ಪ್ರಸಿದ್ಧ ಇಕಾಮರ್ಸ್ (E-Commerse) ಕಂಪನಿಯಾಗಿರುವ ಫ್ಲಿಪ್ಕಾರ್ಟ್ (Flipkart) ಇದೀಗ ಐಫೋನ್ 13 ಸ್ಮಾರ್ಟ್ಫೋನ್ (IPhone 13) ಮೇಲೆ ಭಾರೀ ಡಿಸ್ಕೌಂಟ್ ಅನ್ನು ಘೊಷಿಸಿದೆ. ಇತೀಚೆಗೆ ಡಿಸೆಂಬರ್ 16ರಂದು ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ (Flipkart Big Saving Days Sale) ಅನ್ನು ಆರಂಭಿಸಿದ್ದು ಇನ್ನೇನು ಈ ಆಫರ್ 2 ದಿನಗಳು ಮಾತ್ರ ಇರುತ್ತದೆ. ಈ ಆಫರ್ನಲ್ಲಿ ಫ್ಲಿಪ್ಕಾರ್ಟ್ ಹಲವು ಸಾಧನಗಳ ಮೇಲೆ ಡಿಸ್ಕೌಂಟ್ ಅನ್ನು ನೀಡುತ್ತಿದೆ. ಭಾರತದಲ್ಲಿ ಜನಪ್ರಿಯ ಸ್ಮಾರ್ಟ್ಫೋನ್ ಕಂಪನಿಗಳಲ್ಲಿ ಆ್ಯಪಲ್ ಕಂಪನಿ (Apple Company) ಕೂಡ ಒಂದು. ಆ್ಯಪಲ್ ಕಂಪನಿ ತನ್ನ ಬ್ರಾಂಡ್ಗಳನ್ನು ಮಾರುಕಟ್ಟೆಗೆ ಪರಿಚಯಿಸುವಾಗ ಅದು ಏನಾದರು ವಿಶೇಷತೆಯನ್ನು ಹೊಮದಿರುತ್ತದೆ. ಅದೇ ರೀತಿ ಇತ್ತೀಚೆಗೆ ಬಿಡುಗಡೆಯಾದ ಐಫೋನ್ 13 ಸ್ಮಾರ್ಟ್ಫೋನ್ ಅನ್ನು ಕೇವಲ 41,759 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.
ಫ್ಲಿಪ್ಕಾರ್ಟ್ ತನ್ನ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ ಭರ್ಜರಿ ಆಫರ್ನೊಂದಿಗೆ ಹಲವಾರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಐಫೋನ್ಗಳಲ್ಲಿ ಜನಪ್ರಿಯತೆಯನ್ನು ಪಡೆದಿರುವ ಐಫೋನ್ 13 ಸ್ಮಾರ್ಟ್ಫೋನ್ ಅನ್ನು ಫ್ಲಿಪ್ಕಾರ್ಟ್ ಭಾರೀ ಡಿಸ್ಕೌಂಟ್ ಅನ್ನು ನೀಡುತ್ತಿದೆ.
ಐಫೋನ್ 13 ಮೇಲೆ ಏನೆಲ್ಲಾ ಆಫರ್ಸ್ ಇದೆ?
ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಆರಂಭಿಸಿದ್ದು, ಇದರಲ್ಲಿ ಹಲವಾರು ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಆಫರ್ಸ್ ಅನ್ನು ಘೋಷಿಸಿದೆ. ಇದೀಗ ಫ್ಲಿಪ್ಕಾರ್ಟ್ನಲ್ಲಿ ಐಫೋನ್ 13 ಮೇಲೆ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ. ವಿಶೇಷವಾಗಿ ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 13 ಮೂಲ ಬೆಲೆ 62,999 ರೂಪಾಯಿ ಆಗಿದೆ.
ಇದನ್ನೂ ಓದಿ: ಬೆಂಗಳೂರು ಜನರಿಗೆ ಶುಭಸುದ್ದಿ! ಕೇವಲ 750 ರೂಪಾಯಿಗೆ ಹೈಸ್ಪೀಡ್ ಡೇಟಾ ಲಭ್ಯ
ಇದನ್ನು ಪ್ಲಿಪ್ಕಾರ್ಟ್ನಲ್ಲಿ ನೀವು 20,500 ರೂಪಾಯಿವರೆಗಿನ ಎಕ್ಸ್ಚೇಂಜ್ ಆಫರ್ಅನ್ನು ಪಡೆಯಬಹುದು. ಎಕ್ಸ್ಚೇಂಜ್ ಆಫರ್ ಪಡೆದುಕೊಂಡ ಮೇಲೆ ಇದರ ಬೆಲೆ 42,499ರೂ.ಗಳಿಗೆ ಇಳಿಯಲಿದೆ. ಆದರೆ ಈ ಎಕ್ಸ್ಚೇಂಜ್ ಆಫರ್ಗಳು ವಿನಿಮಯ ಮಾಡುವಂತಹ ಸ್ಮಾರ್ಟ್ಫೋನ್ನ ಗುಣಮಟ್ಟಕ್ಕೆ ತಕ್ಕಂತೆ ನಿರ್ಧಾರ ಮಾಡಲಾಗುತ್ತದೆ.
ಬ್ಯಾಂಕ್ ಆಫರ್ಸ್
ಐಫೋನ್ 13 ಸ್ಮಾರ್ಟ್ಫೋನ್ ಅನ್ನು ಎಸ್ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ನೊಂದಿಗೆ EMI ವಹಿವಾಟುಗಳ ಮೇಲೆ 750 ರೂಪಾಯಿಯ ರಿಯಾಯಿತಿ ಪಡೆಯಬಹುದಾಗಿದೆ. ಇದರಿಂದ ಅಂತಿಮವಾಗಿ ಐಫೋನ್ 13 ಅನ್ನು 41,749 ರೂ.ಬೆಲೆಯಲ್ಲಿ ಖರೀದಿಸಬಹುದು. ಇನ್ನು ಈ ಆಫರ್ ಬೆಲೆಯಲ್ಲಿ ಕೆಂಪು, ನೀಲಿ, ಹಸಿರು, ಸ್ಟಾರ್ಲೈಟ್, ರೋಸ್ ಕಲರ್ ಮತ್ತು ಮಿಡ್ನೈಟ್ ಕಲರ್ಗಳಲ್ಲಿ ಪಡೆಯಬಹುದಾಗಿದೆ.
ಇನ್ನು ಈ ಬೆಲೆಯಲ್ಲಿ ಪ್ರಾಡಕ್ಟ್ ರೆಡ್, ನೀಲಿ, ಹಸಿರು, ಸ್ಟಾರ್ಲೈಟ್, ರೋಸ್ ಮತ್ತು ಮಿಡ್ನೈಟ್ ಕಲರ್ ಆಯ್ಕೆಯಲ್ಲಿ ಖರೀದಿಸಬಹುದು.
ಐಫೋನ್ 13 ಫೀಚರ್ಸ್
ಆಪಲ್ ಐಫೋನ್ 13 ಸ್ಮಾರ್ಟ್ಫೋನ್ 6.1 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಅನ್ನು ಇದು ನೀಡಲಿದೆ. ಇದರಲ್ಲಿ ಸೂಪರ್ ರೆಟಿನಾ XDR OLED ಡಿಸ್ಪ್ಲೇಯನ್ನು ಅಳವಡಿಸಿದ್ದಾರೆ. ಇನ್ನು ಇದು 1200 ನಿಟ್ಸ್ ಬ್ರೈಟ್ನೆಸ್ ಸ್ಕ್ರೀನ್ ಅನ್ನು ನೀಡುತ್ತದೆ. ಇದು ಆ್ಯಪಲ್ನ ಸೆರಾಮಿಕ್ ಶೀಲ್ಡ್ ಗ್ಲಾಸ್ ಪ್ರೊಟೆಕ್ಷನ್ ಅನ್ನು ಸಹ ಹೊಂದಿದೆ.
ಕ್ಯಾಮೆರಾ ಫೀಚರ್ಸ್
ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 12 ಮೆಗಾಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಎರಡನೇ ಕ್ಯಾಮೆರಾ 12 ಮೆಗಾ ಪಿಕ್ಸಲ್ ವೈಡ್ ಆ್ಯಂಗಲ್ ಲೆನ್ಸ್ ಹೊಂದಿದೆ. ಇದು 4ಕೆನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡುವಂತಹ ಆಯ್ಕೆಯನ್ನು ನೀಡುತ್ತದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ತೆಗೆಯಲು ಈ ಮೊಬೈಲ್ ಉತ್ತಮವಾಗಿದೆ. ಇನ್ನು ಇದರಲ್ಲಿ ಸ್ಪೆಷಲ್ ಫೀಚರ್ ಎಂದರೆ ಇದರಲ್ಲಿ ಸಿನಿಮ್ಯಾಟಿಕ್ ಮೋಡ್ ಆಯ್ಕೆಯನ್ನು ನೀಡಿದ್ದಾರೆ. ಅಲ್ಲದೆ ಸೆಲ್ಫಿಗಾಗಿ ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಿದ್ದಾರೆ.
ಬ್ಯಾಟರಿ ಫೀಚರ್ಸ್
ಐಫೋನ್ 13 ಫೋನ್ 3,240mAh ಸಾಮರ್ಥ್ಯದ ಬ್ಯಾಟರಿಯನ್ನು ಬ್ಯಾಕಪ್ ಅನ್ನು ಹೊಂದಿದ್ದು, ಇದು ಐಫೋನ್ 12 ಮೊಬೈಲ್ಗಿಂತ 15% ಅಪ್ಗ್ರೇಡ್ ಆಗಿರುವಂತಹ ಸ್ಮಾರ್ಟ್ಫೋನ್ ಆಗಿದೆ.ಇದು ಬಳಕೆದಾರರಿಗೆ ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಸಹ ನೀಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ