iPhones: ಚಾರ್ಜರ್‌ ಇಲ್ಲದೇ ಮಾರಾಟ ಮಾಡುವ ಐಪೋನ್‌ಗಳು ಬ್ಯಾನ್!

ಆಪಲ್‌ ತನ್ನ ಐಪೋನ್‌ಗಳೊಂದಿಗೆ ಚಾರ್ಜರ್‌ಗಳನ್ನು ಇರಿಸುವುದನ್ನು ನಿಲ್ಲಿಸಲು ನಿರ್ಧರಿಸಿದಾಗ, ಜಗತ್ತಿನಲ್ಲಿ ಈ ವಿಷಯ ಸುಮಾರು ಎರಡು ವರ್ಷಗಳಿಂದ ಬಹಳ ವಿವದಾತ್ಮಕವಾಗಿದೆ. ಇದರ ಹಿನ್ನೆಲೆಯಲ್ಲಿಯೇ ಬ್ರೆಜಿಲ್‌ ದೇಶವು ಚಾರ್ಜರ್‌ ಇಲ್ಲದೇ ಐಪೋನ್‌ ಮಾರಾಟವನ್ನು ನಿಷೇಧ ಮಾಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಅಮೆರಿಕದ ಟೆಕ್ ದೈತ್ಯ ಆಪಲ್ ಇಂಕ್. ಪವರ್ (Apple Inc. Power) ಅಡಾಪ್ಟರ್‌ಗಳಿಲ್ಲದೆ, ಚಾರ್ಜರ್ಗಳಿಲ್ಲದೆ ಹೊಸ ಐಫೋನ್‌ಗಳನ್ನು (iPhone) ಮಾರಾಟ ಮಾಡುತ್ತಿದೆ.  ಐಪೋನ್‌ಗಳೊಂದಿಗೆ ಚಾರ್ಜರ್‌ಗಳನ್ನು ಇರಿಸುವುದನ್ನು ನಿಲ್ಲಿಸಲು ನಿರ್ಧರಿಸಿದಾಗ, ಜಗತ್ತಿನಲ್ಲಿ ಈ ವಿಷಯ ಸುಮಾರು ಎರಡು ವರ್ಷಗಳಿಂದ ಬಹಳ ವಿವದಾತ್ಮಕವಾಗಿದೆ (Controversial). ಇದರ ಹಿನ್ನೆಲೆಯಲ್ಲಿಯೇ ಬ್ರೆಜಿಲ್‌ (Brazil) ದೇಶವು ಚಾರ್ಜರ್‌ ಇಲ್ಲದೇ ಐಪೋನ್‌ ಮಾರಾಟವನ್ನು ನಿಷೇಧ ಮಾಡಿದೆ. ಬ್ರೆಜಿಲಿಯನ್ ಪ್ರಕಟಣೆಯ G1 ಪ್ರಕಾರ, “ಬ್ರೆಜಿಲ್‌ನ ಮಿನಿಸ್ಟೆರಿಯೊ ಡಾ. ಜಸ್ಟಿಕಾ (ನ್ಯಾಯ ಸಚಿವಾಲಯ) ದೇಶಾದ್ಯಂತ ಐಫೋನ್ ಮಾರಾಟವನ್ನು ನಿಷೇಧಿಸಿದೆ (Ban). ಚಾರ್ಜರ್‌ಗಳನ್ನು ಸೇರಿಸುವಂತೆ ಬ್ರೆಜಿಲ್‌ ನ್ಯಾಯ ಸಚಿವಾಲಯ ಈ ಹಿಂದೆ ಹೇಳಿತ್ತು. ಆದರೆ ಅವರ ಮಾತಿಗೆ ಆಪಲ್ ನಿರಾಕರಿಸಿರುವುದು ಈ ನಿರ್ಧಾರದ ಹಿಂದಿನ ಪ್ರಾಥಮಿಕ ತಾರ್ಕಿಕವಾಗಿದೆ” ಎಂದು ಹೇಳಿದೆ.

ಏನಪ್ಪ ಬ್ರೆಜಿಲ್‌ ದೇಶ ಐಪೋನ್‌ಗಳನ್ನು ನಿಷೇಧ ಮಾಡಿದೆಯೇ? ಯಾಕೆ ? ಎಂಬುದಕ್ಕೆ ಉತ್ತರವನ್ನು ಮುಂದೆ ತಿಳಿಯೋಣ ಬನ್ನಿ.

ಇಡೀ ದೇಶದಲ್ಲಿಯೇ ಆಪಲ್‌ ಕಂಪನಿಯ ಐಪೋನ್‌ಗಳ ನಿಷೇಧ 
ಇಡೀ ದೇಶದಲ್ಲಿಯೇ ಈ ಆಪಲ್‌ ಕಂಪನಿಯ ಐಪೋನ್‌ಗಳನ್ನು ನಿಷೇಧ ಮಾಡಲಾಗಿದೆ. ಈ ನಿಷೇಧವನ್ನು ಮೀರಿ ಆಪಲ್‌ ಕಂಪನಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಿದರೆ 12 ಮಿಲಿಯನ್‌ ರೂ. ದಂಡ ವಿಧಿಸಲಾಗುತ್ತದೆ ಎಂದು ನ್ಯಾಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: Mi 11X Pro: 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್​ಫೋನ್​ ಮೇಲೆ ಭರ್ಜರಿ ರಿಯಾಯಿತಿ

ಕಂಪನಿಯು ಚಾರ್ಜ್‌ರ್‌ ಬಗ್ಗೆ ಇನ್ನು ಯಾವ ನಿರ್ಧಾರವನ್ನು ತೆಗೆದುಕೊಂಡಿಲ್ಲ. ದಂಡವನ್ನು ತಪ್ಪಿಸಿಕೊಳ್ಳವಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡುತ್ತಿದೆ. ಇದರ ಕುರಿತು ಬ್ರೆಜಿಲ್‌ನ ನ್ಯಾಯ ಸಚಿವಾಲಯವು ಆಪಲ್‌ ಕಂಪನಿ ತನ್ನ ಐಪೋನ್‌ಗಳನ್ನು ಮಾರಾಟ ಮಾಡಲೇ ಬೇಕು ಎಂದರೆ ಅದು ಐಪೋನ್‌ ಜೊತೆ ಚಾರ್ಜರ್‌ಗಳನ್ನು ನೀಡಲೇಬೇಕು. ಆಗ ಮಾತ್ರ ದಂಡ ವಿಧಿಸುವುದನ್ನು ನಿಲ್ಲಿಸುತ್ತೇವೆ” ಎಂದು ಖಡಕ್‌ ಆಗಿ ಹೇಳಿದೆ.

ಸಂದಿಗ್ಧ ಪರಿಸ್ಥಿತಿಯಲ್ಲಿ ಆಪಲ್‌ ಕಂಪನಿ  
ಇನ್ನು ಐಪೋನ್‌ 14 ಬಿಡುಗಡೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಇರುವಾಗ ಬ್ರೇಜಿಲ್‌ ದೇಶವು ಈ ರೀತಿಯ ನಿಷೇಧ ಹೇರಿರುವುದು ಭಾರೀ ಹೊಡೆತ ಬಿದ್ದಂತಾಗಿದ್ದು, ಆಪಲ್‌ಗೆ ಇದು ಸಂದಿಗ್ಧ ಪರಿಸ್ಥಿತಿ ಎಂದು ಹೇಳಬಹುದು. ಆಪಲ್‌ ಕಂಪನಿಯು ಇದರ ಬಗ್ಗೆ ಯಾವುದೇ ದೃಡೀಕರಣವನ್ನು ಸಹ ನೀಡಿಲ್ಲ. ಈ ಸಲ ಬಿಡುಗಡೆ ಆಗುತ್ತಿರುವ ಐಪೋನ್‌ಗಳು ಕೂಡ ಚಾರ್ಜರ್‌ಗಳಿಲ್ಲದೇ ಬರುತ್ತವೆ ಎಂಬುದು ನಿಜವಾಗಿದೆ. ಆದ್ದರಿಂದ ಬ್ರೆಜಿಲ್‌ ಐಪೋನ್‌ಗಳ ಮೇಲೆ ನಿಷೇಧ ಹೇರಿದೆ.

ಈ ಹಿಂದೆಯೂ ಇಂಥದ್ದೇ ಘಟನೆ ನಡೆದಿತ್ತಂತೆ 
ಆಪಲ್‌ ಕಂಪನಿ ಮೇಲೆ ಬ್ರೆಜಿಲ್‌ ದಾಳಿ ಮಾಡುತ್ತಿರುವುದು ಇದೇ ಮೊದಲಲ್ಲ. ಐಫೋನ್ 12 ಸರಣಿ ಪೋನ್‌ ಕೂಡ ಚಾರ್ಜರ್‌ ಇಲ್ಲದೆ ಮಾರುಕಟ್ಟೆಗೆ ಬಂದಾಗ ಕೂಡ ಭಾರೀ ಮೊತ್ತದ ದಂಡವನ್ನು ವಿಧಿಸಿತ್ತು. ಬ್ರೆಜಿಲ್ ಆಪಲ್ ಕಂಪನಿಗೆ ಬರೋಬ್ಬರಿ 10 ಮಿಲಿಯನ್‌ ರೂ. ಗಳ ದಂಡವನ್ನು ವಿಧಿಸಿತ್ತು. ಆಗ ಕೊನೆಗೂ ಬ್ರೆಜಿಲ್‌ನ ನಿಷೇಧ ಆಜ್ಞೆಗೆ ಮಣಿದಿದ್ದ ಆಪಲ್‌ ಕಂಪನಿಯು ತನ್ನ ಐಪೋನ್‌ಗಳಿಗೆ ಚಾರ್ಜರ್‌ಗಳನ್ನು ಸೇರಿಸಿ, ಬ್ರೆಜಿಲ್‌ನ ಒಂದು ರಾಜ್ಯದಲ್ಲಿ ಮಾರಾಟ ಮಾಡಿತ್ತು. ಇಡೀ ದೇಶದಲ್ಲಿ ಆಪಲ್‌ ಕಂಪನಿಯ ಉತ್ಪನ್ನವಾದ ಐಪೋನ್‌ಗಳ ಜೊತೆ ಚಾರ್ಜರ್‌ ಅನ್ನು ಕಡ್ಡಾಯವಾಗಿ ನೀಡಲೇಬೇಕು ಎಂದು ಈ ಸಲವೂ ಬ್ರೆಜಿಲ್‌ ಆಪಲ್‌ನ ಐಪೋನ್‌ಗಳಿಗೆ ನಿಷೇಧ ಹೇರಿದೆ. ಹಾಗಿದ್ರೆ ಆಪಲ್‌ ಕಂಪನಿ ಮುಂದೆ ಏನು ಮಾಡುವುದು ಎಂಬುದೇ ಭಾರೀ ಕುತುಹಲದ ಪ್ರಶೆ ಆಗಿದೆ.

ಇದನ್ನೂ ಓದಿ:  Nokia 8210 4G: ಸ್ಮಾರ್ಟ್​ಫೋನ್​ ಯುಗದಲ್ಲಿ ನೋಕಿಯಾ ಫೀಚರ್​ ಫೋನ್​ಗೆ ಭಾರೀ ಬೇಡಿಕೆ! ಕಡಿಮೆ ಬೆಲೆಗೆ ಸೇಲ್​ ಮಾಡುತ್ತಿದೆ ಅಮೆಜಾನ್​

2020 ರಲ್ಲಿ, ಆಪಲ್, ಹೆಚ್ಚು 'ಪರಿಸರ ಪ್ರಜ್ಞೆ' ಎನ್ನುವ ಕಾರಣದ ಅಡಿಯಲ್ಲಿ, ಇ-ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ತಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಚಾರ್ಜರ್ ಗಳು ಮತ್ತು ಇಯರ್‌ಫೋನ್‌ಗಳನ್ನು ಸೇರಿಸುವುದನ್ನು ನಿಲ್ಲಿಸಲು ನಿರ್ಧರಿಸಿತ್ತು. ಇದರಿಂದಾಗಿ ಕಂಪನಿಯು ಒಂದೇ ವರ್ಷದಲ್ಲಿ 6.5 ಬಿಲಿಯುನ್ ಯುಎಸ್ ಡಾಲರ್ ಮೊತ್ತವನ್ನು ಉಳಿಸಿದೆ ಎಂದು ಹೇಳಲಾಗಿದೆ.
Published by:Ashwini Prabhu
First published: