ದೇಶದಲ್ಲೇ ನಂಬರ್ 1 ಟೆಲಿಕಾಂ ಕಂಪನಿಯೆಂದು (No.1 Telecom Company) ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ (Reliance Jio) ಹೊಸ ವರ್ಷಕ್ಕೆ ಬೆಸ್ಟ್ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಜಿಯೋ ಈ ವರ್ಷ ತನ್ನ ಗ್ರಾಹಕರನ್ನು ಆಕರ್ಷಿಸುವ ಕಾರಣದಿಂದ ಹಲವಾರು ರೀಚಾರ್ಜ್ ಪ್ಲಾನ್ (Recharge Plan) ಜೊತೆಗೆ ಆಫರ್ಸ್ಗಳನ್ನು ನೀಡುತ್ತಾ ಬಂದಿದೆ. ಅನೇಕ ಖಾಸಗಿ ಟೆಲಿಕಾಂ ಕಂಪನಿಗಳಿವೆ ಅದ್ರಲ್ಲಿ ಜಿಯೋ ಬಹಳ ಅಗ್ಗದಲ್ಲಿ ಸೇವೆಯನ್ನು ನೀಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸವರ್ಷಕ್ಕೆ ನಾವೆಲ್ಲರೂ ಕಾಲಿಡುತ್ತೇವೆ. ಇನ್ನು ಕೆಲವರು ಹೊಸವರ್ಷಕ್ಕೆ ಏನೆಲ್ಲಾ ಕೊಡುಗಡಗಳನ್ನು ಯಾವೆಲ್ಲಾ ಕಂಪನಿಗಳು ಬಿಡುಗಡೆ ಮಾಡಬಹುದೆಂದು ಯೋಚಿಸುತ್ತಿರುತ್ತಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಇದೀಗ ಜಿಯೋ ಟೆಲಿಕಾಂ ಕಂಪನಿ ಗುಡ್ ನ್ಯೂಸ್ ಅನ್ನು ನೀಡಿದೆ.
ಹೌದು, ಜಿಯೋದಿಂದ ಹೊಸ ಹ್ಯಾಪಿ ನ್ಯೂ ಇಯರ್ ರೀಚಾರ್ಜ್ ಪ್ಲಾನ್ ಬಿಡುಗಡೆಯಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಬಹಳಷ್ಟು ಆಫರ್ಸ್ ಅನ್ನು ಪಡೆಯಬಹುದಾಗಿದೆ. 2023 ರಿಂದ ಈ ಯೋಜನೆಗಳು ಜಾರಿಗೆ ಬರಲಿದೆ.
2023 ರೂಪಾಯಿ ‘ಹ್ಯಾಪಿ ನ್ಯೂ ಇಯರ್ ಪ್ಲಾನ್‘
2023ರಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ಗ್ರಾಹಕರಿಗಾಗಿ 2023 ರೂಪಾಯಿಯ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಯೋಜನೆ ಒಟ್ಟು 252 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ 252 ದಿನಗಳಲ್ಲಿ ಪ್ರತೀದಿನ ಬಳಕೆದಾರರು 2.3 ಜಿಬಿ ಡೇಟಾವನ್ನು ಬಳಸಬಹುದು. ಜೊತೆಗೆ ಈ ರೀಚಾರ್ಜ್ ಪ್ಲಾನ್ನಲ್ಲಿ ಅನ್ಲಿಮಿಟೆಡ್ ಉಚಿತವಾಗಿ ಕಾಲ್ ಮಾಡಬಹುದಾಗಿದೆ.
ಇದನ್ನೂ ಓದಿ: ಫೆಬ್ರವರಿ 14 ರಿಂದ ‘ಇಂಟರ್ನೆಟ್ ಎಕ್ಸ್ಪ್ಲೋರರ್‘ ಕಾರ್ಯನಿರ್ವಹಿಸುವುದಿಲ್ಲವಂತೆ! ಕಾರಣವೇನು ಗೊತ್ತಾ?
ಇನ್ನು ಪ್ರತೀದಿನ 100 ಎಸ್ಎಮ್ಎಸ್ ಅನ್ನು ಫ್ರೀಯಾಗಿ ಮಾಡುವ ಅವಕಾಶವಿದೆ. ಈ ಯೋಜನೆಯು ಗ್ರಾಹಕರಿಗೆ ಒಟ್ಟಾರೆಯಾಗಿ 630 GB ಡೇಟಾವನ್ನು ನೀಡಲಿದೆ ಎಂದು ಜಿಯೋ ಕಂಪನಿ ತಿಳಿಸಿದೆ. ಜಿಯೋವಿನ ಇತರೆ ಪ್ರೀಪೇಯ್ಡ್ ಯೋಜನೆಗಳಂತೆಯೇ ಈ ಯೋಜನೆಯು ಸಹ ಗ್ರಾಹಕರು ಜಿಯೋ ಟಿವಿ ಮತ್ತು ಜಿಯೋ ಸಿನೆಮಾ ಸೇರಿದಂತೆ ಜಿಯೋ ಸೂಟ್ ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆ ಪಡೆಯಬಹುದಾಗಿದೆ. ಆದರೆ, ಈ ಯೋಜನೆಯು ಯಾವುದೇ ಓಟಿಟಿ ಚಂದಾದಾರಿಕೆಗಳನ್ನು ಹೊಂದಿರುವುದಿಲ್ಲ.
2999 ರೂಪಾಯಿಯ ಹೊಸ ರೀಚಾರ್ಜ್ ಪ್ಲಾನ್
2023ರ ಹೊಸ ವರ್ಷದ ಈ ಹೊಸ ರೀಚಾರ್ಜ್ ಪ್ಲಾನ್ನಲ್ಲಿ 365 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. ಜಿಯೋವಿನ ಈ ವಾರ್ಷಿಕ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 2.5 ಜಿಬಿ ಡೇಟಾ, ಅನ್ಲಿಮಿಟೆಡ್ ಉಚಿತ ಕಾಲ್ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನಗಳನ್ನು ಪಡೆಯಬಹುದು.
ಈ ಯೋಜನೆಯಲ್ಲಿ ಗ್ರಾಹಕರು ಒಟ್ಟಾರೆಯಾಗಿ ಒಂದು ವರ್ಷಕ್ಕೆ 912.5GB ಡೇಟಾವನ್ನು ಪಡೆಯಲಿದ್ದಾರೆ ಎಂದು ಜಿಯೋ ತಿಳಿಸಿದೆ. ಈ ಯೋಜನೆಯಲ್ಲಿ ಸಹ ಜಿಯೋ ಟಿವಿ ಮತ್ತು ಜಿಯೋ ಸಿನೆಮಾ ಸೇರಿದಂತೆ ಜಿಯೋ ಸೂಟ್ ಅಪ್ಲಿಕೇಶನ್ಗಳಿಗೆ ಉಚಿತ ಚಂದಾದಾರಿಕೆ ಪಡೆಯಬಹುದಾಗಿದೆ. ಇದರಲ್ಲೂ ಸಹ ಗ್ರಾಹಕರಿಗೆ ಯಾವುದೇ ಓಟಿಟಿ ಚಂದಾದಾರಿಕೆಗಳು ಲಭ್ಯವಿಲ್ಲ.
749 ರೂಪಾಯಿಯ ನ್ಯೂ ಇಯರ್ ರೀಚಾರ್ಜ್ ಪ್ಲಾನ್
ಜಿಯೋ ಇತ್ತೀಚೆಗ ಪರಿಚಯಿಸಿರುವಂತಹ ಮ749 ರೂಪಾಯಿಯ ಯೋಜನೆ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ಯೋಜನೆ ಮೂಲಕ 2ಜಿಬಿ ದೈನಂದಿನ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ. ಒಟ್ಟಾರೆಯಾಗಿ ಈ ಯೋಜನೆಯಲ್ಲಿ 180ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಜೊತೆಗೆ ಅನ್ಲಿಮಿಟೆಡ್ ಕಾಲ್, ಪ್ರತೀದಿನ 100 ಎಸ್ಎಮ್ಎಸ್ ಪ್ರಯೋಜನಗಳು ದೊರೆಯಲಿದೆ. ಈ ಯೋಜನೆಯಲ್ಲಿ ಜಿಯೋಟಿವಿ, ಜಿಯೋಸಿನೆಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೀ ಕ್ಲೌಡ್ ಅಪ್ಲಿಕೇಶನ್ಗಳಿಗೆ ಉಚಿತ ಪ್ರವೇಶ ದೊರೆಯಲಿದೆ.
ಇನ್ನು ಈ ಮೇಲಿನ ಯೋಜನೆಯ ಡೇಟಾ ಸೌಲಭ್ಯಗಳು ಮುಗಿದ ಬಳಿಕ 60 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ