ಭಾರತೀಯ ಟೆಲಿಕಾಂ ವಲಯದಲ್ಲಿ (Indian Telecom Company) ಹಲವಾರು ಖಾಸಗಿ ಕಂಪೆನಿಗಳಿವೆ. ಆದರೆ ಸರ್ಕಾರಿ ಒಡೆತನದಲ್ಲಿರುವ ಕಂಪೆನಿಗಳಿರುವುದು ಕೆಲವೇ ಕೆಲವು. ಈ ಕಂಪೆನಿಗಳು ಭಾರತದ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಗಿಟ್ಟಿಸಿಕೊಳ್ಳುವ ದೃಷ್ಟಿಯಿಂದ ತನ್ನ ಗ್ರಾಹಕರಿಗಾಗಿ ಹೊಸ ಹೊಸ ರೀಚಾರ್ಜ್ ಪ್ಲ್ಯಾನ್ಗಳನ್ನು (Recharge Plans) ಪರಿಚಯಿಸುತ್ತಿರುತ್ತದೆ. ಸರ್ಕಾರಿ ಟೆಲಿಕಾಂ ಕಂಪೆನಿಗಳಲ್ಲಿ ಮುಂಚೂಣಿಯಲ್ಲಿರುವ ಕಂಪೆನಿಯೆಂದರೆ ಅದು ಬಿಎಸ್‌ಎನ್‌ಎಲ್ (BSNL). ಇದು ಅಗ್ಗದ ಬೆಲೆಯಲ್ಲಿ ರೀಚಾರ್ಜ್ ಯೋಜನೆಗಳನ್ನು ಗ್ರಾಹಕರಿಗಾಗಿ ಪರಿಚಯಿಸುತ್ತಲೇ ಇರುತ್ತದೆ. ಭಾರೀ ಹಿಂದಿನಿಂದ ತನ್ನದೇ ಆದ ಶೈಲಿಯಲ್ಲಿ ಗ್ರಾಹಕರನ್ನು ಹೊಂದಿದ್ದು, ಖಾಸಗಿ ಕಂಪೆನಿಗಳ ಬೆಳವಣಿಗೆಯಿಂದ ಈ ಕಂಪೆನಿ ಗ್ರಾಹಕರು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದಾರೆ.
ಬಿಎಸ್‌ಎನ್‌ಎಲ್ ಕಂಪೆನಿ ಇದೀಗ ತನ್ನ ಗ್ರಾಹಕರಿಗಾಗಿ ಹೊಸ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಇದು ವಾರ್ಷಿಕ ವ್ಯಾಲಿಡಿಟಿಯನ್ನು ಹೊಂದಿದ್ದು, ಭಾರೀ ಅಗ್ಗದ ಬೆಲೆಯನ್ನು ಇದು ಹೊಂದಿದೆ. ಹಾಗಿದ್ರೆ ಇದರ ಬೆಲೆ ಎಷ್ಟು? ಏನೆಲ್ಲಾ ಪ್ರಯೋಜನಗಳು ಲಭ್ಯವಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಯಾವುದು ಆ ಯೋಜನೆ?
ಸರ್ಕಾರಿ ಸ್ವಾಮ್ಯದಲ್ಲಿರುವ ಬಿಎಸ್‌ಎನ್‌ಎಲ್ ಟೆಲಿಕಾಂ ಕಂಪೆನಿ ಇದೀಗ ತನ್ನ ಗ್ರಾಹಕರಿಗಾಗಿ 797 ರೂಪಾಯಿಗಳ ಪ್ರೀಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯನ್ನು ರೀಚಾರ್ಜ್ ಮಾಡಿದ ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಹೆಚ್ಚುವರಿ ಸೌಲಭ್ಯಗಳು ಸಿಗುತ್ತದೆ.
ಬಿಎಸ್ಎನ್ಎಲ್ನ 797 ರೂಪಾಯಿ ರೀಚಾರ್ಜ್ ಯೋಜನೆಯ ಲಾಭಗಳು
ಬಿಎಸ್‌ಎನ್‌ಎಲ್ ಸಂಸ್ಥೆಯ ಹೊಸ 797 ರೂಪಾಯಿ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಪ್ರತಿದಿನ 2 ಜಿಬಿ ಡೇಟಾವನ್ನು ಬಳಕೆ ಮಾಡಬಹುದಾಗಿದೆ. ಇದರೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮಾಡುವಂತಹ ಪ್ರಯೋಜನ ಸಹ ಸಿಗಲಿದೆ. ಇದಲ್ಲದೇ ಪ್ರತಿದಿನ 100 ಉಚಿತ ಎಸ್‌ಎಮ್ಎಸ್ ಅನ್ನು ಮಾಡಬಹುದು. ಇನ್ನು ಈ ಯೋಜನೆಯಲ್ಲಿ ನೀಡಿದ ಡೇಟಾವು ದಿನದಲ್ಲಿ ಮುಗಿದ ನಂತರ, ಇಂಟರ್ನೆಟ್ ವೇಗವು 40kpbs ಗೆ ಇಳಿಕೆಯಾಗುತ್ತದೆ.
60 ದಿನಗಳವರೆಗೆ ಮಾತ್ರ ಡೇಟಾ
ಬಿಎಸ್‌ಎನ್‌ಎಲ್ ಪರಿಚಯಿಸಿದ ಹೊಸ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಆದರೆ ಇದರಲ್ಲಿ ರೀಚಾರ್ಜ್ ಮಾಡಿದ ಮೊದಲ 60 ದಿನಗಳಿಗೆ ಡೇಟಾ ಸೌಲಭ್ಯ, ಎಸ್ಎಮ್ಎಸ್ ಹಾಗೂ ವಾಯ್ಸ್ ಕಾಲ್ ಸೌಲಭ್ಯ ದೊರೆಯುತ್ತದೆ. ಹಾಗಿದ್ರೆ ಈ ಯೋಜನೆಯಿಂದ ಬೇರೇನು ಪ್ರಯೋಜನ ಇದೆ ಎಂದು ಪ್ರಶ್ನೆ ಮೂಡಬಹುದು, ಈ ಯೋಜನೆಯಿಂದ ನಿಮ್ಮ ಸಿಮ್ ಅನ್ನು ಆ್ಯಕ್ಟಿವ್ ಆಗಿ ಇಟ್ಟುಕೊಳ್ಳಬಹುದು ಹಾಗೂ ಕಡಿಮೆ ಬೆಲೆಯಲ್ಲಿ ಹೆಚ್ಚು ವ್ಯಾಲಿಡಿಟಿ ಬಯಸುವವರಿಗೆ ಈ ಯೋಜನೆ ಉತ್ತಮವಾಗಿದೆ.
ಇತರೆ ಯೋಜನೆಗಳು
ಬಿಎಸ್ಎನ್ಎಲ್ನ 299 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಬಿಎಸ್‌ಎನ್‌ಎಲ್ ಟೆಲಿಕಾಂನ 299 ರೂಪಾಯಿ ಪ್ಲ್ಯಾನ್ ಅಗ್ಗದ ಬೆಲೆಯ ಯೋಜನೆಯಾಗಿದ್ದು, ಇದು ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಪ್ಲ್ಯಾನ್ನಲ್ಲಿ ಗ್ರಾಹಕರಿಗೆ ಪ್ರತಿದಿನ 3 ಜಿಬಿ ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಅನಿಯಮಿತ ವಾಯ್ಸ್ ಕಾಲ್ ಮಾಡುವ ಪ್ರಯೋಜನ ಸಿಗುತ್ತದೆ. ಇನ್ನು ದಿನದಲ್ಲಿ 3 ಜಿಬಿ ಡೇಟಾವನ್ನು ಬಳಕೆ ಮಾಡಿ ಮುಗಿದ ನಂತರ ಇಂಟರ್ನೆಟ್ ವೇಗವು 80 Kbps ಗೆ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಕಂಪೆನಿಯ ಬಹುನಿರೀಕ್ಷಿತ ಎರಡು ಸ್ಮಾರ್ಟ್ಫೋನ್ಗಳ ಅನಾವರಣ! ಹೇಗಿದೆ ಫೀಚರ್ಸ್?
ಬಿಎಸ್ಎನ್ಎಲ್ನ 347 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಬಿಎಸ್‌ಎನ್‌ಎಲ್ ಟೆಲಿಕಾಂನ 347 ರೂಪಾಯಿ ಯೋಜನೆಯು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿಕೊಂಡಿದೆ. ಈ ಯೋಜನೆಯು ಗ್ರಾಹಕರಿಗೆ 2 ಜಿಬಿ ದೈನಂದಿನ ಡೇಟಾ, ದೈನಂದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯವನ್ನು ನೀಡುತ್ತದೆ. ಇದರೊಂದಿಗೆ ಅನಿಯಮಿತ ವಾಯ್ಸ್ ಕಾಲ್ ಮಾಡುವ ಪ್ರಯೋಜನ ಸಹ ಒಳಗೊಂಡಿದೆ. ಈ ಯೋಜನೆಯಲ್ಲೂ ಸಹ ನಿಗದಿತ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗವು 80 Kbps ಇಳಿಕೆಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ