BSNL: ಬಿಎಸ್​ಎನ್​ಎಲ್​ ಪ್ರಿಪೇಯ್ಡ್ ಪ್ಲಾನ್​; 2GB ಡೇಟಾ ಜೊತೆಗೆ ಒಂದು ವರ್ಷ ವ್ಯಾಲಿಡಿಟಿ!

ಬಿಎಸ್​​ಎನ್​ಎಲ್

ಬಿಎಸ್​​ಎನ್​ಎಲ್

 • Share this:
  ಬಿಎಸ್​​ಎನ್​ಎಲ್​​ ರಾಜ್ಯದ ಜನತೆಗೆ ಹೊಸ ಪ್ರಿಪೇಯ್ಡ್ ಪ್ಲಾನ್​​​ ಅನ್ನು ಪರಿಚಯಿಸಿದೆ. ನೂತನ ಪ್ಲಾನ್​​ 365 ರೂಪಾಯಿಯದ್ದಾಗಿದ್ದು, ಒಂದು ವರ್ಷದ ವ್ಯಾಲಿಡಿಟಿಯನ್ನು ನೀಡುತ್ತಿದೆ.

  ಬಿಎಸ್​ಎನ್​ಎಲ್​ ಪರಿಚಯಿಸಿರುವ 365 ರೂಪಾಯಿಯ ಪ್ಲಾನ್​ ಕರ್ನಾಟಕ ಸೇರಿದಂತೆ ಇತರೆ ರಾಜ್ಯದ ಜನತೆಗೆ ಬಳಕೆಗೆ ಸಿಗಲಿದೆ. ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದಿರುವ ಈ ಪ್ಲಾನ್​​ನಲ್ಲಿ 250 ನಿಮಿಷಗಳ ಲೋಕಲ್​​ ಮತ್ತು ಎಸ್​ಟಿಡಿ ವಾಯ್ಸ್​ ಕರೆ ಸೌಲಭ್ಯ ನೀಡುತ್ತಿದೆ. ಆದರೆ 60 ದಿನಗಳ ಅವಧಿಯವರೆಗೆ ಈ ಸೌಲಭ್ಯ ಸಿಗಲಿದೆ.

  ಜೊತೆಗೆ 60 ದಿನಗಳವರೆಗೆ 2GB ಡೇಟಾ, ಉಚಿತ ಕಾಲರ್​ ಟ್ಯೂನ್​ ಸಿಗಲಿದೆ. ಅಷ್ಟೇ ಅಲ್ಲದೆ, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತವಾಗಿ ಸಿಗಲಿದೆ. ಸದ್ಯ ಈ ಪ್ಲಾನ್​​ ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ಸಹಿತ ವಿವಿಧ ಟೆಲಿಕಾಂ ಸರ್ಕಲ್​​ನಲ್ಲಿ ದೊರೆಯುತ್ತಿದೆ.

  360 ರೂಪಾಯಿಯ ಈ ಪ್ಲಿಪ್ರೇಯ್ಡ್​ ಅಳವಡಿಸಿಕೊಂಡ ಗ್ರಾಹಕರಿಗೆ ಮೊದಲ 60 ದಿನಗಳವರೆಗೆ ಉಚಿತ ಕೊಡುಗೆಗಳು ಸಿಗಲಿದೆ. ಆನಂತರ ಡೇಟಾ ಮತ್ತು ವಾಯ್ಸ್​​ ಕರೆಗೆ ರೀಚಾರ್ಜ್ ಮಾಡಬೇಕಿದೆ.

  Rani Rampal: ‘ಖೇಲ್​ ರತ್ನ‘ ಪ್ರಶಸ್ತಿಗೆ ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್​ ನಾಮನಿರ್ದೇಶನ
  First published: