• Home
  • »
  • News
  • »
  • tech
  • »
  • BSNL Network: 4G ಯಿಂದ 5G ಗೆ ಅಪ್‌ಗ್ರೇಡ್‌ ಆಗುತ್ತಾ ಬಿಎಸ್‌ಎನ್ಎಲ್?

BSNL Network: 4G ಯಿಂದ 5G ಗೆ ಅಪ್‌ಗ್ರೇಡ್‌ ಆಗುತ್ತಾ ಬಿಎಸ್‌ಎನ್ಎಲ್?

ಬಿಎಸ್‌ಎನ್‌ಎಲ್

ಬಿಎಸ್‌ಎನ್‌ಎಲ್

ಈ ಹಿಂದೆ ಮಾಧ್ಯಮದಲ್ಲಿ ಹರಿದಾಡಿದ ಸುದ್ದಿಗಳ ಪ್ರಕಾರ ಬಿಎಸ್ಎನ್ಎಲ್ ನವರು ಟಿಸಿಎಸ್-ಸಿಡಿಒಟಿ ಅವರ ಜೊತೆಗೆ ಸೇರಿಕೊಂಡು 4ಜಿ ನೆಟ್‌ವರ್ಕ್ ಅನ್ನು 2022 ರ ವೇಳೆಗೆ 5ಜಿ ನೆಟ್‌ವರ್ಕ್ ಗೆ ಮೇಲ್ದರ್ಜೆಗೇರಿಸಲಿದೆ ಅಂತ ವರದಿ ಆಗಿತ್ತು

  • Share this:

    ಈಗಾಗಲೇ ಕೆಲವು ಮೊಬೈಲ್ ನೆಟ್‌ವರ್ಕ್ (Mobile Network) ಕಂಪನಿಗಳು ಭಾರತದಲ್ಲಿ 5ಜಿ ಅನ್ನು ಲಾಂಚ್ (Launch) ಮಾಡಿದ್ದು, ಈಗ ಅದಕ್ಕೆ ಸರಿ ಹೊಂದುವಂತಹ 5ಜಿ ಸ್ಮಾರ್ಟ್‌ಫೋನ್‌ಗಳನ್ನು (Smartphones) ತಯಾರಿಸುವಲ್ಲಿ ಈ ದೊಡ್ಡ ದೊಡ್ಡ ಮೊಬೈಲ್ ತಯಾರಕ ಕಂಪನಿಗಳು ಬ್ಯುಸಿಯಾಗಿರುವುದು ನಮಗೆಲ್ಲಾ ಗೊತ್ತೇ ಇದೆ. ಹೀಗೆ ಬಹುತೇಕವಾಗಿ ಎಲ್ಲಾ ನೆಟ್‌ವರ್ಕ್ ಕಂಪನಿಗಳು 5ಜಿಯನ್ನು ಶುರು ಮಾಡಿದ್ದು ಭಾರತದಲ್ಲಿ ಮಹಾನಗರಗಳಲ್ಲಿ ಇದು ಲಭ್ಯವಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ 5ಜಿ ನೆಟ್‌ವರ್ಕ್‌ಗಳು ಬಹಳಷ್ಟು ವೇಗವನ್ನು ಹೊಂದಿದ್ದು ದೇಶದ ಕೆಲವು ಭಾಗಗಳಲ್ಲಿ ಈಗಾಗಲೇ ಪ್ರಾರಂಭವಾಗಿದೆ. 2023ರ ಹೊತ್ತಿಗೆ ಈ 5ಜಿ ದೇಶದ ಎಲ್ಲಾ ಭಾಗಗಳಲ್ಲಿ ವಿಸ್ತರಿಸಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.


    ಈ ಹಿಂದೆ ಮಾಧ್ಯಮದಲ್ಲಿ ಹರಿದಾಡಿದ ಸುದ್ದಿಗಳ ಪ್ರಕಾರ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ನವರು ಟಿಸಿಎಸ್-ಸಿಡಿಒಟಿ ಅವರ ಜೊತೆಗೆ ಸೇರಿಕೊಂಡು 4ಜಿ ನೆಟ್‌ವರ್ಕ್ ಅನ್ನು 2022 ರ ವೇಳೆಗೆ 5ಜಿ ನೆಟ್‌ವರ್ಕ್ ಗೆ ಮೇಲ್ದರ್ಜೆಗೇರಿಸಲಿದೆ ಅಂತ ವರದಿ ಆಗಿತ್ತು. ಆದರೆ ಈಗ ಬೇರೆ ಹೊಸ ಸುದ್ದಿಯೇ ಹರಿದಾಡುತ್ತಿದೆ ಎಂದು ಹೇಳಲಾಗುತ್ತಿದೆ.


    5ಜಿ ಗೆ ಅಪ್‌ಗ್ರೇಡ್ ಆಗಲು ರಿಲಯನ್ಸ್ ಜಿಯೋದೊಂದಿಗೆ ಕೈ ಜೋಡಿಸುತ್ತಾ ಬಿಎಸ್ಎನ್ಎಲ್ ?


    ಇದೇನು ಹೊಸ ಸುದ್ದಿ ಅಂತೀರಾ? ಬಿಎಸ್ಎನ್ಎಲ್ ದೇಶಾದ್ಯಂತ ತನ್ನ ನೆಟ್‌ವರ್ಕ್ 4ಜಿ ಯಅನ್ನು 5ಜಿಗೆ ಅಪ್‌ಗ್ರೇಡ್ ಮಾಡಲು ಈಗ ರಿಲಯನ್ಸ್ ಜಿಯೋದೊಂದಿಗೆ ಕೈ ಜೋಡಿಸಬಹುದು ಅಂತ ಸುದ್ದಿಗಳು ವರದಿಯಾಗುತ್ತಿವೆ.


    ಇದನ್ನೂ ಓದಿ: ಫೇಸ್‌ಬುಕ್ ಪೋಷಕ ಸಂಸ್ಥೆ ಮೆಟಾದ ತ್ರೈಮಾಸಿಕ ಆದಾಯದಲ್ಲಿ ಕುಸಿತ, 5%ಕ್ಕಿಂತ ಹೆಚ್ಚು ನಷ್ಟಕ್ಕೊಳಗಾದ ಷೇರುಗಳು


    ರಿಲಯನ್ಸ್ ಜಿಯೋ ದೇಶೀಯ ಇಪಿಸಿ (4ಜಿ ಕೋರ್) ಅನ್ನು ಅಭಿವೃದ್ಧಿಪಡಿಸಿದೆ ಎಂದು ವರದಿಯಾಗಿದೆ, ಇದನ್ನು ನಂತರ 5ಜಿ ಗೆ ನವೀಕರಿಸಬಹುದು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ತೇಜಸ್ ನೆಟ್‌ವರ್ಕ್ ಮತ್ತು ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ ಎಂದರೆ (ಸಿ-ಡಿಒಟಿ) ಒಕ್ಕೂಟವನ್ನು ಕೈಬಿಡಲು ಬಿಎಸ್ಎನ್ಎಲ್ ಪ್ರಯತ್ನಿಸುತ್ತಿದೆ ಅಂತ ವರದಿಗಳು ಹೇಳುತ್ತಿವೆ. ಇದಕ್ಕೆ ಮುಖ್ಯವಾದ ಕಾರಣ ಏನು ಎಂದು ಕೇಳಿದರೆ ಬಿಎಸ್ಎನ್ಎಲ್ ಇದಕ್ಕೆ ನೀಡಬೇಕಾದ ಹೆಚ್ಚಿನ ವೆಚ್ಚವೇ ಕಾರಣ ಎಂದು ಹೇಳಲಾಗುತ್ತಿದೆ.


    BSNL upgrading from 4G to 5G?
    ಬಿಎಸ್‌ಎನ್‌ಎಲ್


    ಸಿ-ಡಿಒಟಿ, ಟಾಟಾ ಗ್ರೂಪ್ ಇದರಿಂದ ಹೊರಗುಳಿಯಬಹುದೇ?


    4ಜಿ ಉಪಕರಣಗಳಿಗೆ ಪೂರೈಕೆದಾರರ ಆಯ್ಕೆಯನ್ನು ಶೂನ್ಯಗೊಳಿಸುವ ಮೂಲಕ ಬಿಎಸ್ಎನ್ಎಲ್ ಸಮಸ್ಯೆಗಳನ್ನು ಎದುರಿಸುತ್ತಿದೆ. ವಿದೇಶಿ ಮಾರಾಟಗಾರರೊಂದಿಗೆ ಕೈ ಜೋಡಿಸಬಾರದು ಎಂದು ಸರ್ಕಾರ ಕಟ್ಟುನಿಟ್ಟಾಗಿ ಹೇಳಿರುವುದರಿಂದ ಸರ್ಕಾರಿ ಸ್ವಾಮ್ಯದ ಟೆಲ್ಕೊ ಸ್ಥಳೀಯ ಸಂಸ್ಥೆಗಳಿಂದ ಮಾತ್ರ ಆಯ್ಕೆ ಮಾಡಬಹುದು.


    ಬಿಎಸ್ಎನ್ಎಲ್ 4ಜಿ ನೆಟ್‌ವರ್ಕ್ ಗಳನ್ನು ಪ್ರಾರಂಭಿಸಲು ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದರೂ, ಸಿಡಿಒಟಿ ಸೇರಿದಂತೆ ಟಾಟಾ ಗ್ರೂಪ್ ಒಕ್ಕೂಟವು ಸ್ಪರ್ಧೆಯಿಂದ ಹೊರಗುಳಿಯಬಹುದು.


    ಮಾಧ್ಯಮದ ವರದಿಗಳು:


    ಮಾಧ್ಯಮದ ವರದಿಯ ಪ್ರಕಾರ, ಒಕ್ಕೂಟವು ಮಾಡಿದ ಪ್ರತಿಯೊಂದು ಬಿಡ್ ಗೆ ಉಲ್ಲೇಖಿಸಿದ ಬೆಲೆ 20,000 ಕೋಟಿ ರೂಪಾಯಿಗಿಂತಲೂ ಹೆಚ್ಚಾಗಿದೆ. ಆದರೆ ಬಿಎಸ್ಎನ್ಎಲ್ ನ ಆಂತರಿಕ ಅಂದಾಜಿನ ಪ್ರಕಾರ, ಗರಿಷ್ಠ 17,173 ಕೋಟಿ ರೂಪಾಯಿ ಆಗಿದೆ. ಬಿಎಸ್ಎನ್ಎಲ್ ನ ಆಂತರಿಕ ವರದಿಯು ರಿಲಯನ್ಸ್ ಜಿಯೋ ಕೂಡ ವೆಚ್ಚಗಳನ್ನು ನಿಯಂತ್ರಣದಲ್ಲಿಡಬಹುದಾದರೆ ಕಾರ್ಯಸಾಧ್ಯವಾದ ಆಯ್ಕೆಯಾಗಿದೆ ಎಂದು ಸೂಚಿಸುತ್ತದೆ.‌


    BSNL upgrading from 4G to 5G?
    ಬಿಎಸ್‌ಎನ್‌ಎಲ್


    ಯಾವೆಲ್ಲಾ ಕಂಪನಿಗಳನ್ನು ಪರಿಗಣಿಸಬಹುದು?


    ಇದರೊಂದಿಗೆ, ಎಲ್ ಆಂಡ್ ಟಿ, ಎಚ್ಎಫ್‌ಸಿಎಲ್ ಮತ್ತು ಟೆಕ್ ಮಹೀಂದ್ರಾದಂತಹ ಇತರ ಕಂಪನಿಗಳನ್ನು ಸಹ ಪರಿಗಣಿಸಬೇಕಾಗಿದೆ, ಏಕೆಂದರೆ ಅವರು ಪರಿಕಲ್ಪನೆಯ ಯೋಜನೆಗಳನ್ನು ತೋರಿಸಿದ್ದಾರೆ.


    ಇದನ್ನೂ ಓದಿ: ಫ್ರೀಯಾಗಿ ಇಂಟರ್ನೆಟ್‌ ಉಪಯೋಗಿಸುವುದು ಹೇಗೆ? ಈ ಟ್ರಿಕ್ಸ್‌ ಫಾಲೋ ಮಾಡಿ


    ನಂತರ ಬಿಎಸ್ಎನ್ಎಲ್ ಅನ್ನು ಮಾರುಕಟ್ಟೆಯಿಂದ ಸಂಪೂರ್ಣವಾಗಿ ಹೊರಗಿಡುತ್ತದೆ. ಬಿಎಸ್ಎನ್ಎಲ್ ಹೇಗಾದರೂ ಮಾಡಿ ದೇಶಾದ್ಯಂತ 4ಜಿ ಅನ್ನು ಸಾಧ್ಯವಾದಷ್ಟು ಬೇಗ ನಿಯೋಜಿಸಲು ಪ್ರಾರಂಭಿಸಬೇಕು, ಇಲ್ಲದಿದ್ದರೆ ಮುಂಬರುವ ವರ್ಷಗಳಲ್ಲಿ 5ಜಿ ಗೆ ಮೇಲ್ದರ್ಜೆಗೇರಿಸುವ ಅದರ ಗುರಿಗಳು ಸಹ ವಿಳಂಬವಾಗಬಹುದು.

    Published by:Precilla Olivia Dias
    First published: