IPhone 14 Plus: ಐಫೋನ್​ 14 ಪ್ಲಸ್​ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್​! ಏನೆಲ್ಲಾ ರಿಯಾಯಿತಿಗಳಿವೆ?

ಐಫೋನ್​ 14 ಪ್ಲಸ್​ ಸ್ಮಾರ್ಟ್​​ಫೋನ್

ಐಫೋನ್​ 14 ಪ್ಲಸ್​ ಸ್ಮಾರ್ಟ್​​ಫೋನ್

ಫ್ಲಿಪ್​ಕಾರ್ಟ್​​ ಇದೀಗ ಆ್ಯಪಲ್​ ಕಂಪೆನಿಯಿಂದ ಕಳೆದ ವರ್ಷ ಬಿಡುಗಡೆಯಾದ ಐಫೋನ್​ 14 ಪ್ಲಸ್​ ಸ್ಮಾರ್ಟ್​​ಫೋನ್​ ಅನ್ನು ಭರ್ಜರಿ ಡಿಸ್ಕೌಂಟ್​ನೊಂದಿಗೆ ಮಾರಾಟ ಮಾಡುತ್ತಿದೆ. ಇದಲ್ಲದೆ ಕೆಲವೊಂದು ಬ್ಯಾಂಕ್​ ಆಫರ್ಸ್​ಗಳನ್ನು ಸಹ ಘೋಷಿಸಿದೆ. ಹಾಗಿದ್ರೆ ಈ ಸ್ಮಾರ್ಟ್​ಫೋನ್​ನ ಮೇಲೆ ಏನೆಲ್ಲಾ ರಿಯಾಯಿತಿಗಳು ಲಭ್ಯವಿದೆ ಎಂದು ಈ ಲೇಖನದಲ್ಲಿ ಓದೋಣ.

ಮುಂದೆ ಓದಿ ...
  • Share this:

    ಆ್ಯಪಲ್​ ಕಂಪೆನಿಯ (Apple Company) ಸ್ಮಾರ್ಟ್​​ಫೋನ್​ಗಳು ಯಾವಾಗಲು ಜಾಗತಿಕ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಇದಕ್ಕೆ ಕಾರಣ ಇದರ ಫೀಚರ್ಸ್​ಗಳು ಮತ್ತು ಬೆಲೆ ಅಂತಾನೇ ಹೇಳ್ಬಹುದು. ಹೆಚ್ಚು ಜನರಿಗೆ ಜೀವನದಲ್ಲಿ ಒಮ್ಮೆಯಾದರೂ ಐಫೋನ್​ ಅನ್ನು ಖರೀದಿಸಬೇಕೆಂದು ಯೋಚನೆಯಲ್ಲಿರುತ್ತಾರೆ. ಆದರೆ ಇದಕ್ಕೆ ಮೊದಲು ಅಡ್ಡಿಯಾಗುವುದೇ ಇದರ ಬೆಲೆ. ಯಾಕೆಂದರೆ ಆ್ಯಪಲ್​ ಕಂಪೆನಿಯಿಂದ ಬಿಡುಗಡೆಯಾಗುವಂತಹ ಎಲ್ಲಾ ಸಾಧನಗಳ ಬೆಲೆ ಮಾತ್ರ ಸಾಮಾನ್ಯವಾಗಿ ದುಬಾರಿಯಾಗಿರುತ್ತದೆ. ಅದ್ರಲ್ಲೂ ಸ್ಮಾರ್ಟ್​ಫೋನ್​ಗಳದ್ದು ಬೆಲೆ ದುಬಾರಿಯೇ ಆಗಿರುತ್ತದೆ. ಆದರೆ ಇದೀಗ ಐಫೋನ್ (IPhone)​ ಪ್ರಿಯರಿಗೆ ಫ್ಲಿಪ್​ಕಾರ್ಟ್ (Flipkart)​​ ಶುಭಸುದ್ದಿಯನ್ನು ನೀಡಿದೆ. ಈ ಮೂಲಕ ಐಫೋನ್​ಗಳನ್ನು ಭಾರೀ ಅಗ್ಗದಲ್ಲಿ ಪಡೆಯಬಹುದಾಗಿದೆ.


    ಫ್ಲಿಪ್​ಕಾರ್ಟ್​​ ಇದೀಗ ಆ್ಯಪಲ್​ ಕಂಪೆನಿಯಿಂದ ಕಳೆದ ವರ್ಷ ಬಿಡುಗಡೆಯಾದ ಐಫೋನ್​ 14 ಪ್ಲಸ್​ ಸ್ಮಾರ್ಟ್​​ಫೋನ್​ ಅನ್ನು ಭರ್ಜರಿ ಡಿಸ್ಕೌಂಟ್​ನೊಂದಿಗೆ ಮಾರಾಟ ಮಾಡುತ್ತಿದೆ. ಇದಲ್ಲದೆ ಕೆಲವೊಂದು ಬ್ಯಾಂಕ್​ ಆಫರ್ಸ್​ಗಳನ್ನು ಸಹ ಘೋಷಿಸಿದೆ. ಹಾಗಿದ್ರೆ ಈ ಸ್ಮಾರ್ಟ್​ಫೋನ್​ನ ಮೇಲೆ ಏನೆಲ್ಲಾ ರಿಯಾಯಿತಿಗಳು ಲಭ್ಯವಿದೆ ಎಂದು ಈ ಲೇಖನದಲ್ಲಿ ಓದೋಣ.


    ಬೆಲೆಯಲ್ಲಿ ಕಡಿತ


    ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್‌ 14 ಪ್ಲಸ್‌ ಬೆಲೆ ಕಡಿತವನ್ನು ಪಡೆದುಕೊಂಡಿದೆ. 89,900 ರೂಪಾಯಿ ಮೂಲ ಬೆಲೆಯನ್ನು ಹೊಂದಿದ್ದ ಐಫೋನ್‌ 14 ಪ್ಲಸ್‌ ಅನ್ನು ಇದೀಗ ಫ್ಲಿಪ್​ಕಾರ್ಟ್​ 76,999 ರೂಪಾಯಿ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಈ ಆಫರ್​ ಜೊತೆಗೆ ಇನ್ನೂ ಅನೇಕ ರೀಯಾಯಿತಿಗಳೊಂದಿಗೆ ಐಫೋನ್​ 14 ಪ್ಲಸ್​ ಫೋನ್ ಅನ್ನು ಹೊಂದಬಹುದಾಗಿದೆ.




    ಏನೆಲ್ಲಾ ಆಫರ್ಸ್​ ಲಭ್ಯವಿದೆ?


    ಐಫೋನ್ 14 ಪ್ಲಸ್‌ ಮೂಲ ಬೆಲೆ 89,900ರೂ.ಆಗಿದೆ. ಆದರೆ ಈ ಐಫೋನ್‌ ಅನ್ನು ಫ್ಲಿಪ್‌ಕಾರ್ಟ್‌ ಕೇವಲ 76,999ರೂ.ಬೆಲೆಯಲ್ಲಿ ಮಾರಾಟಕ್ಕೆ ಇಟ್ಟಿದೆ. ಈ ಮೂಲಕ ಐಫೋನ್‌ 14 ಪ್ಲಸ್‌ ಮೇಲೆ ಬರೋಬ್ಬರಿ 12,901 ರೂಗಳ ರಿಯಾಯಿತಿಯನ್ನು ಘೋಷಿಸಿದೆ ಎಂದು ಹೇಳ್ಬಹುದು. ಇದಲ್ಲದೆ ನಿಮ್ಮ ಆಕ್ಸಿಸ್ ಬ್ಯಾಂಕ್ ಕಾರ್ಡ್ ಅನ್ನು ಬಳಸಿಕೊಂಡು ಖರೀದಿಸಿದರೆ 5% ರಷ್ಟು ಡಿಸ್ಕೌಂಟ್‌ ಸಿಗಲಿದೆ.


    ಜೊತೆಗೆ ಎಕ್ಸ್‌ಚೇಂಜ್‌ ಆಫರ್‌ನಲ್ಲಿ 21400ರೂ. ವರೆಗೆ ರಿಯಾಯಿತಿ ದೊರೆಯುತ್ತದೆ. ಆದರೆ ಈ ಎಕ್ಸ್​​ಚೇಂಜ್​ ಆಫರ್ ನೀವು ವಿನಿಮಯ ಮಾಡಲು ಬಯಸುವಂತಹ ಸ್ಮಾರ್ಟ್​​ಫೋನ್​ನ ಮಾದರಿ ಮತ್ತು ಗುಣಮಟ್ಟದ ಮೇಲೆ ನಿರ್ಧರಿಸಲಾಗುತ್ತದೆ. ಈ ಮೂಲಕ ನೀವು ಐಫೋನ್‌ 14 ಪ್ಲಸ್‌ ಅನ್ನು ಭಾರೀ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.


    ಐಫೋನ್ 14 ಪ್ಲಸ್ ಫೀಚರ್ಸ್


    ಐಫೋನ್​ 14 ಪ್ಲಸ್​ ಸ್ಮಾರ್ಟ್​​ಫೋನ್


    ಡಿಸ್​ಪ್ಲೇ ಫೀಚರ್ಸ್


    ಐಫೋನ್ 14 ಪ್ಲಸ್‌ ಫೋನ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದ್ದು, OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಅನ್ನು ಪಡೆದು ಕೊಂಡಿದೆ.


    ಕ್ಯಾಮೆರಾ ಫೀಚರ್ಸ್​


    ಐಫೋನ್ 14 ಪ್ಲಸ್​ ಸ್ಮಾರ್ಟ್​​ಫೋನ್ ವಿಶೇಷವಾಗಿ ಡ್ಯುಯಲ್ ಕ್ಯಾಮೆರಾ ಸೆಟಪ್​ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕಾಲ್​ಗಾಗಿ 12 ಮೆಗಾ ಪಿಕ್ಸಲ್‌ನ ಕ್ಯಾಮೆರಾವನ್ನು ಅಳವಡಿಸಲಾಗಿದೆ.


    ಇದನ್ನೂ ಓದಿ: 5ಜಿ ಫೋನ್ ಖರೀದಿಸುವವರಿಗೆ ಗುಡ್​ ನ್ಯೂಸ್​! ಫ್ಲಿಪ್​ಕಾರ್ಟ್​​ನಲ್ಲಿ ಸ್ಮಾರ್ಟ್​​ಫೋನ್​ಗಳ ಮೇಲೆ ಬಂಪರ್ ಆಫರ್


    ಸ್ಟೋರೇಜ್ ಮತ್ತು ಇತರೆ ಫೀಚರ್ಸ್


    ಈ ಸ್ಮಾರ್ಟ್​​ಫೋನ್​ನ ಸ್ಟೋರೇಜ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಇದು ಐಫೋನ್‌ 14 ಪ್ಲಸ್ ಫೋನ್ ಸಹ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಸಪೋರ್ಟ್‌ ಪಡೆದಿದೆ.


    ಫ್ಲಿಪ್​ಕಾರ್ಟ್​ನಲ್ಲಿ ಎಲೆಕ್ಟ್ರಾನಿಕ್ಸ್​ ಸೇಲ್​ ಅನ್ನು ಆರಂಭಿಸಿದ್ದು ಈ ಸೇಲ್​ನಲ್ಲಿ ಸ್ಮಾರ್ಟ್​ಫೋನ್​ಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ.


    ವಿವೋ ಟಿ1 5ಜಿ ಸ್ಮಾರ್ಟ್​​ಫೋನ್


    ಸ್ಮಾರ್ಟ್​​ಫೋನ್​ ಯುಗದಲ್ಲಿ ಹೆಚ್ಚು ಮಾರಾಟವಾಗುವ 5ಜಿ ಫೋನ್ ಆಗಿರುವ ವಿವೋ ಟಿ1 5ಜಿ ಫೋನ್ ಬೆಲೆ ರೂ. 15,990 ಆರಂಭಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಮಾತ್ರವಲ್ಲದೆ.. ಈ ಫೋನ್ ಮೇಲೆ ಬ್ಯಾಂಕ್ ಆಫರ್ ಕೂಡ ನೀಡಲಾಗಿದೆ.​ ಎಕ್ಸ್ ಚೇಂಜ್ ಆಫರ್ ಅಡಿಯಲ್ಲಿ ರೂ.15,000 ರಿಯಾಯಿತಿಯನ್ನೂ ನೀಡುತ್ತಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು