HOME » NEWS » Tech » BSNL BHARAT FIBRE DISCONTINUES MULTIPLE BROADBAND PLANS STG HG

ಹಲವು ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ರದ್ದುಗೊಳಿಸಿದ ಬಿಎಸ್ಎನ್ಎಲ್ ಭಾರತ್ ಫೈಬರ್..!

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ‘ಭಾರತ್ ಫೈಬರ್’ಹೆಸರಿನಲ್ಲಿ ತನ್ನದೇ ಆದ ಫೈಬರ್ ಇಂಟರ್ನೆಟ್ ಸೇವೆಗಳನ್ನು ಹೊಂದಿದೆ. ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವಾ ಪೂರೈಕೆದಾರ (ಐಎಸ್‌ಪಿ ಏಪ್ರಿಲ್‌ 4 ರಿಂದ ಹಲವಾರು ಫೈಬರ್ ಯೋಜನೆಗಳನ್ನು ನಿಲ್ಲಿಸಿದೆ.

news18-kannada
Updated:April 5, 2021, 5:07 PM IST
ಹಲವು ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ರದ್ದುಗೊಳಿಸಿದ ಬಿಎಸ್ಎನ್ಎಲ್ ಭಾರತ್ ಫೈಬರ್..!
ಬಿಎಸ್ಎನ್ಎಲ್ ಭಾರತ್ ಫೈಬರ್
  • Share this:
ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಹಲವು ಉದ್ಯೋಗಿಗಳು ಮನೆಯಲ್ಲೇ ಕೆಲಸ ಮಾಡುವಂತಾಗಿದೆ. ಜತೆಗೆ ಮಕ್ಕಳಿಗೂ ಆನ್‌ಲೈನ್‌ ಕ್ಲಾಸ್‌ ನಡೀತಿದೆ. ಈ ಹಿನ್ನೆಲೆ ಇಂಟರ್‌ನೆಟ್‌ ಅದರಲ್ಲೂ ಬ್ರಾಡ್‌ಬ್ಯಾಂಡ್‌ ಬೇಡಿಕೆ ಹೆಚ್ಚಾಗಿದೆ. ಇದರೊಂದಿಗೆ ಸರ್ಕಾರಿ ಹಾಗೂ ಖಾಸಗಿ ಸೇರಿ ಹಲವು ಕಂಪನಿಗಳೊಂದಿಗೆ ಸ್ಪರ್ಧೆಯೂ ಹೆಚ್ಚಿದೆ. ಆದರೆ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಏಕಾಏಕಿ ಹಲವು ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಸ್ಥಗಿತಗೊಳಿಸಿದೆ. ಏಪ್ರಿಲ್‌ 4 ರಿಂದ ಬಿಎಸ್ಎನ್ಎಲ್ ಭಾರತ್ ಫೈಬರ್ ಬಳಕೆದಾರರು ಕೇವಲ ಫೈಬರ್ ಬೇಸಿಕ್ ಪ್ಲಸ್ ಮತ್ತು ಫೈಬರ್ ಪ್ರೀಮಿಯಂ ಪ್ಲಸ್ ಎಂಬ 2 ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ನಡುವೆ ಮಾತ್ರ ಆಯ್ಕೆ ಮಾಡಬಹುದು ಎಂದು telecomtalk.info ಮಾಹಿತಿ ನೀಡಿದೆ.

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ‘ಭಾರತ್ ಫೈಬರ್’ಹೆಸರಿನಲ್ಲಿ ತನ್ನದೇ ಆದ ಫೈಬರ್ ಇಂಟರ್ನೆಟ್ ಸೇವೆಗಳನ್ನು ಹೊಂದಿದೆ. ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವಾ ಪೂರೈಕೆದಾರ (ಐಎಸ್‌ಪಿ ಏಪ್ರಿಲ್‌ 4 ರಿಂದ ಹಲವಾರು ಫೈಬರ್ ಯೋಜನೆಗಳನ್ನು ನಿಲ್ಲಿಸಿದೆ.

ಅಕ್ಟೋಬರ್ 1, 2020 ರಂದು ಬಿಎಸ್ಎನ್ಎಲ್ ನಾಲ್ಕು ಫೈಬರ್ ಪ್ಲಾನ್‌ಗಳನ್ನು ನೀಡುವ ಮೂಲಕ ಬಿಎಸ್ಎನ್ಎಲ್ ಭಾರತ್ ಫೈಬರ್ ಅನ್ನು ಪ್ರಾರಂಭಿಸಿತು. ಆರಂಭದಲ್ಲಿ ಪ್ರಾರಂಭಿಸಿದ ನಾಲ್ಕು ಯೋಜನೆಗಳು - ಫೈಬರ್ ಬೇಸಿಕ್, ಫೈಬರ್ ವ್ಯಾಲ್ಯೂ, ಫೈಬರ್ ಪ್ರೀಮಿಯಂ ಮತ್ತು ಫೈಬರ್ ಅಲ್ಟ್ರಾ. ಈ ಅವಧಿಯಲ್ಲಿ, ಅನೇಕ ಹೊಸ ಪ್ಲ್ಯಾನ್‌ಗಳನ್ನು ಸೇರಿಸಲಾಯಿತು. ಜತೆಗೆ, ಹಲವಾರು ಕೊಡುಗೆಗಳನ್ನು ತೆಗೆದುಹಾಕಲಾಗಿದೆ.

ಸದ್ಯ, ಏಪ್ರಿಲ್‌ 4, 2021 ರಿಂದ ಫೈಬರ್ ಬೇಸಿಕ್ ಪ್ಲಸ್ ಮತ್ತು ಫೈಬರ್ ಪ್ರೀಮಿಯಂ ಪ್ಲಸ್ ಎಂಬ ಎರಡು ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ನಡುವೆ ಮಾತ್ರ ಆಯ್ಕೆ ಮಾಡಬಹುದು. ಫೈಬರ್ ಬೇಸಿಕ್ ಪ್ಲಸ್ ಯೋಜನೆಗೆ ತಿಂಗಳಿಗೆ 599 ರೂ. (ತೆರಿಗೆ ಹೊರತುಪಡಿಸಿ) ಮತ್ತು ಫೈಬರ್ ಪ್ರೀಮಿಯಂ ಪ್ಲಸ್ ಯೋಜನೆಗೆ ತಿಂಗಳಿಗೆ 1,277 ರೂ. (ತೆರಿಗೆ ಹೊರತುಪಡಿಸಿ) ವೆಚ್ಚವಾಗುತ್ತದೆ.

ಈ ಎರಡು ಫೈಬರ್‌ ಪ್ಲ್ಯಾನ್‌ಗಳ ವಿವರ ಈ ರೀತಿ ಇದೆ..

ಬಿಎಸ್ಎನ್ಎಲ್ ಫೈಬರ್ ಬೇಸಿಕ್ ಪ್ಲಸ್ ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಬಿಎಸ್‌ಎನ್‌ಎಲ್ ಫೈಬರ್ ಬೇಸಿಕ್ ಪ್ಲಸ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ ನ್ಯಾಯಯುತ ಬಳಕೆಯ ನೀತಿ (ಎಫ್‌ಯುಪಿ) ಡೇಟಾ ಖಾಲಿಯಾದ ಬಳಿಕ ಬಳಕೆದಾರರು 2 ಎಮ್‌ಬಿಪಿಎಸ್ ವೇಗದಲ್ಲಿ ಬ್ರೌಸಿಂಗ್ ಮುಂದುವರಿಸಬಹುದು. ಈ ಯೋಜನೆಯು ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆಗಳನ್ನು ಒದಗಿಸುತ್ತದೆ.ಬಿಎಸ್ಎನ್ಎಲ್ ಫೈಬರ್ ಪ್ರೀಮಿಯಂ ಪ್ಲಸ್ ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಬಿಎಸ್‌ಎನ್‌ಎಲ್ ಫೈಬರ್ ಪ್ರೀಮಿಯಂ ಪ್ಲಸ್ ಬ್ರಾಡ್‌ಬ್ಯಾಂಡ್ ಯೋಜನೆಗೆ ತಿಂಗಳಿಗೆ 1,277 ರೂ. (ತೆರಿಗೆ ಹೊರತುಪಡಿಸಿ). ಈ ಯೋಜನೆಯೊಂದಿಗೆ ಬಳಕೆದಾರರು 200 ಎಮ್‌ಬಿಪಿಎಸ್ ಡೌನ್‌ಲೋಡ್ / ಅಪ್‌ಲೋಡ್ ವೇಗ ಮತ್ತು 3.3 ಟಿಬಿ ಅಥವಾ 3,300 ಜಿಬಿ ಡೇಟಾವನ್ನು ಪಡೆಯುತ್ತಾರೆ. ಎಫ್‌ಯುಪಿ ಡೇಟಾ ಖಾಲಿಯಾದ ಬಳಿಕ ಬಳಕೆದಾರರ ವೇಗವು 15 ಎಮ್‌ಬಿಪಿಎಸ್‌ಗೆ ಇಳಿಯುತ್ತದೆ.

ಬಿಎಸ್ಎನ್ಎಲ್ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಪ್ರಸ್ತುತ ಈ ಎರಡು ಪ್ಲಾನ್‌ಗಳನ್ನು ಮಾತ್ರ ಒದಗಿಸಿದೆ. ತಿಂಗಳಿಗೆ ಕೇವಲ 449 ರೂ. ಬೆಲೆಯ ‘ಫೈಬರ್ ಬೇಸಿಕ್’ಪ್ಲಾನ್‌ ಅನ್ನು ತೆಗೆದುಹಾಕಲಾಗಿದೆ. ಇದು ಪ್ರವೇಶ ಮಟ್ಟದ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಗಾಗಿ ಅತ್ಯುತ್ತಮವಾದ ಸಂದರ್ಭವನ್ನು ನೀಡಿತ್ತು ಮತ್ತು ಬಳಕೆದಾರರಿಗೆ 3.3 ಟಿಬಿ ಅಥವಾ 3,300 ಜಿಬಿ ಡೇಟಾದೊಂದಿಗೆ 30 ಎಮ್‌ಬಿಪಿಎಸ್ ಡೌನ್‌ಲೋಡ್ / ಅಪ್‌ಲೋಡ್ ವೇಗವನ್ನು ನೀಡಿತ್ತು.

ಇನ್ನು, ಡಿಸೆಂಬರ್ 29 ರಂದೇ ಈ ಪ್ಲಾನ್‌‌ಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತಾದರೂ, ಉತ್ತಮ ಬೇಡಿಕೆಯಿಂದಾಗಿ ಬಿಎಸ್ಎನ್ಎಲ್ ತಮ್ಮ ಲಭ್ಯತೆಯನ್ನು ಏಪ್ರಿಲ್ 4, 2021 ಕ್ಕೆ ವಿಸ್ತರಿಸಿತ್ತು. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಮತ್ತು ಜಿಯೋ ಫೈಬರ್ ನೀಡುವ ಪ್ರವೇಶ ಮಟ್ಟದ ಯೋಜನೆಗಳೊಂದಿಗೆ ನೇರ ಸ್ಪರ್ಧೆಯಲ್ಲಿದ್ದ ಕಾರಣ ಬಿಎಸ್‌ಎನ್‌ಎಲ್ ಭಾರತ್ ಫೈಬರ್ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎನ್ನಲಾಗಿತ್ತು. ಆದರೆ, ಕೊರೊನಾ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಈ ಪ್ಲ್ಯಾನ್‌ಗಳನ್ನು ನಿಲ್ಲಿಸಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಆದರೂ, ಯಾವ ಕಾರಣಗಳಿಗಾಗಿ ಬಿಎಸ್‌ಎನ್‌ಎಲ್‌ ಈ ಪ್ಲಾನ್‌ಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂಬುದನ್ನು ತಿಳಿಸಿಲ್ಲ. ಸದ್ಯಕ್ಕೆ ಎರಡು ಪ್ಲಾನ್‌‌ಗಳು ಮಾತ್ರ ಲಭ್ಯವಿದ್ದು, ಯಾವುದೇ ಹೊಸ ಪ್ಲಾನ್‌‌ಗಳನ್ನು ಕೊಡುಗೆಗಳಿಗೆ ಯಾವಾಗ ಸೇರಿಸಲಾಗುವುದು ಎಂದು ಬಿಎಸ್‌ಎನ್‌ಎಲ್‌ ಕಂಪನಿ ಖಚಿತಪಡಿಸಿಲ್ಲ.

ಆದರೆ ಭಾರತದಲ್ಲಿ ಫೈಬರ್ ಬ್ರಾಡ್‌ಬ್ಯಾಂಡ್ ಸಂಪರ್ಕ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆ ಬಿಎಸ್‌ಎನ್‌ಎಲ್ ಮತ್ತೆ ಕೆಲವು ಅದ್ಭುತ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳನ್ನು ಶೀಘ್ರದಲ್ಲೇ ಆರಂಭಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು.
Published by: Harshith AS
First published: April 5, 2021, 5:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories