IPhones: ಐಫೋನ್​ 12 ಮೇಲೆ ಫ್ಲಿಪ್​ಕಾರ್ಟ್​​​ನಲ್ಲಿ ಬಂಪರ್​​ ಆಫರ್​!

ಆ್ಯಪಲ್ ಐಫೋನ್

ಆ್ಯಪಲ್ ಐಫೋನ್

IPhone 12: ಜನಪ್ರಿಯ ಇಕಾಮರ್ಸ್​ ವೆಬ್​ಸೈಟ್​​ ಆಗಿರುವ ಫ್ಲಿಪ್​ಕಾರ್ಟ್​ ಐಫೋನ್​ 12 ಮೊಬೈಲ್​ ಮೇಲೆ ಬಂಪರ್​ ಆಫರ್​ ಘೋಷಿಸಲಾಗಿದೆ. ಐಫೋನ್​ 12 ಮೊಬೈಲ್​ ಅನ್ನು 79,900 ರೂಪಾಯಿಯ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಆದರೆ ಈಗ ಫ್ಲಿಪ್​ಕಾರ್ಟ್​​ನಲ್ಲಿ ಭಾರೀ ಅಗ್ಗದ ಬೆಲೆಯಲ್ಲಿ ಖರೀದಿ ಮಾಡಬಹುದು.

ಮುಂದೆ ಓದಿ ...
  • Share this:

    ಸ್ಮಾರ್ಟ್​​​ಫೋನ್ (Smartphone)​ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದ್ರಲ್ಲೂ ಐಫೋನ್​ಗಳನ್ನು ಒಮ್ಮೆಯಾದರೂ ಖರೀದಿಸಬೇಕೆಂದು ಗ್ರಾಹಕರು ಪ್ಲ್ಯಾನ್​​ ಮಾಡ್ತಾ ಇರ್ತಾರೆ. ಈ ಮಧ್ಯೆ ಫ್ಲಿಪ್​ಕಾರ್ಟ್​​ ಐಫೋನ್​ಗಳ (Flipkart IPhone Offers) ಮೇಲೆ ಭರ್ಜರಿ ಡಿಸ್ಕೌಂಟ್​ ಸೇಲ್​ ಅನ್ನು ಆರಂಭಿಸಿದೆ. ಸಾಮಾನ್ಯವಾಗಿ ಇಕಾಮರ್ಸ್​​ ಕಂಪೆನಿಗಳು ಏನಾದರು ವಿಶೇಷ ದಿನಗಳು ಬಂದಾಗ ರಿಯಾಯಿತಿ ಆಫರ್ಸ್​ಗಳನ್ನು ನೀಡುತ್ತಿರುತ್ತದೆ. ಇದೀಗ ಫ್ಲಿಪ್​​ಕಾರ್ಟ್​​ ಹೊಸ ಆಫರ್​​ ನೀಡುತ್ತಿದೆ. ಈ ಮೂಲಕ ಆ್ಯಪಲ್ ಕಂಪೆನಿಯ ಸ್ಮಾರ್ಟ್​​ಫೋನ್​ ಅನ್ನು ಭಾರೀ ರಿಯಾಯಿತಿಯೊಂದಿಗೆ ಖರೀದಿ ಮಾಡ್ಬಹುದು. ಹೊಸ ಸ್ಮಾರ್ಟ್​​ಫೋನ್​ ಖರೀದಿ ಮಾಡುವ ಪ್ಲ್ಯಾನ್​​ನಲ್ಲಿದ್ದವರಿಗೆ ಈ ಸಮಯ ಉತ್ತಮವಾಗಿದ್ದು, ಫ್ಲಿಪ್​ಕಾರ್ಟ್​ನಲ್ಲಿ ಐಫೋನ್​ 12 (Iphone 12) ಮೊಬೈಲ್​ ಮೇಲೆ ಭರ್ಜರಿ ಆಫರ್ಸ್​​ಗಳು ಲಭ್ಯವಿದೆ.


    ಜನಪ್ರಿಯ ಇಕಾಮರ್ಸ್​ ವೆಬ್​ಸೈಟ್​​ ಆಗಿರುವ ಫ್ಲಿಪ್​ಕಾರ್ಟ್​ ಐಫೋನ್​ 12 ಮೊಬೈಲ್​ ಮೇಲೆ ಬಂಪರ್​ ಆಫರ್​ ಘೋಷಿಸಲಾಗಿದೆ. ಐಫೋನ್​ 12 ಮೊಬೈಲ್​ ಅನ್ನು 79,900 ರೂಪಾಯಿಯ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಆದರೆ ಈಗ ಫ್ಲಿಪ್​ಕಾರ್ಟ್​​ನಲ್ಲಿ ಭಾರೀ ಅಗ್ಗದ ಬೆಲೆಯಲ್ಲಿ ಖರೀದಿ ಮಾಡಬಹುದು.


    ಏನೆಲ್ಲಾ ಆಫರ್ಸ್​ಗಳು ಲಭ್ಯ?


    ಫ್ಲಿಪ್‌ಕಾರ್ಟ್‌ ತಾಣದಲ್ಲಿ ಐಫೋನ್ 12 ಫೋನ್‌ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಐಫೋನ್ 12 ಫೋನ್ 79,900 ರೂಪಾಯಿಗಳ ಪ್ರೈಸ್‌ ಟ್ಯಾಗ್‌ನಲ್ಲಿ ಬಿಡುಗಡೆ ಆಗಿತ್ತು. ಆದರೆ ಫ್ಲಿಪ್‌ಕಾರ್ಟ್‌ ವೆಬ್​​ಸೈಟ್​ನಲ್ಲಿ 56,999 ರೂಪಾಯಿಗಳ ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್ ಮೂಲಕ ಖರೀದಿಸಿದರೆ 2,000 ರೂಪಾಯಿವರೆಗೆ ಡಿಸ್ಕೌಂಟ್‌ ಪಡೆಯಬಹುದಾಗಿದೆ.


    ಇದನ್ನೂ ಓದಿ: ಭಾರತಕ್ಕೆ ಲಗ್ಗೆ ಇಟ್ಟಿದೆ ಮೊದಲ ಎಲೆಕ್ಟ್ರಿಕ್​ ಎಸಿ ಡಬಲ್ ಡೆಕ್ಕರ್ ಬಸ್, ಏನ್ ಸೂಪರ್ ಫೀಚರ್ಸ್​ ನೋಡಿ


    ಇನ್ನು ಐಫೋನ್​ 12 ಮೊಬೈಲ್​ ಅನ್ನು ಎಕ್ಸ್​​ಚೇಂಜ್​ ಆಫರ್​ ಮೂಲಕವೂ ಖರೀದಿ ಮಾಡಬಹುದು. ನಿಮ್ಮ ಹಳೆಯ ಸ್ಮಾರ್ಟ್​​ಫೋನ್​ ಅನ್ನು ಎಕ್ಸ್​​ಚೇಂಜ್​ ಮಾಡುವ ಮೂಲಕ 23,000 ರೂಪಾಯಿವರೆಗೆ ರಿಯಾಯಿತಿ ಕೊಡುಗೆ ಸಹ ಲಭ್ಯವಾಗಲಿದೆ. ಆದರೆ ಈ ಆಫರ್​ ನೀವು ಎಕ್ಸ್​​ಚೇಂಜ್ ಮಾಡಲು ಬಯಸುವ ಮೊಬೈಲ್​ನ ಗುಣಮಟ್ಟ ಮತ್ತು ಮಾದರಿಗೆ ತಕ್ಕಂತೆ ನಿರ್ಧರಿಸಲಾಗುತ್ತದೆ. ಈ ಫೋನ್‌ ಬ್ಲ್ಯಾಕ್‌, ಗ್ರೀನ್‌ ಹಾಗೂ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಫ್ಲಿಪ್​ಕಾರ್ಟ್​​​ನಲ್ಲಿ ಖರೀದಿಗೆ ಲಭ್ಯವಿದೆ. ಹಾಗಾದ್ರೆ ಆ್ಯಪಲ್​ ಕಂಪೆನಿಯ ಐಫೋನ್​ 12, ಐಫೋನ್​ 12  ಮಿನಿ ಮತ್ತು ಐಫೋನ್​ 13 ಸ್ಮಾರ್ಟ್​​ಫೋನ್​ಗಳ ಫೀಚರ್ಸ್ ಹೇಗಿದೆ ಅನ್ನೋದನ್ನು ಈ ಕೆಳಗಿನ ಲೇಖನದಲ್ಲಿ ತಿಳಿಯಿರಿ.


    ಆ್ಯಪಲ್ ಐಫೋನ್


    ಐಫೋನ್​​ 12 ಫೀಚರ್ಸ್​


    ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. ಈ ಸ್ಮಾರ್ಟ್​​ಫೋನ್​ 5ಜಿ ನೆಟ್​​ವರ್ಕ್​ ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಸೆನ್ಸಾರ್ ಆಯ್ಕೆ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್ ಆಂಗಲ್ ಸೆನ್ಸಾರ್​​ಗಳನ್ನು ಹೊಂದಿವೆ. ಇನ್ನು ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ನೆರವಾಗಲಿದೆ. ಹಾಗೆಯೇ ಈ ಐಫೋನ್ IP68 ವಾಟರ್‌ ರೆಸಿಸ್ಟಂಟ್‌ ಸೌಲಭ್ಯ ಸಹ ಪಡೆದಿದೆ. ಇನ್ನು ಈ ಫೋನ್ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ.


    ಐಫೋನ್ 12​ ಮಿನಿ ಫೀಚರ್ಸ್​


    ಐಫೋನ್ 12 ಮಿನಿ ಫೋನ್‌ 5.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ ಎಕ್ಸ್​​ಆರ್​ಡಿ ಡಿಸ್‌ಪ್ಲೇ ಮಾದರಿಯಲ್ಲಿದೆ. ಈ ಐಫೋನ್‌ ಎ14 ಬಯೋನಿಕ್ ಎಸ್‌ಒಸಿ ಹಾಗೂ 5ಜಿ ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ. ಹಾಗೆಯೇ ಈ ಫೋನ್ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಯನ್ನು ಪಡೆದಿದೆ.


    ಐಫೋನ್​ 13 ಫೀಚರ್ಸ್


    ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200 ನಿಟ್ಸ್​ ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ.




    5G ಅನ್ನು ಬೆಂಬಲಿಸುತ್ತದೆ. ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

    Published by:Prajwal B
    First published: