BSNL ಭರ್ಜರಿ ಆಫರ್​: ಪ್ರತಿನಿತ್ಯ 3.21GB ಡೇಟಾ ಉಚಿತ

ಬಿಎಸ್​ಎನ್​ಎಲ್​ ಅಧಿಕೃತ ವೆಬ್​ಸೈಟ್​ ಮಾಹಿತಿ ಪ್ರಕಾರ 10 ರಾಜ್ಯಗಳಲ್ಲಿ 4G ಸೇವೆಯನ್ನು ಪ್ರಾರಂಭಿಸಲಿದ್ದು, ಮೊದಲ ಹಂತದಲ್ಲಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್​ಗಢ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಕರ್ನಾಟಕದಲ್ಲಿ 4G ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.

zahir | news18
Updated:January 17, 2019, 6:57 PM IST
BSNL ಭರ್ಜರಿ ಆಫರ್​: ಪ್ರತಿನಿತ್ಯ 3.21GB ಡೇಟಾ ಉಚಿತ
ಸಾಂದರ್ಭಿಕ ಚಿತ್ರ
zahir | news18
Updated: January 17, 2019, 6:57 PM IST
ಟೆಲಿಕಾಂ ಕ್ಷೇತ್ರಕ್ಕೆ ರಿಲಯನ್ಸ್ ಜಿಯೋ ಕಾಲಿಟ್ಟ ಬಳಿಕ ಅನೇಕ ಕಂಪೆನಿಗಳ ಗ್ರಾಹಕರು ಜಿಯೋದತ್ತ ವಾಲಿದ್ದರು. ಅದರಲ್ಲೂ ಸರ್ಕಾರಿ ಸೌಮ್ಯದ ಬಿಎಸ್​ಎನ್​ಎಲ್​ಗಿಂತ ಜಿಯೋ ಅತಿ ಕಡಿಮೆ ದರದಲ್ಲಿ ಸೇವೆ ಒದಗಿಸುವ ಮೂಲಕ ಗಮನ ಸೆಳೆದಿತ್ತು. ಇದು ಬಿಎಸ್​ಎನ್​ಎಲ್​ ಗ್ರಾಹಕರ ಮೇಲೂ ಪ್ರಭಾವ ಬೀರಿದೆ. ಇದೀಗ ತನ್ನ ಬಳಕೆದಾರರನ್ನು ಉಳಿಸಿಕೊಳ್ಳು ಮತ್ತು ಹೊಸ ಗ್ರಾಹಕರನ್ನು ಸೆಳೆಯಲು ಜಿಯೋದೊಂದಿಗೆ ಬಿಎಸ್​ಎನ್​ಲ್​ ಪೈಪೋಟಿಗೆ ಇಳಿದಿದೆ. ​ಅದರಂತೆ ತನ್ನ ಪ್ಲಾನ್​ನಲ್ಲಿ ಭಾರೀ ಬದಲಾವಣೆ ಮಾಡಿಕೊಂಡಿದೆ. ಈ ಮೂಲಕ ಮತ್ತೊಮ್ಮೆ ಜಿಯೋ ಹಾಗೂ ಇತರೆ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಸಕಲ  ತಯಾರಿಯಲ್ಲಿದೆ ಬಿಎಸ್​ಎನ್​ಎಲ್.

ಬಿಎಸ್​ಎನ್​ಎಲ್​ ಈ ಹಿಂದೆ ಪ್ರಸ್ತುತಪಡಿಸಿದ 399 ರೂ.ನ ಪ್ಲಾನ್​ನಲ್ಲಿ ಬದಲಾವಣೆ ತಂದಿದೆ. ಈ ಹಿಂದೆ 399 ರೂ. ಯೋಜನೆಯಲ್ಲಿ ಪ್ರತಿದಿನ​ 1GB ಡೇಟಾ ನೀಡುತ್ತಿತ್ತು. ಆದರೆ ಈ ಡೇಟಾ ಪ್ಲಾನ್ ಬದಲಿಸಿರುವ ಬಿಎಸ್​ಎನ್​ಎಲ್​ ಇನ್ನು ಮುಂದೆ ಪ್ರತಿದಿನ 3.21GB ಡೇಟಾ ಒದಗಿಸಲಿದೆ. 74 ದಿನಗಳ ವ್ಯಾಲಿಡಿಟಿ ಈ ಆಫರ್​ನಲ್ಲಿ ಸಿಗಲಿದ್ದು, ಅದರೊಂದಿಗೆ  ಒಟ್ಟು 237.54GB ಡೇಟಾ ಸಿಗಲಿದೆ. ಅಷ್ಟೇ ಅಲ್ಲದೆ ಅನಿಯಮಿತ ಕರೆ ಮತ್ತು ಪ್ರತಿನಿತ್ಯ 100 ಎಸ್​ಎಂಎಸ್​ ಕೂಡ ಉಚಿತವಿರಲಿದೆ. ಈ ಸೇವೆಯನ್ನು 3G ಹಾಗೂ 2G ನೆಟ್​ವರ್ಕ್​ನಲ್ಲಿ ಬಳಸಬಹುದಾಗಿದೆ.

ಇದನ್ನೂ ಓದಿ: 12ನೇ ತರಗತಿ ಪಾಸಾದವರಿಂದ ಹೆಡ್​ ಕಾನ್ಸ್ಟೇಬಲ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದೇ ಮೊತ್ತದಲ್ಲಿ ರಿಲಯನ್ಸ್​ ಜಿಯೋ ಪ್ರತಿದಿನ 1.5GB ಡೇಟಾ ಮತ್ತು ಅನಿಯಮಿತ ಕರೆ ಹಾಗೂ 100 ಎಸ್​ಎಂಎಸ್​ಗಳನ್ನು ನೀಡುತ್ತಿದೆ. ಈ ಪ್ಲಾನ್​ನಲ್ಲಿ ಜಿಯೋ 84 ದಿನಗಳ ವಾಲಿಟಿಡಿಯನ್ನು ಒದಗಿಸುತ್ತಿದೆ. ಆದರೆ ಈ ಬಾರಿ ಬಿಎಸ್​ಎನ್​ಎಲ್​ ಇಂಟರ್​ನೆಟ್​ ಬಳಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ಡೇಟಾ ಪ್ಯಾಕ್​ನಲ್ಲಿ ಬದಲಾವಣೆ ಮಾಡಿರುವುದು ಜಿಯೋಗೆ ಭಾರೀ ಹೊಡೆತ ನೀಡಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನ ಬದಲಾಗಲಿದೆ ಫೇಸ್​ಬುಕ್​ ನಿಯಮ

ಬಿಎಸ್​ಎನ್​ಎಲ್​ ಅಧಿಕೃತ ವೆಬ್​ಸೈಟ್​ ಮಾಹಿತಿ ಪ್ರಕಾರ 10 ರಾಜ್ಯಗಳಲ್ಲಿ 4G ಸೇವೆಯನ್ನು ಪ್ರಾರಂಭಿಸಲಿದ್ದು, ಮೊದಲ ಹಂತದಲ್ಲಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್​ಗಢ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಕರ್ನಾಟಕದಲ್ಲಿ 4G ಸೇವೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ. ಇದರಿಂದ ಬಳಕೆದಾರು ಬಿಎಸ್​ಎನ್​ಎಲ್ ಸಿಮ್​ ಅನ್ನು ಅಪ್​ಗ್ರೇಡ್​ ಮಾಡಿಕೊಳ್ಳುವ ಮೂಲಕ  4G ಸೇವೆಯನ್ನು ಪಡೆಯಬಹುದು. ಈ ಹಿಂದೆಯೇ ಬಿಎಸ್​ಎನ್​ಎಲ್​ ತಿಳಿಸಿರುವಂತೆ ಸಿಮ್​ ಅಪ್​ಗ್ರೇಡ್​ ವೇಳೆ ಹೆಚ್ಚುವರಿ 2GB ಡೇಟಾ ಕೂಡ ಸಿಗಲಿದೆ.

ಇದನ್ನೂ ಓದಿ: ನಿಮ್ಮವರು ಸರ್ಕಾರ ಕೆಡವಲು ಯತ್ನಿಸುತ್ತಿದ್ದಾರೆ, ಆದರೆ ಯಶಸ್ವಿಯಾಗಲ್ಲ ಎಂದು ನೆನ್ನೆ ಪ್ರಧಾನಿಗೆ ಹೇಳಿದ್ದೆ; ಖರ್ಗೆ

First published:January 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...