ಬೆಂಗಳೂರಿಗರೇ....ಕೇವಲ 6.25 ಲಕ್ಷಕ್ಕೆ ಖರೀದಿಸಲು ಸಿಗುತ್ತಿದೆ BMW 3 Series 320d ಕಾರು!

BMW 3 Series 320d ಕಾರು ಬಲು ಕಡಿಮೆಗೆ ಖರೀದಿಸಲು ಸಿಗುತ್ತಿದೆ. 60ರಿಂದ 63 ಲಕ್ಷದವರೆಗಿನ BMW 3 Series 320d ಕೇವಲ 6.25 ಲಕ್ಷಕ್ಕೆ ಸಿಗುತ್ತಿದೆ.

BMW 3 Series 320d

BMW 3 Series 320d

 • Share this:
  ಕಾರು ಖರೀದಿಸಬೇಕು.. ಅದರಲ್ಲೂರು ಐಷಾರಾಮಿ ಕಾರು ನನ್ನ ಮನೆಯ ಮುಂದೆ ನಿಲ್ಲಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಬಿಎಮ್​ಡಬ್ಲ್ಯು, ಬೇಂಜ್​, ಬೆಂಟ್ಲಿ ಹೀಗೆ ದುಬಾರಿ ಕಾರಿನಲ್ಲಿ ಪ್ರಯಾಣ ಮಾಡಬೇಕು ಎಂಬ ಕನಸು ಮನದಲ್ಲಿ ಬೇರೂರಿದ್ದರು ಕೆಲವೊಮ್ಮ ಆರ್ಥಿಕ ಸ್ಥಿತಿಗತಿ, ಹೊಸ ಕಾರಿನ ಬೆಲೆಯಿಂದ ಖರೀಸಲು ಆಗದೆ ಸುಮ್ಮನೇ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಇನ್ನು ಕೆಲವು ಪಟ್ಟು ಹಿಡಿದು ಸಾಲ ಮಾಡಿದರು ಕಾರು ಖರೀದಿಸುತ್ತಾರೆ ಮತ್ತು ತಮ್ಮ ಆಸೆಯನ್ನು ಈಡೇರಿಸಿಕೊಳ್ಳುತ್ತಾರೆ. ಇಂತಹ ಆಸೆಗಳನ್ನು ಹೊಂದಿದ ಜನರಿಗೆ ಒಂದು ವೇಳೆ ಐಷಾರಾಮಿ ಕಾರು ಕಡಿಮೆ ಬೆಲೆಗೆ ಸಿಕ್ಕಿದರೆ ಹೇಗಿರಬಹುದು?. ಬೆಂಗಳೂರಿನಲ್ಲೇ ಅತಿ ಕಡಿಮೆ ಬೆಲೆಗೆ ಬಿಎಮ್​ಡಬ್ಲ್ಯು ಕಾರು ಖರೀದಿಗೆ ಸಿಗುತ್ತಿದೆ. ಇಂತಹ ಕಾರು ಖರೀದಿಸಬೇಕೆಂದುಕೊಂಡವರಿಗೆ ಇದೊಂದು ಸಿಹಿಸುದ್ದಿಯಾಗಿದೆ!

  ಹೌದು. BMW 3 Series 320d ಸೆಕೆಂಡ್​ ಹ್ಯಾಂಡ್​ ಕಾರು ಬಲು ಕಡಿಮೆಗೆ ಖರೀದಿಸಲು ಸಿಗುತ್ತಿದೆ. 2007ರ  ಕಾರು ಇದಾಗಿದ್ದು, 60ರಿಂದ 63 ಲಕ್ಷದವರೆಗಿನ BMW 3 Series 320d 6.25 ಲಕ್ಷಕ್ಕೆ ಸಿಗುತ್ತಿದೆ.

  ಮೊದಲೇ ಹೇಳಿದಂತೆ 2007ರ ಮಾಡೆಲ್​ ಕಾರು ಇದಾಗಿದೆ. ಡೀಸೆಲ್​ ವೆರಿಯಂಟ್​ನಲ್ಲಿದೆ. 80 ಸಾವಿರ ಕಿ.ಲೋ ಮೀಟರ್​ ಕ್ರಮಿಸಿದೆ. ಆಟೋಮ್ಯಾಟಿಕ್​ ವಾಹನವಾಗಿರುವ BMW 3 Series 320d ಕಾರು ಕೆಂಪು ಬಣ್ಣದಿಂದ ಕೂಡಿದೆ.

  2007BMW 3 Series 320d ಕಾರು 1995 ಸಿಸಿ ಎಂಜಿನ್​ 34.7@ 1, 750-3000 ಆರ್​ಪಿಎಂ ಉತ್ಪಾದಿಸುತ್ತದೆ. 13. 2 ಕಿಲೋ ಮೀಟರ್​ ಮೈಲೇಜ್​ ನೀಡಲಿದೆ.. 170 ಬಿಹೆಚ್​ಪಿ ಅಧಿಕ ಪವರ್​ನಿಂದ ಕೂಡಿದೆ. 16ಎಕ್ಸ್​ 7ಜೆ ವೀಲ್​​, 5 ಸೀಟಿನ ಕೆಪಾಸಿಟಿ ಮತ್ತು 6 ಸ್ಪೀಡ್​ ಗೇರ್​ ಬಾಕ್ಸ್​ ಹೊಂದಿದೆ.

  2007BMW 3 Series 320d ಸೆಕೆಂಡ್ ಹ್ಯಾಂಡ್​ ಕಾರನ್ನು ಕಾರ್​ದೇಕೊ ಸೈಟ್​ನಲ್ಲಿ ಮಾರಾಟ ಮಾಡುತ್ತಿದ್ದು, ಆಸಕ್ತರು ತಮ್ಮ ಮಾಹಿತಿಯನ್ನು ನೀಡುವ ಮೂಲಕ ಮತ್ತು ಸರಿಯಾಗಿ ಪರಿಶೀಲಿಸುವ ಮೂಲಕ ಕಾರು ಖರೀದಿಸಬಹುದಾಗಿದೆ.

  ಮತ್ತೊಂದು ವಿಚಾರವೆಂದರೆ ಬೆಂಗಳೂರಿಗರಿಗೆ ಇಷ್ಟೊಂದು ಕಡಿಮೆ ಬೆಲೆಗೆ 2007 BMW 3 Series 320d ಸೆಕೆಂಡ್​ಹ್ಯಾಂಡ್​ ಕಾರು ಖರೀದಿಸಿಗೆ ಸಿಗಲಿದೆ.

  ಇದನ್ನು ಓದಿ: Reliance Jio: ಈ ಪ್ರಿಪೇಯ್ಡ್​ ಪ್ಲಾನ್​ಗಳ ಮೇಲೆ ಶೇ.20ರಷ್ಟು ಕ್ಯಾಶ್​ಬ್ಯಾಕ್​​ ನೀಡಿದ ಜಿಯೋ; ಇಲ್ಲಿದೆ ಮಾಹಿತಿ

  ಸೆಕೆಂಡ್​ ಹ್ಯಾಂಡ್​ ಕಾರು ಖರೀದಿಸುವ ಮುನ್ನ ಇರಲಿ ಎಚ್ಚರ!

  -ಹೊಸ ಕಾರು ಮತ್ತು ಸೆಕೆಂಡ್​ ಹ್ಯಾಂಡ್​ ಖರೀದಿಸುವ ಮುನ್ನ ಕೊಂಚ ಗಮನ ಹರಿಸುವುದು ಮುಖ್ಯ. ಏಕೆಂದರೆ ಹೊಸ ಕಾರು ಹೊಸತನದಿಂದ ಕೂಡಿದ್ದರೆ. ಸೆಕೆಂಡ್​ಹ್ಯಾಂಡ್​ ಕಾರು ರಿಪೇರಿ ಹಾಗೂ ಕೆಲವು ಸಮಸ್ಯೆಯನ್ನು ಒಳಗೊಂಡಿರುತ್ತದೆ.

  -ಯಾರು ಕೂಡ ಕಾರನ್ನು ಸುಮ್ಮನೆ ಮಾರುವುದಿಲ್ಲ. ಅದರಲ್ಲೂ ಹೊಸ ಕಾರಿಗೆ ಬದಲಾಗುವವರು, ಕಾರಿನಲ್ಲಿ ಸಮಸ್ಯೆಯನ್ನು ಕಂಡವರು ಮಾತ್ರ ಹಳೆಯ ಕಾರನ್ನು ಮಾರಿ ಬೇರೆ ಕಾರು ಖರೀದಿಸುತ್ತಾರೆ. ಆದರೆ ಸೆಕೆಂಡ್​ಹ್ಯಾಂಡ್ ಖರೀದಿಗೂ ಮುನ್ನ ಗಮನವಹಿಸುವುದು ಅಗತ್ಯ.

  - ಸೆಕೆಂಡ್​ಹ್ಯಾಂಡ್ ಕಾರು ಖರೀದಿಸುವ ಮುನ್ನ ವಾಹನದ ಬಗ್ಗೆ ಸರಿಯಾದ ತಿಳುವಳಿಕೆಯಿರುವ ವ್ಯಕ್ತಿಯ ಬಳಿ ಕೇಳಿ ಮತ್ತು ಅವರೊಂದಿಗೆ ಖರೀದಿಸುವ ವಾಹನವನ್ನು ತೋರಿಸಿ. ಆ ಬಳಿಕ ಸಮಸ್ಯೆ ಏನಾದರು ಇದೆಯಾ ಎಂಬುದು ತಿಳಿದುಕೊಳ್ಳಿ

  - ಕೆಲವು ಅಫಘಾತವಾದ ವಾಹನವನ್ನು ಸೆಕೆಂಡ್​ಹ್ಯಾಂಡ್ ರೂಪದಲ್ಲಿ ಮಾರಾಟ ಮಾಡುತ್ತಾರೆ. ಎಂಜಿನ್​ ಹಾಳಾಗಿದ್ದು, ಮೇಲ್ನೋಟಕ್ಕೆ ಕಾರು ಚೆನ್ನಾಗಿ ಕಾಣುವಂತೆ ಸಿದ್ಧಪಡಿಸಿರುತ್ತಾರೆ. ಹಾಗಾಗಿ ಕ ಸೆಕೆಂಡ್​ಹ್ಯಾಂಡ್ ಕಾರು ಖರೀದಿ ಮುನ್ನ ಇರಲಿ ಎಚ್ಚರ!

  - ಯಾವುದೇ ವಾಹನವಾಗಿರಲಿ ಖರೀದಿಗೂ ಮುನ್ನ ಅದರ ಬ್ರಾಂಡ್​ವ್ಯಾಲ್ಯೂ ಬಗ್ಗೆ ಗಮನ ಹರಿಸುವುದು ತುಂಬಾನೆ ಅಗತ್ಯ. ಕೆಲವೊಂದು ವಾಹನಗಳಿಗೆ ಮಾರುಕಟ್ಟೆಯಲ್ಲಿ ಸ್ಥಾನವಿರುವುದಿಲ್ಲ ಮತ್ತು ಅದರ ಬಿಡಿ ಭಾಗಗಳು ಖರೀದಿಗೆ ಸಿಗುವುದಿಲ್ಲ. ಹಾಗಾಗಿ ಇದರ ಬಗ್ಗೆಯೂ ಗಮನಹರಿಸಬೇಕು
  Published by:Harshith AS
  First published: