ಪ್ರತಿದಿನ 3GB ಡೇಟಾ, 1 ವರ್ಷದ ವ್ಯಾಲಿಡಿಟಿ; BSNL​ ಕಡಿಮೆ ಬೆಲೆಯ ಬೆಸ್ಟ್​ ಪ್ರಿಪೇಯ್ಡ್​ ಪ್ಲಾನ್​ಗಳು ಇಲ್ಲಿವೆ

BSNL Best Prepaid Plans: ಬಿಎಸ್​ಎನ್​ಎಲ್​ 500 ರೂ. ಒಳಗಿನ 2GB ಮತ್ತು 3GB ಡೇಟಾ ಒದಗಿಸುವ ಬೆಸ್ಟ್ ಪ್ಲಾನ್​ಗಳ ಮಾಹಿತಿ ಇಲ್ಲಿದೆ.

BSNL

BSNL

 • Share this:
  BSNL Prepaid Plans: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್  (BSNL) ಹಲವಾರು ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸುತ್ತಾ ಬಂದಿದೆ. ಕೆಲವು ಯೋಜನೆಗಳು ಖಾಸಗಿ ಟೆಲಿಕಾಂ ಕಂಪನಿಗಳು ಒದಗಿಸುವ ಯೋಜನೆಗಳಿಗಿಂತ ಭಿನ್ನವಾಗಿದ್ದು, ಗ್ರಾಹಕ ಸ್ನೇಹಿಯಾಗಿದೆ. ಅದರಂತೆ ಬಿಎಸ್​ಎನ್​ಎಲ್​ 500 ರೂ. ಒಳಗಿನ 2GB ಮತ್ತು 3GB ಡೇಟಾ ಒದಗಿಸುವ ಬೆಸ್ಟ್ ಪ್ಲಾನ್​ಗಳ ಮಾಹಿತಿ ಇಲ್ಲಿದೆ.

  BSNL 187 ರೂ.ವಿನ ಪ್ರಿಪೇಯ್ಡ್ ಪ್ಲಾನ್ ದೈನಂದಿನ ಬಳಕೆಗಾಗಿ 2GB ಡೇಟಾ, ಅನಿಯಮಿತ ಕರೆ ಆಯ್ಕೆಯನ್ನು ನೀಡುತ್ತಿದೆ ಮತ್ತು ದಿನಕ್ಕೆ 100 SMS ಗಳನ್ನು ನೀಡುತ್ತದೆ. ಈ ಪ್ಲಾನ್​ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

  BSNL ​199 ರೂ.ವಿನ ಪ್ರಿಪೇಯ್ಡ್ ಯೋಜನೆಯು 2GB ದೈನಂದಿನ ಡೇಟಾವನ್ನು ನೀಡುತ್ತದೆ. ಅನಿಯಮಿತ ಕರೆ ಪ್ರಯೋಜನಗಳ ಜೊತೆಗೆ 250 ನಿಮಿಷಗಳ ಎಫ್‌ಯುಪಿ ಮಿತಿ ಒದಗಿಸುತ್ತದೆ. ಈ ಯೋಜನೆಯು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

  BSNL  247 ರೂ.ವಿನ ಮತ್ತು 250 ರೂ.ವಿನ ಪ್ರಿಪೇಯ್ಡ್ ಪ್ಲಾನ್ಗಳು 3GB ದೈನಂದಿನ ಡೇಟಾವನ್ನು ಒದಗಿಸುತ್ತದೆ. ಜೊತೆಗೆ 250 ನಿಮಿಷಗಳ FUP ಮಿತಿಯೊಂದಿಗೆ ಅನಿಯಮಿತ ಕರೆಗಳೊಂದಿಗೆ ನೀಡುತ್ತದೆ. ಈ ಯೋಜನೆಯ ಮೂಲಕ ದಿನಕ್ಕೆ 100  SMS ನೀಡುವುದಲ್ಲದೆ, 40 ದಿನಗಳ ವ್ಯಾಲಿಡಿಟಿಯನ್ನುಹೊಂದಿದೆ.

  ಬಿಎಸ್​ಎನ್​ಎಲ್​ ವರ್ಕ್​ ಫ್ರಂ ಹೋಮ್​ ಮಾಡುವವರಿಗಾಗಿ 151 ರೂ ಮತ್ತು 251 ರೂ ಯೋಜನೆಗಳನೆ ಪರಿಚಯಿಸಿದೆ. ಇದರ ಮೂಲಕ 40GB ಮತ್ತು 70GB ಡೇಟಾವನ್ನು ನೀಡುತ್ತದೆ| ಇವೆರಡು ಪ್ಲಾನ್ಗಳು​ 28 ದಿನಗಳ ಮಾನ್ಯತೆಯನ್ನು ಹೊಂದಿವೆ.

  Read Also⇒ Xiaomi ಪ್ರಿಯರಿಗೆ ಶಾಕ್! ಕೆಲವು ಬಳಕೆದಾರರ ಸ್ಮಾರ್ಟ್​​ಫೋನ್​ಗಳಿಗೆ ನಿರ್ಬಂಧ!

  BSNL 365 ರೂ ಪ್ರಿಪೇಯ್ಡ್​ ಪ್ಲಾನ್​ ಅಳವಡಿಸಿದರೆ ಪ್ರತಿದಿನ 2GB ಡೇಟಾವನ್ನು ನೀಡುತ್ತದೆ. ಇದು ವಾರ್ಷಿಕ ಯೋಜನೆಯಾಗಿದ್ದು. ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಗಳು ಇದರಲ್ಲಿದೆ.  ಜೊತೆಗೆ ಲೋಕಧುನ್ ಮತ್ತು ಉಚಿತ ಕಾಲರ್ ಟ್ಯೂನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.

  BSNL 398 ರೂ ಯೋಜನೆಯು ಯಾವುದೇ ವೇಗ ನಿರ್ಬಂಧವಿಲ್ಲದೆ ಅನಿಯಮಿತ ಡೇಟಾವನ್ನು ನೀಡುತ್ತದೆ, ಜೊತೆಗೆ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಒದಗಿಸುತ್ತದೆ. ಈ ಪ್ಲಾನ್ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

  ಅಂತೆಯೇ BSNL 447 ರೂ.ವಿನ ಪ್ಲಾನ್​ ಮೂಲಕ ಅನಿಯಮಿತ ಧ್ವನಿ ಕರೆ ಮತ್ತು 60 ದಿನಗಳ ವ್ಯಾಲಿಡಿಟಿಯೊಂದಿಗೆ 100GB ಡೇಟಾವನ್ನು ನೀಡುತ್ತದೆ.

  ಏರ್​ಟೆಲ್ vs ಜಿಯೋ vs ವಿ ಪ್ರಿಪೇಯ್ಡ್ ಪ್ಲಾನ್​ಗಳು

  BSNL ತನ್ನ 500 ರೂ.ವಿನ ಪ್ರಿಪೇಯ್ಡ್​​ ಪ್ಲಾನ್​ನೊಂದಿಗೆ 365 ದಿನಗಳ ಗರಿಷ್ಠ ವ್ಯಾಲಿಡಿಟಿಯನ್ನು ನೀಡಿದರೆ, ಏರ್​ಟೆಲ್​, ಜಿಯೋ ಮತ್ತು ವಿ 500 ರೂ.ಗಳ ಅಡಿಯಲ್ಲಿ ತನ್ನ ಪ್ರಿಪೇಯ್ಡ್ ಪ್ಲಾನ್ ಗಳೊಂದಿಗೆ ಗರಿಷ್ಠ 56 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ.

  ಏರ್​ಟೆಲ್ 448 ರೂ ಪ್ರಿಪೇಯ್ಡ್ ಪ್ಲಾನ್  ಮೂಲಕ ದಿನಕ್ಕೆ 2GB ಡೇಟಾವನ್ನು ನೀಡುತ್ತದೆ ಜೊತೆಗೆ ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್ ಒದಗಿಸುತ್ತದೆ.  ಈ ಪ್ಲಾನ್​ 56 ದಿನಗಳ ವ್ಯಾಲಿಡಿಟಿಗೆ ಹೊಂದಿದೆ. ಹೆಚ್ಚುವರಿ ಪ್ರಯೋಜನಗಳೆಂದರೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಸಬ್‌ಸ್ಕ್ರಿಪ್ಶನ್ ಮತ್ತು ವಿಂಕ್ ಮ್ಯೂಸಿಕ್ ಉಚಿತ ಆನ್‌ಲೈನ್ ಕೋರ್ಸ್‌ಗಳು ಮತ್ತು ಫಾಸ್​ಟ್ಯಾಗ್‌ನಲ್ಲಿ 150 ರೂಪಾಯಿ ಕ್ಯಾಶ್‌ಬ್ಯಾಕ್ ಒದಗಿಸುತ್ತದೆ. ಇದಲ್ಲದೆ, ಈ ಯೋಜನೆಯು ಭಾರತಿ ಆಕ್ಸಾ ಜೀವ ವಿಮೆಗೆ ಪ್ರವೇಶವನ್ನು ನೀಡುತ್ತದೆ.

  Read Also⇒ BNPL scheme: ಈಗ ಖರೀದಿಸಿ ಮತ್ತು 3 ತಿಂಗಳ ನಂತರ ಯಾವುದೇ ಬಡ್ಡಿ ಇಲ್ಲದೆ ಪಾವತಿಸಿ!

  ರಿಲಯನ್ಸ್ ಜಿಯೋ ಕೂಡ 444ರೂ.ಗೆ ಮೇಲೆ ತಿಳಿಸಿದ ಏರ್​ಟೆಲ್​ನಂತೆಯೇ ಪ್ರಯೋಜನಗಳನ್ನು ನೀಡುತ್ತಿದೆ, ಅಂದರೆ ಇದು 56 ದಿನಗಳ ವ್ಯಾಲಿಡಿಟಿಗೆ 2GB ದೈನಂದಿನ ಡೇಟಾವನ್ನು ಮತ್ತು ಅನಿಯಮಿತ ದೇಶೀಯ ಕರೆಗಳನ್ನು ನೀಡುತ್ತದೆ. ಈ ಯೋಜನೆಯು ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯೊಂದಿಗೆ ದಿನಕ್ಕೆ 100 ಉಚಿತ SMS ಒದಗಿಸುತ್ತದೆ.

  Vi 449 ರೂ.ವಿನ ಪ್ರಿಪೇಯ್ಡ್ ಪ್ಲಾನ್ ಗಮನಿಸಿದರೆ ಇದು ಡಬಲ್ ಡೇಟಾ ಪ್ರಿಪೇಯ್ಡ್ ಪ್ಲಾನ್ ಆಗಿದೆ. ವಾರಾಂತ್ಯದ ರೋಲ್ಓವರ್ ಡೇಟಾ ಪ್ರಯೋಜನದೊಂದಿಗೆ 56 ದಿನಗಳ ವ್ಯಾಲಿಡಿಟಿ ಮತ್ತು 2 + 2 4GB ದೈನಂದಿನ ಡೇಟಾವನ್ನು ನೀಡುತ್ತದೆ.
  Published by:Harshith AS
  First published: