಾಗುವುದಲ್ಲ. ಏಕೆಂದರೆ ಆ್ಯಪಲ್ ಕಂಪೆನಿಯ ಡಿವೈಸ್ಗಳೆಲ್ಲವೂ ದುಬಾರಿ ಬೆಲೆಯದ್ದಾಗಿರುತ್ತದೆ. ಆದರೆ ಇದರ ಡಿವೈಸ್ಗಳ ಫೀಚರ್ಸ್ಗಳ ಬಗ್ಗೆ ಅಂತೂ ಮಾತಾಡೋ ಹಾಗೆನೇ ಇಲ್ಲ. ಈ ಡಿವೈಸ್ಗಳೆಲ್ಲವೂ ಗುಣಮಟ್ಟದ ಫೀಚರ್ಸ್ಗಳನ್ನು ಹೊಂದಿರುತ್ತದೆ. ಸ್ಮಾರ್ಟ್ಫೋನ್ಗಳಿಂದ ಹಿಡಿದು ಗ್ಯಾಜೆಟ್ಸ್ಗಳವರೆಗೂ ಎಲ್ಲವೂಉತ್ತಮವಾಗಿರುತ್ತದೆ.
ಸದ್ಯ ಅಮೆಜಾನ್, ಫ್ಲಿಪ್ಕಾರ್ಟ್ ನಂತರ ಜನಪ್ರಿಯ ಇಕಾಮರ್ಸ್ ಕಂಪೆನಿಯಾಗಿರುವ ವಿಜಯ್ ಸೇಲ್ಸ್ ಈ ಆಫರ್ಸ್ ಸೇಲ್ ಅನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಆ್ಯಪಲ್ ಮ್ಯಾಕ್ ಲ್ಯಾಪ್ಟಾಪ್ ಮತ್ತು ಇತರೆ ಡಿವೈಸ್ಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಹಾಗಿದ್ರೆ ಆ ಡಿವೈಸ್ಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಆಫರ್ಸ್ ಹೇಗಿದೆ?
ಆ್ಯಪಲ್ ಸಂಸ್ಥೆಯು ಆ್ಯಪಲ್ ಮ್ಯಾಕ್ಬುಕ್ ಏರ್ ಎಮ್2 ಡಿವೈಸ್ಗೆ 10,000 ರೂ. ರಿಯಾಯಿತಿ ಆಫರ್ ಅನ್ನು ಘೋಷಿಸಿದ್ದಾರೆ. ಆ್ಯಪಲ್ ವೆಬ್ಸೈಟ್ನಲ್ಲಿ ಈ ಆ್ಯಪಲ್ ಮ್ಯಾಕ್ಬುಕ್ ಏರ್ ಎಮ್2 ಡಿವೈಸ್ ಬೆಲೆ 1,19,900 ರೂಪಾಯಿ ಎಮದು ನಿರ್ಧರಿಸಲಾಗಿದೆ. ಆದರೆ ಪ್ರಮುಖ ಇ ಕಾಮರ್ಸ್ ತಾಣಗಳಲ್ಲಿ ಈ ಡಿವೈಸ್ 1,05,500 ರೂಪಾಯಿ ಪ್ರೈಸ್ ಟ್ಯಾಗ್ನಲ್ಲಿ ಗ್ರಾಹಕರು ಹೊಂದಬಹುದಾಗಿದೆ.
ಹಾಗೆಯೇ ಆಯ್ದ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ, ಹೆಚ್ಚುವರಿ ಯಾಗಿ 10,000 ರೂ. ಡಿಸ್ಕೌಂಟ್ನಲ್ಲಿ ಖರೀದಿ ಮಾಡಬಹುದು. ಈ ಕೊಡುಗೆ ಮೂಲಕ ಆ್ಯಪಲ್ ಮ್ಯಾಕ್ಬುಕ್ ಏರ್ ಎಮ್2 ಡಿವೈಸ್ ಅನ್ನು 95,500 ರೂಪಾಯಿಗಳ ಆಕರ್ಷಕ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.
ಆ್ಯಪಲ್ ಮ್ಯಾಕ್ಬುಕ್ ಏರ್ ಎಮ್2 ಫೀಚರ್ಸ್'
ಆ್ಯಪಲ್ ಮ್ಯಾಕ್ಬುಕ್ ಏರ್ ಎಮ್2 ಡಿವೈಸ್ ನಲ್ಲಿ ಸಂಸ್ಥೆಯ ಎಮ್2 ಚಿಪ್ಸೆಟ್ ಅನ್ನು ಅಳವಡಿಸಲಾಗಿದೆ. ಇದು ಮೊದಲ ತಲೆಮಾರಿನ ಎಮ್1 ಆ್ಯಪಲ್ ಸಿಲಿಕಾನ್ ಚಿಪ್ನ ಸುಧಾರಿತ ಆವೃತ್ತಿಯಾಗಿದೆ. ಇನ್ನು ಈ ಹೊಸ ಚಿಪ್ಸೆಟ್ ಹಿಂದಿನ ಚಿಪ್ಸೆಟ್ಗಿಂತ 18% ಸುಧಾರಿತ ಸಿಪಿಯು ಮತ್ತು 35% ಜಿಪಿಯು ಅನ್ನು ಬಳಸಲಾಗಿದೆ. ಜೊತೆಗೆ ಸ್ಪರ್ಧಾತ್ಮಕ 10 ಕೋರ್ ಪ್ರೊಸೆಸರ್ಗಳಿಗೆ 1.9 ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ.
ಇನ್ನು ಈ ಲ್ಯಾಪ್ಟಾಪ್ 13.6 ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇಯನ್ನು ಹೊಂದಿದೆ. ಈ ಆ್ಯಪಲ್ ಮ್ಯಾಕ್ಬುಕ್ ಏರ್ (2022) 2ಟಿಬಿ ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದನ್ನು 24ಟಿಬಿ ಯ ಏಕೀಕೃತ ಸೂಚಕದೊಂದಿಗೆ ಕಾನ್ಫಿಗರ್ ಮಾಡಬಹುದು. ಇದಲ್ಲದೆ ಈ ಲ್ಯಾಪ್ಟಾಪ್ 1080p ಕ್ಯಾಮೆರಾ ವನ್ನು ಹೊಂದಿದೆ. ಇನ್ನು ಈ ಲ್ಯಾಪ್ಟಾಪ್ ಅನ್ನು ಸಿಂಗಲ್ ಚಾರ್ಜ್ನಲ್ಲಿ ವಿಡಿಯೋಗಳನ್ನು ವೀಕ್ಷಿಸುವಾಗ 18 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಮ್ಯಾಕ್ಬುಕ್ ಏರ್ (2022) ಐಚ್ಛಿಕ 67W ಯುಎಸ್ಇ ಟೈಪ್-ಸಿ ಪವರ್ ಅಡಾಪ್ಟರ್ ನೊಂದಿಗೆ 30 ನಿಮಿಷಗಳಲ್ಲಿ ಡಿವೈಸ್ಗೆ 50% ವೇಗವಾಗಿ ಚಾರ್ಜ್ ಮಾಡಲು ಬೆಂಬಲವನ್ನು ನೀಡುತ್ತದೆ
ಆ್ಯಪಲ್ ಏರ್ಪಾಡ್ಸ್ ಪ್ರೋ ಆಫರ್ಸ್
ಆ್ಯಪಲ್ ಏರ್ಪಾಡ್ಸ್ ಪ್ರೋ ಇಯರ್ಫೋನ್ ಡಿವೈಸ್ ಅನ್ನು ಸಹ ಭಾರೀ ಡಿಸ್ಕೌಂಟ್ನಲ್ಲಿ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ಗೆ ಅಧಿಕೃತ ಆ್ಯಪಲ್ ವೆಬ್ಸೈಟ್ ನಲ್ಲಿ 26,900ರೂ. ಬೆಲೆ ಎಂದು ನಿಗದಿ ಮಾಡಲಾಗಿದೆ. ಆದರೆ ಹೆಚ್ಡಿಎಫ್ಸಿ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 2,000 ರೂ, ಡಿಸ್ಕೌಂಟ್ ಲಭ್ಯವಾಗಲಿದೆ.
ಇದನ್ನೂ ಓದಿ: ಡಿಜಿಟಲ್ ಇಂಡಿಯಾ ಸೇಲ್ ಆರಂಭ; ಈ ಸ್ಮಾರ್ಟ್ವಾಚ್ ಮೇಲೆ ಭರ್ಜರಿ ಡಿಸ್ಕೌಂಟ್!
ಈ ಇಯರ್ಫೋನ್ಗಳು ಎರಡು ಮೈಕ್ರೊಫೋನ್ ಮತ್ತು ಸಾಫ್ಟ್ವೇರ್ ಗಳನ್ನು ಬಳಸಿ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಗೆ ಇದು ಬಹಳಷ್ಟು ಸಹಾಯಕವಾಗುತ್ತದೆ. ಈ ಡಿವೈಸ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 24 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ. ಇದಲ್ಲದೆ, ಐದು ನಿಮಿಷಗಳ ವೇಗದ ಚಾರ್ಜ್ ಸಮಯವು ಒಂದು ಗಂಟೆ ಕೇಳುವ ಸಮಯ ಅಥವಾ ಒಂದು ಗಂಟೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ