4G Network: ಇನ್ನೆರಡು ವರ್ಷದೊಳಗೆ ಭಾರತದಲ್ಲಿ ಬಿಎಸ್ಎನ್ಎಲ್ 4G ಸೇವೆಗಳು ಪ್ರಾರಂಭ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಎಂದರೆ ಬಿಎಸ್ಎನ್ಎಲ್ ಸಹ ಶೀಘ್ರದಲ್ಲಿಯೇ ತನ್ನ ಗ್ರಾಹಕರಿಗಾಗಿ ಭಾರತದಲ್ಲಿ 4ಜಿ ಸೇವೆಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಈ 4ಜಿ ಸೇವೆಗಳು ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಭಾರತೀಯ ಗ್ರಾಹಕರಿಗೆ ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ.

ಮುಂದೆ ಓದಿ ...
  • Share this:

ಈಗಾಗಲೇ ಕೆಲವು ಟೆಲಿಕಾಂ ಆಪರೇಟರ್ ಗಳು (Telecom Operator) ತಮ್ಮ ಗ್ರಾಹಕರಿಗಾಗಿ ಭಾರತದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಲು ಸಿದ್ದತೆ ನಡೆಸುತ್ತಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ, ಎಲ್ಲವೂ ಅಂದು ಕೊಂಡಂತೆ ನಡೆದರೆ ಜಿಯೋ, ಏರ್ಟೆಲ್ ಮತ್ತು ವಿ ನಂತಹ ಟೆಲಿಕಾಂ (Telecom) ಪೂರೈಕೆದಾರರಿಂದ ಗ್ರಾಹಕರು 5ಜಿ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಮತ್ತೊಂದೆಡೆ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (Bharat Sanchar Nigam Ltd) ಎಂದರೆ ಬಿಎಸ್ಎನ್ಎಲ್ ಸಹ ಶೀಘ್ರದಲ್ಲಿಯೇ ತನ್ನ ಗ್ರಾಹಕರಿಗಾಗಿ ಭಾರತದಲ್ಲಿ 4ಜಿ ಸೇವೆಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಈ 4ಜಿ ಸೇವೆಗಳು ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಭಾರತೀಯ ಗ್ರಾಹಕರಿಗೆ (Indian Customers) ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ.


ವರದಿಯಲ್ಲಿ ಏನಿದೆ?
ಟಾಟಾ ಗ್ರೂಪ್ ನ ಅಂಗ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನೆಟ್‌ವರ್ಕ್ ಯೋಜನೆ, ತಾಂತ್ರಿಕ ಮತ್ತು ವಾಣಿಜ್ಯ ಅಂಶಗಳಲ್ಲಿ ಬಿಎಸ್ಎನ್ಎಲ್ ನೊಂದಿಗೆ ಸಹಯೋಗ ಹೊಂದಿದೆ ಎಂದು ಇತ್ತೀಚಿನ ವರದಿ ಹೇಳಿದೆ. 5ಜಿ ಸೇವೆಗಳ ವಿಚಾರಕ್ಕೆ ಬಂದರೆ ಬಿಎಸ್ಎನ್ಎಲ್ ನ 5ಜಿ ಎನ್ಎಸ್ಎ ಕೋರ್ ಮತ್ತು ಸಂಭಾವ್ಯ ಬ್ಯಾಂಡ್ ಗಳಲ್ಲಿನ ರೇಡಿಯೋಗಳು ಸಿದ್ಧವಾಗಿವೆ ಮತ್ತು ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಗಾಗುತ್ತಿವೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.


ಮುಂದಿನ ಎರಡು ವರ್ಷಗಳಲ್ಲಿ 4G ಲಭ್ಯ
ಸುದ್ದಿ ಮಾಧ್ಯಮದ ಇತ್ತೀಚಿನ ವರದಿಯ ಪ್ರಕಾರ, ಬಿಎಸ್ಎನ್ಎಲ್ ನ 4ಜಿ ಸೇವೆಗಳು ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಪ್ಯಾನ್-ಇಂಡಿಯಾ ಚಂದಾದಾರರಿಗೆ ಲಭ್ಯವಾಗಲಿವೆ ಎಂದು ಹೇಳಲಾಗುತ್ತಿವೆ. ಬರೀ 4ಜಿ ಸೇವೆಗಳಲ್ಲದೆ, ಬಿಎಸ್ಎನ್ಎಲ್ ನ 5ಜಿ ಸೇವೆಯೂ ಸಹ ಇದರ ಹಿನ್ನಲೆಯಲ್ಲಿ ಸಿದ್ಧವಾಗಿದೆ ಮತ್ತು ಅಂತಿಮ ಪರೀಕ್ಷೆಗೆ ಒಳಗಾಗುತ್ತಿದೆ ಎಂದು ವರದಿ ಬಹಿರಂಗಪಡಿಸಿದೆ.


ಇದನ್ನೂ ಓದಿ: Google: ಡೆನ್ಮಾರ್ಕ್ ಶಾಲೆಗಳಲ್ಲಿ ಗೂಗಲ್ ವರ್ಕ್‌ಸ್ಪೇಸ್ ಮತ್ತು ಕ್ರೋಮ್‌ಬುಕ್‌ ಬಳಕೆ ನಿಷೇಧ! ಯಾಕೆ ಗೊತ್ತಾ?  


ಟಿಸಿಎಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಎನ್.ಗಣಪತಿ ಅವರು ಈ ವರದಿಯಲ್ಲಿ ಹೇಳಿರುವಂತೆ "ನಿಯೋಜನೆ ಮತ್ತು ವಾಣಿಜ್ಯ ಭವಿಷ್ಯದ ಹಲವಾರು ಕ್ಷೇತ್ರಗಳ ಬಗ್ಗೆ ಬಿಎಸ್ಎನ್ಎಲ್ ನೊಂದಿಗೆ ಮಾತುಕತೆಗಳನ್ನು ಮುಕ್ತಾಯಗೊಳಿಸಲು ನಾವು ಸಿದ್ಧರಾಗಿದ್ದೇವೆ. ವ್ಯವಹಾರವು ಈಗಾಗಲೇ ವರ್ಷದ ಅಂತ್ಯದ ಮೊದಲು ಮೊದಲ ಬ್ಯಾಚ್ ಉಪಕರಣಗಳನ್ನು ನಿಯೋಜಿಸಲು ಯೋಜಿಸುತ್ತಿದೆ. ಅವುಗಳ ಪ್ರಸ್ತುತ ನೆಟ್‌ವರ್ಕ್ ಮತ್ತು ವ್ಯವಸ್ಥೆಗಳೊಂದಿಗೆ ಏಕೀಕರಣ ಸೇರಿದಂತೆ ಹಲವಾರು ಸುತ್ತಿನ ಪರೀಕ್ಷೆಗಳು ನಡೆದಿವೆ. ಈ ಕಾರ್ಯವಿಧಾನವು ಸುಗಮವಾಗಿ ಸಾಗಿದೆ" ಎಂದು ಹೇಳಿದ್ದಾರೆ.


ಮಾರ್ಚ್ ತಿಂಗಳಿನಲ್ಲಿ ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬಿಎಸ್ಎನ್ಎಲ್ ನ 4ಜಿ ಸೇವೆಗಳ ರೋಲ್ಔಟ್ ಯೋಜನೆಯನ್ನು ಸಂವಹನ ಖಾತೆ ರಾಜ್ಯ ಸಚಿವ ದೇವುಸಿನ್ಹ್ ಚೌಹಾಣ್ ಬಹಿರಂಗಪಡಿಸಿದ್ದಾರೆ ಎಂದು ಹಿಂದಿನ ವರದಿಯೊಂದು ಸೂಚಿಸಿತ್ತು. ಟೆಲ್ಕೊದ ನೆಟ್‌ವರ್ಕ್ ಸೇವೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದ್ದರು.


ಹರಾಜಿಗೆ ಸಜ್ಜಾಗುತ್ತಿರುವ 5ಜಿ ಸ್ಪೆಕ್ಟ್ರಂ
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಖಾಸಗಿ ಕಂಪನಿಗಳ ವಿರುದ್ಧ ಸ್ಪರ್ಧಿಸಲು ಹೆಣಗಾಡುತ್ತಿದೆ. ಇತರ ಟೆಲಿಕಾಂ ಆಪರೇಟರ್ ಗಳಂತೆ, ಬಿಎಸ್ಎನ್ಎಲ್ ಇನ್ನೂ ಪ್ಯಾನ್-ಇಂಡಿಯಾ ಆಧಾರದ ಮೇಲೆ 4ಜಿ ಸಂಪರ್ಕವನ್ನು ಹೊಂದಿಲ್ಲ. ಆದಾಗ್ಯೂ, ಈ ಸೇವೆಯು 2020 ರಲ್ಲಿ ತನ್ನ ಪ್ರಾರಂಭವನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಈ ಹಿಂದೆ ಹೇಳಲಾಗಿತ್ತು.


ಇದನ್ನೂ ಓದಿ:  NetFlix: ಉಚಿತ ಸೇವೆಯನ್ನು ಬಳಸುತ್ತಿರುವವರಿಗೆ ಇನ್ಮುಂದೆ ನೆಟ್‌ಫ್ಲಿಕ್ಸ್‌ ಶುಲ್ಕ ವಿಧಿಸುತ್ತದೆಯಂತೆ

top videos


    ಏತನ್ಮಧ್ಯೆ, ಭಾರತವು 5ಜಿ ಸ್ಪೆಕ್ಟ್ರಂ ಹರಾಜಿಗೆ ಸಜ್ಜಾಗುತ್ತಿದೆ, ಖಾಸಗಿ ಟೆಲ್ಕೊಗಳು ತಮ್ಮ ಬಿಡ್ ಗಳನ್ನು ಸಲ್ಲಿಸಲು ಸಜ್ಜಾಗಿವೆ. ಜುಲೈ 26 ರಂದು ನಡೆಯಲಿರುವ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಪಾಲ್ಗೊಳ್ಳುವ ಯೋಜನೆಯನ್ನು ಅದಾನಿ ಗ್ರೂಪ್ ಇತ್ತೀಚೆಗೆ ದೃಢಪಡಿಸಿದೆ. ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕೂಡ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿವೆ ಎಂದು ಹೇಳಲಾಗುತ್ತಿವೆ.

    First published: