ದುಬಾರಿ ಬೆಲೆಯ ಸ್ಪೋರ್ಟ್ಸ್​ ಕಾರು ಖರೀದಿಸಿದ ಬಾಬಿ ಡಿಯೋಲ್​


Updated:June 28, 2018, 3:23 PM IST
ದುಬಾರಿ ಬೆಲೆಯ ಸ್ಪೋರ್ಟ್ಸ್​ ಕಾರು ಖರೀದಿಸಿದ ಬಾಬಿ ಡಿಯೋಲ್​

Updated: June 28, 2018, 3:23 PM IST
ಹಲವಾರು ವರ್ಷಗಳ ಬಳಿಕ ರೇಸ್​ 3ನಲ್ಲಿ ಕಾಣಿಸಿಕೊಂಡ ಬಾಬಿ ಡಿಯೋಲ್​ ಮತ್ತೊಮ್ಮೆ ಸುದ್ದಿಯಲ್ಲಿದ್ದು ಈ ಬಾರಿ ದುಬಾರಿ ಬೆಲೆಯ ರೇಂಜ್ ರೋವರ್ ಸ್ಪೋರ್ಟ್ ಕಾರು ಖರೀದಿಸುವ ಮೂಲಕ ಬಾಬಿ ಮುಖ್ಯವಾಹಿನಿಗೆ ಬಂದಿದ್ದಾರೆ.

ಸಲ್ಮಾನ್ ಖಾನ್ ನಟನೆಯ ರೇಸ್ 3ನಲ್ಲಿ ಅಭಿನಯಿಸುವ ಮೂಲಕ ಬಿ ಟೌನ್​ಗೆ ಮರು ಪ್ರವೇಶಿಸಿದ ಬಾಬಿ ಇದೀಗ ಕಳೆದ ತಿಂಗಳಷ್ಟೇ ಬಿಡುಗಡೆಯಾಗಿದ್ದ ತಮ್ಮ ನೆಚ್ಚಿನ ರೇಂಜ್ ರೋವರ್ ಸ್ಪೋಟ್ ಕಾರನ್ನು 1.20 ಕೋಟಿ ಬೆಲೆ ತೆತ್ತು ಖರೀದಿಸಿದ್ದಾರೆ.

ಬಾಬಿ ಖರೀದಿಸಿದ ಕಾರಿನ ಬಗ್ಗೆ ತಿಳಿದುಕೊಳ್ಳುವುದಾದರೆ ರೇಂಜ್ ರೋವರ್ ಸ್ಪೋರ್ಟ್ ಮತ್ತು ರೇಂಜ್ ರೋವರ್ ಫೇಸ್‍‍ಲಿಫ್ಟ್ ಕಾರುಗಳು 3.0 ಲೀಟರ್ ಎಸ್​ಡಿವಿ6 ಮಿಲ್ ಡೀಸೆಲ್ ಎಂಜಿನ್ ಹೊಂದಿದೆ. 289 ಬಿಹೆಚ್‍ಪಿ ಮತ್ತು 289ಎನ್ಎಂ ಟಾರ್ಕ್ ಶಕ್ತಿಯನ್ನು ಪಡೆದಿದೆ. 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಲಕ್ಷ್ಯುರಿ ಕಾರು ಮತ್ತು ಬೈಕ್​ಗಳು ಬಾಬಿಗೆ ಹೊಸದಲ್ಲ, ಏಕೆಂದರೆ ಇವರ ಬಳಿ ಲಾಂಡ್​ ರೋವರ್​ ಫ್ರೀಲಾಂಡರ್​2, ರೇಂಜ್​ ರೋವರ್​ ವಾಗ್​, ಮರ್ಸಿಡಿಸ್​ ಬೆಂಜ್​ ಎಸ್​ ಕ್ಲಾಸ್​ ಹಾಗೂ ಪೋರ್ಶೆ ಸಯೆನ್ನೆ ಕೂಡಾ ಬಳಕೆ ಮಾಡುತ್ತಿದ್ದಾರೆ.
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...