ಚೀನಾ ಮೊಬೈಲ್ ಕಂಪೆನಿ ಜೊತೆಗಿದ್ದ ಒಪ್ಪಂದವನ್ನು ರದ್ದು ಮಾಡಿದ ಮೊದಲ ನಟ!

Kartik Aaryan: ನಟ-ನಟಿಯರು ಸಿನಿಮಾದಷ್ಟೇ ಜಾಹೀರಾತಿನಲ್ಲೂ ಹೆಚ್ಚು ಎಣಿಕೆ ಮಾಡುತ್ತಾರೆ. ಅಧಿಕ ಸಂಭಾವನೆಯನ್ನು ಪಡೆಯುವ ಮೂಲಕ ಇಂತಿಷ್ಟು ವರ್ಷದ ಒಪ್ಪಂದಕ್ಕೆ ಸಹಿ ಹಾಕಿಕೊಂಡಿರುತ್ತಾರೆ. ಆದರೀಗ ನಟ ಕಾರ್ತಿಕ್​ ಆರ್ಯನ್​ ಮಾತ್ರ ಚೀನಾ ಒಪ್ಪೊ ಸ್ಮಾರ್ಟ್​ಫೋನ್​ ಜೊತೆಗಿದ್ದ ಒಪ್ಪಂದದಿಂದ ಹಿಂದೆ ಸರಿದಿದ್ದಾರೆ.

news18-kannada
Updated:July 10, 2020, 7:04 PM IST
ಚೀನಾ ಮೊಬೈಲ್ ಕಂಪೆನಿ ಜೊತೆಗಿದ್ದ ಒಪ್ಪಂದವನ್ನು ರದ್ದು ಮಾಡಿದ ಮೊದಲ ನಟ!
ಕಾರ್ತಿಕ್​ ಆರ್ಯನ್
  • Share this:
ಸೆಲೆಬ್ರಿಟಿಗಳು ಅಂದಮೇಲೆ ಸಿನಿಮಾ ಮಾತ್ರವಲ್ಲದೆ,  ಜಾಹೀರಾತುಗಳಲ್ಲಿ ನಟಿಸಿ ತಮ್ಮ ತಮ್ಮ ಆದಾಯವನ್ನು ಹೆಚ್ಚು ಮಾಡುತ್ತಾರೆ. ಎಲ್ಲ ಸಿನಿಮಾರಂಗದ ನಟರು ಸ್ಮಾರ್ಟ್​ಫೋನ್​, ಟಿವಿ, ಹೆಡ್​ಫೋನ್​​ ಮುಂತಾದ ಉತ್ಪಾದನ ಕಂಪೆನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಜಾಹೀರಾತಿನಲ್ಲಿ ನಟಿಸುತ್ತಾರೆ. ಅದರಂತೆ ಬಾಲಿವುಡ್​​ ನಟ ಕಾರ್ತಿಕ್​ ಆರ್ಯನ್​ ಕೂಡ ಚೀನಾ ಮೊಬೈಲ್​ ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೀಗ ಈ ಒಪ್ಪಂದದಿಂದ ಹೊರಬಂದಿದ್ದಾರೆ.

ನಟ-ನಟಿಯರು ಸಿನಿಮಾದಷ್ಟೇ ಜಾಹೀರಾತಿನಲ್ಲೂ ಹೆಚ್ಚು ಎಣಿಕೆ ಮಾಡುತ್ತಾರೆ. ಅಧಿಕ ಸಂಭಾವನೆಯನ್ನು ಪಡೆಯುವ ಮೂಲಕ ಇಂತಿಷ್ಟು ವರ್ಷದ ಒಪ್ಪಂದಕ್ಕೆ ಸಹಿ ಹಾಕಿಕೊಂಡಿರುತ್ತಾರೆ. ಆದರೀಗ ನಟ ಕಾರ್ತಿಕ್​ ಆರ್ಯನ್​ ಮಾತ್ರ ಚೀನಾ ಒಪ್ಪೊ ಸ್ಮಾರ್ಟ್​ಫೋನ್​ ಜೊತೆಗಿದ್ದ ಒಪ್ಪಂದದಿಂದ ಹಿಂದೆ ಸರಿದಿದ್ದಾರೆ.

ಇತ್ತೀಚೆಗೆ ಚೀನಾ-ಭಾರತ ಯೋಧರ ನಡುವ ಗಾಲ್ವಾನ್​ ಕಣಿವೆಯಲ್ಲಿ ಸಂಘರ್ಷ ಉಂಟಾಗಿತ್ತು. ಭಾರತದ 20 ಯೋಧರು ಈ ಸಂಘರ್ಷದಲ್ಲಿ ಹತರಾದರು. ಈ ಘಟನೆ ನಡೆದ ಕೆಲವು ದಿನಗಳಲ್ಲೇ ಕೇಂದ್ರ ಸರ್ಕಾರ ಚೀನಾದ 59 ಆ್ಯಪ್​ಗಳನ್ನು ಬ್ಯಾನ್​ ಮಾಡಿತ್ತು, ಈ ವಿಚಾರಕ್ಕೆ ಸಂಬಂಧಿಸಿ ಅನೇಕರು ಕೇಂದ್ರ ಸರ್ಕಾರ ಮಾಡಿದ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಚೀನಿ ಸರಕುಗಳ ಮೇಲೆ ಕಡಿವಾಣ ಹಾಕಬೇಕು ದೇಶಿಯ ವಸ್ತುಗಳ ಉತ್ಪಾದನೆ ಮತ್ತು ಬಳಕೆ ಹೆಚ್ಚಾಗಬೇಕು ಎಂಬ ಕೂಗುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿತ್ತು. ಅನೇಕರು ಚೀನಾ ವಸ್ತುಗಳನ್ನು ಬಿಟ್ಟು ದೇಶಿಯ ವಸ್ತುಗಳ ಬಳಕೆಯತ್ತ ಚಿತ್ತ ಹರಿಸಿದರು. ಇದೀಗ ಬಾಲಿವುಡ್​ ನಟ ಅದೇ ಕಾರಣಕ್ಕೆ ಚೀನಾದ ಒಪ್ಪೊ ಸ್ಮಾರ್ಟ್​ಫೋನ್​ ಜೊತೆಗಿದ್ದ ಒಪ್ಪಂದದಿಂದ ಹೊರಬಂದಿದ್ದಾರೆ. ಮಾತ್ರವಲ್ಲದೆ. ಚೀನಾ ಕಂಪನಿ ಜೊತೆಗಿದ್ದ ಒಪ್ಪಂದವನ್ನು ಕಡಿತ ಮಾಡಿದ ಮೊದಲ ನಟ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಎಲ್ಲದಕ್ಕಿಂತ ದೇಶ ಮೊದಲು ಎಂದು ಸಂಗತಿಯನ್ನು ಕಾರ್ತಿಕ್​ ಆರ್ಯನ್​ ಸಾರಿದ್ದಾರೆ.

ಕಾರ್ತಿಕ್​ ಆರ್ಯನ್


ಇನ್ನು ಬಾಲಿವುಡ್​​ ನಟಿ ದೀಪಿಕಾ ಪಡುಕೋಣೆ, ರಣ್​ಬೀರ್​ ಕಪೂರ್​, ಅಮೀರ್​ ಖಾನ್​, ಸಾರಾ ಆಲಿ ಖಾನ್​, ವಿಕ್ಕಿ ಕೌಶಾಲ್​​, ಕತ್ರೀನಾ ಕೈಫ್​ ಚೀನಾ ಉತ್ಪನ್ನಗಳ ಪ್ರಚಾರದಲ್ಲಿ ತೆಡಗಿಸಿಕೊಂಡಿದ್ದಾರೆ. ಆದರೀಗ ಇವರೆಲ್ಲರು ಮುಂದೇನು ಮಾಡುತ್ತಾರೆ? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
Published by: Harshith AS
First published: July 10, 2020, 7:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading