ಬಿಎಸ್​​ಎನ್​ಎಲ್​ ಬ್ರಾಡ್​ಬ್ಯಾಂಡ್​​ ಸೇವೆ; ದೈನಂದಿನ 100Mbps​ ವೇಗದ 33GB ಡೇಟಾ ಉಚಿತ..!

ರಿಲಾಯನ್ಸ್​ ಗಿಗಾ ಫೈಬರ್​ ಕಡಿಮೆ ಬೆಲೆಗೆ ವೇಗದ ಇಂಟರ್​ನೆಟ್​ ಸೇವೆಯನ್ನು ಒದಗಿಸುತ್ತಿದೆ. ಇದರಿಂದಾಗಿ ಉಳಿದ ಟೆಲಿಕಾಂ ಸೇವೆಯನ್ನು ಬಳಕೆ ಮಾಡುತ್ತಿರುವ ಜನರು ಗಿಗಾ ಫೈಬರ್​ ಮೊರೆ ಹೋಗುತ್ತಿದ್ದಾರೆ.

news18-kannada
Updated:September 9, 2019, 6:41 PM IST
ಬಿಎಸ್​​ಎನ್​ಎಲ್​ ಬ್ರಾಡ್​ಬ್ಯಾಂಡ್​​ ಸೇವೆ; ದೈನಂದಿನ 100Mbps​ ವೇಗದ 33GB ಡೇಟಾ ಉಚಿತ..!
ಬಿಎಸ್​ಎನ್​ಎಲ್
  • Share this:
ರಿಲಾಯನ್ಸ್ ಜಿಯೋ ಪರಿಚಯಿಸಿದ ಗಿಗಾ ಫೈಬರ್​ ಸೇವೆಗೆ ಸೆಡ್ಡು ಹೊಡೆಯುವ ಸಲುವಾಗಿ ಹಲವಾರು ಬ್ರಾಡ್​ಬ್ಯಾಂಡ್​ ಕಂಪೆನಿಗಳು ತನ್ನ ಸೇವೆಯ ದರವನ್ನು ಕಡಿತ ಮಾಡಿವೆ. ಇದೀಗ, ಸರ್ಕಾರಿ ಸ್ವಾಮ್ಯದ ಭಾರತ​ ಸಂಚಾರಿ ನಿಗಮ ಲಿಮಿಟೆಡ್​ (ಬಿಎಸ್​ಎನ್ಎಲ್​) ಕೂಡ ಬ್ರಾಡ್​ಬ್ಯಾಂಡ್​ ಸೇವೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದೆ.

ಬಿಎಸ್​ಎನ್​ಎಲ್​  1,999 ರೂ.ವಿನ ಬ್ರಾಡ್​ಬ್ಯಾಂಡ್​ ಪ್ಲಾನ್​ವೊಂದನ್ನು ಪರಿಚಯಿಸಿದ್ದು, 100Mbps​ ವೇಗದ ದೈನಂದಿನ 33GB ಡೇಟಾವನ್ನು ಉಚಿತವಾಗಿ ನೀಡುತ್ತಿದೆ. ಜೊತೆಗೆ ಅನ್​ಲಿಮಿಟೆಡ್​ ಕರೆಯನ್ನು ಒದಗಿಸುತ್ತಿದೆ. ಮಾತ್ರವಲ್ಲದೆ ದೇಶದಾದ್ಯಂತ ಲ್ಯಾಂಡ್​ಲೈನ್​​ ಸೇವೆಯನ್ನು ನೀಡುತ್ತಿದೆ.

ಇದನ್ನೂ ಓದಿ: ರಾಜ್ಯ ಪೊಲೀಸರಿಗೆ ದಸರಾಗೆ ಭರ್ಜರಿ ಉಡುಗೊರೆ; ಮುಂದಿನ ತಿಂಗಳಿಂದ ಔರಾದ್ಕರ್​ ಸಮಿತಿಯಂತೆ ವೇತನ

ರಿಲಾಯನ್ಸ್​ ಗಿಗಾ ಫೈಬರ್​ ಕಡಿಮೆ ಬೆಲೆಗೆ ವೇಗದ ಇಂಟರ್​ನೆಟ್​ ಸೇವೆಯನ್ನು ಒದಗಿಸುತ್ತಿದೆ. ಇದರಿಂದಾಗಿ ಉಳಿದ ಟೆಲಿಕಾಂ ಸೇವೆಯನ್ನು ಬಳಕೆ ಮಾಡುತ್ತಿರುವ ಜನರು ಗಿಗಾ ಫೈಬರ್​ ಮೊರೆ ಹೋಗುತ್ತಿದ್ದಾರೆ. ಅನೇಕ ಕಂಪೆನಿಗಳು ವಲಸೆ ಹೋಗುತ್ತಿರುವ ಜನರನ್ನು ಹಿಡಿದಿಟ್ಟುಕೊಳ್ಳಲು ತಮ್ಮ ಬ್ರಾಡ್​ಬ್ಯಾಂಡ್​ ಪ್ಲಾನ್​ನಲ್ಲಿ ಬದಲಾವಣೆಯನ್ನು ಮಾಡುತ್ತಿದೆ. ಇದೀಗ ಬಿಎಸ್​ಎನ್​ಎಲ್​ ಕೂಡ ತನ್ನ ಬ್ರಾಡ್​ಬ್ಯಾಂಡ್​ ಪ್ಲಾನ್​ ಅನ್ನು ಬದಲಾವಣೆ ಮಾಡಿದೆ.

 
First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ