ದೇಶದಲ್ಲಿ ಹಲವಾರು ಸ್ಮಾರ್ಟ್ಫೋನ್ (Smartphones) ಕಂಪೆನಿಗಳಿವೆ. ಇವುಗಳು ದಿನ ಹೋದಂತೆ ಮಾರುಕಟ್ಟೆಗೆ ಹೊಸ ಹೊಸ ರೀತಿಯಲ್ಲಿ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿರುತ್ತನೇ ಇರುತ್ತದೆ. ದುಬಾರಿ ಬೆಲೆಯಲ್ಲಿ, ಉತ್ತಮ ಫೀಚರ್ಸ್ಗಳನ್ನು ಹೊಂದಿದ ಸ್ಮಾರ್ಟ್ಫೋನ್ಗಳು ಹಲವಾರು ಇದೆ. ಅದರಲ್ಲಿ ಬಹಳಷ್ಟು ಜನಪ್ರಿಯತೆ ಪಡೆದ ಕಂಪೆನಿಯೆಂದರೆ ಅದು ಆ್ಯಪಲ್ ಕಂಪೆನಿ. ಈ ಕಂಪೆನಿ ಪ್ರತಿ ವರ್ಷ ಯಾವುದಾರೊಂದು ವಿಶೇಷ ಫೀಚರ್ಸ್ನೊಂದಿಗೆ ಹೊಸ ಸ್ಮಾರ್ಟ್ಫೋನ್ ಅನ್ನು ಪರಿಚಯಿಸುತ್ತಾ ಇರುತ್ತದೆ. ಇನ್ನು ಹಲವರಿಗೆ ಒಮ್ಮೆಯಾದರು ಐಫೋನ್ ಖರೀದಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಅದರ ದುಬಾರಿ ಬೆಲೆಯಿಂದಾಗಿ ಖರೀದಿಸಲು ಮುಂದಾಗುವುದಿಲ್ಲ. ಆದರೆ ಐಫೋನ್ (IPhone) ಪ್ರಿಯರಿಗೆ ಇದೀಗ ಅಮೆಜಾನ್ (Amazon) ಕಂಪೆನಿ ಗುಡ್ ನ್ಯೂಸ್ ನೀಡಿದೆ.
ಜನಪ್ರಿಯ ಇ-ಕಾಮರ್ಸ್ ಕಂಪೆನಿಯಾಗಿರುವ ಅಮೆಜಾನ್ ಸದ್ಯ ಆಫರ್ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್ನಲ್ಲಿ ಹಲವಾರು ಗ್ಯಾಜೆಟ್ಸ್ಗಳ, ಸ್ಮಾರ್ಟ್‌ಫೋನ್‌ಗಳ, ಎಲೆಕ್ಟ್ರಾನಿಕ್ಸ್ ಸಾಧನಗಳ ಮೇಲೆ ಭರ್ಜರಿ ಆಫರ್ಸ್ಗಳು ಲಭ್ಯವಿದೆ. ಇದರ ಜೊತೆಗೆ ಐಫೋನ್ 12 ಮೇಲೆಯೂ ಬಂಪರ್ ರಿಯಾಯಿತಿ ಲಭ್ಯವಿದೆ.
ಏನೆಲ್ಲಾ ಆಫರ್ಸ್ಗಳು ಲಭ್ಯ?
ಇನ್ನು ಅಮೆಜಾನ್ ಘೋಷಿಸಿರುವ ಈ ಆಫರ್ನಲ್ಲಿ 64ಜಿಬಿ ಸ್ಟೋರೇಜ್ ಹೊಂದಿರುವ ಐಫೋನ್ 12 ನ ಮೂಲ ಬೆಲೆ 53,999 ರೂಪಾಯಿಯಾಗಿದೆ. ಆದರೆ ಈಗ ಈ ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 5,901 ರೂಪಾಯಿಗಳಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ. ಹಾಗೆಯೇ ಈ ಸ್ಮಾರ್ಟ್ಫೋನ್ ಮೇಲೆ ಬ್ಯಾಂಕ್ ಆಫರ್ಸ್, ಎಕ್ಸ್ಚೇಂಜ್ ಆಫರ್ಸ್ಗಳು ಸಹ ಲಭ್ಯವಿದೆ.
ಇದನ್ನೂ ಓದಿ: ಈ ಒಂದು ಪ್ಲ್ಯಾನ್ನಲ್ಲಿ ವರ್ಷವಿಡೀ ರೀಚಾರ್ಜ್ ಮಾಡೋ ಅಗತ್ಯನೇ ಬರಲ್ಲ! ಹೊಸ ಯೋಜನೆ ಪರಿಚಯಿಸಿದ ಕಂಪೆನಿ
ಎಕ್ಸ್ಚೇಂಜ್ ಆಫರ್ಸ್
ಅಮೆಜಾನ್ ಇದೀಗ ಐಫೋನ್ 12 ಖರೀದಿಸುವವರಿಗೆ ಭರ್ಜರಿಯಾಗಿ ಎಕ್ಸ್ಚೇಂಜ್ ಆಫರ್ ಅನ್ನು ಸಹ ಘೋಷಿಸಿದೆ. ಇನ್ನು ನಿಮ್ಮ ಹಳೆಯ ಸ್ಮಾರ್ಟ್ಫೋನ್ ಅನ್ನು ಕೊಟ್ಟು ಹೊಸ ಐಫೋನ್ 12 ಫೋನ್ ಅನ್ನು ಖರೀದಿ ಮಾಡಬೇಕು ಅಂದುಕೊಂಡ್ರೆ 19 ಸಾವಿರದವರೆಗೆ ಎಕ್ಸ್ಚೇಂಜ್ ಆಫರ್ ಅನ್ನು ಪಡೆಯಬಹುದಾಗಿದೆ. ಆದರೆ ಈ ಆಫರ್ ಕೆಲವೊಂದು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದು, ಜೊತೆಗೆ ನೀವು ಎಕ್ಸ್ಚೇಂಜ್ ಮಾಡಲು ಬಯಸುವಂತಹ ಸ್ಮಾರ್ಟ್ಫೋನ್ನ ಮಾದರಿ ಮತ್ತು ಗುಣಮಟ್ಟದ ಮೇಲೆ ನಿರ್ಧರಿಸಲಾಗುತ್ತದೆ.
ಇಎಮ್ಐ ಆಫರ್
ಐಫೋನ್ 12 ಅನ್ನು ಖರೀದಿ ಮಾಡುವವರಿಗೆ ಅಮೆಜಾನ್ ವಿಶೇಷವಾಗಿ ಬ್ಯಾಂಕ್ ಆಫರ್ಸ್ಗಳನ್ನು, ಕಡಿಮೆ ವೆಚ್ಚದ ಇಎಮ್ಐ ಆಯ್ಕೆಗಳನ್ನು ನೀಡಿದೆ. ಇನ್ನು ಇಎಮ್ಐ ಮೂಲಕ ಖರೀದಿ ಮಾಡುವವರಿಗೆ ಯಾವುದೇ ಬಡ್ಡಿಯಿಲ್ಲದೇ ಈ ಸ್ಮಾರ್ಟ್ಫೋನ್ ಅನ್ನು ಅಮೆಜಾನ್ ಮೂಲಕ ಖರೀದಿ ಮಾಡಬಹುದು. ಜೊತೆಗೆ ಸ್ಪಾಟಿಫೈ ಚಂದಾದಾರಿಕೆಯನ್ನೂ 6 ತಿಂಗಳವರೆಗೆ ಪಡೆಯಬಹುದಾಗಿದೆ.
ಐಫೋನ್ 12 ಫೀಚರ್ಸ್ ಹೇಗಿದೆ?
ಐಫೋನ್ 12 ಸ್ಮಾರ್ಟ್ಫೋನ್ 6.ಇಂಚಿನ ಓಎಲ್ಇಡಿ ಡಿಸ್‌ಪ್ಲೇ ಹೊಂದಿದ್ದು, ಇದು 1170 x 2532 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಇನ್ನು ಈ ಐಫೋನ್ 12 ಬಯೋನಿಕ್ A14 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, 4 ಜಿಬಿ ರ್‍ಯಾಮ್ ಹಾಗೂ 64 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ನೀಡಲಾಗಿದೆ.ಇನ್ನು ಗುಣಮಟ್ಟದ ಕ್ಯಾಮೆರಾಗಳನ್ನು ಸಹ ಇದರಲ್ಲಿ ನೀಡಲಾಗಿದೆ.
ಆ್ಯಪಲ್ ಕಂಪೆನಿಯ ಐಫೋನ್ಗಳು ಇನ್ಮುಂದೆ ಹೊಸ ಕಲರ್ನಲ್ಲಿ ಲಭ್ಯ
ಯಾವಾಗದಿಂದ ಲಭ್ಯ?
ಐಫೋನ್ನ ಈ ಹೊಸ ಹಳದಿ ಬಣ್ಣದ ಮಾದರಿಯನ್ನು ಮಾರ್ಚ್ 10 ರಿಂದ ಪ್ರೀಬುಕಿಂಗ್ ಮಾಡುವ ಮೂಲಕ ಖರೀದಿಗೆ ಲಭ್ಯಗೊಳಿಸಲಾಗಿದೆ. ಅದೇ ರೀತಿ ಮಾರ್ಚ್ 14 ರಂದು ರೀಟೇಲ್ ಶಾಪ್ಗಳಲ್ಲಿ ಮಾರಾಟ ಆರಂಭವಾಗಲಿದೆ. ಐಫೋನ್ 14 ಹಳದಿ ರೂಪಾಂತರದ ಬೆಲೆ ರೂ 79,990 ಮತ್ತು ಐಫೋನ್ 14 ಪ್ಲಸ್ ಹಳದಿ ರೂಪಾಂತರದ ಆರಂಭಿಕ ಬೆಲೆ ರೂ 89,990 ಎಂದು ನಿಗದಿ ಮಾಡಲಾಗಿದೆ.
ವಿಶೇಷ ಆಫರ್
ವಿಶೇಷವೆಂದರೆ ಈ ಹೊಸ ಐಫೋನ್ ರೂಪಾಂತರಗಳು ಉತ್ತಮ ಡೀಲ್‌ನಲ್ಲಿ ಲಭ್ಯವಾಗುತ್ತಿವೆ. ಈ ಸಂದರ್ಭದಲ್ಲಿ ಆ್ಯಪಲ್ನ ವಿತರಕರಲ್ಲಿ ಒಬ್ಬರಾದ ರೆಡಿಂಗ್‌ಟನ್ ದೊಡ್ಡ ಘೋಷಣೆಯನ್ನು ಮಾಡಿದ್ದಾರೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳ ಮೇಲೆ 15,000 ರೂಪಾಯಿಗಳವರೆಗೆ ರಿಯಾಯಿತಿ ನೀಡಲಾಗುವುದು ಎಂದು ವಿತರಕರು ಹೇಳಿದ್ದಾರೆ. ಸ್ಟೋರ್ ರಿಯಾಯಿತಿಗಳು, ಬ್ಯಾಂಕ್ ಕೊಡುಗೆಗಳು ಮತ್ತು ಹಳೆಯ ಐಫೋನ್‌ಗಳ ವಿನಿಮಯವನ್ನು ಪಡೆಯುವ ಮೂಲಕ ಗ್ರಾಹಕರು ಈ ರಿಯಾಯಿತಿಯನ್ನು ಪಡೆಯಬಹುದು. ವಿಶೇಷವೆಂದರೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ಈ ಸ್ಮಾರ್ಟ್ಫೋನ್ಗಳನ್ನು ಖರೀದಿಸಿದರೆ ಈ ರಿಯಾಯಿತಿ ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ