• Home
  • »
  • News
  • »
  • tech
  • »
  • BSNL Data Plans: ಬಿಎಸ್​ಎನ್​ಎಲ್​ನಿಂದ ಹೊಸ ಆಫರ್; 199 ರೂ. ರೀಚಾರ್ಜ್ ಮಾಡಿದರೆ ದಿನಕ್ಕೆ 2 ಜಿಬಿ ಡೇಟಾ ಉಚಿತ!

BSNL Data Plans: ಬಿಎಸ್​ಎನ್​ಎಲ್​ನಿಂದ ಹೊಸ ಆಫರ್; 199 ರೂ. ರೀಚಾರ್ಜ್ ಮಾಡಿದರೆ ದಿನಕ್ಕೆ 2 ಜಿಬಿ ಡೇಟಾ ಉಚಿತ!

ಬಿಎಸ್​ಎನ್​ಎಲ್

ಬಿಎಸ್​ಎನ್​ಎಲ್

BSNL Recharge Plans: ಬಿಎಸ್​ಎನ್​ಎಲ್​ನಿಂದ 30 ದಿನಗಳಿಗೆ 199 ರೂ.ಗಳ ಹೊಸ ಪ್ರೀಪೇಯ್ಡ್​ ಪ್ಲಾನ್​ ಪರಿಚಯಿಸಲಾಗಿದೆ. ಈ ಪ್ಲಾನ್​ ರೀಚಾರ್ಜ್ ಮಾಡಿಕೊಂಡರೆ ದಿನಕ್ಕೆ 2ಜಿಬಿ ಡೇಟಾ ಹಾಗೂ ಅನ್​ಲಿಮಿಟೆಡ್ ಟಾಕ್​ಟೈಮ್ ಕೂಡ ಸಿಗಲಿದೆ.

  • Share this:

ಏರ್​ಟೆಲ್, ಜಿಯೋ, ವೊಡಾಫೋನ್ ಅಬ್ಬರ ಹೆಚ್ಚಾಗಿದ್ದರಿಂದ ಮತ್ತು ಉತ್ತಮ ನೆಟ್​ವರ್ಕ್ ಸೇವೆ ನೀಡುತ್ತಿರುವುದರಿಂದ ಬಿಎಸ್​ಎನ್​ಎಲ್ ಗ್ರಾಹಕರು ಬೇರೆ ನೆಟ್​ವರ್ಕ್​ಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ, ಮತ್ತೆ ತನ್ನತ್ತ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಿರುವ ಬಿಎಸ್​ಎನ್​ಎಲ್​ ಆಕರ್ಷಕ ಡೇಟಾ ಪ್ಯಾಕ್​ಗಳನ್ನು ಪರಿಚಯಿಸುತ್ತಿದೆ. ಬಿಎಸ್​ಎನ್​ಎಲ್​ನಿಂದ 30 ದಿನಗಳಿಗೆ 199 ರೂ.ಗಳ ಹೊಸ ಪ್ರೀಪೇಯ್ಡ್​ ಪ್ಲಾನ್​ ಪರಿಚಯಿಸಲಾಗಿದೆ. ಈ ಪ್ಲಾನ್​ ರೀಚಾರ್ಜ್ ಮಾಡಿಕೊಂಡರೆ ದಿನಕ್ಕೆ 2ಜಿಬಿ ಡೇಟಾ ಹಾಗೂ ಅನ್​ಲಿಮಿಟೆಡ್ ಟಾಕ್​ಟೈಮ್ ಕೂಡ ಸಿಗಲಿದೆ. ಈ ಅನ್​ಲಿಮಿಟೆಡ್ ಫ್ರೀ ಟಾಕ್​ಟೈಮ್ ಪ್ಲಾನ್​ ಬಿಎಸ್​ಎನ್​ಎಲ್ ಮಾತ್ರವಲ್ಲದೆ ಎಲ್ಲ ನೆಟ್​ವರ್ಕ್​ಗೂ ಅನ್ವಯವಾಗಲಿದೆ. ಆದರೆ, ದಿನಕ್ಕೆ 250 ನಿಮಿಷ ಮಾತ್ರ ನೀವು ಫ್ರೀ ಆಗಿ ಮಾತನಾಡಲು ಸಾಧ್ಯವಾಗುತ್ತದೆ. ಜೊತೆಗೆ ದಿನಕ್ಕೆ 100 ಉಚಿತ ಎಸ್​ಎಂಎಸ್​ ಸೌಲಭ್ಯವೂ ಇರಲಿದೆ.


ಬಿಎಸ್​ಎನ್​ಎಲ್​ನಲ್ಲಿ ಈಗಿರುವ 186 ರೂ.ಗಳ ಪ್ಲಾನ್​ ಬದಲಾಗಿ ಅಪ್​ಡೇಟ್ ಮಾಡಲಾದ 199 ರೂ. ಪ್ಲಾನ್​ ಪರಿಚಯಿಸಲಾಗಿದೆ. ಪಿವಿ 186 ಪ್ಲಾನ್​ ಜನವರಿ 1ರಿಂದ ಬಿಎಸ್​ಎನ್​ಎಲ್​ ಗ್ರಾಹಕರಿಗೆ ಲಭ್ಯವಿರುವುದಿಲ್ಲ. 199 ರೂ.ಗಳ ಹೊಸ ಪ್ಲಾನ್​ ಕ್ರಿಸ್​ಮಸ್​ ಪ್ರಯುಕ್ತ ಡಿ. 24ರಿಂದ ದೇಶಾದ್ಯಂತ ಎಲ್ಲ ಬಿಎಸ್​ಎನ್​ಎಲ್​ ಗ್ರಾಹಕರಿಗೂ ಲಭ್ಯವಾಗಲಿದೆ. ಹಾಗಿದ್ದರೆ ಬೇರೆ ನೆಟ್​ವರ್ಕ್​ಗಳಲ್ಲಿ ಯಾವ ಪ್ಲಾನ್​ಗಳಿವೆ ಎಂಬುದನ್ನು ನೋಡೋಣ...


BSNL​ v/s JIO:
ಬಿಎಸ್​ಎನ್​ಎಲ್​ 199 ರೂ. ಪ್ಲಾನ್​ ರೀತಿಯಲ್ಲೇ ಜಿಯೋದಿಂದಲೂ 249 ರೂ.ಗೆ ದಿನಕ್ಕೆ 2 ಜಿಬಿ ಡೇಟಾ ಇರುವ ಪ್ಲಾನ್​ ಚಾಲ್ತಿಯಲ್ಲಿದೆ. ದಿನಕ್ಕೆ 2 ಜಿಬಿ ಡೇಟಾ ಬಳಸುವವರಿಗೆ ಜಿಯೋದಲ್ಲಿರುವ ಅತ್ಯಂತ ಕಡಿಮೆ ಮೊತ್ತದ ಪ್ಲಾನ್​ ಇದಾಗಿದೆ. ಈ ಪ್ಲಾನ್​ 28 ದಿನಗಳ ಅವಧಿಯದ್ದಾಗಿದೆ. ಇದರ ಜೊತೆಗೆ ಜಿಯೋದಿಂದ ಜಿಯೋಗೆ ಅನ್​ಲಿಮಿಟೆಡ್ ಕಾಲ್ ಸೌಲಭ್ಯ ಸಿಗಲಿದೆ. ಹಾಗೇ, ಜಿಯೋದಿಂದ ಬೇರೆ ನೆಟ್​ವರ್ಕ್​ಗೆ 1,000 ನಿಮಿಷಗಳ ಫ್ರೀ ಕಾಲ್ ಕೂಡ ಸಿಗಲಿದೆ. ಜೊತೆಗೆ ದಿನಕ್ಕೆ 100 ಎಸ್​ಎಂಎಸ್, ಜಿಯೋ ಆ್ಯಪ್ ಸೌಲಭ್ಯ ಕೂಡ ಸಿಗಲಿದೆ.


BSNL v/s Airtel:
ಏರ್​ಟೆಲ್​ನಲ್ಲಿ ದಿನಕ್ಕೆ 2 ಜಿಬಿ ಡೇಟಾ ಸೌಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ಪ್ಲಾನ್ ಎಂದರೆ 298 ರೂ.ನದ್ದು. ಈ ಪ್ಲಾನ್​ 28 ದಿನಗಳ ಅವಧಿಯದ್ದಾಗಿದೆ. ದಿನಕ್ಕೆ 2 ಜಿಬಿ ಡೇಟಾ, ಅನ್​ಲಿಮಿಟೆಡ್ ಕಾಲ್, ಏರ್​ಟೆಲ್ ಎಕ್ಸ್​ಟ್ರೀಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್ ಕೂಡ ಸಿಗಲಿದೆ. ಇದರ ಜೊತೆಗೆ ಈ ಪ್ಲಾನ್​ ಬಳಸುವ ಫಾಸ್ಟ್​ಟ್ಯಾಗ್​ ಬಳಕೆದಾರರಿಗೆ 100 ರೂ. ಕ್ಯಾಶ್​ಬ್ಯಾಕ್ ಕೂಡ ಸಿಗಲಿದೆ!


ಜಿಯೋ, ಏರ್​ಟೆಲ್ ನಡುವೆ ಸಿಲುಕಿರುವ ಬಿಎಸ್​ಎನ್​ಎಲ್​ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಇದರ ನೆಟ್​ವರ್ಕ್ ಸಮಸ್ಯೆಯಿಂದಾಗಿ ಬಹುತೇಕ ಗ್ರಾಹಕರು ಬೇರೆ ನೆಟ್​ವರ್ಕ್​ಗೆ ಪೋರ್ಟ್​ ಮಾಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಹೊಸ ಪ್ಲಾನ್​ಗಳನ್ನು ಬಿಎಸ್​ಎನ್​ಎಲ್ ಪರಿಚಯಿಸುತ್ತಿದೆ.

Published by:Sushma Chakre
First published: