• Home
 • »
 • News
 • »
 • tech
 • »
 • BSNL: 106, 107 ರೂ.ವಿನ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದ ಬಿಎಸ್ಎನ್ಎಲ್; 100 ದಿನಗಳ ವ್ಯಾಲಿಡಿಟಿ ಜತೆಗೆ ನೀಡುತ್ತಿದೆ ಮತ್ತಷ್ಟು ಬೆನಿಫಿಟ್ಸ್!

BSNL: 106, 107 ರೂ.ವಿನ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದ ಬಿಎಸ್ಎನ್ಎಲ್; 100 ದಿನಗಳ ವ್ಯಾಲಿಡಿಟಿ ಜತೆಗೆ ನೀಡುತ್ತಿದೆ ಮತ್ತಷ್ಟು ಬೆನಿಫಿಟ್ಸ್!

ಬಿಎಸ್​ಎನ್​ಎಲ್

ಬಿಎಸ್​ಎನ್​ಎಲ್

BSNL Prepaid Plan: ಬಿಎಸ್​ಎನ್​ ಈ ಪ್ಲಾನ್​ಗಳ ಜೊತೆಗೆ 106 ರೂ, 107 ರೂವಿನ ಪ್ರತಿ ಸೆಕುಂಡು ಮತ್ತು ಪ್ರತಿ ನಿಮಿಷದ ಪ್ರಿಪೇಯ್ಡ್​ ಪ್ಲಾನ್​ಗಳನ್ನಯ ಪರಿಚಯಿಸಿದೆ. ನೂತನ ಪ್ಲಾನ್​ಗಳು ಅನಿಯಮಿತ ಕರೆ ಸೌಲಭ್ಯ, ಡೇಟಾದ ಜೊತೆಗೆ ಕೆಲವು ಭೆನಿಫಿಟ್ಸ್​ ಒದಗಿಸುತ್ತಿದೆ.

 • Share this:

  ಸರ್ಕಾರಿ ಸ್ವಾಮ್ಯದ ಭಾರತ್​ ಸಂಚಾರ್ ನಿಗಮ ಲಿಮಿಟೆಡ್​(ಬಿಎಸ್​ಎನ್​ಎಲ್​) ಮೂರು ಪ್ರಿಪೇಯ್ಡ್​ ಪ್ಲಾನ್​​ಗಳನ್ನು ಪರಿಷ್ಕರಿಸಿದೆ. ಅದರ ಜೊತೆಗೆ ಡೇಟಾ ರೋಲ್​ಓವರ್​ ಮತ್ತು ಆ್ಯಡ್​​​-ಆನ್​ ಬೆನಿಫಿಟ್ಸ್ ಆಯ್ಕೆಯನ್ನು​ ನೀಡುತ್ತಿದೆ. ರೂ 199, ರೂ 798, ರೂ 999 ಪ್ಲಾನ್​ಗಳನ್ನು ಬಿಎಸ್​ಎನ್ಎಲ್​​​ ಪರಿಷ್ಕರಿಸಿದೆ.


  ಬಿಎಸ್​ಎನ್​ ಈ ಪ್ಲಾನ್​ಗಳ ಜೊತೆಗೆ 106 ರೂ, 107 ರೂವಿನ ಪ್ರತಿ ಸೆಕುಂಡು ಮತ್ತು ಪ್ರತಿ ನಿಮಿಷದ ಪ್ರಿಪೇಯ್ಡ್​ ಪ್ಲಾನ್​ಗಳನ್ನಯ ಪರಿಚಯಿಸಿದೆ. ನೂತನ ಪ್ಲಾನ್​ಗಳು ಅನಿಯಮಿತ ಕರೆ ಸೌಲಭ್ಯ, ಡೇಟಾದ ಜೊತೆಗೆ ಕೆಲವು ಭೆನಿಫಿಟ್ಸ್​ ಒದಗಿಸುತ್ತಿದೆ.


  ಬಿಎಸ್​ಎನ್​ಎಲ್​ ರೂ 106, ರೂ 107 ಪ್ರಿಪೇಯ್ಡ್​ ಪ್ಲಾನ್​:


  ಬಿಎಸ್​ಎನ್​ಎಲ್​ ಈ ಬಾರಿ ಪ್ರತಿ ಸೆಕುಂಡು ಮತ್ತು ನಿಮಿಷಗಳ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್​ ವ್ಯಾಲಿಡಿಟಿಯನ್ನು 28 ದಿನಗಳಿಂದ 100 ದಿನಗಳವರೆಗೆ ವಿಸ್ತರಿಸಿದೆ. ಡಿಸೆಂಬರ್​ 1ರಿಂದ ಬಳಕೆಗೆ ಸಿಗಲಿದೆ.


  ನೂತನ ಪ್ಲಾನ್​ 3ಜಿಬಿ ಡೇಟಾ ಒದಗಿಸುತ್ತಿದೆ. 100 ದಿನಗಳ ವ್ಯಾಲಿಡಿಟಿ ಜೊತೆಗೆ ಎಲ್ಲಾ ನೆಟ್​ವರ್ಕ್​ ಕರೆಗಳ ಮೇಲೆ 100 ನಿಮಿಷಗಳ ಉಚಿತ ವಾಯ್ಸ್​ ಕರೆ ನೀಡುತ್ತಿದೆ. ಜೊತೆಗೆ ನ್ಯಾಷನಲ್​ ರೋಮಿಂಗ್​ ಕರೆಯನ್ನು ಒಳಗೊಂಡಿದೆ. 60 ದಿನಗಳ ಫ್ರೀ ಬಿಎಸ್​ಎನ್​ಎಲ್​ ಟ್ಯೂನ್​ ನೀಡುತ್ತಿದೆ. ಡಿಸೆಂಬರ್​ 1ರಿಂದ ಬಳಕೆಗೆ ಸಿಗಲಿದೆ.


  ಬಿಎಸ್​​ಎನ್​ಎಲ್​ ಪ್ರಿಪೇಯ್ಡ್​ ಪ್ಲಾನ್​ಗಳ ಮೇಲೆ ಶೇ25 ರಷ್ಟು ಡಿಸ್ಕೌಂಟ್​;


  ಬಿಎಸ್​ಎನ್​ಎಲ್​ 187 ತಾರಿಫ್​​ ವಾಚರ್​ ಮತ್ತು 1477 ಪ್ಲಾನ್​ ವಾಚರ್​ ಮೇಲೆ ಶೇ.25ರಷ್ಟು ಡಿಸ್ಕೌಂಟ್​ ನೀಡಿದೆ. ಬಳಕೆದಾರರು ತಮ್ಮ ಪ್ಲಾನ್​​ ಅವಧಿ ಮುಗಿದ 172 ದಿನಗಳ ಕಾಲ ಬಳಸಬಹುದಾಗಿದೆ. ನವೆಂಬರ್​ 30ರವರೆಗೆ ಈ ಪ್ಲಾನ್​ ಬಳಕೆಗೆ ಸಿಗಲಿದೆ.


  ಬಿಎಸ್​ಎನ್​ಎಲ್​ ಎಸ್​ಟಿವಿ187:


  ಅನಿಯಮಿತ ಕರೆಯನ್ನು ಒದಗಿಸುವ ಈ ಪ್ಲಾನ್​​ ಮೂಲಕ ಲೋಕಲ್​, ಎಸ್​ಟಿಡಿ ಮತ್ತು ಮುಂಬೈ-ದೆಹಲಿ ರೋಮಿಂಗ್​ ಕರೆಯನ್ನು ಮಾಡಬಹುದಾಗಿದೆ. ಪ್ರತಿ ದಿನ 2ಜಿಬಿ ಡೇಟಾ ಉದಗಿಸುತ್ತದೆ. ಜೊತೆಗೆ 100ಎಸ್​ಎಮ್​ಎಸ್​ ನೀಡುತ್ತಿದೆ.

  First published: