BSNL: ಬಿಎಸ್​ಎನ್​​ಎಲ್ ಪರಿಚಯಿಸಿದೆ​ 2 ರೂಪಾಯಿ ಹೊಸ ಪ್ಲಾನ್​!; ಇಲ್ಲಿದೆ ಮಾಹಿತಿ

BSNL Plan Extension Offer: ಬಿಎಸ್​​ಎನ್​ಎಲ್​ ಪರಿಚಯಿಸಿರುವ 2 ರುಪಾಯಿಯ ಪ್ಲಾನ್​  3 ದಿನಗಳ ವ್ಯಾಲಿಡಿಟಿ ಹೊಂದಿದೆ. ಆದರೆ ಬೇರೆ ಯಾವುದೇ ಆಫರ್​ ಇದರಲ್ಲಿ ಸಿಗುವುದಿಲ್ಲ ಎಂದು ಬಿಎಸ್​ಎನ್ಎಲ್​ ಹೇಳಿದೆ.

news18
Updated:June 1, 2020, 2:42 PM IST
BSNL: ಬಿಎಸ್​ಎನ್​​ಎಲ್ ಪರಿಚಯಿಸಿದೆ​ 2 ರೂಪಾಯಿ ಹೊಸ ಪ್ಲಾನ್​!; ಇಲ್ಲಿದೆ ಮಾಹಿತಿ
ಬಿಎಸ್​​ಎನ್​ಎಲ್
  • News18
  • Last Updated: June 1, 2020, 2:42 PM IST
  • Share this:
ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್​ ಸಂಸ್ಥೆ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ ಪ್ಲಾನ್​​ಗಳನ್ನು ಪರಿಚಯಿಸುತ್ತಾ ಬಂದಿದೆ. ಲಾಕ್​​ಡೌನ್​ ಅವಧಿಯಲ್ಲಿ ವಿಶೇಷ ಕೊಡುಗಡೆಗಳನ್ನು ನೀಡಿದೆ. ಅಷ್ಟು ಮಾತ್ರವಲ್ಲದೆ, ವ್ಯಾಲಿಡಿಟಿ ವಿಸ್ತರಣೆಯನ್ನು ಮಾಡಿದೆ. ಆದರೀಗ 2 ರೂಪಾಯಿಗೆ ಯೋಜನೆ ವಿಸ್ತರಣೆ ಮಾಡುವ ಪ್ಲಾನ್​ ಅನ್ನು ಪರಿಚಯಿಸಿದೆ.

ಬಿಎಸ್​​ಎನ್​ಎಲ್​ ಪರಿಚಯಿಸಿರುವ 2 ರುಪಾಯಿಯ ಪ್ಲಾನ್​  3 ದಿನಗಳ ವ್ಯಾಲಿಡಿಟಿ ಹೊಂದಿದೆ. ಆದರೆ ಬೇರೆ ಯಾವುದೇ ಆಫರ್​ ಇದರಲ್ಲಿ ಸಿಗುವುದಿಲ್ಲ ಎಂದು ಬಿಎಸ್​ಎನ್ಎಲ್​ ಹೇಳಿದೆ. ಗ್ರಾಹಕರು ಈಗಾಗಲೇ  ಪ್ಲಾನ್​​ವೊಂದನ್ನು ಅಳವಡಿಸಿಕೊಂಡಿದ್ದು, ಆ ಪ್ಲಾನ್​ ಸಿಂಧುತ್ವ ಮುಗಿದರೆ ತಕ್ಷಣ 2 ರೂಪಾಯಿ ನೂತನ ಪ್ಲಾನ್​ ಅಳವಡಿಸುವುದರ ಮೂಲಕ ಯೋಜನೆ ವಿಸ್ತರಣೆ ಮಾಡಬಹುದಾಗಿದೆ. ತಮಿಳುನಾಡು  ಬಿಎಸ್​ಎನ್​ಎಲ್​ ಸರ್ಕಲ್​ ಈ ಆಫರ್​ ಅನ್ನು ಹೊರಡಿಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಈ ಆಫರ್​​ ಅನ್ನು ಪರಿಚಯಿಸುವತ್ತ ಬಿಎಸ್​​ಎನ್​​ಎಲ್​ ಚಿಂತನೆ ಮಾಡಿದೆ.

19 ರೂಪಾಯಿ ಪ್ರಿಪೇಯ್ಡ್​ ಪ್ಲಾನ್​:

ಬಿಎಸ್ಎನ್​​​ಎಲ್​ 19 ರೂಪಾಯಿಯ ಯೋಜನೆ ವಿಸ್ತರಣೆ ಪ್ಲಾನ್​ ಅನ್ನು ಈ ಹಿಂದೆಯೇ ಪರಿಚಯಿಸಿತ್ತು. ಈ ಪ್ಲಾನ್​ 30 ದಿನಗಳ ವ್ಯಾಲಿಡಿಡಿಯನ್ನು ಹೊಂದಿದೆ. ಪ್ರಿಪೇಯ್ಡ್​ ಬಳಕೆದಾರರಿಗೆ ಈ ಪ್ಲಾನ್​ ಸಹಕಾರಿಯಾಗಲಿದೆ.

2,399 ರೂಪಾಯಿ ಪ್ಲಾನ್​:

ಇತ್ತೀಚೆಗೆ ಬಿಎಸ್​ಎನ್​ಎಲ್​​ 2,399 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ ಅನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್​​ ಅಳವಡಿಸಿಕೊಂಡ ಗ್ರಾಹಕರಿಗೆ ದಿನಕ್ಕೆ 250 ನಿಮಿಷಗಳ ಅನಿಯಮಿತ ಕರೆ  ಸೌಲಭ್ಯ, 100 ಎಸ್ಎಮ್​ಎಸ್​​ ಉಚಿತವಾಗಿ ನೀಡುತ್ತಿದೆ. 600 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

Remove China Apps: ಚೀನಾಗೆ ಬುದ್ಧಿ ಕಲಿಸಿದ ಭಾರತ; 10 ದಿನದಲ್ಲಿ10 ಲಕ್ಷ ಡೌನ್​ಲೋಡ್​ ಆದ ‘ರಿಮೂವ್​ ಚೀನಾ ಆ್ಯಪ್​​​‘
First published: June 1, 2020, 2:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading