BSNL: ‘ಓಣಂ ಸ್ಮಾರ್ಟ್​ ಪ್ಲಾನ್‘; 30 ದಿನಗಳ ವ್ಯಾಲಿಡಿಟಿಯೊಂದಿಗೆ 90GB ಡೇಟಾ ಉಚಿತ

ಬಿಎಸ್​ಎನ್​ಎಲ್​ ಪರಿಚಯಿಸಿರುವ 234 ರೂಪಾಯಿಯ ‘ಓಣಂ ಸ್ಮಾರ್ಟ್​ ಪ್ಲಾನ್‘ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 90GB ಡೇಟಾ ಉಚಿತವಾಗಿ ದೊರೆಯಲಿದೆ.

news18-kannada
Updated:September 10, 2019, 8:00 PM IST
BSNL: ‘ಓಣಂ ಸ್ಮಾರ್ಟ್​ ಪ್ಲಾನ್‘; 30 ದಿನಗಳ ವ್ಯಾಲಿಡಿಟಿಯೊಂದಿಗೆ 90GB ಡೇಟಾ ಉಚಿತ
ಬಿಎಸ್​ಎನ್​ಎಲ್
news18-kannada
Updated: September 10, 2019, 8:00 PM IST
ಓಣಂ ಹಬ್ಬದ ಪ್ರಯುಕ್ತ ಭಾರತ ಸಂಚಾರಿ ನಿಗಮ ಲಿಮಿಟೆಡ್​ (ಬಿಎಸ್​ಎನ್​ಎಲ್​) ಹೊಸ ಪ್ರಿಪೇಯ್ಡ್​ ಪ್ಲಾನ್​ವೊಂದನ್ನು ಪರಿಚಯಿಸಿದೆ. 234 ರೂಪಾಯಿ ಮೌಲ್ಯದ ಈ ಪ್ರಿಪೇಯ್ಡ್​ ಪ್ಲಾನ್​ಗೆ ‘ಓಣಂ ಸ್ಮಾರ್ಟ್​ ಪ್ಲಾನ್‘​ ಎಂದು ಹೆಸರಿಸಲಾಗಿದೆ.

ಬಿಎಸ್​ಎನ್​ಎಲ್​ ಪರಿಚಯಿಸಿರುವ 234 ರೂಪಾಯಿಯ ‘ಓಣಂ ಸ್ಮಾರ್ಟ್​ ಪ್ಲಾನ್‘ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 90GB ಡೇಟಾ ಉಚಿತವಾಗಿ ದೊರೆಯಲಿದೆ. ಜೊತೆಗೆ ಪ್ರತಿ ದಿನದ 100SMS​ಗಳನ್ನು ಉಚಿತವಾಗಿ ನೀಡುತ್ತಿದೆ. ಇವೆಲ್ಲದರ ಜೊತೆಗೆ ಡೇಟಾ ‘ಹೆಚ್ಚುವರಿ ಡೇಟಾ ಕೊಡುಗೆಯ​ನ್ನು ಪ್ರಕಟಿಸಿದೆ. ಆಯ್ದ ಕೆಲವು ಪ್ರಿಪೇಯ್ಡ್​ ಪ್ಲಾನ್​ಗಳಿಗೆ ದೊರೆಯುವ ಈ ಯೋಜನೆಯಲ್ಲಿ ಹೆಚ್ಚುವರಿ 15GB ಡೇಟಾ ಉಚಿತವಾಗಿ ದೊರೆಯುತ್ತಿದೆ.

ಓಣಂ ಹಬ್ಬದ ಪ್ರಯುಕ್ತ ಬಿಎಸ್​ಎನ್​ಎಲ್​ ಸಂಸ್ಥೆ ಬಿಡುಗಡೆ ಮಾಡಿರುವ  ‘ಓಣಂ ಸ್ಮಾರ್ಟ್​ ಪ್ಲಾನ್‘​ ಕೇರಳಿಗರಿಗೆ ಮಾತ್ರ ಲಭ್ಯವಿದೆ. ಈ ಪ್ಲಾನ್​ ಅನ್ನು ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. 234 ರೂಪಾಯಿಯ ಈ ಪ್ಲಾನ್​ ಅಳವಡಿಸಿಕೊಂಡ ಗ್ರಾಹಕರಿಗೆ ದಿನಕ್ಕೆ 250 ನಿಮಿಷಗಳ ಉಚಿತ ಕರೆಯನ್ನು ನೀಡುತ್ತಿದೆ.

ಕೇರಳಿಗರು *444*234# ಕರೆ ಮಾಡುವ ಮೂಲಕ ಈ ಪ್ಲಾನ್​ ಅನ್ನು ಅಳವಡಿಸಬಹುದಾಗಿದೆ. ಅಲ್ಲದೆ,  PLAN<space>SMART ಸಂದೇಶ ಕಳುಹಿಸುವ ಮೂಲಕ ಪ್ಲಾನ್​ ಅನ್ನು ರಿಚಾರ್ಜ್​ ಮಾಡಬಹುದಾಗಿದೆ.
First published:September 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...