ಟೆಲಿಕಾಂ ಕಂಪನಿಗಳು (Telecom Company) ಹಲವಾರು ಇದೆ. ಆದರೆ ಈ ಕಂಪನಿಗಳು ವಿಭಿನ್ನ ರೀತಿಯಲ್ಲಿ ರೀಚಾರ್ಜ್ ಪ್ಲಾನ್ಗಳನ್ನು (Recharge Plans) ಹೊಂದಿದೆ. ಅದೇ ರೀತಿ ಟೆಲಿಕಾಂ ಮಾರುಕಟ್ಟೆಯಲ್ಲಿ ಎರಡನೇ ಅತೀದೊಡ್ಡ ಕಂಪನಿಯೆಂದು ಗುರುತಿಸಿಕೊಂಡ ಏರ್ಟೆಲ್ (Airtel) ಇದೀಗ ಹೊಸ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ಗಳನ್ನು (Prepaid Recharge Plans) ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಸದ್ಯ ಬಿಡುಗಡೆ ಮಾಡಿರುವಂತಹ ರೀಚಾರ್ಜ್ ಪ್ಲಾನ್ನಲ್ಲಿ ಉಚಿತ ಓಟಿಟಿ ಪ್ಲಾಟ್ಫಾರ್ಮ್ಗಳ ಚಂದಾದಾರಿಕೆಯನ್ನೂ ಉಚಿತವಾಗಿ ಪಡೆಯಬಹುದಾಗಿದೆ. ಏರ್ಟೆಲ್ ಪ್ರತೀ ಬಾರಿ ಏನಾದರು ವಿಶೇಷ ಕೊಡುಗೆಯ ಜೊತೆಗೆ ರೀಚಾರ್ಜ್ ಪ್ಲಾನ್ಗಳನ್ನು ಬಿಡುಗಡೆ ಮಾಡುತ್ತದೆ. ಅದೇ ರೀತಿಯಲ್ಲಿ ಈ ಬಾರಿಯೂ ಬಿಡುಗಡೆ ಮಾಡಿದೆ.
ಏರ್ಟೆಲ್ ಬಿಡುಗಡೆ ಮಾಡಿರುವಂತಹ ಯಾವುದೇ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ನಲ್ಲಿ ಉಚಿತ ಡೇಟಾ, ಅನ್ಲಿಮಿಟೆಡ್ ಕಾಲ್ ಸೌಲಭ್ಯಗಳು ದೊರೆಯುತ್ತದೆ. ಆದರೆ ಈ ಬಾರಿ ಎರಡು ರೀಚಾರ್ಜ್ ಪ್ಲಾನ್ಸ್ ಅನ್ನು ತನ್ನ ಗ್ರಾಹಕರಿಗೆ ಅನಾವರಣ ಮಾಡಿದೆ. ಈ ರೀಚಾರ್ಜ್ನಲ್ಲಿ ಗ್ರಾಹಕರು ಬಹಳಷ್ಟು ಕೊಡುಗೆಗಳನ್ನು ಪಡೆಯಬಹುದಾಗಿದೆ.
ಎರಡು ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ಸ್
ಏರ್ಟೆಲ್ ಸದ್ಯ ಬಿಡುಗಡೆ ಮಾಡಿರುವಂತಹ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ನಲ್ಲಿ 3339 ರೂಪಾಯಿ ಮತ್ತು 499 ರೂಪಾಯಿದ್ದಾಗಿದೆ. ಈ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ನಲ್ಲಿ ಉಚಿತವಾಗಿ ಡಿಸ್ನಿ+ಹಾಟ್ಸ್ಟಾರ್ ಚಂದಾದಾರಿಕೆ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದಾಗಿದೆ. ಈ ಹೊಸ ರೀಚಾರ್ಜ್ ಪ್ಲಾನ್ ಮೂಲಕ ಏರ್ಟೆಲ್ ಗ್ರಾಕರನ್ನು ಇನ್ನಷ್ಟು ಗಮನಸೆಳೆಯಲಿದೆ. ಈ ರೀಚಾರ್ಜ್ನಲ್ಲಿ ಇನ್ನೂ ಹಲವಾರು ಕೊಡುಗೆಗಳು ಇವೆ.
ಇದನ್ನೂ ಓದಿ: ಆನ್ಲೈನ್ ಮೂಲಕ ಆರ್ಡರ್ ಮಾಡುವವರೇ ಎಚ್ಚರ! ಓಟಿಪಿ ನಂಬರ್ನಲ್ಲೂ ಹ್ಯಾಕ್ ಮಾಡ್ತಾರೆ
ಏರ್ಟೆಲ್ನ 839 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ಸ್
ಏರ್ಟೆಲ್ನ ಈ 839 ರೂಪಾಯಿಯ ಪ್ಲಾನ್ನಲ್ಲಿ ಗ್ರಾಹಕರು ದಿನಕ್ಕೆ 2ಜಿಬಿಯಷ್ಟು ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದಲ್ಲದೆ ಇದರಲ್ಲಿ ಯಾವುದೇ ನೆಟ್ವರ್ಕ್ಗೆ ಉಚಿತವಾಗಿ ಅನ್ಲಿಮಿಟೆಡ್ ಕಾಲ್ ಮಾಡಬಹುದಾಗಿದೆ. ಇನ್ನು ಈ ರೀಚಾರ್ಜ್ ಪ್ಲಾನ್ನಲ್ಲಿ 100 ಎಸ್ಎಮ್ಎಸ್ ಅನ್ನು ಮಾಡಬಹುದು. ಈ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ವಿಶೇಷವಾಗಿ ಈ ಮೂಲಕ ಡಿಸ್ನಿ+ಹಾಟ್ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದಾಗಿದೆ.
ಏರ್ಟೆಲ್ನ 3339 ರೂಪಾಯಿ ರೀಚಾರ್ಜ್ ಪ್ಲಾನ್
ಏರ್ಟೆಲ್ನ ಈ ಯೋಜನೆಯು ಒಂದು ವರ್ಷದ ಅವಧಿಯ ಯೋಜನೆಯಾಗಿದೆ. ಇದು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ರೀಚಾರ್ಜ್ ಪ್ಲಾನ್ನಲ್ಲಿ ದಿನಕ್ಕೆ 2.5 ಜಿಬಿಯನ್ನು ಪಡೆಯಬಹುದಾಗಿದೆ. ಇನ್ನು ಇದರಲ್ಲಿ ಅನ್ಲಿಮಿಟೆಡ್ ಕಾಲ್ ಸೌಲಭ್ಯವೂ ಇದೆ. ಜೊತೆಗೆ ದಿನಕ್ಕೆ 100 ಎಸ್ಎಮ್ಎಸ್ ಫ್ರೀಯಾಗಿ ಮಾಡಬಹುದಾಗಿದೆ. ಈ ವಾರ್ಷಿಕ ರೀಚಾರ್ಜ್ ಪ್ಲಾನ್ನಲ್ಲಿ ಮೂರು ತಿಂಗಳ ಡಿಸ್ನಿ+ಹಾಟ್ಸ್ಟಾರ್ ಚಂದಾದಾರಿಕೆ ಸೌಲಭ್ಯವೂ ದೊರೆಯಲಿದೆ. ಇದಲ್ಲದೆ ಏರ್ಟೆಲ್ ಆ್ಯಪ್ಗಳನ್ನು ಬಳಸಬಹುದಾಗಿದೆ.
ಏರ್ಟೆಲ್ನ 666 ರೂಪಾಯಿಯ ಯೋಜನೆ
ಏರ್ಟೆಲ್ನ ಈ ಯೋಜನೆಯು 77 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಇನ್ನು ಇದರ ಡೇಟಾ ಸೌಲಭ್ಯದ ಬಗ್ಗೆ ಹೇಳುವುದಾದರೆ, ಪ್ರತೀದಿನ 1.5ಜಿಬಿ ಡೇಟಾದ ಸೌಲಭ್ಯ ಇದರಲ್ಲಿದೆ. ಜೊತೆಗೆ 100 ಎಸ್ಎಮ್ಎಸ್ ಉಚಿತವಾಗಿ ಮಾಡಬಹುದಾಗಿದೆ. ಯಾವುದೇ ನೆಟ್ವರ್ಕ್ಗೆ ಅನ್ಲಿಮಿಟೆಡ್ ಕಾಲ್ ಸೌಲಭ್ಯವೂ ಇದರಲ್ಲಿ ದೊರೆಯಲಿದೆ. ಈ ಯೋಜನೆಯ ಮೂಲಕ ಗ್ರಾಹಕರು ವಿಂಕ್ ಮ್ಯೂಸಿಕ್, ಏರ್ಟೆಲ್ ಆ್ಯಪ್ಸ್, ಹಲೋ ಟ್ಯೂನ್ಸ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ.
699 ರೂಪಾಯಿಯ ರೀಚಾರ್ಜ್ ಪ್ಲಾನ್
ಏರ್ಟೆಲ್ನ 699 ರೂಪಾಯಿ ರೀಚಾರ್ಜ್ ಪ್ಲಾನ್ನಲ್ಲಿ 56 ದಿನಗಳ ಕಾಲ ವ್ಯಾಲಿಡಿಯನ್ನು ಹೊಂದಿರುತ್ತದೆ. ಈ ಯೋಜನೆಯಲ್ಲಿ 3ಜಿಬಿ ವರೆಗೆ ಪ್ರತೀದಿನ ಡೇಟಾ ಬಳಕೆ ಮಾಡಬಹುದಾಗಿದೆ. ಇನ್ನು ಯಾವುದೇ ನೆಟ್ವರ್ಕ್ಗೆ ಉಚಿತವಾಗಿ ಅನ್ಲಿಮಿಟೆಡ್ ಕರೆಯನ್ನು ಮಾಡಬಹುದು. ದಿನಕ್ಕೆ 100 ಎಸ್ಎಮ್ಎಸ್ ಕೂಡ ಉಚಿತವಾಗಿದೆ. ಈ ಯೋಜನೆಯಲ್ಲಿ ವಿಶೇಷವಾಗಿ ಅಮೆಜಾನ್ ಪ್ರೈಮ್ನ ಉಚಿತ ಮೆಂಬರ್ಶಿಪ್ ಸೌಲಭ್ಯ ಸಿಗಲಿದೆ. ಇನ್ನು ಇದರಲ್ಲಿ ಹೆಲೋ ಟ್ಯೂನ್ ಮತ್ತು ವಿಂಕ್ ಮ್ಯೂಸಿಕ್ ಮೂಲಕ ಉಚಿತವಾಗಿ ಬಳಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ