ಬಹು ನಿರೀಕ್ಷಿತ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬಿಡುಗಡೆ


Updated:July 18, 2018, 8:28 PM IST
ಬಹು ನಿರೀಕ್ಷಿತ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬಿಡುಗಡೆ

Updated: July 18, 2018, 8:28 PM IST
ಬಹು ನಿರೀಕ್ಷೆಯ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಪ್ರೀಮಿಯಂ ಕ್ರೀಡಾ ಬೈಕ್​ಗಳಾದ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು ಬಿಡುಗಡೆಯಾಗಿದ್ದು, ಹೊಸ ಬೈಕ್‌ಗಳು ಹತ್ತಾರು ಹೊಸತನಗಳನ್ನು ಒಳಗೊಂಡಿದೆ.

ಟಿವಿಎಸ್​ ಜತೆಗಾರಿಕೆಯಲ್ಲಿ ಇದೇ ಮೊದಲ ಬಾರಿಗೆ ಮೇಕ್​ ಇನ್​ ಇಂಡಿಯಾ ಯೋಜನೆಯಡಿ ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣಗೊಂಡ ಜಿ 310 ಆರ್ ಮತ್ತು ಜಿ 310 ಜಿಎಸ್ ಇಲ್ಲಿಂದಲೇ ವಿದೇಶಕ್ಕೆ ರಫ್ತು ಮಾಡಲಾಗುತ್ತದೆ ಎಂದು ಹೇಳಲಾಗಿದೆ.

2018 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿರುವ ಎಂಟ್ರಿ ಲೆವೆಲ್ ಕ್ರೀಡಾ ಬೈಕ್‌ಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಬಿಎಂಡಬ್ಲ್ಯು ಆರಂಭಿಸಿದೆ. ಇದರ ವಿಶೇಷತೆಗಳನ್ನು ಇಲ್ಲಿ ನೀಡಲಾಗಿದೆ.


Loading...

ಕಳೆದ ವರ್ಷ ಬಿಡುಗಡೆಯಾದ ಅಪಾಚೆ ಆರ್​ಟಿಆರ್ 310ಆರ್​​ನಂತೆಯೇ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು ವಿನ್ಯಾಸ ಮಾಡಲಾಗಿದೆ. ಎರಡೂ ಬೈಕ್​ಗಳು 313 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿದ್ದು, 28 ಎನ್​ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ವ್ಯವಸ್ಥೆಯಿದೆ. ಲಗೆಜ್ ಕ್ಯಾರಿಯರ್, ಟಾಪ್ ಬಾಕ್ಸ್, ಸೆಂಟರ್ ಸ್ಟ್ಯಾಂಡ್, ಜಿಪಿಎಸ್ ಸಪೋರ್ಟ್, ಜಿಪಿಎಸ್ ನೇವಿಗೇಟರ್ ವ್ಯವಸ್ಥೆಯಿದೆ.

ಗಂಟೆಗೆ 143 ಕಿ.ಮೀ ಟಾಪ್ ಸ್ಪೀಡ್ ಕ್ರಮಿಸುವ ಸಾಮರ್ಥ್ಯವಿದ್ದು, 12-ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯದೊಂದಿಗೆ ಪ್ರತಿ ಲೀಟರ್‌‌ಗೆ 30 ಕಿ.ಮಿ ಮೈಲೇಜ್ ಪಡೆದುಕೊಂಡಿರುತ್ತವೆ.

ಬೆಲೆ: (ಎಕ್ಸ್ ಶೋ ರೂಂ ಬೆಲೆ)
ಬಿಎಂಡಬ್ಲ್ಯು ಜಿ 310 ಆರ್: 2.99 ಲಕ್ಷ ರೂ.
ಬಿಎಂಡಬ್ಲ್ಯು ಜಿ 310 ಜಿಎಸ್: 3.49 ಲಕ್ಷ ರೂ.

ಆಫರ್​:
ಮೂರು ವರ್ಷಗಳ ಅನಿಯಮಿತ ಕೀ.ಮೀ. ವಾರಂಟಿ ನೀಡಲು ಸಂಸ್ಥೆ ತೀರ್ಮಾನಿಸಿದೆ, ಇದರೊಂದಿಗೆ ಈ ವಾರೆಂಟಿಯನ್ನು ಮತ್ತೆ ಎರಡು ವರ್ಷಗಳಿಗೆ ಹೆಚ್ಚಿಸುವ ಅವಕಾಶ ಕೂಡಾ ನೀಡಿದೆ.

ಲಭ್ಯವಿರುವ ರಾಜ್ಯಗಳು

ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್​ಗಳು ಪುಣೆ, ಕೇರಳ, ಚೆನ್ನೈ, ಅಹಮದಾಬಾದ್, ಬೆಂಗಳೂರು ಮತ್ತು ದೆಹಲಿಯಲ್ಲಿ ವಿತರಕರಿದ್ದು, ಮುಂದಿನ ದಿನಗಳಲ್ಲಿ ಚಂಡೀಗಢ, ಇಂದೋರ್ ಮತ್ತು ಹೈದರಾಬಾದ್​ಗೂ ತಲುಪಿಸುವ ಚಿಂತನೆ ನಡೆಸಿದೆ.

First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ