ಜುಲೈ 18ರಂದು ಮಾರುಕಟ್ಟೆಗೆ ಬರಲಿದೆ ಚೆನ್ನೈನಲ್ಲಿ ನಿರ್ಮಿಸಿರುವ BMW G 310 R, ಬೈಕ್​


Updated:June 28, 2018, 4:48 PM IST
ಜುಲೈ 18ರಂದು ಮಾರುಕಟ್ಟೆಗೆ ಬರಲಿದೆ ಚೆನ್ನೈನಲ್ಲಿ ನಿರ್ಮಿಸಿರುವ BMW G 310 R, ಬೈಕ್​

Updated: June 28, 2018, 4:48 PM IST
ಬಹು ನಿರೀಕ್ಷೆಯ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು ಜುಲೈ 18ರಂದು ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದೆ.

ಈಗಾಗಲೇ ಈ ಎರಡು ಬೈಕ್​ಗಳಿಗೆ ಮುಂಗಡ ಬುಕ್ಕಿಂಗ್​ ಆಯ್ಕೆಯನ್ನು ನೀಡಲಾಗಿದ್ದು, ಈಚೆಗೆ ನಡೆದ ಆಟೋ ಎಕ್ಸ್​ಪೋದಲ್ಲಿ ಈ ಬೈಕ್​ಗಳ ಪ್ರದರ್ಶನ ನಡೆದಿತ್ತು. ಮತ್ತೊಂದು ಬಹು ಮುಖ್ಯ ಅಂಶವೆಂದರೆ ಈ ಬಿಎಂಡಬ್ಲ್ಯೂ ಭಾರತದ ಟಿವಿಎಸ್​ ಸಂಸ್ಥೆಯೊಂದಿಗೆ ಕೈ ಜೋಡಿಸಿ ಬಿಡುಗಡೆ ಮಾಡುವ ಮೊದಲ ಬೈಕ್​ ಆಗಿದೆ. ಈ ಬೈಕ್​ನ ಮಾಹಿತಿ ಇಲ್ಲಿದೆ ನೋಡಿ

ಬೆಲೆ: ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್​ಗಳ ಬೆಲೆ ಸುಮಾರು 3 ರಿಂದ 3.5 ಲಕ್ಷದವರೆಗೂ ಇರಬಹುದು ಎಂದು ಊಹಿಸಲಾಗಿದೆ.

ತಮಿಳುನಾಡಿನ ಹೊಸೂರುನಲ್ಲಿ ನಲ್ಲಿರುವ ಟಿವಿಎಸ್ ಮೋಟಾರು ಘಟಕದಲ್ಲೇ ಬಿಎಂಡಬ್ಲ್ಯು ಜಿ 310 ಜಿಎಸ್ ಮತ್ತು ಜಿ 310 ಆರ್ ಬೈಕ್‌ಗಳು ನಿರ್ಮಾಣವಾಗಿವೆ. ಕೆಲದಿನಗಳ ಹಿಂದೆ ಬೆಂಗಳೂರು ಚೆನ್ನೈ ಹೆದ್ದಾರಿಯಲ್ಲಿ ಈ ಬೈಕ್​ಗಳನ್ನು ಸಾಗಾಟ ಮಾಡುತ್ತಿದ್ದ ಚಿತ್ರವೊಂದು ಸಾಕಷ್ಟು ವೈರಲ್​ ಆಗಿತ್ತು.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು313 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿದ್ದು, 28 ಎನ್​ಎಂ ತಿರುಗುಬಲದಲ್ಲಿ 33.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ವ್ಯವಸ್ಥೆಯಿದೆ. ಲಗೆಜ್ ಕ್ಯಾರಿಯರ್, ಟಾಪ್ ಬಾಕ್ಸ್, ಸೆಂಟರ್ ಸ್ಟ್ಯಾಂಡ್, ಜಿಪಿಎಸ್ ಸಪೋರ್ಟ್, ಜಿಪಿಎಸ್ ನೇವಿಗೇಟರ್ ವ್ಯವಸ್ಥೆಯಿದೆ.

ಗಂಟೆಗೆ 143 ಕಿ.ಮೀ ಟಾಪ್ ಸ್ಪೀಡ್ ಕ್ರಮಿಸುವ ಸಾಮರ್ಥ್ಯವಿದ್ದು, 12-ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯದೊಂದಿಗೆ ಪ್ರತಿ ಲೀಟರ್‌‌ಗೆ 30 ಕಿ.ಮಿ ಮೈಲೇಜ್ ಪಡೆದುಕೊಂಡಿರುತ್ತವೆ.

ಪ್ರತಿಸ್ಪರ್ಧಿಗಳು
Loading...

ಜುಲೈ 18ರಂದು ಆಟೋಮೊಬೈಕ್​ ಕ್ಷೇತ್ರಕ್ಕೆ ಬರುತ್ತಿರುವ ಈ ಎರಡು ಬೈಕ್​ಗಳು ಕೆಟಿಎಂ ಡ್ಯೂಕ್ 390, ಯಮಹಾ ಆರ್3 ಹಾಗೂ ಟಿವಿಎಸ್ ಅಪಾಚೆ ಆರ್‌ಆರ್ 310 ಹಾಗೂ ಹೋಂಡಾ ಸಿಬಿಆರ್​ 250ಗೆ ಪೈಪೋಟಿ ನೀಡಬಹುದು ಎನ್ನಲಾಗಿದೆ.
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ