ಟೆಲಿಕಾಂ ಕಂಪನಿಗಳು (Telecom Company) ತನ್ನ ರೀಚಾರ್ಜ್ ಆಫರ್ಸ್ (Recharge Offers) ಮೂಲಕವೇ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ. ಆದರೆ ಟೆಲಿಕಾಂ ಕಂಪನಿಗಳಲ್ಲಿ ಜಿಯೋ, ಏರ್ಟೆಲ್, ವೊಡಫೋನ್ ಐಡಿಯಾ ಈ ರೀತಿಯ ಹಲವಾರು ಖಾಸಗಿ ಕಂಪನಿಗಳಿವೆ. ಆದರೆ ಇವೆಲ್ಲದಕ್ಕೆ ಪೈಪೋಟಿ ನೀಡುವಂತಹ ಸರ್ಕಾರಿ ಕಂಪನಿಯೆಂದರೆ ಬಿಎಸ್ಎನ್ಎಲ್ ಕಂಪನಿ (BSNL Company). ಇದು ಒಂದು ಸರ್ಕಾರಿ ಕಂಪನಿಯಾಗಿದ್ದು. ಎಷ್ಟೇ ಹೊಸ ಕಂಪನಿಗಳು ಮಾರುಕಟ್ಟೆಗೆ ಕಾಲಿಟ್ಟರು ಈ ಕಂಪನಿಯ ಗ್ರಾಹಕರು ಹಾಗೇ ಇದ್ದಾರೆ. ಹಿಂದಿನಿಂದಲೂ ಭಾರೀ ಜನಪ್ರಿಯತೆಯನ್ನು ಪಡೆದ ಟೆಲಿಕಾಂ ಕಂಪನಿಯೆಂದರೆ ಅದು ಬಿಎಸ್ಎನ್ಎಲ್ ಅಂತಾನೇ ಹೇಳ್ಬಹುದು. ಇದರ ರೀಚಾರ್ಜ್ ಬೆಲೆಗಳು ಕೂಡ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿರುವುದರಿಂದ ಇದು ಇನ್ನಷ್ಟು ಜನಪ್ರಿಯತೆಯನ್ನು ಪಡೆದಿದೆ.
ಇದೀಗ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ಸ್ ಅನ್ನು ಘೋಷಿಸಿದೆ. ಭಾರತ ಸಂಚಾರ ನಿಗಮ ಲಿಮಿಟೆಡ್ ತನ್ನ ಬ್ರಾಡ್ಬ್ಯಾಂಡ್ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆಯನ್ನು ಘೋಷಿಸಿದೆ. ಈ ಮೂಲಕ ಅವರು ವರ್ಷಕ್ಕೆ ಬರೋಬ್ಬರಿ 1200 ರೂ. ಗಳನ್ನು ಉಳಿಸಬಹುದಾಗಿದೆ.
ಬ್ರಾಂಡ್ಬ್ಯಾಂಡ್ ಗ್ರಾಹಕರಿಗಾಗಿ ಆಫರ್ಸ್ ಬಿಡುಗಡೆ
ಬಿಎಸ್ಎನ್ಎಲ್ ಟೆಲಿಕಾಂ ಕಂಪನಿ ಬಿಡುಗಡೆ ಮಾಡಿರುವ ಈ ವರ್ಷದ ರೀಚಾರ್ಜ್ ಆಫರ್ ಬಿಎಸ್ಎನ್ಎಲ್ ಫೈಬರ್ ಇಂಟರ್ನೆಟ್ ಸೇವೆ ಪಡೆಯುವವರಿಗೆ ಸಂಭಂಧಿಸಿದೆ. ಇದು ಡಿಜಿಟಲ್ ಚಂದಾದಾರಿಕೆ ಲೈನ್ (ಢಿಎಸ್ಎಲ್) ನೆಟ್ವರ್ಕ್ ಅನ್ನು ಹೊಂದಿದವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಜಿಯೋ ಜೊತೆ ಪಾಲುದಾರಿಕೆ ಮಾಡಿಕೊಂಡ ಶಿಯೋಮಿ ಕಂಪನಿ! ಕಾರಣವೇನು ಗೊತ್ತಾ?
ಈ ಆಫರ್ಸ್ನ ಮುಖ್ಯ ಉದ್ದೇಶವೆಂದರೆ ಇದುವರೆಗೂ ಹೆಚ್ಚಿನ ಜನರು ಬಿಎಸ್ಎನ್ಎಲ್ನ ಡಿಎಸ್ಎಲ್ ನೆಟ್ವರ್ಕ್ ಸೇವೆಗಳನ್ನೇ ಬಳಸುವ ಚಂದಾದಾರರೂ ಹೆಚ್ಚಾಗಿದ್ದಾರೆ, ಆದರೆ ಬಿಎಸ್ಎನ್ಎಲ್ ಫೈಬರ್ ನೆಟ್ವರ್ಕ್ ಸೇವೆಯನ್ನು ಯಾರೂ ಬಳಸುತ್ತಿಲ್ಲ. ಆದ್ದರಿಂದ ಫೈಬರ್ ನೆಟ್ವರ್ಕ್ ಸೇವೆಗೆ ಚಂದಾದಾರರನ್ನು ಹೆಚ್ಚಿಸುವ ಕಾರಣಕ್ಕೆ ಈ ರೀತಿಯ ಆಫರ್ಸ್ ಅನ್ನು ಕಂಪನಿ ಘೋಷಿಸಿದೆ.
ಈ ಬ್ರಾಡ್ಬ್ಯಾಂಡ್ ಕೊಡುಗೆಯ ಉದ್ದೇಶ
ಬಿಎಸ್ಎನ್ಎಲ್ ತನ್ನ ಭಾರತ್ ಫೈಬರ್ ಸೇವೆಗಳನ್ನು ಭಾರತದ ಹೆಚ್ಚಿನ ನಗರಗಳಲ್ಲಿ ಆರಂಭಿಸಿದೆ. ಆದರೂ ಡಿಎಸ್ಎಲ್ನ ಸಂಪರ್ಕಗಳನ್ನು ಬಳಸುವ ಇಂಟರ್ನೆಟ್ ಚಂದಾದಾರರು ಭಾರತ್ ಫೈಬರ್ ಸೇವೆಗಳ ಕಡೆಗೆ ಮುಖ ಮಾಡುತ್ತಿಲ್ಲ. ಈ ಎಲ್ಲಾ ವಿಷಯಗಳನ್ನು ಗಮನಿಸಿದ ಕಂಪನಿ, ಫೈಬರ್ ನೆಟ್ವರ್ಕ್ ಸೇವೆ ಕಡೆ ಸೆಳೆಯಲು ಈ ರೀತಿಯ ಯೋಜನೆಯನ್ನು ಬಿಡುಗಡೆ ಮಾಡಿದೆ.
ಈ ಯೋಜನೆ ಮೂಲಕ 200 ರೂ. ರಿಯಾಯಿತಿ ಪಡೆಯಬಹುದು
ಬಿಎಸ್ಎನ್ಎಲ್ ಕಂಪನಿ ಇದೀಗ ರಿಯಾಯಿತಿ ಕೊಡುಗಡ ಬಿಡುಗಡೆ ಮಾಡಿದ್ದು, ಈ ಮೂಲಕ ಡಿಎಸ್ಎಲ್ ಬ್ರಾಡ್ಬ್ಯಾಮಡ್ ಗ್ರಾಹಕರು ಭಾರತ್ ಫೈಬರ್ ಸೇವೆಗಳನ್ನು ಬಳಸಲು ಆರಂಭಿಸಿದರೆ, ಈ ಮೂಲಕ ಅವರು ವಿಶೇಷ ರಿಯಾಯಿತಿಯನ್ನಬು ಪಡೆಯಬಹುದು. ಅಂದರೆ ಡಿಎಸ್ಎಲ್ನಿಂದ ಭಾರತ್ ಫೈಬರ್ ಸೇವೆಗೆ ಬದಲಾಯಿಸಿದ ಗ್ರಾಹಕರು ತಿಂಗಳ ಪ್ರತೀ ರೀಚಾರ್ಜ್ನಲ್ಲಿ 6 ತಿಂಗಳವರೆಗೆ 200 ರೂಪಾಯಿ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಮೂಲಕ ಒಟ್ಟು 1200 ರೂ. ಗಳನ್ನು ಉಳಿಸಬಹುದಾಗಿದೆ.
ಬ್ರಾಂಡ್ಬ್ಯಾಂಡ್ ಸೇವೆ ಕೇವಲ 275 ರೂ.ಗಳಿಂದ ಪ್ರಾರಂಭ
ಇನ್ನು ಪ್ರತಿ ತಿಂಗಳು 300Mbps ವರೆಗಿನ ಇಂಟರ್ನೆಟ್ ವೇಗ ಮತ್ತು ಓಟಿಟಿ ಪ್ಲಾಟ್ಫಾರ್ಮ್ಗಳ ಪ್ರಯೋಜನ ಪಡೆದುಕೊಳ್ಳಲು ಕೇವಲ 275 ರೂ. ಗಳನ್ನು ಮಾತ್ರ ಪಾವತಿ ಮಾಡಬೇಕಿದೆ. ಇದರಿಂದ ಕಡಿಮೆ ಹಣದಲ್ಲಿ ಹೆಚ್ಚಿನ ಸೌಲಭ್ಯ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಫೈಬರ್ ಸೇವೆಗಳ ಬೆಲೆ 275 ರೂ. ಗಳಿಂದಲೂ ಆರಂಭವಾಗುತ್ತವೆ.
ಬಿಎಸ್ಎನ್ಎಲ್ ಬ್ರಾಂಡ್ಬ್ಯಾಂಡ್ ಬಳಕೆಯಲ್ಲಿ ಕುಸಿತ
ಬ್ರಾಂಡ್ಬ್ಯಾಂಡ್ ವಿಷಯದ ಬಗ್ಗೆ ಮಾತಾಡುವುದಾದರೆ ಬಿಎಸ್ಎನ್ಎಲ್ ಮಾರುಕಟ್ಟೆಯಲ್ಲಿ ತನ್ನ ನೆಲೆಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಜಿಯೋ ಮತ್ತು ಏರ್ಟೆಲ್ ಟೆಲಿಕಾಂ ಕಂಪನಿಗಳ ಬೆಳವಣಿಗೆ ಅಂತಾನೆ ಹೇಳ್ಬಹುದು. ಯಾಕೆಂದರೆ ಹೆಚ್ಚಿನ ಜನರು ಇತ್ತೀಚೆಗೆ ಜಿಯೋ ಮತ್ತು ಏರ್ಟೆಲ್ನ ಫೈಬರ್ ನೆಟ್ವರ್ಕ್ ಸೇವೆಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಇದು ಕೂಡ ಉತ್ತಮ ಸೇವೆಯನ್ನು ನೀಡುತ್ತಿದೆ. ಅದರಲ್ಲೂ ಇತ್ತೀಚಿನ ಮಾಹಿತಿಯ ಪ್ರಕಾರ ವಾಯರ್ಲೆಸ್ ವಿಭಾಗದಲ್ಲಿ ಜಿಯೋ ಬಿಎಸ್ಎನ್ಎಲ್ ಅನ್ನು ಹಿಂದಿಕ್ಕಿದೆ. ಹಾಗೆಯೇ ಏರ್ಟೆಲ್ ಸಹ ಬಿಎಸ್ಎನ್ಎಲ್ ಮೀರಿಸುವ ಹಂತದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ