100 ಅಂತರಾಷ್ಟ್ರೀಯ ಟಿವಿ ಚಾನೆಲ್‌ಗಳನ್ನು ಮುಚ್ಚಲಿರುವ ಡಿಸ್ನಿ; ಕಾರಣವೇನು ಗೊತ್ತಾ?

ಜೆಪಿ ಮೋರ್ಗಾನ್ ಚೇಸ್ ಆಂಡ್ ಕಂಪನಿಯ ತಂತ್ರಜ್ಞಾನ ಮತ್ತು ಮಾಧ್ಯಮ ಸಮ್ಮೇಳನದಲ್ಲಿ ಸೋಮವಾರ ಮಾತನಾಡಿದ ವಾಲ್ಟ್ ಡಿಸ್ನಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಬ್ ಚಾಪೆಕ್, ಕಂಪನಿಯು ಕಳೆದ ವರ್ಷ ಸ್ಥಗಿತಗೊಳಿಸಿದ 30 ವಿದೇಶಿ ನೆಟ್‌ವರ್ಕ್‌ಗಳಿಗೆ ಹೆಚ್ಚುವರಿಯಾಗಿ ಇದನ್ನು ಮುಚ್ಚಲಾಗುತ್ತಿದೆ ಎಂದಿದ್ದಾರೆ.

Disney

Disney

  • Share this:

ಪ್ರಸಿದ್ಧ ವಾಲ್ಟ್ ಡಿಸ್ನಿ ಕಂಪನಿ ಈ ವರ್ಷ ತನ್ನ 100 ಅಂತಾರಾಷ್ಟ್ರೀಯ ಟಿವಿ ಚಾನೆಲ್‌ಗಳನ್ನು ಮುಚ್ಚಲು ಯೋಜಿಸಿದೆ. ಏಕೆಂದರೆ ಡಿಸ್ನಿ+ ನಂತಹ ಸ್ಟ್ರೀಮಿಂಗ್ ಸೇವೆಗಳಿಗೆ ಪ್ರಾಮುಖ್ಯತೆ ನೀಲು ನಿರ್ಧರಿಸಿರುವ ಕಂಪನಿ ಭವಿಷ್ಯದಲ್ಲಿ ಸಂಪೂರ್ಣವಾಗಿ ಕೇಂದ್ರೀಕರಿಸಲಿದೆ ಎಂದು ತಿಳಿದುಬಂದಿದೆ. ಜೆಪಿ ಮೋರ್ಗಾನ್ ಚೇಸ್ ಆಂಡ್ ಕಂಪನಿಯ ತಂತ್ರಜ್ಞಾನ ಮತ್ತು ಮಾಧ್ಯಮ ಸಮ್ಮೇಳನದಲ್ಲಿ ಸೋಮವಾರ ಮಾತನಾಡಿದ ವಾಲ್ಟ್ ಡಿಸ್ನಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಬ್ ಚಾಪೆಕ್, ಕಂಪನಿಯು ಕಳೆದ ವರ್ಷ ಸ್ಥಗಿತಗೊಳಿಸಿದ 30 ವಿದೇಶಿ ನೆಟ್‌ವರ್ಕ್‌ಗಳಿಗೆ ಹೆಚ್ಚುವರಿಯಾಗಿ ಇದನ್ನು ಮುಚ್ಚಲಾಗುತ್ತಿದೆ ಎಂದಿದ್ದಾರೆ.


"ಆ ಕಂಟೆಂಟ್‌ನ ಬಹುಪಾಲು ಡಿಸ್ನಿ+ ಗೆ ವಲಸೆ ಹೋಗುತ್ತದೆ". "ನಾವು ನೇರ ಗ್ರಾಹಕನ ಕಡೆಗೆ ತಿರುಗಲಿದ್ದು, ಅದೇ ನಮ್ಮ ಒಂದು ಪ್ರಮುಖ ತಂತ್ರವಾಗಿ ಮುಂದುವರೆದಿದೆ." ಎಂದು ಚಾಪೆಕ್ ಹೇಳಿದರು.


ಕಂಪನಿಯ ನೆಟ್‌ವರ್ಕ್‌ಗಳ ಶುದ್ಧೀಕರಣವು ಕಳೆದ ವರ್ಷ ಯು.ಕೆ. ಯಲ್ಲಿ ಡಿಸ್ನಿ ಚಾನೆಲ್ ಅನ್ನು ಒಳಗೊಂಡಿತ್ತು. ಇದು ಮನರಂಜನಾ ದೈತ್ಯವನ್ನು ಸುವ್ಯವಸ್ಥಿತಗೊಳಿಸಲು ಮತ್ತು ಆಧುನೀಕರಿಸಲು ಚಾಪೆಕ್ ಮಾಡಿದ ಪ್ರಯತ್ನಗಳ ಭಾಗವಾಗಿದೆ. ಈ ವರ್ಷ, ಕಂಪನಿಯು ಸ್ಟಾರ್‌ ಬ್ರ್ಯಾಂಡ್‌ ಅನ್ನು ಬಳಸಿಕೊಂಡು ಯುರೋಪಿನಲ್ಲಿ ತನ್ನ ಡಿಸ್ನಿ + ಕೊಡುಗೆಗೆ ವಯಸ್ಕರಿಗೆ ಹೆಚ್ಚಿನ ಕಂಟೆಂಟ್‌ ಅನ್ನು ಸೇರಿಸಿದೆ. ಈ ಪ್ರದೇಶದ ಬಹುಪಾಲು ಡಿಸ್ನಿ + ಗ್ರಾಹಕರು ಸ್ಟಾರ್ ಪ್ರೋಗ್ರಾಮಿಂಗ್ ವೀಕ್ಷಿಸಲು ಪ್ರಾರಂಭಿಸಿದ್ದಾರೆ ಎಂದು ಚಾಪೆಕ್ ಹೇಳಿದರು.

ಡಿಸ್ನಿ ಕಳೆದ ವರ್ಷ ಭಾರತದಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಅನ್ನು ಪರಿಚಯಿಸಿತು. ಕ್ರಿಕೆಟ್ ಪಂದ್ಯಗಳು ಮತ್ತು ಇತರ ಸ್ಥಳೀಯ ಕಂಟೆಂಟ್‌ ಅನ್ನು ಒಳಗೊಂಡಿರುವ ಆ ಸೇವೆಯು ಜಾಗತಿಕವಾಗಿ ಡಿಸ್ನಿ+ನ ಒಟ್ಟು ಚಂದಾದಾರರ ಸಂಖ್ಯೆಯ ಶೇ. 30 ರಷ್ಟಿದೆ. ಜಾಗತಿಕವಾಗಿ ಶೇ. 103.6 ಮಿಲಿಯನ್‌ ಜನರು ಡಿಸ್ನಿ+ನ ಸಬ್‌ಸ್ಕ್ರೈಬರ್‌ಗಳಾಗಿದ್ದಾರೆ. ಏಪ್ರಿಲ್ನಲ್ಲಿ, ಡಿಸ್ನಿ ಆಗ್ನೇಯ ಏಷ್ಯಾ ಮತ್ತು ಹಾಂಗ್ ಕಾಂಗ್‌ನಲ್ಲಿ ತನ್ನ ಹಲವಾರು ಕ್ರೀಡಾ ನೆಟ್‌ವರ್ಕ್‌ಗಳನ್ನು ಮುಚ್ಚುವ ಯೋಜನೆಯನ್ನು ಪ್ರಕಟಿಸಿತು.

ಮುಚ್ಚುವಿಕೆಯು ಕಂಪನಿಯು ವೈಯಕ್ತಿಕ ಮಾರುಕಟ್ಟೆಗಳಲ್ಲಿ ಹೊಂದಿರುವ ಒಪ್ಪಂದಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಚಾಪೆಕ್ ಸೋಮವಾರ ಹೇಳಿದರು. ಡಿಸ್ನಿಯ ಕೆಲವು ಸಾಂಪ್ರದಾಯಿಕ ಟಿವಿ ನೆಟ್‌ವರ್ಕ್‌ಗಳ ಲಾಭವು ಅದರ ಸ್ಟ್ರೀಮಿಂಗ್ ಸೇವೆಗಳಲ್ಲಿ ಕಾರ್ಯನಿರ್ವಹಿಸಬಹುದಾದ ಪ್ರೋಗ್ರಾಮಿಂಗ್‌ಗೆ ಪಾವತಿಸಲು ಸಹಾಯ ಮಾಡುತ್ತದೆ, ಇದರಲ್ಲಿ ಯು.ಎಸ್‌ನಲ್ಲಿ ಹುಲು ಮತ್ತು ಇಎಸ್‌ಪಿಎನ್ + ಸೇರಿವೆ.
ಆದರೆ ಗ್ರಾಹಕರು ಆನ್‌ಲೈನ್‌ನಲ್ಲಿ ಕಂಟೆಂಟ್‌ ಅನ್ನು ವೀಕ್ಷಿಸಲು ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ ಮತ್ತು ಡಿಸ್ನಿ ಟ್ರೆಂಡ್‌ನಿಂದ ಮುಂದೆ ಇರಲು ಬಯಸುತ್ತದೆ ಎಂದು ಚಾಪೆಕ್ ಹೇಳಿದರು.


"ನಾವು ಆ ಅಲೆಯ ಹಿಂಭಾಗದಲ್ಲಿರಲು ಬಯಸುವುದಿಲ್ಲ". "ನಾವು ಆ ಅಲೆಯ ಮುಂಭಾಗದ ತುದಿಯಲ್ಲಿರಲು ಬಯಸುತ್ತೇವೆ." ಎಂದು ವಾಲ್ಟ್ ಡಿಸ್ನಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಬ್ ಚಾಪೆಕ್ ಹೇಳಿದ್ದಾರೆ.
First published: