ಬ್ರಿಟಿಷ್​ ಏರ್​ವೇಸ್​ನ ಮೂರು ಲಕ್ಷಕ್ಕೂ ಅಧಿಕ ಗ್ರಾಹಕರ ಮಾಹಿತಿ ಸೋರಿಕೆ


Updated:September 7, 2018, 5:48 PM IST
ಬ್ರಿಟಿಷ್​ ಏರ್​ವೇಸ್​ನ ಮೂರು ಲಕ್ಷಕ್ಕೂ ಅಧಿಕ ಗ್ರಾಹಕರ ಮಾಹಿತಿ ಸೋರಿಕೆ
  • Share this:
ಬ್ರಿಟಿಷ್ ಏರ್​ವೇಸ್​ಗೆ ಸೇರಿರುವ ಸುಮಾರು 3,80,000 ಜನರ ಮಾಹಿತಿಗಳು ಸೋರಿಕೆಯಾಗಿದ್ದು, ಗ್ರಾಹಕರ ಖಾಸಾಗಿ ಮಾಹಿತಿ, ಕ್ರೆಡಿಟ್​ ಕಾರ್ಡ್​​, ಎಟಿಎಂ ಕಾರ್ಡ್​​ ಸೇರಿದಂತೆ ಪಾಸ್​ಪೋರ್ಟ್​ ಮಾಹಿತಿಗಳು ಎಲ್ಲವನ್ನು ಹ್ಯಾಕ್​ ಮಾಡಿ ಲೂಟಿಗೈಯ್ಯಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಮೊಬೈಲ್​ ಆ್ಯಪ್​ ಹಾಗೂ ನಮ್ಮ ವೆಬ್​ಸೈಟ್​ನಲ್ಲಿ ಶೇಖರಣೆಯಾಗಿರುವ ಮಾಹಿತಿಗಳನ್ನು ಆ.21 ಹಾಗೂ ಸೆ.5 ರಂದು ಹ್ಯಾಕರ್​​ಗಳು ಕನ್ನ ಹಾಕಿದ್ದು, ಹಾಗಾಗಿ ಈ ಗ್ರಾಹಕರು ಹಣಕಾಸು ವಂಚನೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಏರ್‌ ಲೈನ್ಸ್‌ ತಿಳಿಸಿದೆ.ಈಗಾಗಲೇ ಸಂಸ್ಥೆ ತನಿಖೆಗೆ ದೂರು ದಾಖಲಿಸಿದ್ದು ವರದಿ ಪ್ರಕಾರ ಪ್ರಯಾಣಿಕರ ಹೆಸರು, ವಿಳಾಸ, ಇಮೇಲ್‌ ವಿಳಾಸ, ಕ್ರೆಡಿಟ್‌ ಕಾರ್ಡ್‌ ಮಾಹಿತಿಯನ್ನು ಕದಿಯಲಾಗಿದೆ ಮಾಹಿತಿಗಳೆಂದರೆ

ನಮ್ಮ ಪ್ರಯಾಣಿಕ ಗ್ರಾಹಕರಿಗೆ ಆಗುವ ಯಾವುದೇ ನಷ್ಟವನ್ನು ಶೇ.100 ಭರಿಸಿಕೊಡುತ್ತೇವೆ, ಅಲ್ಲದೇ ಘಟನೆ ಕುರಿತು ನಮ್ಮ ಗ್ರಾಹಕರನ್ನು ಸಂಪರ್ಕಿಸುತ್ತಿದ್ದು ಘಟನೆ ಕುರಿತು ಮಾಹಿತಿ ನಿಡುತ್ತಿದ್ದೇವೆ ಎಂದು ಹೇಳಿದ್ದಾರೆ. ಕಳೆದ ವರ್ಷದ ಮೇನಲ್ಲು ಕೂಡ ಬ್ರಿಟಿಷ್​ ಏರ್​ವೇಸ್​ ಇದೇ ರೀತಿಯ ಸೈಬರ್​ ದಾಳಿಗೆ ಒಳಪಟ್ಟಿತ್ತು, ಪರಿಣಾಮ 700ಕ್ಕೂ ಅಧಿಕ ವಿಮಾನ ಹಾರಾಟಗಳು ರದ್ದಾಗಿದ್ದವು.
First published: September 7, 2018, 5:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading