Siri: ಸರಳ ಪ್ರಶ್ನೆಗೆ ತಪ್ಪು ಉತ್ತರ ನೀಡುತ್ತಿರುವ ಸಿರಿ! ಬೇಸರಗೊಂಡು ಆ್ಯಪಲ್​ ಕಂಪನಿಗೆ ದೂರು ನೀಡಿದ ಬಳಕೆದಾರರು

Iphone Siri: ಐಫೋನ್‌ನ ಪ್ರತಿಯೊಂದು ವೈಶಿಷ್ಟ್ಯವು ವಿಶಿಷ್ಟವಾಗಿದೆ ಮತ್ತು ಆಪರೇಟಿಂಗ್ ಸಿಸ್ಟಮ್‌ನಿಂದ ಹಿಡಿದು ಧ್ವನಿ ಸಹಾಯಕರವರೆಗೆ ಎಲ್ಲವನ್ನೂ ಆ್ಯಪಲ್‌ ಸ್ವತಃ ತಯಾರಿಸಿದೆ. ಇತ್ತೀಚೆಗೆ, ಕೆಲವು ಐಫೋನ್ ಬಳಕೆದಾರರು ಸಿರಿ, ಆ್ಯಪಲ್‌ನ ಧ್ವನಿ ಸಹಾಯಕ ಬೆಂಬಲದೊಂದಿಗೆ ಕೆಲವು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

Iphone / ಐಫೋನ್‌

Iphone / ಐಫೋನ್‌

  • Share this:
    ಜನಪ್ರಿಯ ಫೋನ್ ಬ್ರಾಂಡ್‌ಗಳ (Phone Brands) ಹೆಸರನ್ನು ತೆಗೆದುಕೊಂಡರೆ, ಬಹುಶಃ ಮೊದಲ ಸ್ಥಾನದಲ್ಲಿ ಆ್ಯಪಲ್ (Apple) ಕಾಣಿಸಿಕೊಳ್ಳುತ್ತದೆ. ಆ್ಯಪಲ್‌ ಪ್ರಮುಖ ಐಫೋನ್ (Iphone) ಹೆಸರಿನಲ್ಲಿ ಉತ್ಪಾದಿಸಿ, ಪ್ರಪಂಚದಾದ್ಯಂತ ಅನೇಕ ಜನರು ಐಫೋನ್​ಗೆ ಮನಸೋಲುವಂತೆಮಾಡಿದೆ. ಮಾತ್ರವಲ್ಲದೆ ತನ್ನ ಮಾರುಕಟ್ಟೆಯನ್ನೂ (Market) ವೃದ್ಧಿಸುವ ಮೂಲಕ ಗುರುತಿಸಿಕೊಂಡಿದೆ.

    ಐಫೋನ್‌ನ ಪ್ರತಿಯೊಂದು ವೈಶಿಷ್ಟ್ಯವು ವಿಶಿಷ್ಟವಾಗಿದೆ ಮತ್ತು ಆಪರೇಟಿಂಗ್ ಸಿಸ್ಟಮ್‌ನಿಂದ ಹಿಡಿದು ಧ್ವನಿ ಸಹಾಯಕರವರೆಗೆ ಎಲ್ಲವನ್ನೂ ಆ್ಯಪಲ್‌ ಸ್ವತಃ ತಯಾರಿಸಿದೆ. ಇತ್ತೀಚೆಗೆ, ಕೆಲವು ಐಫೋನ್ ಬಳಕೆದಾರರು ಸಿರಿ, ಆ್ಯಪಲ್‌ನ ಧ್ವನಿ ಸಹಾಯಕ ಬೆಂಬಲದೊಂದಿಗೆ ಕೆಲವು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಿರಿ ತುಂಬಾ ಸರಳವಾದ ಪ್ರಶ್ನೆಗೆ ತಪ್ಪು ಉತ್ತರವನ್ನು ನೀಡುತ್ತಿದೆ ಎಂದು ದೂರಿದ್ದಾರೆ.

    ಈ ಸರಳ ಪ್ರಶ್ನೆಗೆ ಸಿರಿ ತಪ್ಪು ಉತ್ತರ ನೀಡುತ್ತಿದೆ! 

    ಕೆಲವು ಬಳಕೆದಾರರು ತಮ್ಮ ವಯಸ್ಸಿನ ಬಗ್ಗೆ ಸಿರಿಯನ್ನು ಕೇಳಿದಾಗ, ಸಿರಿ ತಪ್ಪು ಉತ್ತರವನ್ನು ಹೇಳುತ್ತಿದೆ ಮತ್ತು ಇದು ಸಿರಿ ಬಳಕೆದಾರರಿಗೆ ಬಹಳ ಮುಜುಗರದ ವಿಷಯವಾಗಿದೆ. ಏಕೆಂದರೆ ಸಾಮಾನ್ಯವಾಗಿ ಸಿರಿ ಯಾವುದೇ ಪ್ರಶ್ನೆಗೆ ತಪ್ಪು ಉತ್ತರವನ್ನು ನೀಡುವುದಿಲ್ಲ. ನಿಮ್ಮ ಜನ್ಮದಿನವು ಪ್ರಸ್ತುತ ಈ ವರ್ಷ ಬರುತ್ತಿದ್ದರೆ, ಸಿರಿಯು ನಿಮ್ಮ ವಯಸ್ಸನ್ನು ಹೇಳುತ್ತದೆ. ಆದರೆ ಕೆಲವು ಬಳಕೆದಾರರಿಗೆ ಸಿರಿ ನೀಡುತ್ತಿರುವ ತಪ್ಪು ಉತ್ತರದಿಂದ ಬೇಸರವಾಗಿದೆ.

    ಅಷ್ಟಕ್ಕೂ ಸಮಸ್ಯೆ ಏನು?

    ಅಷ್ಟಕ್ಕೂ ಸಮಸ್ಯೆ ಏನೆಂದರೆ, ವಾಸ್ತವವಾಗಿ ಬಳಕೆದಾರರ ಜನ್ಮದಿನವನ್ನು ಹೇಳುವಾಗ, ಸಿರಿ ಹುಟ್ಟಿದ ವರ್ಷವನ್ನು ಮಾತ್ರ ನೋಂದಾಯಿಸಲು ಸಾಧ್ಯವಾಗುತ್ತದೆ ಮತ್ತು ಅದರಲ್ಲಿ ತಿಂಗಳು ಮತ್ತು ದಿನಾಂಕವನ್ನು ಓದಲಾಗುವುದಿಲ್ಲ. ಈ ಕಾರಣಕ್ಕಾಗಿಯೇ ಈ ವರ್ಷ ನಿಮ್ಮ ಹುಟ್ಟುಹಬ್ಬ ಬಂದರೂ ಸಿರಿ ಈ ವರ್ಷದ ಹುಟ್ಟುಹಬ್ಬವನ್ನು ಸೇರಿಸಿಕೊಂಡು ನಿಮ್ಮ ವಯಸ್ಸನ್ನು ಹೇಳುತ್ತದೆ.

    ದೂರು ದಾಖಲಿಸಿದ ಬಳಕೆದಾರರು

    ಹೆಚ್ಚಿನ ಬಳಕೆದಾರರು ಈ ದೋಷವನ್ನು ಎದುರಿಸುತ್ತಿಲ್ಲ. ವರದಿಗಳ ಪ್ರಕಾರ, iOS 15.3 ಅನ್ನು ಬಳಸುವ ಬಳಕೆದಾರರು ಮತ್ತು iOS 15.4 ನ ಬೀಟಾ ಆವೃತ್ತಿಯನ್ನು ಪರೀಕ್ಷಿಸುತ್ತಿರುವ ಕೆಲವು ಜನರು ಸಿರಿಗೆ ಅವರ ವಯಸ್ಸನ್ನು ಕೇಳಿದರು ಮತ್ತು ಪ್ರತಿಯಾಗಿ ಅವರು ತಪ್ಪು ಉತ್ತರವನ್ನು ಪಡೆದರು. ನಿಮ್ಮ ಜನ್ಮದಿನವನ್ನು ಸಿರಿ ಹೇಳಬೇಕೆಂದು ನೀವು ಬಯಸಿದರೆ, ಅದಕ್ಕಾಗಿ ನಿಮ್ಮ ಜನ್ಮದಿನವನ್ನು ಐಫೋನ್ ಕಾಂಟ್ಯಾಕ್ಟ್ ಕಾರ್ಡ್‌ನಲ್ಲಿ ಉಳಿಸಬೇಕು. ಹಾಗಿದ್ದಾಗ ಸರಿ ಉತ್ತರ ನೀಡಲು ಸಾಧ್ಯವಾಗುತ್ತದೆ.

    ಇದನ್ನು ಓದಿ:Smartphone: ಸ್ಮಾರ್ಟ್​​ಫೋನ್ ಕಳೆದುಹೋದರೆ ಚಿಂತೆ ಮಾಡ್ಬೇಡಿ! ಹೀಗೆ ಟ್ರ್ಯಾಕ್ ಮಾಡಿ ಹುಡುಕಬಹುದು

    ಇದು ದೊಡ್ಡ ಸಮಸ್ಯೆ ಅಲ್ಲ, ಆದರೆ ಆ್ಯಪಲ್‌ ಶೀಘ್ರದಲ್ಲೇ ಇದನ್ನು ಸರಿಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಏಕೆಂದರೆ ಪ್ರಸ್ತುತ ಈ ಬಗ್ಗೆ ಕಂಪನಿಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಯಾವುದೇ ಸಮಸ್ಯೆ ಕಾಣಿಸಿಕೊಂಡರೆ ಆ್ಯಪಲ್​ ಕಂಪನಿ ಅದನ್ನು ಗಮನಿಸಿಕೊಂಡು ಬೇಗನೇ ಸರಿ ಮಾಡಿಕೊಡುತ್ತದೆ. ಅದರಂತೆ ಇದೀಗ ಸಿರಿಯಲ್ಲಿನ ಸಮಸ್ಯೆಯನ್ನು ಹೋಗಲಾಡಿಸುವ ನಿರೀಕ್ಷೆಯಿದೆ.

    ಇದನ್ನು ಓದಿ: WhatsApp: ಮೆಸೇಜ್​ ಕಳುಹಿಸಿ ಕೂಡಲೇ ಡಿಲೀಟ್​ ಮಾಡಿದ್ರೆ ಹೀಗೆ ಪತ್ತೆ ಹಚ್ಚಬಹುದು!

    ಆ್ಯಪಲ್​ ಜನಪ್ರಿಯ ಕಂಪನಿಗಳಲ್ಲಿ ಒಂದು. ಗ್ರಾಹಕರಿಗಾಗಿ ಏನಾದರು ಹೊಸ ಪ್ರಾಡೆಕ್ಟ್​ಗಳನ್ನು ಪರಿಚಯಿಸುತ್ತಿರುತ್ತದೆ. ಅದರಲ್ಲೂ ಐಫೋನ್​ ಸಿರೀಸ್​ಗಳನ್ನು ಪರಿಚಯಿಸುತ್ತಾ ಬಂದಿದೆ. ಮುಂದಿನ ದಿನಗಳಳ್ಲಿ ಐಫೋನ್​ 14 ಬರುವ ನಿರೀಕ್ಷೆಯಿದೆ. ಈ ಬಗ್ಗೆ ಕೆಲಸಗಳು ನಡೆಯುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ಯಾವಾಗ ಆ್ಯಪಲ್​ ಕಂಪನಿ ಹೊಸ ಐಫೊನ್​ ಸಿರೀಸ್​ ಅನ್ನು ಪರಿಚಯಿಸುತ್ತದೆ ಎಂದು ಕಾದುನೋಡಬೇಕಿದೆ.
    Published by:Harshith AS
    First published: