• Home
  • »
  • News
  • »
  • tech
  • »
  • BSNL Recharge Plan: ಬಿಎಸ್​ಎನ್​ಎಲ್​ ಗ್ರಾಹಕರಿಗೆ ಬಿಗ್​ಶಾಕ್​! ಇನ್ಮುಂದೆ ಈ ರೀಚಾರ್ಜ್​ ಪ್ಲಾನ್​ ಇರಲ್ಲ

BSNL Recharge Plan: ಬಿಎಸ್​ಎನ್​ಎಲ್​ ಗ್ರಾಹಕರಿಗೆ ಬಿಗ್​ಶಾಕ್​! ಇನ್ಮುಂದೆ ಈ ರೀಚಾರ್ಜ್​ ಪ್ಲಾನ್​ ಇರಲ್ಲ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬಿಎಸ್​ಎನ್​ಎಲ್ ಒಂದು ಸರ್ಕಾರಿ ಟೆಲಿಕಾಂ ಕಂಪನಿಯಾಗಿದ್ದು ದೇಶದಲ್ಲಿ ಸಾಕಷ್ಟು ದೊಡ್ಡ ಪ್ರೈವೇಟ್​ ಟೆಲಿಕಾಂ ಕಂಪನಿಗಳಿಗೆ ಪೈಪೋಟಿಯನ್ನು ನೀಡುತ್ತಾ ಬಂದಿದೆ. ಆದರೆ ಈಗ ಬಿಎಸ್​ಎನ್​ಎಲ್ ತನ್ನ ಅತೀ ಕಡಿಮೆ ಬೆಲೆಯ ಬ್ರಾಡ್​ಬ್ಯಾಂಡ್​ ರೀಚಾರ್ಜ್​ ಪ್ಲಾನ್​ ಅನ್ನು ಸ್ಥಗಿತಗೊಳಿಸುವುದಾಗಿ ನಿರ್ಧರಿಸಿದೆ. ಕಾರಣವೇನು ಎಂಬುದನ್ನು ಇಲ್ಲಿ ನೋಡಿ.

ಮುಂದೆ ಓದಿ ...
  • Share this:

    ಬಿಎಸ್​ಎನ್​ಎಲ್ (BSNL) ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಅದೆಷ್ಟೋ ವರ್ಷಗಳಿಂದ ಒಂದು ಟೆಲಿಕಾಂ ಕಂಪನಿ (Telecom Company) ಅದೇ ಹೆಸರಿನೊಂದಿಗೆ ಜನಪ್ರಿಯತೆ ಪಡೆದಿದೆ ಎಂದರೆ ಅದು ಬಿಎಸ್​ಎನ್​ಎಲ್ ಸಾಕಷ್ಟು ಖಾಸಗಿ ಟೆಲಿಕಾಂ ಕಂಪನಿಗಳು ದೇಶದಲ್ಲಿ ಪೈಪೋಟಿ ನೀಡುತ್ತಿದ್ದರೂ ಸರ್ಕಾರಿ ಕಂಪನಿಯಾಗಿ ಬಿಎಸ್​ಎನ್​ಎಲ್ ಮಾತ್ರ ಅದೇ ಅಸ್ಥಿತ್ವವನ್ನು ಕಾಪಾಡಿಕೊಂಡಿದೆ. ಬಿಎಸ್​ಎನ್​ಎಲ್ ಟೆಲಿಕಾಂ ಕಂಪನಿ ಕಡಿಮೆ ಬೆಲೆಯ ರೀಚಾರ್ಜ್​ ಪ್ಲಾನ್ (Recharge Plan) ಅನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ. ಟೆಲಿಕಾಂ ಕಂಪನಿಗಳಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಒಂದು ರೀಚಾರ್ಜ್​ ಪ್ಲಾನ್​ಗಳನ್ನು ಜನರಿಗೆ ನೀಡುವ ಕಂಪನಿಯೆಂದರೆ ಅದು ಬಿಎಸ್​ಎನ್​ಎಲ್ ಮಾತ್ರ. ಅದೇ ರೀತಿ ಇದು ದೇಶದ ಹಲವೆಡೆ ಉತ್ತಮ ನೆಟ್​​ವರ್ಕ್​ ಸೇವೆಗಳನ್ನೂ ನೀಡುತ್ತಾ ಬಂದಿದೆ.


    ಬಿಎಸ್​ಎನ್​ಎಲ್ ಒಂದು ಸರ್ಕಾರಿ ಟೆಲಿಕಾಂ ಕಂಪನಿಯಾಗಿದ್ದು ದೇಶದಲ್ಲಿ ಸಾಕಷ್ಟು ದೊಡ್ಡ ಪ್ರೈವೇಟ್​ ಟೆಲಿಕಾಂ ಕಂಪನಿಗಳಿಗೆ ಪೈಪೋಟಿಯನ್ನು ನೀಡುತ್ತಾ ಬಂದಿದೆ. ಆದರೆ ಈಗ ಬಿಎಸ್​ಎನ್​ಎಲ್ ತನ್ನ ಅತೀ ಕಡಿಮೆ ಬೆಲೆಯ ಬ್ರಾಡ್​ಬ್ಯಾಂಡ್​ ರೀಚಾರ್ಜ್​ ಪ್ಲಾನ್​ ಅನ್ನು ಸ್ಥಗಿತಗೊಳಿಸುವುದಾಗಿ ನಿರ್ಧರಿಸಿದೆ. ಕಾರಣವೇನು ಎಂಬುದನ್ನು ಇಲ್ಲಿ ನೋಡಿ.


    ಡಿಸೆಂಬರ್​ 14 ರಿಂದ ಈ ಪ್ಲಾನ್ ಇರಲ್ಲ


    ಬಿಎಸ್‌ಎನ್‌ಎಲ್‌ ಟೆಲಿಕಾಂ ಕಂಪನಿ ಇತ್ತೀಚಿಗಷ್ಟೇ ಪರಿಚಯಿಸಿದ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಒಂದನ್ನು ನಿಲ್ಲಿಸುವ ನಿರ್ಧಾರ ಕೈಗೊಂಡಿದೆ. ಈ ಪ್ಲಾನ್​ ಗ್ರಾಹಕರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡಿದ್ದು, ಇನ್ನು ಈ ಬ್ರಾಡ್‌ಬ್ಯಾಂಡ್‌ ರೀಚಾರ್ಜ್​ ಪ್ಲಾನ್​ ಇದೇ ಡಿಸೆಂಬರ್‌ 14 ರಿಂದ ಸ್ಥಗಿತವಾಗಲಿದೆ. ಹಾಗಾದ್ರೆ ಬಿಎಸ್‌ಎನ್‌ಎಲ್‌ ಟೆಲಿಕಾಂ ಸ್ಟಾಪ್‌ ಮಾಡುತ್ತಿರುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಯಾವುದೆಂದರೆ 775 ರೂಪಾಯಿಯ ಪ್ಲಾನ್ ಆಗಿದೆ.


    ಇದನ್ನೂ ಓದಿ: ಟ್ವಿಟರ್‌ ಪ್ರಧಾನ ಕಚೇರಿಯ ಕೊಠಡಿಗಳನ್ನು ಬೆಡ್‌ ರೂಂ ಆಗಿ ಪರಿವರ್ತಿಸಿದ ಎಲೋನ್‌ ಮಸ್ಕ್!


    ​775 ರೂಪಾಯಿಯ ಬ್ರಾಡ್​ಬ್ಯಾಂಡ್​ ಪ್ಲಾನ್ ಸ್ಥಗಿತ:


    ಬಿಎಸ್‌ಎನ್‌ಎಲ್‌ ಟೆಲಿಕಾಂ ಕಂಪನಿಯಿಂದ ಈ ವರ್ಷ ಬಿಡುಗಡೆಯಾಗಿದ್ದಂತಹ 775 ರೂಪಾಯಿಯ ಬ್ರಾಡ್​ಬ್ಯಾಂಡ್​ ರೀಚಾರ್ಜ್​ ಪ್ಲಾನ್​ ಅನ್ನು ಇದೇ ಡಿಸೆಂಬರ್​ 14 ರಿಂದ ನಿಲ್ಲಿಸುವುದಾಗಿ ನಿರ್ಧರಿಸಿದೆ. ಇನ್ನು ಈ ಪ್ಲಾನ್​ 75 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಇದರಲ್ಲಿ 2000ಜಿಬಿ ಡೇಟಾ ಪ್ಲಾನ್ ಅನ್ನು ಗ್ರಾಹಕರಿಗೆ ನೀಡುತ್ತದೆ. ಇದು 150 ಎಮ್​ಬಿಪಿಎಸ್​ ವೇಗದಲ್ಲಿ ಇಂಟರ್ನೆಟ್​ ಕಾರ್ಯನಿರ್ವಹಿಸುತ್ತದೆ.


    ಸಾಂಕೇತಿಕ ಚಿತ್ರ


    ಇದಲ್ಲದೆ ಹೆಚ್ಚುವರಿಯಾಗಿ, ಈ ಯೋಜನೆಯು ಡಿಸ್ನಿ+ ಹಾಟ್‌ಸ್ಟಾರ್, ಲಯನ್ಸ್‌ಗೇಟ್, ಶೆಮರೂ, ಹಂಗಾಮಾ, ಸೋನಿಲೈವ್‌, ಝೀ5, ವೂಟ್‌ ಮತ್ತು Yupp ಟಿವಿಯಿಂದ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು ಒಟಿಟಿ ಪ್ಲಾನ್ ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದಾಗಿದೆ.


    275 ರೂಪಾಯಿ ರೀಚಾರ್ಜ್​ ಪ್ಲಾನ್​ ಚಾಲ್ತಿಯಲ್ಲಿರುತ್ತದೆ


    ವಿಶೇಷ ಏನೆಂದರೆ 775 ರೂಪಾಯಿಯ ಬ್ರಾಡ್​ಬ್ಯಾಂಡ್​ ರೀಚಾರ್ಜ್​ ಪ್ಲಾನ್ ಜೊತೆಗೆ 275 ರೂಪಾಯಿಯ ಪ್ಲಾನ್ ಕೂಡ ಬಿಡುಗಡೆಯಾಗಿತ್ತು. ಆದರೆ ಈ ಪ್ಲಾನ್ ಮುಂದೆಯೂ ಕಾರ್ಯನಿರ್ವಹಿಸಲಿದೆ. ಕೇವಲ 775 ರೂಪಾಯಿಯ ಪ್ಲಾನ್ ಮಾತ್ರ ನಿಲ್ಲಿಸುವುದು ಎಂದು ಕಂಪನಿ ಹೇಳಿಕೊಂಡಿದೆ.


    275 ರೂಪಾಯಿಯ ರೀಚಾರ್ಜ್ ಪ್ಲಾನ್ ಕೂಡ 75 ದಿನಗಳವರೆಗಿನ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ಯೋಜನೆಯನ್ನು ಹಾಕಿಕೊಂಡ ಗ್ರಾಹಕರು 3300ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಇನ್ನು ಈ ಪ್ಲಾನ್​ನಲ್ಲಿ ದಿನದ ಇಂಟರ್​ನೆಟ್​ ಬಳಕೆ ಮುಗಿದ ನಂತರ ಡೇಟಾ 4ಎಮ್​ಬಿಪಿಎಸ್​ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಯಾರಾದರು 775 ರೂಪಾಯಿಯ ಬ್ರಾಡ್​ಬ್ಯಾಂಡ್​ ರೀಚಾರ್ಜ್​ ಮಾಡಬೇಕೆಂದರೆ ಅದರೆ ಬದಲಿಗೆ 275 ರೂಪಾಯಿ ರೀಚಾರ್ಜ್​ ಮಾಡಿದರೆ ಸಾಕು.


    ಸಾಂಕೇತಿಕ ಚಿತ್ರ


    ಬಿಎಸ್​ಎನ್​ಎಲ್​ನ ಇತರ ರೀಚಾರ್ಜ್​ ಪ್ಲಾನ್ಸ್​


    499 ರೂಪಾಯಿಯ ರೀಚಾರ್ಜ್ ಪ್ಲಾನ್​:


    ಬಿಎಸ್​ಎನ್​ಎಲ್​ನ 499 ರೂಪಾಯಿಯ ಬ್ರಾಡ್​​ಬ್ಯಾಂಡ್​ ರೀಚಾರ್ಜ್​ ಪ್ಲಾನ್​ನಲ್ಲಿ 3300 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ 40 ಎಮ್​ಬಿಪಿಎಸ್​ ವೇಗದಲ್ಲಿ ಇಂಟರ್ನೆಟ್​ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಉಚಿತವಾಗಿ ಅನ್ಲಿಮಿಟೆಡ್​ ವಾಯ್ಸ್​ ಕಾಲ್ ಕೂಡ ಮಾಡಬಹುದಾಗಿದೆ.

    Published by:Prajwal B
    First published: