499 ರೂಪಾಯಿಗೆ ಫೀಚರ್ ಫೋನ್ ಪ್ರಸ್ತುತಪಡಿಸಿದ BSNL, ಜೊತೆಗೆ ಸಿಗುತ್ತಿದೆ ಈ ಆಫರ್!


Updated:December 29, 2017, 5:28 PM IST
499 ರೂಪಾಯಿಗೆ ಫೀಚರ್ ಫೋನ್ ಪ್ರಸ್ತುತಪಡಿಸಿದ BSNL, ಜೊತೆಗೆ ಸಿಗುತ್ತಿದೆ ಈ ಆಫರ್!
1.44 ಇಂಚಿನ ಮೋನೋ ಕ್ರೋಮ್ ಡಿಸ್ಪ್ಲೇ ಹೊಂದಿರುವ detel d1

Updated: December 29, 2017, 5:28 PM IST
BSNL 499 ರೂಪಾಯಿಗೆ ಡಿಟೆಲ್ ಡಿ1 ಎಂಬ ಫೀಚರ್ ಫೋನ್​ ಒಂದನ್ನು ಪ್ರಸ್ತುತಪಡಿಸುತ್ತಿದೆ, ಡಿಟೆಲ್ ಮೊಬೈಲ್ ಸಹಭಾಗಿತ್ವದಲ್ಲಿ BSNL ಈ ಫೋನ್​ ಬಿಡುಗಡೆ ಮಾಡಿದೆ. 'ಭಾರತ ಸಂಚಾರ ನಿಗಮ ನಿಯಮಿತ' ಸರ್ಕಾರಿ ಟೆಲಿಕಾಂ ಕಂಪೆನಿಯಾಗಿದ್ದು, ಸದ್ಯ ಪ್ರಸ್ತುತಪಡಿಸಿರುವ ಈ ಫೋನ್ ಈವರೆಗಿನ ಅತ್ಯಂತ ಕಡಿಮೆ ಬೆಲೆಯ ಫೋನ್ ಎಂದು ಹೇಳಲಾಗುತ್ತಿದೆ.

ಈ ಫೋನ್ ಖರೀದಿಸುವ ಗ್ರಾಹಕರಿಗೆ ಇದರೊಂದಿಗೆ BSNL ಸಿಮ್ ಕೂಡಾ ನೀಡಲಾಗುತ್ತಿದ್ದು, ಮೊದಲ ರೀಚಾರ್ಜ್ ವ್ಯಾಲಿಡಿಟಿ 365ದಿನಗಳವರೆಗೆ ಇರಲಿದೆ. ಬಳಕೆದಾರರಿಗೆ 103 ರೂಪಾಯಿ ಟಾಕ್ ಟೈಂ ನೀಡಲಾಗುತ್ತಿದೆ. ಅಲ್ಲದೇ BSNL ನಿಂದ BSNL ಕಾಲ್ ದರ ಪ್ರತಿ ನಿಮಿಷಕ್ಕೆ 15 ಪೈಸೆ ಹಾಗೂ BSNL ನಿಂದ ಇತರ ನೆಟ್ವರ್ಕ್​ಗಳಿಗೆ ಪ್ರತಿ ನಿಮಿಷಕ್ಕೆ 40 ಪೈಸೆ ಇರಲಿದೆ.

ಡಿಟೆಲ್ ಡಿ1(Detel D1) ಫೀಚರ್ ಫೋನ್​ನ ಫೀಚರ್ಸ್ ಹೀಗಿವೆ:

Detel D1 ಫೀಚರ್ ಫೋನ್​ನಲ್ಲಿ 1.44 ಇಂಚಿನ ಮೋನೋ ಕ್ರೋಮ್ ಡಿಸ್ಪ್ಲೇ ನೀಡಲಾಗಿದೆ. ಈ ಫೋನ್​ 650mah ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಸಿಂಗಲ್ ಸಿಮ್ ಸಪೋರ್ಟ್ ಮಾಡುತ್ತದೆ. ಪೋನ್​ನಲ್ಲಿ ಟಾರ್ಚ್​ ಲೈಟ್, ಫೋನ್​ ಬುಕ್, ಎಮ್​ಎಮ್​ ರೇಡಿಯೋ, ಸ್ಪೀಕರ್ ಹಾಗೂ ವೈಬ್ರೇಷನ್ ಮೋಡ್ ಫೀಚರ್ಸ್ ಕೂಡಾ ಇದರಲ್ಲಿವೆ. ಈ ಮೊದಲು BSNL, ಮೈಕ್ರೋಮ್ಯಾಕ್ಸ್​ನ ಸಹಭಾಗಿತ್ವದಲ್ಲಿ 'ಭಾರತ್ 1' ಎಂಬ 4G ಪೀಚರ್ ಫೋನ್ ಕೂಡಾ ಪ್ರಸ್ತುತಪಡಿಸಿದ್ದು, ಇದು 2200 ರೂಪಾಯಿ ಬೆಲೆಯದ್ದಾಗಿತ್ತು.
First published:December 29, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ