• Home
  • »
  • News
  • »
  • tech
  • »
  • MacBook Air M2: ಆ್ಯಪಲ್​ ಮ್ಯಾಕ್​ಬುಕ್​ ಮೇಲೆ ಬಂಪರ್ ಆಫರ್​! ಕೇವಲ 15 ಸಾವಿರ ರೂಪಾಯಿಗೆ ಖರೀದಿಸಿ

MacBook Air M2: ಆ್ಯಪಲ್​ ಮ್ಯಾಕ್​ಬುಕ್​ ಮೇಲೆ ಬಂಪರ್ ಆಫರ್​! ಕೇವಲ 15 ಸಾವಿರ ರೂಪಾಯಿಗೆ ಖರೀದಿಸಿ

ಆ್ಯಪಲ್​ ಮ್ಯಾಕ್​ಬುಕ್​

ಆ್ಯಪಲ್​ ಮ್ಯಾಕ್​ಬುಕ್​

ಆ್ಯಪಲ್​ ಕಂಪನಿಯಿಂದ ಬಿಡುಗಡೆಯಾಗುವಂತಹ ಎಲ್ಲಾ ಉತ್ಪನ್ನಗಳು ದುಬಾರಿ ಬೆಲೆಯದ್ದಾಗಿರುತ್ತದೆ. ಆದರೆ ಇದರ ವಿನ್ಯಾಸ ಮತ್ತು ಫೀಚರ್ಸ್​ಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ. ಇದೀಗ ಆ್ಯಪಲ್​ನ ಮ್ಯಾಕ್​ಬುಕ್​ ಮೇಲೆ ಅಮೆಜಾನ್​ ಭರ್ಜರಿ ಆಫರ್​​ ನೀಡಿದೆ

  • Share this:

    ಆ್ಯಪಲ್​ ಕಂಪನಿ (Apple Company) ಇತ್ತೀಚೆಗೆ  ಟೆಕ್ನಾಲಜಿ (Technology) ಯುಗದಲ್ಲಿ ಅತ್ಯಂತ ಮುಂಚೂಣಿಯಲ್ಲಿರುವಂತಹ ಕಂಪನಿಯಾಗಿದೆ. ಇದು ತನ್ನ ಕಂಪನಿಯ ಅಡಿಯಲ್ಲಿ ಹಲವಾರು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಆದರೆ ಇವೆಲ್ಲವೂ ಬೇರೆ ಬೇರೆ ಫೀಚರ್ಸ್​ಗಳನ್ನು ಹೊಂದಿವೆ. ಆ್ಯಪಲ್​ ಕಂಪನಿ ತನ್ನ ಉತ್ಪನ್ನಗಳ ಫೀಚರ್ಸ್​ನಿಂದಲೇ ಗ್ರಾಹಕರ ಗಮನ ಸೆಳೆದಿದೆ ಎಂದು ಹೇಳಬಹುದು. ಆ್ಯಪಲ್​ ಕಂಪನಿಯ ಪ್ರೊಡಕ್ಟ್​ಗಳು ಎಲ್ಲವೂ ದುಬಾರಿ ಬೆಲೆಯನ್ನು ಹೊಂದಿರುತ್ತದೆ. ಆದರೆ ಇವುಗಳೆಲ್ಲವೂ ಅಷ್ಟೇ ಗುಣಮಟ್ಟದ ಉತ್ಪನ್ನಗಳಾಗಿರುತ್ತದೆ. ಇದೀಗ ಆ್ಯಪಲ್ ಕಂಪನಿಯ ಮ್ಯಾಕ್​ಬುಕ್ (MacBook) ಖರೀದಿ ಮಾಡಬೇಕೆಂದು ಅಂದುಕೊಂಡವರಿಗೆ ಗುಡ್​ ನ್ಯೂಸ್​. ಬಹಳ ಅಗ್ಗದ ಬೆಲೆಯಲ್ಲಿ ಅಮೆಜಾನ್​ನಲ್ಲಿ (Amazon) ಮ್ಯಾಕ್​ಬುಕ್​ ಅನ್ನು ಪಡೆಉಬಹುದಾಗಿದೆ.


    ಆ್ಯಪಲ್​ ಕಂಪನಿಯಿಂದ ಬಿಡುಗಡೆಯಾಗುವಂತಹ ಎಲ್ಲಾ ಉತ್ಪನ್ನಗಳು ದುಬಾರಿ ಬೆಲೆಯದ್ದಾಗಿರುತ್ತದೆ. ಆದರೆ ಇದರ ವಿನ್ಯಾಸ ಮತ್ತು ಫೀಚರ್ಸ್​ಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ. ಇದೀಗ ಆ್ಯಪಲ್​ನ ಮ್ಯಾಕ್​ಬುಕ್​ ಮೇಲೆ ಅಮೆಜಾನ್​ ಭರ್ಜರಿ ಆಫರ್​​ ನೀಡಿದೆ.


    ಮ್ಯಾಕ್​ ಏರ್​ ಎಮ್​2 ಮೇಲೆ ಭರ್ಜರಿ ಆಫರ್​


    ಆ್ಯಪಲ್​ ಕಂಪನಿಯಿಂದ ಬಿಡುಗಡೆಯಾದ ಮ್ಯಾಕ್​ಬುಕ್​​​ ಏರ್​ ಎಮ್​2  256ಜಿಬಿ ಸ್ಟೋರೇಜ್ ಹೊಂದಿದ ಸಾಧನ ಭಾರತದಲ್ಲಿ ರೂ 119,900 ರ ಆರಂಭಿಕ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಾಯಿತು. ಆದರೆ ಪ್ರಸ್ತುತ ಗ್ರಾಹಕರು ಅಮೆಜಾನ್‌ನಿಂದ ರೂ.105,500 ಕ್ಕೆ ಅದೇ 256GB ರೂಪಾಂತರದ ಮ್ಯಾಕ್​ ಏರ್​ ಎಮ್​2 ಅನ್ನು ಖರೀದಿ ಮಾಡಬಹುದಾಗಿದೆ.


    ಇದನ್ನೂ ಓದಿ: ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ರೆಡ್​ಮಿ ಸ್ಮಾರ್ಟ್​​ಫೋನ್​ ಮೇಲೆ ಬಿಗ್​ ಡಿಸ್ಕೌಂಟ್​! ಇಲ್ಲಿದೆ ಕಂಪ್ಲೀಟ್​ ಮಾಹಿತಿ


    ಅಂದರೆ, ಅಮೆಜಾನ್ ನಿಂದ ಸುಮಾರು 15,000 ರೂಪಾಯಿಗಳ ರಿಯಾಯಿತಿಯಲ್ಲಿ ಖರೀದಿಸಬಹುದು. ಗ್ರಾಹಕರು ತಮ್ಮ ಹಳೆಯ ಉತ್ಪನ್ನವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ 15,000 ರೂಪಾಯಿವರೆಗೆ ಇನ್ನಷ್ಟು ರಿಯಾಯಿತಿ ಪಡೆಯಬಹುದು ಎಂದು ಅಮೆಜಾನ್ ಬ್ಯಾನರ್‌ನಲ್ಲಿ ಬರೆಯಲಾಗಿದೆ.


    ಮ್ಯಾಕ್​ಬುಕ್ ಏರ್​​ ಎಮ್​1 ಮೇಲೂ ಭರ್ಜರಿ ಆಫರ್​​


    ಇದಲ್ಲದೆ, ಮ್ಯಾಕ್‌ಬುಕ್ ಏರ್ ಎಮ್​1 ನ 256 ಜಿಬಿ ರೂಪಾಂತರವನ್ನು ಇ-ಕಾಮರ್ಸ್ ಅಮೆಜಾನ್‌ನಲ್ಲಿ ಅಗ್ಗದ ಬೆಲೆಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಮ್ಯಾಕ್‌ಬುಕ್ ಏರ್ ಎಮ್​1 ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಆರಂಭಿಕ ಬೆಲೆ 86,990 ರೂಗಳಲ್ಲಿ ಲಭ್ಯವಿದೆ. ಆದ್ದರಿಂದ ಈ ಸಾಧನವನ್ನು ಇನ್ನಷ್ಟು ರಿಯಾಯಿತಿಯೊಂದಿಗೆ ಖರೀದಿ ಮಾಡಬಹುದಾಗಿದೆ.


    ಇದೀಗ  ಮ್ಯಾಕ್​ಬುಕ್ ಏರ್ ಎಮ್​ 2 ಮೇಲೆ ಮಾತ್ರ ಆಫರ್​ ಅನ್ನು ನೀಡಲಾಗಿದ್ದು ಎಮ್​1 ಮೇಲಿನ ರಿಯಾಯಿತಿ ಶೀಘ್ರದಲ್ಲೇ ಬರಲಿದೆ ಎಂದು ಹೇಳಿದ್ದಾರೆ.


    ಮ್ಯಾಕ್​ಬುಕ್​ನ ಸ್ಪೆಷಲ್​ ಫೀಚರ್ಸ್​


    ವಿಡಿಯೋ ಎಡಿಟಿಂಗ್ ಮತ್ತು ಫೋಟೋ ಎಡಿಟಿಂಗ್ ಮತ್ತು ಮೂಲ ಕೋಡಿಂಗ್‌ಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಧನ ಬೇಕೆಂದು ಅಂದುಕೊಂಡವರಿಗೆ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಮ್ಯಾಕ್​​​​ಬುಕ್​ ಎಮ್​2 ರೂಪಾಂತರವು ರೌಂಡ್​ ಅಂಚುಗಳೊಂದಿಗೆ ಅಲ್ಟ್ರಾ ಸ್ಲಿಮ್ ವಿನ್ಯಾಸವನ್ನು ಒಳಗೊಂಡಿದೆ. ಇದು ದೊಡ್ಡ ಕೀ ಕ್ಯಾಪ್‌ಗಳೊಂದಿಗೆ ಹೊಸ ಕೀಬೋರ್ಡ್ ವಿನ್ಯಾಸವನ್ನು ಸಹ ಹೊಂದಿದೆ.


    ಮ್ಯಾಕ್​​​​ಬುಕ್​ ಎಮ್​2 ದೊಡ್ಡ 13.6 ಇಂಚಿನ ಐಪಿಎಸ್​ ಎಲ್​​ಸಿಡಿ ಡಿಸ್​​ಪ್ಲೇಯನ್ನು ಹೊಂದಿದೆ ಮತ್ತು ಇದು ಸ್ಲಿಮ್ ಬೆಜೆಲ್​​ಗಳೊಂದಿಗೆ ಬರುತ್ತದೆ. ಇದರ ಮೇಲ್ಭಾಗದಲ್ಲಿ ಸಣ್ಣ ಡಿಸ್​​ಪ್ಲೇ ನಾಚ್ ಅನ್ನು ಕೂಡ ಅಳವಡಿಸಲಾಗಿದೆ.


    ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್ ಡೇಸ್​ ಸೇಲ್​ನಲ್ಲಿ ಇತ್ತೀಚೆಗೆ ಹಲವಾರು ಸಾಧನಗಳನ್ನು ಬಹಳಷ್ಟು ರಿಯಾಯಿತಿಯಲ್ಲಿ ಮಾರಾಟಮಾಡಿದೆ. ಇದೀಗ ಮ್ಯಾಕ್​ಬುಕ್​ ಮೇಲೆ ಅಮೆಜಾನ್​ ಬಹಳಷ್ಟು ಆಫರ್​​ಗಳನ್ನು ನೀಡಿರುವುದು ವಿಶೇಷತೆಯಾಗಿದೆ. ಇದು ಆ್ಯಪಲ್​ ಕಂಪನಿಯ ಸಾಧನಗಳನ್ನು ಖರೀದಿ ಮಾಡಬೇಕೆಂದು ಯೋಚಿಸುತ್ತಿದ್ದವರಿಗೆ ಉತ್ತಮ ಅವಕಾಶ ಎಂದು ಹೇಳಬಹುದು.

    Published by:Prajwal B
    First published: