ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ (Smartphone) ಬಹಳಷ್ಟು ಮುಖ್ಯ ಸಾಧನವಾಗಿಬಿಟ್ಟಿದೆ. ಇನ್ನು ಇತ್ತೀಚೆಗಂತೂ ಕಂಪೆನಿಗಳು ಸಹ ಹೊಸ ಹೊಸ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಇದನ್ನು ಗಮನಿಸಿದ ಗ್ರಾಹಕರು ಸಹ ಹೊಸ ಸ್ಮಾರ್ಟ್‌ಫೋನ್ ಬಂದಾಗ ಖರೀದಿಸಲು ಮುಂದಾಗುತ್ತಾರೆ. ಯಾರೇ ಆಗಲಿ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡ್ಬೇಕಾದ್ರೆ ಅದರ ಫೀಚರ್ಸ್ ಜೊತೆಗೆ ಬೆಲೆಯನ್ನೂ ನೋಡುತ್ತಾರೆ. ಎಷ್ಟೇ ಬೆಲೆ ಹೊಂದಿದ್ದರೂ ಜನರು ಮುಖ್ಯವಾಗಿ ಫೀಚರ್ಸ್ಗಳನ್ನು ನೋಡೇ ನೋಡುತ್ತಾರೆ. ಇದೀಗ ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಒಪ್ಪೋ ಕಂಪೆನಿಯ (Oppo Company) ಸ್ಮಾರ್ಟ್‌ಫೋನ್ ಮೇಲೆ ಫ್ಲಿಪ್ಕಾರ್ಟ್ (Flipkart) ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ಮೂಲಕ ಹೊಸ ಫೋನ್ ಖರೀದಿಸುವ ಪ್ಲ್ಯಾನ್ನಲ್ಲಿರುವವರಿಗೆ ಇದು ಉತ್ತಮ ಆಯ್ಕೆಯಾಗಲಿದೆ.
ಒಪ್ಪೋ ಕಂಪೆನಿಯಿಂದ ಇತ್ತೀಚೆಗೆ ಬಿಡುಗಡೆಯಾಗಿದ್ದ ಒಪ್ಪೋ A77s ಸ್ಮಾರ್ಟ್ಫೋನ್ನಲ್ಲಿ ಬಂಪರ್ ಆಫರ್ ಅನ್ನು ಘೋಷಿಸಿದೆ. ಈ ಆಫರ್ ಕೇವಲ ಫ್ಲಿಪ್ಕಾರ್ಟ್ನಲ್ಲಿ ಮಾತ್ರ ಲಭ್ಯವಿದ್ದು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಯೋಜನೆಯಲ್ಲಿದ್ದವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಏನೆಲ್ಲಾ ರಿಯಾಯಿತಿ ಲಭ್ಯ?
ಒಪ್ಪೋ ಕಂಪೆನಿಯಿಂದ ಇತ್ತೀಚೆಗೆ ಒಪ್ಪೋ ಎ77ಎಸ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿತ್ತು. ಈ ಸ್ಮಾರ್ಟ್ಫೋನ್ನ ಮೂಲ ಬೆಲೆ 22,999 ರೂಪಾಯಿಯಾಗಿದೆ. ಆದರೆ ಈಗ ಕೇವಲ 17,999 ರೂಪಾಯಿಯಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮೇಲೆ ವಿಶೇಷವಾಗಿ ಎಕ್ಸ್ಚೇಂಜ್ ಆಫರ್, ಬ್ಯಾಂಕ್ ರಿಯಾಯಿತಿಗಳು ಸಹ ಲಭ್ಯವಿದೆ.
ಇದನ್ನೂ ಓದಿ: ಮೊಬೈಲ್ ನೀರಿಗೆ ಬಿದ್ದಾಗ ಯಾವತ್ತೂ ಈ ರೀತಿ ಮಾಡ್ಬೇಡಿ! ಅಪಾಯ ಗ್ಯಾರಂಟಿ
ಎಕ್ಸ್ಚೇಂಜ್ ಆಫರ್
ಇನ್ನು ಒಪ್ಪೋ ಎ77ಎಸ್ ಸ್ಮಾರ್ಟ್‌ಫೋನ್ ಮೇಲೆ ವಿಶೇಷವಾಗಿ ಎಕ್ಸ್ಚೇಂಜ್ ಆಫರ್ ಸಹ ಲಭ್ಯವಿದ್ದು, ಈ ಮೂಲಕ ಕೇವಲ 2 ಸಾವಿರ ರೂಪಾಯಿಗೆ ಈ ಹೊಸ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡ್ಬಹುದು. ಅಂದರೆ ಈ ಸ್ಮಾರ್ಟ್ಫೋನ್ನಲ್ಲಿ ಬರೋಬ್ಬರಿ 16 ಸಾವಿರದವರೆಗೆ ವಿನಿಮಯ ಆಫರ್ ನೀಡಲಾಗಿದೆ. ನಿಮ್ಮ ಹಳೆಯ ಫೋನ್ ಅನ್ನು ಈ ಸ್ಮಾರ್ಟ್‌ಫೋನ್ ಜೊತೆ ಎಕ್ಸ್ಚೇಂಜ್ ಮಾಡುವ ಮೂಲಕ ಈ ಹೊಸ ಫೋನ್ ಅನ್ನು ಖರೀದಿ ಮಾಡಬಹುದು. ಆದರೆ ಈ ಆಫರ್ ನೀವು ವಿನಿಮಯ ಮಾಡಲು ಬಯಸುವ ಸ್ಮಾರ್ಟ್ಫೋನ್ನ ಮಾದರಿ ಮತ್ತು ಗುಣಮಟ್ಟದ ಮೇಲೆ ನಿರ್ಧಾರವಾಗುತ್ತದೆ.
ಏನೆಲ್ಲಾ ಬ್ಯಾಂಕ್ ಆಫರ್ಸ್ಗಳಿವೆ?
ಒಪ್ಪೋ ಎ77ಎಸ್ ಸ್ಮಾರ್ಟ್ಫೋನ್ನಲ್ಲಿ ಬ್ಯಾಂಕ್ ಆಫರ್ಸ್ಗಳನ್ನು ಸಹ ನೀಡಲಾಗಿದೆ. ಈ ಮೂಲಕ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆ ಮಾಡಿಕೊಂಡು ಈ ಮೊಬೈಲ್ ಅನ್ನು ಖರೀದಿ ಮಾಡಿದರೆ ಈ ಫೋನ್ ಮೇಲೆ 1,500 ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಇನ್ನು ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಈ ಫೋನ್ ಖರೀದಿಸಿದರೂ 1,500 ರೂಪಾಯಿ ರಿಯಾಯಿತಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮೇಲೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ನಲ್ಲಿಯೂ 1,500 ರೂಪಾಯಿಗಳ ರಿಯಾಯಿತಿ ನೀಡಲಾಗಿದೆ.
ಫೀಚರ್ಸ್ ಹೇಗಿದೆ?
ಡಿಸ್ಪ್ಲೇ ವಿನ್ಯಾಸ
ಒಪ್ಪೋ A77s ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಈ ಡಿಸ್ಪ್ಲೇಯು 90Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಹಾಗೆಯೇ ಇದು 1,612x720 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ಆಧಾರಿತ ಕಲರ್ ಓಎಸ್ 12.1 ನಲ್ಲಿ ರನ್ ಆಗಲಿದೆ. ಜೊತೆಗೆ ಈ ಫೋನ್ ಸ್ನಾಪ್‌ಡ್ರಾಗನ್ 680 ಎಸ್ಓಸಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್ಫೋನ್ನ ಸ್ಟೋರೇಜ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಇದು 8ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ನಲ್ಲಿ ಕಾಣಿಸಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ