ಪ್ರಸ್ತುತ ಕಾಲ ಮಾನದಲ್ಲಿ ಮೊಬೈಲ್ ಮಾರುಕಟ್ಟೆಗಳು (Mobile Market) ವ್ಯಾಪಕವಾಗಿ ಬೆಳವಣಿಗೆಯಾಗಿದೆ. ಸ್ಮಾರ್ಟ್‌ಫೋನ್ ಖರೀದಿಸುವ ಪ್ಲ್ಯಾನ್ನಲ್ಲಿರುವವರಿಗೆ ಮಾರುಕಟ್ಟೆಯಲ್ಲಿ ಬಗೆಬಗೆಯ ಸ್ಮಾರ್ಟ್ಫೋನ್ಗಳು ಲಭ್ಯವಿದೆ. ಸ್ಮಾರ್ಟ್ಫೋನ್ಗಳಿಗೆ ಈಗಂತೂ ಎಲ್ಲಿಲ್ಲದ ಬೇಡಿಕೆ. ಇದಕ್ಕೆ ಮುಖ್ಯಕಾರಣ ಇದು ಹೊಂದಿರುವಂತಹ ವಿನ್ಯಾಸ, ಫೀಚರ್ಸ್, ಬೆಲೆ ಅಂತಾನೇ ಹೇಳ್ಬಹುದು. ಆದರೆ ಕೆಲವೊಂದು ಇಕಾಮರ್ಸ್ ಕಂಪೆನಿಗಳು ಹಬ್ಬ, ಸಂಭ್ರಮದ ದಿನಗಳು ಬಂತೆಂದರೆ ಸಾಕು ಸ್ಮಾರ್ಟ್ಫೋನ್ಗಳ ಮೇಲೆ, ಗ್ಯಾಜೆಟ್ಸ್ಗಳ (Gadgets) ಮೇಲೆ, ಎಲೆಕ್ಟ್ರಾನಿಕ್ಸ್ ಸಾಧನಗಳ ಮೇಲೆ ವಿಶೇಷ ಆಫರ್ಸ್ ಅನ್ನು ಘೋಷಿಸುತ್ತದೆ. ಅದೇ ರೀತಿ ಈ ಬಾರಿಯ ಗಣರಾಜ್ಯೋತ್ಸವದ (Republic Day) ಅಂಗವಾಗಿ ವಿಶೇಷ ರಿಯಾಯಿತಿಗಳು ಲಭ್ಯವಿದೆ.
ಸದ್ಯ ರಿಪಬ್ಲಿಕ್ ಡೇ ಅಂಗವಾಗಿ ಲಾವಾ ಕಂಪೆನಿಯು ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಆಫರ್ಸ್ ಅನ್ನು ಘೋಷಿಸಿದೆ. ಈ ಕಂಪೆನಿಯ ಕೆಲವು ಆಯ್ದ ಸ್ಮಾರ್ಟ್ಫೋನ್ಗಳನ್ನು ಲಾವಾ ಸ್ಟೋರ್ ಮತ್ತು ಇಕಾಮರ್ಸ್ ವೆಬ್ಸೈಟ್ ಆಗಿರುವ ಅಮೆಜಾನ್ನಲ್ಲಿ 26% ವರೆಗಿನ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.
ಏನೆಲ್ಲಾ ಆಫರ್ಸ್ಗಳು ಲಭ್ಯವಿದೆ?
ಲಾವಾ ಕಂಪೆನಿ ಏರ್ಪಡಿಸಿರುವ ಈ ವಿಶೇಷ ಸೇಲ್ನಲ್ಲಿ ಸಂಸ್ಥೆಯು ಆಯ್ದ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್ ಗಳಿಗೆ ಅತ್ಯುತ್ತಮ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಆ ಪೈಕಿ ಸಂಸ್ಥೆಯ ಇತ್ತೀಚಿನ ಲಾವಾ ಅಗ್ನಿ 5ಜಿ ಸ್ಮಾರ್ಟ್‌ಫೋನ್ ಅನ್ನು 13,313 ರೂಪಾಯಿಗಳ ಡಿಸ್ಕೌಂಟ್ ಬೆಲೆಯಲ್ಲಿ ಪಡೆಯಬಹುದು. ಅಂದಹಾಗೆ ಪೇಮೆಂಟ್ ಪೇಜ್‌ನಲ್ಲಿ ‘ಲಾವಾ26‘ ಕೂಪನ್ ಬಳಕೆ ಮಾಡುವ ಮೂಲಕ ಈ ಕೊಡುಗೆಯನ್ನು ಗ್ರಾಹಕರು ಪಡೆಯಬಹುದಾಗಿದೆ ಎಂದು ಸಂಸ್ಥೆಯು ತಿಳಿಸಿದೆ.
ಲಾವಾ ಕಂಪೆನಿಯಿಂದ ಆಫರ್ನಲ್ಲಿರುವ ಸ್ಮಾರ್ಟ್ಫೋನ್ಗಳನ್ನು ಲಾವಾ ಸ್ಟೋರ್ ಮತ್ತು ಅಮೆಜಾನ್ ವೆಬ್ಸೈಟ್ನಲ್ಲಿ ಖರೀದಿಸಬಹುದಾಗಿದೆ. ಈ ಸೇಲ್ ಇದೇ ಜನವರಿ 26 ರಂದು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭವಾಗುತ್ತದೆ.
ಲಾವಾ ಅಗ್ನಿ 5ಜಿ ಸ್ಮಾರ್ಟ್‌ಫೋನ್ ಫೀಚರ್ಸ್
ಲಾವಾ ಅಗ್ನಿ 5ಜಿ ಸ್ಮಾರ್ಟ್‌ಫೋನ್ ಹೆಚ್ಚಿನ ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.78 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 90Hz ರೀಫೇಶ್ ರೇಟ್ ಅನ್ನು ಒಳಗೊಂಡಿದೆ.
ಕ್ಯಾಮೆರಾ ಫೀಚರ್ಸ್
ಲಾವಾ ಅಗ್ನಿ 5ಜಿ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಸೆಟಪ್ನಲ್ಲಿ ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದ್ದು, ಸೆಕೆಂಡರಿ ಕ್ಯಾಮೆರಾ 5 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದೆ. ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದ್ದು, ನಾಲ್ಕನೇ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್ಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಒಳಗೊಂಡಿದೆ.
ಪ್ರೊಸೆಸರ್ ಸಾಮರ್ಥ್ಯ
ಲಾವಾ ಅಗ್ನಿ 5ಜಿ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 ಎಸ್ಓಸಿ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ಆಯ್ಕೆಗಳಲ್ಲಿ ಇದು ಬಿಡುಗಡೆಯಾಗಿದೆ.
ಬ್ಯಾಟರಿ ಫೀಚರ್ಸ್
ಲಾವಾ ಅಗ್ನಿ 5ಜಿ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇಈ ಬ್ಯಾಟರಿಯು 30W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದಲ್ಲಿ ಮೊಬೈಲ್ ಅನ್ನು ಚಾರ್ಜ್ ಮಾಡುತ್ತದೆ. ಇದು 90 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡುತ್ತದೆ.
ಇದನ್ನೂ ಓದಿ: ಮೊಟೊರೊಲಾ ಕಂಪೆನಿಯಿಂದ ಏಕಕಾಲದಲ್ಲಿ ಎರಡು ಸ್ಮಾರ್ಟ್ಫೋನ್ಗಳ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
ಯಾವೆಲ್ಲಾ ಸ್ಮಾರ್ಟ್ಫೋನ್ಗಳಿಗೆ ಆಫರ್ ಲಭ್ಯವಿದೆ?
ಲಾವಾ ಕಂಪೆನಿಯ ಈ ರಿಪಬ್ಲಿಕ್ ಡೇ ಸೇಲ್ನಲ್ಲಿ ಲಾವಾ ಅಗ್ನಿ 5ಜಿ ಫೋನ್ ಅಲ್ಲದೇ ಲಾವಾ ಬ್ಲೇಜ್ 5ಜಿ ಫೋನ್, ಲಾವಾ ಬ್ಲೇಜ್ ಪ್ರೋ ಫೋನ್, ಲಾವಾ ಬ್ಲೇಜ್ ನೆಕ್ಸ್ಟ್ ಫೋನ್, ಲಾವಾ ಬ್ಲೇಜ್ ಫೋನ್, ಲಾವಾ ಯುವಾ ಪ್ರೋ ಫೋನ್, ಲಾವಾ ಎಕ್ಸ್3 ಸ್ಮಾರ್ಟ್ಫೋನ್ಗಳನ್ನು ಭರ್ಜರಿ ರಿಯಾಯಿತಿಯೊಂದಿಗೆ ಖರೀದಿ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ