ನೂತನ ಏರ್ ಫೈಬರ್ ಪ್ಲ್ಯಾನ್‌ಗಳನ್ನು ಪ್ರಾರಂಭಿಸಿದ BSNL: 449 ರೂ.ಗಳ ಪ್ಲ್ಯಾನ್‌ ಮತ್ತೆ ಆರಂಭ

BSNL

BSNL

BSNL: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಎಸ್‌ಎನ್‌ಎಲ್ ಭಾರತ್ ಫೈಬರ್ ಯೋಜನೆಗಳನ್ನು 449 ರೂ.ಗಳಿಂದ ಪ್ರಾರಂಭಿಸಿತು. ಈಗ ಜುಲೈ 2021 ರವರೆಗೆ ಆ ಯೋಜನೆಗಳನ್ನು ಪುನಃ ಪರಿಚಯಿಸಿದೆ.

  • Share this:

    ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇತ್ತೀಚೆಗೆ ಬ್ರಾಡ್‌ಬ್ಯಾಂಡ್‌ ಹಾಗೂ ಮೊಬೈಲ್‌ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡುತ್ತಿದೆ. ಅನೇಕ ಹಳೆಯ ಪ್ಲ್ಯಾನ್‌ಗಳನ್ನು ರದ್ದುಗೊಳಿಸುತ್ತಿದ್ದು, ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಿದೆ. ಈಗ, ಇದೇ ರೀತಿ ಹಲವು ಹೊಸ ಏರ್‌ ಫೈಬರ್‌ ಪ್ಲ್ಯಾನ್‌ಗಳನ್ನು ಘೋಷಿಸಿದ ಬಿಎಸ್‌ಎನ್‌ಎಲ್‌, ಹಳೆಯ ಪ್ಲ್ಯಾನ್‌ ಒಂದನ್ನು ಮತ್ತೆ ಪರಿಚಯಿಸಿದೆ.


    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಎಸ್‌ಎನ್‌ಎಲ್ ಭಾರತ್ ಫೈಬರ್ ಯೋಜನೆಗಳನ್ನು 449 ರೂ.ಗಳಿಂದ ಪ್ರಾರಂಭಿಸಿತು. ಈಗ ಜುಲೈ 2021 ರವರೆಗೆ ಆ ಯೋಜನೆಗಳನ್ನು ಪುನಃ ಪರಿಚಯಿಸಿದೆ. ಈ ಯೋಜನೆಯ ಮುಂದುವರಿಕೆಯನ್ನು ಕಳೆದ ವಾರದವರೆಗೂ ಟೆಲಿಕಾಂ ಕಂಪನಿ ಘೋಷಿಸಿರಲಿಲ್ಲ. ಈ ಹಿನ್ನೆಲೆ ಆ ಪ್ಲ್ಯಾನ್‌ಗಳನ್ನು ಕೊನೆಗೊಳಿಸಿದೆ ಎಂಬ ಊಹಾಪೋಹಗಳು ಹರಡಿದ್ದವು. ಆದರೆ, ಈಗ ಮತ್ತೆ ಪರಿಚಯಿಸಿದ್ದು, ಜತೆಗೆ ಬಿಎಸ್ಎನ್ಎಲ್ ಏರ್ ಫೈಬರ್ ಯೋಜನೆಗಳನ್ನು ಪ್ರತ್ಯೇಕವಾಗಿ ಪ್ರಾರಂಭಿಸಿದೆ.


    ಎಲ್ಲ ಪ್ಲ್ಯಾನ್‌ಗಳ ವಿವರ ಹೀಗಿದೆ..


    1) ಬಿಎಸ್‌ಎನ್‌ಎಲ್ ಭಾರತ್ ಫೈಬರ್ ( 449 ರೂ.) ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌


    ಫೈಬರ್ ಬೇಸಿಕ್ ಪ್ಲ್ಯಾನ್‌ ಎಂದೂ ಕರೆಯಲ್ಪಡುವ ಈ ಯೋಜನೆಯು 3.3 ಟಿಬಿ ಅಥವಾ 3300 ಜಿಬಿ ಎಫ್‌ಯುಪಿ ಮಿತಿಯವರೆಗೆ 30 ಎಮ್‌ಬಿಪಿಎಸ್ ಸ್ಪೀಡ್‌ ಇಂಟರ್‌ನೆಟ್‌ ಅನ್ನು ನೀಡುತ್ತದೆ. ಎಫ್‌ಯುಪಿ ಮಿತಿ ಮೀರಿದರೆ 2 ಎಮ್‌ಬಿಪಿಎಸ್‌ಗೆ ಇಂಟರ್‌ನೆಟ್‌ನ ಸ್ಪೀಟ್‌ ಕುಸಿಯುತ್ತದೆ. ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಬಳಕೆದಾರರು ಭಾರತದೊಳಗಿನ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್‌ ವಾಯ್ಸ್ ಕಾಲ್‌ ಸೌಲಭ್ಯವನ್ನೂ ಪಡೆಯುತ್ತಾರೆ.


    2) ಬಿಎಸ್‌ಎನ್‌ಎಲ್ ಭಾರತ್ ಫೈಬರ್ (799 ರೂ.) ಬ್ರಾಡ್‌ಬ್ಯಾಂಡ್ ಯೋಜನೆ


    ಈ ಪ್ಲ್ಯಾನ್‌ ಪ್ರಕಾರ 3300 ಜಿಬಿ ಅಥವಾ 3.3 ಟಿಬಿ ಅಥವಾ 3300 ಜಿಬಿ ಡೇಟಾ ವರೆಗೆ 100 ಎಂಬಿಪಿಎಸ್ ಸ್ಪೀಡ್‌ ಅನ್ನು ನೀಡುತ್ತದೆ. ಎಫ್‌ಯುಪಿ ಮಿತಿಯನ್ನು ತಲುಪಿದ ನಂತರ, ಬ್ರಾಡ್‌ಬ್ಯಾಂಡ್‌ ಸ್ಪೀಡ್‌ ಅನ್ನು 2 ಎಮ್‌ಬಿಪಿಎಸ್‌ಗೆ ಇಳಿಸಲಾಗುತ್ತದೆ.


    3) ಬಿಎಸ್‌ಎನ್‌ಎಲ್ ಪ್ರೀಮಿಯಂ ಫೈಬರ್ (999 ರೂ.) ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌


    ಬಿಎಸ್‌ಎನ್‌ಎಲ್ ಫೈಬರ್ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಯೋಜನೆಯು 999 ರೂ.ಗೆ 200 ಎಮ್‌ಬಿಪಿಎಸ್ ವೇಗವನ್ನು 3300 ಜಿಬಿ ಅಥವಾ 3.3 ಟಿಬಿ ವರೆಗೆ ನೀಡುತ್ತದೆ, ನಂತರ 2 ಎಮ್‌ಬಿಪಿಎಸ್‌ ಸ್ಪೀಡ್‌ ಅನ್ನು ಈ ಪ್ಲ್ಯಾನ್‌ನಡಿ ಪಡೆದುಕೊಳ್ಳಬಹುದು. ಈ ಯೋಜನೆ ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಸದಸ್ಯತ್ವದೊಂದಿಗೆ ಬರುತ್ತದೆ.


    4) ಬಿಎಸ್‌ಎನ್‌ಎಲ್ ಅಲ್ಟ್ರಾ ಫೈಬರ್ (1499 ರೂ.) ಬ್ರಾಡ್‌ಬ್ಯಾಂಡ್ ಯೋಜನೆ


    ಬಿಎಸ್‌ಎನ್‌ಎಲ್‌ನ ಈ ಯೋಜನೆಯು 4 ಟಿಬಿ ಅಥವಾ 4000 ಜಿಬಿ ತಲುಪುವವರೆಗೆ 300 ಎಮ್‌ಬಿಪಿಎಸ್ ವೇಗದ ಇಂಟರ್‌ನೆಟ್‌ ಅನ್ನು ನೀಡುತ್ತದೆ. ಎಫ್‌ಯುಪಿ ಮಿತಿಯ ನಂತರ, 4 ಎಮ್‌ಬಿಪಿಎಸ್‌ ಸ್ಪೀಡ್‌ ನೀಡುತ್ತದೆ.ಈ ಯೋಜನೆಯು ದೇಶದ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್‌ ಕಾಲ್ ಪ್ರಯೋಜನಗಳನ್ನು ನೀಡುತ್ತದೆ. ಜತೆಗೆ ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಸದಸ್ಯತ್ವದೊಂದಿಗೆ ಬರುತ್ತದೆ.


    ಬಿಎಸ್‌ಎನ್‌ಎಲ್ ಆಯ್ದ ವಲಯಗಳಲ್ಲಿ ಈ ಪ್ಲ್ಯಾನ್‌ಗಳನ್ನು 90 ದಿನಗಳ ಪ್ರಮೋಷನಲ್‌ ಅವಧಿ ಮೂಲಕ ಇತರ ಕಂಪನಿಗಳಿಗೆ ಸ್ಪರ್ಧೆ ನೀಡಲಿದೆ.


    ಕೇರಳ ವಲಯಕ್ಕೆ ಪ್ರತ್ಯೇಕ ಪ್ಲ್ಯಾನ್‌ಗಳು..!


    ಬಿಎಸ್ಎನ್ಎಲ್ ಹೊಸ ಏರ್ ಫೈಬರ್ ಯೋಜನೆಗಳನ್ನು 30Mbps ನಿಂದ 70Mbps ವರೆಗಿನ ವೇಗದಲ್ಲಿ ಬಿಡುಗಡೆ ಮಾಡಿದೆ. ಈ ಪ್ಲ್ಯಾನ್‌ಗಳು 499 ರೂಗಳಿಂದ ಪ್ರಾರಂಭವಾಗುತ್ತವೆ ಮತ್ತು 3300GB ಡೇಟಾದವರೆಗೆ 30 Mbps ಡೌನ್‌ಲೋಡ್ ವೇಗವನ್ನು ನೀಡುತ್ತವೆ ಎಂದು ಕೇರಳ ಟೆಲಿಕಾಂ ಮಾಹಿತಿ ನೀಡಿದೆ.

    First published: