OnePlus 9 RT 5G ಬಲದೊಂದಿಗೆ ನಿಮ್ಮ ಗೇಮಿಂಗ್ ಸಾಮರ್ಥ್ಯವನ್ನು ಹೊರತನ್ನಿ

ಈ ಹೊಸ ಎಂಜಿನ್ ಶಕ್ತಿಶಾಲಿಯಾಗಿದೆ, ಆದರೆ ಆಶ್ಚರ್ಯಕರವಾಗಿ ಸೂಕ್ಷ್ಮವಾಗಿದ್ದು, ಸುಮಾರು 150 AAA ಮೊಬೈಲ್ ಗೇಮ್ ಶೀರ್ಷಿಕೆಗಳಿಗೆ ನಿಖರವಾದ ಹ್ಯಾಪ್ಟಿಕ್ ಪ್ರತಿಕ್ರಿಯೆಯನ್ನು ನೀಡುವಂತೆ ರೂಪಿಸಲಾಗಿದೆ.

OnePlus 9 RT 5G

OnePlus 9 RT 5G

 • Share this:
  OnePlus 9 RT ಒಂದು ಹೊಸ ಫೋನ್ ಅಷ್ಟೇ ಅಲ್ಲ, OnePlus ಇದುವರೆಗೂ ನೀಡಿರುವ ಗೇಮಿಂಗ್ ಕಾರ್ಯಕ್ಷಮತೆಯಲ್ಲಿಯೇ ಏಕೈಕ ದೊಡ್ಡ ಜಿಗಿತವಾಗಿದೆ. ಅಲ್ಲದೆ, ಇದರಲ್ಲಿರುವ ಬಹುತೇಕ ಎಲ್ಲವನ್ನೂ ಸಹ ಹೊಸ, ಹೆಚ್ಚಿನ ವ್ಯಾಪ್ತಿಯವರೆಗೆ ಸಮರ್ಥವಾಗಿರುವ ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಂನೊಂದಿಗೆ ವಿನ್ಯಾಸಗೊಳಿಸಲಾಗಿದೆ.

  ಗೇಮಿಂಗ್ ವಿಷಯಕ್ಕೆ ಬಂದಾಗ, ಶಕ್ತಿಶಾಲಿ ಹಾರ್ಡ್‌ವೇರ್ ಎಂಬುದು ಒಂದು ನಿಜವಾದ ಸಮಸ್ಯೆಯೇ ಅಲ್ಲ. Snapdragon 888 ನಂತಹ ದೈತ್ಯ ಚಿಪ್ ಅನ್ನು ಯಾರು ಬೇಕಾದರೂ ಸ್ಮಾರ್ಟ್‌ಫೋನ್ ಚಸಿಸ್‌ನೊಳಗೆ ಸೇರಿಸಬಹುದು. ಸಮಸ್ಯೆ ಇರುವುದು ಏನೆಂದರೆ ಸುದೀರ್ಘ ಗೇಮಿಂಗ್ ಅವಧಿಗಳಿಗೆ ಸದೃಢ, ಸ್ಥಿರವಾದ ಕಾರ್ಯಕ್ಷಮತೆಯನ್ನು ಖಚಿತಪಡಿಸಲು ಆ ದೈತ್ಯ ಚಿಪ್ ಅನ್ನು ಕೂಲ್ ಮಾಡುವುದು ಆಗಿದೆ.

  ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಒಂದು ಚಿಪ್ ಎಷ್ಟು ವೇಗವಾಗಿ ರನ್ ಆಗುತ್ತದೋ ಅಷ್ಟೇ ಹೆಚ್ಚು ಬಿಸಿಯಾಗುತ್ತದೆ ಮತ್ತು ಅದು ಅತಿಯಾಗಿ ಬಿಸಿಯಾದಾಗ, ಸುಟ್ಟುಹೋಗುವುದರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅದು ನಿಧಾನವಾಗುತ್ತದೆ. PC ಯಲ್ಲಿ ನೀವು ಫ್ಯಾನ್‌ಗಳು ಮತ್ತು ಏರ್‌ಫ್ಲೋ ಬಳಸಬಹುದು, ಆದರೆ ಸ್ಮಾರ್ಟ್‌ಫೋನ್‌ನಲ್ಲಿ ಇದು ಆಯ್ಕೆಯಲ್ಲ. ಎಷ್ಟು ಸಮರ್ಥವಾಗಿ ಸಾಧ್ಯವೋ ಅಷ್ಟು ಸಮರ್ಥವಾಗಿ ಉಷ್ಣತೆಯು ನಿಷ್ಕ್ರಿಯವಾಗಿ ಚದುರಿಹೋಗಲೇಬೇಕು.   ಶಕ್ತಿಶಾಲಿ ಹೊಸ ವೇಪರ್ ಚೇಂಬರ್

  ಆ ವಿಷಯದಲ್ಲಿ OnePlus, 9RT ಯಲ್ಲಿ ಬೃಹತ್ ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಂ ಅನ್ನು ಅಳವಡಿಸಿದೆ. ಈ ಹೊಸ ಸಿಸ್ಟಂ OnePlus ಇದುವರೆಗೂ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಏಕೈಕ ಬೃಹತ್ ವೇಪರ್ ಚೇಂಬರ್ ಆಗಿದೆ. OnePlus 9 ಸೀರೀಸ್‌ನಲ್ಲಿರುವ ಸ್ಮಾರ್ಟ್‌ಫೋನ್‌ಗಿಂತ ಇದು 20% ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿದೆ ಹಾಗೂ ಆ ಮೂಲಕ ಇತರ ಹಲವಾರು ಟ್ಯಾಬ್ಲೆಟ್‌ಗಳಲ್ಲಿ ಇಲ್ಲದೇ ಇರುವ ವೈಶಿಷ್ಟ್ಯವನ್ನು ನೀಡಿ, ಅವುಗಳಿಗೆ ಪ್ರಬಲ ಸ್ಪರ್ಧೆ ಒಡ್ಡಿರುವ ಹೆಗ್ಗಳಿಕೆ ಹೊಂದಿದೆ.

  ಬಿಸಿಯಾಗಿರುವ, ಹೆಚ್ಚು ಶಕ್ತಿ ಬೇಡುವ ಘಟಕಗಳಿಂದ ಬಿಡುಗಡೆಯಾಗುವ ಉಷ್ಣತೆಯನ್ನು ಬ್ಯಾಕ್‌ಪ್ಲೇನ್ ಮತ್ತು ಫ್ರೇಮ್‌ನೆಡೆಗೆ ಸಮರ್ಥವಾಗಿ ನಿರ್ದೇಶಿಸಲು ಸಹಾಯವಾಗುವಂತೆ ಸಿಸ್ಟಂನ ಆಂತರಿಕ ರಚನೆಯನ್ನು ಮರುವಿನ್ಯಾಸಗೊಳಿಸಲಾಗಿದೆ. ಈ ಹೊಸ ವಿನ್ಯಾಸವು ಸುದೀರ್ಘ ಅವಧಿಗೆ ಫೋನ್ ರನ್ ಆಗಲು ಅನುಕೂಲ ಮಾಡಿಕೊಡುವುದಷ್ಟೇ ಅಲ್ಲ, ಈ ಹಿಂದಿನ OnePlus ಸ್ಮಾರ್ಟ್‌ಫೋನ್‌ಗಳಿಗಿಂತ ವೇಗವಾಗಿಯೂ ರನ್ ಆಗುತ್ತದೆ, ಹಾಗಾಗಿ ನಮ್ಮೆಲ್ಲರಿಗೂ ಅದು ದೀರ್ಘಾವಧಿಯವರೆಗೆ ತಡೆರಹಿತ ಗೇಮಿಂಗ್ ಅವಧಿಗಳನ್ನು ಒದಗಿಸುತ್ತದೆ.

  ಹೆಚ್ಚು ಆಂಟೆನ್ನಾ = ಯಾವುದೇ ಡ್ರಾಪ್‌-ಔಟ್‌ಗಳಿಲ್ಲ

  ಅಡೆತಡೆಗಳ ಬಗ್ಗೆ ಹೇಳುವುದಾದರೆ, ನಮ್ಮಂತಹ ಗೇಮರ್‌ಗಳು ಅನುಭವಿಸುವ ಇನ್ನೊಂದು ಸಮಸ್ಯೆ ಎನ್ನಬಹುದಾದ ಕನೆಕ್ಟಿವಿಟಿ ಸಮಸ್ಯೆಗೆ OnePlus 9RT ಪರಿಹಾರ ನೀಡುತ್ತದೆ. ಎಲ್ಲೆಡೆಯೂ Wi-Fi ಲಭ್ಯವಿದೆ, ಆದರೆ ಅದನ್ನು ಪಡೆಯುವುದು ಆಶ್ಚರ್ಯಕರವಾಗಿ ಕಷ್ಟಕರವಾಗಿದೆ. ಅತ್ಯುತ್ತಮವಾಗಿ ಸಂಪರ್ಕ ಸಾಧಿಸಬೇಕು ಎಂದರೆ ಹಲವಾರು ಕೋನಗಳಲ್ಲಿ ನಿಮಗೆ ಹೆಚ್ಚು ಆಂಟೆನ್ನಾ ಬೇಕಾಗುತ್ತದೆ ಮತ್ತು ಇಂಟರ್‌ಫೇಸ್ ಜತೆಗೆ ಕಾರ್ಯನಿರ್ವಹಿಸಲು ನಿಮ್ಮ ಬಳಿ ಇರುವ ಸಿಸ್ಟಂ ಸಹ ಅಷ್ಟೇ ಸ್ಮಾರ್ಟ್ ಆಗಿರುವ ಅಗತ್ಯವಿದೆ.

  9RT ಯಲ್ಲಿ ಇರುವ ಹೊಸ Tri-esport ಆಂಟೆನ್ನಾಗಳು ಅದನ್ನೇ ಮಾಡುತ್ತವೆ. ನೀವು ಬಹುತೇಕ ಇತರ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣುವ ಆಂಟೆನ್ನಾಗಳಿಗಿಂತ ಒಂದು ಆಂಟೆನ್ನಾವನ್ನು ಹೆಚ್ಚುವರಿಯಾಗಿ ಇದರಲ್ಲಿ ಪಡೆಯುವಿರಿ ಹಾಗೂ ನಿಮಗೆ ಕಿರಿಕಿರಿ ಉಂಟುಮಾಡುವ ಸಿಗ್ನಲ್ ಸಮಸ್ಯೆ ಆದಾಗ ನೀವು ಕನೆಕ್ಟಿವಿಯನ್ನು ಕಳೆದುಕೊಳ್ಳುವುದಿಲ್ಲ ಎಂಬುದನ್ನು ಖಾತ್ರಿಪಡಿಸಲು ಆ ಆಂಟೆನ್ನಾಗಳು Snapdragon 888 ರ ಚತುರತೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತವೆ!

  ವೇಗದ ಟಚ್ ರೆಸ್ಪಾನ್ಸ್, ಅತ್ಯುತ್ತಮ ಹ್ಯಾಪ್ಟಿಕ್ಸ್ ಹಾಗೂ ಇಡೀ ದಿನದ ಬ್ಯಾಟರಿ ಬಾಳಿಕೆ

  ಇತರ ಹಲವು ಬದಲಾವಣೆಗಳನ್ನು ನೀಡುವ ವೈಶಿಷ್ಟ್ಯಗಳ ಗುಚ್ಛವೂ ಇದರಲ್ಲಿದೆ. ಉದಾಹರಣೆಗೆ, ಹೊಸ HyperTouch 2.0 ಎಂಜಿನ್ ಟಚ್ ರೆಸ್ಪಾನ್ಸ್ ಅನ್ನು 600 Hz ಗೆ ಕೊಂಡೊಯ್ಯುತ್ತದೆ. ಇದು ರೆಸ್ಪಾನ್ಸ್ ಸಮಯವನ್ನು 29 ms ಗೆ ಇಳಿಸುತ್ತದೆ, ಆ ಮೂಲಕ ಗೇಮಿಂಗ್ ಮಾಡುವಾಗ ಅಗತ್ಯವಿರುವ ಸ್ಪರ್ಧಾತ್ಮಕತೆಯನ್ನು ನಿಮಗೆ ನೀಡುತ್ತದೆ. Snapdragon 888 ರ ಶಕ್ತಿಯ ಅತ್ಯುತ್ತಮ ಪ್ರಯೋಜನ ಪಡೆಯಲು OS ಅನ್ನು ಸಹ ಮಾರ್ಪಡಿಸಲಾಗಿದೆ.  ಹೊಸ ಹ್ಯಾಪ್ಟಿಕ್ ಎಂಜಿನ್ ಬಗ್ಗೆ ಹೇಳಿದೆವೇ? ಈ ಹೊಸ ಎಂಜಿನ್ ಶಕ್ತಿಶಾಲಿಯಾಗಿದೆ, ಆದರೆ ಆಶ್ಚರ್ಯಕರವಾಗಿ ಸೂಕ್ಷ್ಮವಾಗಿದ್ದು, ಸುಮಾರು 150 AAA ಮೊಬೈಲ್ ಗೇಮ್ ಶೀರ್ಷಿಕೆಗಳಿಗೆ ನಿಖರವಾದ ಹ್ಯಾಪ್ಟಿಕ್ ಪ್ರತಿಕ್ರಿಯೆಯನ್ನು ನೀಡುವಂತೆ ರೂಪಿಸಲಾಗಿದೆ. ಹಾಗಾಗಿ, ಇದರೊಂದಿಗೆ ಗನ್‌ಶಾಟ್‌ಗಳು, ಸ್ಫೋಟಗಳು ಮತ್ತು ಹೆಜ್ಜೆಸದ್ದುಗಳ ಅನುಭವವನ್ನು ಸಹ ನೀವು ಆನಂದಿಸಬಹುದು. ಗೇಮರ್‌ಗಳಿಗೆ ಹೇಳುವುದೇನೆಂದರೆ, ನಿಮ್ಮ ಇಂದ್ರಿಯಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಇದಕ್ಕಿಂತ ಅತ್ಯುತ್ತಮವಾದದ್ದು ಬೇರೊಂದಿಲ್ಲ. 

  ಇದರೊಂದಿಗೆ 65W Warp Charge, IMX766-ಆಧಾರಿತ ಕ್ಯಾಮರಾ ಸಿಸ್ಟಂ ಮತ್ತು Samsung120 Hz OLED ಹಾಗೂ ಇದರೊಂದಿಗೆ ನಿಮ್ಮ ಕೈಗಳಲ್ಲಿ ಒಬ್ಬ ವಿಜೇತನನ್ನು ಹಿಡಿದುಕೊಂಡಿರುವಿರಿ ಎಂಬುದು ನಿಮಗೆ ತಿಳಿದಿದೆ. 

  ನೋಡಿದಾಕ್ಷಣ ಆಕರ್ಷಿಸುವ ಕಲರ್ ಸ್ಕೀಂ, ಶಕ್ತಿಶಾಲಿ ಆಂತರಿಕ ಭಾಗಗಳು ಹಾಗೂ ಪ್ರಭಾವಶಾಲಿ ಕೂಲಿಂಗ್ ಸಿಸ್ಟಂ ಎಲ್ಲವೂ ಸಹ 8.29 mm ದಪ್ಪನೆಯ ರಚನೆಯಲ್ಲಿ ಇದೆ. ನೀವು ಇಂದೇ ಖರೀದಿಸಬಹುದಾದ ಅತ್ಯಂತ ಮೋಹಕವಾದ ಹಾಗೂ ಗೇಮಿಂಗ್‌ಗೆ ಅತ್ಯಂತ ಸಮರ್ಥವಾದ ಸ್ಮಾರ್ಟ್‌ಫೋನ್‌ಗಳಲ್ಲಿ OnePlus 9 RT 5G ಒಂದಾಗಿದೆ.

  OnePlus 9RT 5G ಎರಡು ಬಣ್ಣಗಳಲ್ಲಿ ಲಭ್ಯವಿದೆ: ಹ್ಯಾಕರ್ ಬ್ಲ್ಯಾಕ್ ಮತ್ತು ನ್ಯಾನೊ ಸಿಲ್ವರ್. ಕಾನ್ಫಿಗರೇಷನ್ ಅವಲಂಬಿಸಿ, ಈ ಡಿವೈಸ್‌ನ ಬೆಲೆಯನ್ನು ರೂ. 42,999 (8+128) ಮತ್ತು ರೂ. 46,999 (12+256) ನಿಗದಿಪಡಿಸಲಾಗಿದೆ. ಈ ಡಿವೈಸ್‌ OnePlus.in, Amazon.in ಮತ್ತು Reliance Digital ನಲ್ಲಿ ಖರೀದಿಗೆ ಲಭ್ಯವಿದೆ.
  Published by:Soumya KN
  First published: