ಕೇವಲ 99ರೂ.ಗೆ 20Mbp ಸ್ಪೀಡ್​ವರೆಗೂ ಇಂಟರ್​ನೆಟ್​ ಸೇವೆಗೆ ಮುಂದಾದ ಬಿಎಸ್​ಎನ್​ಎಲ್​


Updated:June 8, 2018, 2:19 PM IST
ಕೇವಲ 99ರೂ.ಗೆ 20Mbp ಸ್ಪೀಡ್​ವರೆಗೂ ಇಂಟರ್​ನೆಟ್​ ಸೇವೆಗೆ ಮುಂದಾದ ಬಿಎಸ್​ಎನ್​ಎಲ್​

Updated: June 8, 2018, 2:19 PM IST
ನವದೆಹಲಿ: ಜಿಯೋ ಫೈಬರ್​ ಬ್ರಾಡ್​ಬ್ಯಾಂಡ್​ಗೆ ಟಕ್ಕರ್​ ನೀಡಲು ಮುಂದಾಗಿರುವ ಬಿಎಸ್ಎನ್ಎಲ್ ಜಿಯೋಗಿಂತಲೂ ಅಗ್ಗದ ಯೋಜನೆಯೊಂದನ್ನು ಸಿದ್ಧಪಡಿಸಿದ್ದು ಗ್ರಾಹಕರಿಗೆ 20 ಎಂಬಿಪಿಎಸ್ ವೇಗದ ಇಂಟರ್ನೆಟ್ ನೀಡಲು ತೀರ್ಮಾನಿಸಿದೆ. ಈ ಸೇವೆಗಳು ಕೇವಲ ರೂ.99ರಿಂದ ಆರಂಭವಾಗಲಿದೆ.

ಆರು ತಿಂಗಳ ಅವಧಿಗೆ FTTH ಪ್ಲಾನ್​ನ್ನು ಪರಿಚಯಿಸಿರುವ ಬಿಎಸ್​ಎನ್​ಎಲ್​ 99 ರೂ.ನಿಂದ 399ರೂ ವರೆಗಿನ ಪ್ಲಾನ್​ಗಳನ್ನು ಪರಿಚಯಿಸಿದೆ. ಈ ಪ್ಲಾನ್​ಗಳಿಗೆ ಅನುಗುಣ ವಾಗಿ ತಿಂಗಳು 45 ಜಿಬಿಯಿಂದ ಹಿಡಿದು 600 ಜಿಬಿಯವರೆಗೆ ಡೇಟಾ ಸಿಗಲಿದೆ.ಅತಿ ಕಡಿಮೆ ವೆಚ್ಚದ 99 ರೂಪಾಯಿ ಪ್ಲಾನ್ ನಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ ಜೊತೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ.

90 ದಿನದ ಬಳಿಕ ಗ್ರಾಹಕರು ಹೊಸ ಪ್ಲಾನ್​ನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರೊಂದಿಗೆ ಬಿಎಸ್​ಎನ್​ಎಲ್​ನಿಂದ ಬಿಎಸ್​ಎನ್​ಎಲ್​ ಮತ್ತು ಇತರೇ ನಿಟ್​ವರ್ಕ್​ಗಳಿಗೆ ಉಚಿತ ವಾಯ್ಸ್​ ಕಾಲ್​ ಸೇವೆ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
First published:June 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...