IPhone 14: ಐಫೋನ್​ 14 ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್​! 45 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ

ಐಫೋನ್​ 14 ಸ್ಮಾರ್ಟ್​​ಫೋನ್

ಐಫೋನ್​ 14 ಸ್ಮಾರ್ಟ್​​ಫೋನ್

IPhones: ಸ್ಮಾರ್ಟ್​ಫೋನ್​ ಯುಗದಲ್ಲಿ ಐಫೋನ್​ಗಳು ತನ್ನ ವಿಶೇಷ ವಿನ್ಯಾಸದ ಮೂಲಕ ಜನರನ್ನು ಆಕರ್ಷಿಸುತ್ತಿರುತ್ತದೆ. ಅದೇ ರೀತಿ ಕಳೆದ ವರ್ಷ ಮಾರುಕಟ್ಟೆಗೆ ಎಂಟ್ರಿ ನೀಡಿದ್ದ ಐಫೋನ್​ 14ನ ಬೇಸಿಕ್​ ಮಾಡೆಲ್​ ಅನ್ನು ಫ್ಲಿಪ್​ಕಾರ್ಟ್​ ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. 

ಮುಂದೆ ಓದಿ ...
  • Share this:

    ಭಾರತದ ಮಾರುಕಟ್ಟೆಯಲ್ಲಿ ಐಫೋನ್​ಗಳಿಗೆ (IPhones) ಎಲ್ಲಿಲ್ಲದ ಬೇಡಿಕೆ. ಎಷ್ಟೋ ಜನರಿಗೆ ಜೀವನದಲ್ಲಿ ಒಮ್ಮೆಯಾದರೂ ಐಫೋನ್​ ಅನ್ನು ಖರೀದಿಸ್ಬೇಕು ಅನ್ನೂ ಆಸೆಯನ್ನು ಹೊಂದಿರುತ್ತಾರೆ. ಆದರೆ ಈ ಮೊಬೈಲ್​ಗಳು ದುಬಾರಿ ಬೆಲೆಯನ್ನು ಹೊಂದಿರುವುದರಿಂದ ಕೆಲವರಿಗೆ ಇದನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಟೆಕ್​ ಮಾರುಕಟ್ಟೆಯಲ್ಲಿರುವ ಪ್ರೀಮಿಯಮ್​ ಸ್ಮಾರ್ಟ್​​ಫೋನ್​ಗಳಲ್ಲಿ ಐಫೋನ್​ಗಳಿಗೆ ಇದ್ದಷ್ಟು ಬೇಡಿಕೆ ಬೇರೆ ಯಾವುದೇ ಮೊಬೈಲ್​ಗಳಿಗಿಲ್ಲ. ಐಫೋನ್​ ಪ್ರಿಯರಿಗಾಗಿಯೇ ಕೆಲವೊಮ್ಮೆ ಇಕಾಮರ್ಸ್​ ತಾಣಗಳು ಆ್ಯಪಲ್​ ಕಂಪೆನಿಯ (Apple Company) ಸ್ಮಾರ್ಟ್​ಫೋನ್​ಗಳಿಗೆ ವಿಶೇಷ ರಿಯಾಯಿತಿಯನ್ನು ಘೋಷಿಸುತ್ತದೆ. ಅದೇ ರೀತಿ ಜನಪ್ರಿಯ ಇಕಾಮರ್ಸ್​ ವೆಬ್​ಸೈಟ್ ಆಗಿರುವ ಫ್ಲಿಪ್​ಕಾರ್ಟ್​ ಸದ್ಯ ಐಫೋನ್ 14 ಸ್ಮಾರ್ಟ್​​ಫೋನ್ (IPhone 14 Smartphone)​ ಮೇಲೆ ಭರ್ಜರಿ ಆಫರ್​ ಅನ್ನು ನೀಡುತ್ತಿದೆ.


    ಸ್ಮಾರ್ಟ್​ಫೋನ್​ ಯುಗದಲ್ಲಿ ಐಫೋನ್​ಗಳು ತನ್ನ ವಿಶೇಷ ವಿನ್ಯಾಸದ ಮೂಲಕ ಜನರನ್ನು ಆಕರ್ಷಿಸುತ್ತಿರುತ್ತದೆ. ಅದೇ ರೀತಿ ಕಳೆದ ವರ್ಷ ಮಾರುಕಟ್ಟೆಗೆ ಎಂಟ್ರಿ ನೀಡಿದ್ದ ಐಫೋನ್​ 14ನ ಬೇಸಿಕ್​ ಮಾಡೆಲ್​ ಅನ್ನು ಫ್ಲಿಪ್​ಕಾರ್ಟ್​ ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ.


    ಏನೆಲ್ಲಾ ಆಫರ್ಸ್​ಗಳಿವೆ?


    ಜನಪ್ರಿಯ ಇಕಾಮರ್ಸ್​ ವೆಬ್​ಸೈಟ್​ ಆಗಿರುವಂತಹ ಫ್ಲಿಪ್​ಕಾರ್ಟ್​ ಕಳೆದ ವರ್ಷವಷ್ಟೇ ಮಾರುಕಟ್ಟೆಗೆ ಕಾಲಿಟ್ಟಿದ್ದ ಐಫೋನ್ 14 ಸ್ಮಾರ್ಟ್​ಫೋನ್​ ಮೇಲೆ ಬರೋಬ್ಬರಿ 7,401 ರೂಪಾಯಿವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಈ ರಿಯಾಯಿತಿ ಮೂಲಕ ಐಫೋನ್​ 14ನ ಬೇಸಿಕ್ ಮಾಡೆಲ್ ಅನ್ನು ಕೇವಲ 72,499 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ.




    ಬ್ಯಾಂಕ್ ಆಫರ್ಸ್​


    ಇನ್ನು ಫ್ಲಿಪ್​ಕಾರ್ಟ್​ ಬ್ಯಾಂಕ್ ಆಫರ್ಸ್​ ಅನ್ನು ಸಹ ಣಿಡಿದ್ದು, ಇದರಲ್ಲಿ ನೀವು ಒಂದು ವೇಳೆ ಹೆಚ್​ಡಿಎಫ್​​ಸಿ ಬ್ಯಾಂಕ್​ ಕಾರ್ಡ್​​ ಮೂಲಕ ಖರೀದಿಸುವುದಾದರೆ ಹೆಚ್ಚುವರಿಯಾಗಿ 4000 ರೂಪಾಯಿವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ಮೂಲಕ ಒಟ್ಟಾರೆಯಾಗಿ 11,401 ರೂಪಾಯಿ ಡಿಸ್ಕೌಂಟ್ ಮೂಲಕ ಐಫೋನ್ 14 ಸ್ಮಾರ್ಟ್​​ಫೋನ್ ಅನ್ನು 68,499 ರೂಪಾಯಿಗೆ ಹೊಂದಬಹುದು.


    ಎಕ್ಸ್​​ಚೇಂಜ್ ಆಫರ್​


    ಒಂದು ವೇಳೆ ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನನ್ನು ವಿನಿಮಯ ಮಾಡಿಕೊಳ್ಳಲು ಬಯಸಿದರೆ ಗರಿಷ್ಠ 23,000 ರೂಪಾಯಿವರೆಗೆ ರಿಯಾಯಿತಿ ಸಿಗುತ್ತದೆ. ಈ ಮೂಲಕ ಐಫೋನ್​ 14 ಅನ್ನು 45 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದು.


    ಐಫೋನ್ 14 ಫೀಚರ್ಸ್ ಹೇಗಿದೆ?


    ಐಫೋನ್​ 14 ಸೀರಿಸ್​ನಲ್ಲಿ ಐಫೋನ್​ 14, ಐಫೋನ್ 14 ಪ್ರೋ ಮತ್ತು ಐಫೋನ್ 14 ಅಲ್ಟ್ರಾ ಎಂಬ 3 ಮಾದರಿಗಳಲ್ಲಿ ಸ್ಮಾರ್ಟ್​ಫೋನ್ ಬಿಡುಗಡೆಯಾಗಿತ್ತು. ಆದರೆ ಇದರಲ್ಲಿ ಐಫೋನ್​ 14 ಮೊಬೈಲ್​ ಇದರ ಮೂಲ ಮಾದರಿಯಾಗಿದೆ. ಈ ಸ್ಮಾರ್ಟ್​​ಫೋನ್​ ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ ಹಾಗೂ ಫ್ಲಾಟ್-ಎಡ್ಜ್ ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಫ್ರೇಮ್​ನೊಂದಿಗೆ ವಿನ್ಯಾಸವನ್ನು ಪಡೆದಿದೆ.


    ಐಫೋನ್​ 14 ಸ್ಮಾರ್ಟ್​​ಫೋನ್


    ಇನ್ನು ಇದು  6.1-ಇಂಚಿನ ಡಿಸ್​ಪ್ಲೇಯನ್ನು ಹೊಂದಿದೆ.​ ಈ ಡಿಸ್‌ಪ್ಲೇಯು 1200 ನಿಟ್ಸ್​ ಬ್ರೈಟ್‌ನೆಸ್, ಹ್ಯಾಪ್ಟಿಕ್ ಟಚ್, P3 ವೈಡ್ ಕಲರ್, ಟ್ರೂ ಟೋನ್, 20,00,000:1 ಕಾಂಟ್ರಾಸ್ಟ್, ಓಲಿಯೋಫೋಬಿಕ್ ಕೋಟಿಂಗ್ ಸೇರಿದಂತೆ ಹಲವಾರು ಫೀಚರ್ಸ್​ಗಳನ್ನು ಒಳಗೊಂಡಿದೆ.


    ಪ್ರೊಸೆಸರ್ ಸಾಮರ್ಥ್ಯ


    ಐಫೋನ್ 14 ಸ್ಮಾರ್ಟ್​ಫೋನ್ ಕಳೆದ ವರ್ಷ ಬಿಡುಗಡೆಯಾಗಿದ್ದ ಐಫೋನ್ 13 ಮೊಬೈಲ್​ನಂತೆಯೇ A15 ಬಯೋನಿಕ್ SoC ಪ್ರೊಸೆಸರ್ ಅನ್ನು ಹೊಂದಿದೆ. ಈ ಸ್ಮಾರ್ಟ್​ಫೋನ್​ಪ್ರಸ್ತುತ ವಿಶ್ವದ ಅತ್ಯಂತ ವೈಯಕ್ತಿಕ ಮತ್ತು ಸುರಕ್ಷಿತ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಐಓಎಸ್​ 16 ನಲ್ಲಿ ಕಾರ್ಯನಿರ್ವಹಿಸಲಿದೆ


    ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ ವಿವೋ ಎಕ್ಸ್​90 ಸ್ಮಾರ್ಟ್​​ಫೋನ್​! ಹೇಗಿದೆ ಫೀಚರ್ಸ್​?


    ಕ್ಯಾಮೆರಾ ಫೀಚರ್ಸ್


    ಐಫೋನ್​ 14 ಸ್ಮಾರ್ಟ್​​ಫೋನ್​ನ ಕ್ಯಾಮೆರಾ ಫೀಚರ್ಸ್​ ಬಗ್ಗೆ ಹೇಳುವುದಾದರೆ, ಇದರಲ್ಲಿ 12ಎಮ್​​ಪಿ ಮುಖ್ಯ ಕ್ಯಾಮೆರಾ ಹಾಗೂ 12ಎಮ್​​ಪಿ ಅಲ್ಟ್ರಾ ವೈಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಈ ಕ್ಯಾಮೆರಾಗಳ ಮೂಲಕ ವಿಡಿಯೋ ರೆಕಾರ್ಡಿಂಗ್ ಅನ್ನು 4ಕೆ ಸಾಮರ್ಥ್ಯದಲ್ಲಿ ಮಾಡಬಹುದು.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು