ಇತ್ತೀಚೆಗೆ ವೈರ್ಲೆಸ್ ((Wireless) ಸಾಧನಗಳು ಬಹಳ ಪ್ರಸಿದ್ಧಿಯಲ್ಲಿ. ಟೆಕ್ನಾಲಜಿ (Technology) ಯುಗದಲ್ಲಿ ಈ ಮ್ಯೂಸಿಕ್ ಗ್ಯಾಜೆಟ್ಸ್ಗಳು (Music Gadgets) ಅಗ್ರಸ್ಥಾನವನ್ನು ಗಳಿಸಲು ಮುಂದಾಗುತ್ತಿದೆ. ಭಾರತೀಯ ಟೆಕ್ನಾಲಜಿ ಕಂಪನಿಗಳಲ್ಲಿ ಹಲವಾರು ಉತ್ತಮ ಗುಣಮಟ್ಟದ ಕಂಪನಿಗಳಿವೆ. ಈ ಕಂಪನಿಗಳು ದಿನದಿಂದ ದಿನಕ್ಕೆ ಹೊಸಹೊಸ ಸಾಧನಗಳನ್ನು ದೇಶದ ಮಾರುಕಟ್ಟೆಗಳಿಗೆ ತರಲು ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಸ್ಮಾರ್ಟ್ಫೋನ್ಗಳ ಜೊತೆ ಒಂದು ಇಯರ್ಫೋನ್ ಅಥವಾ ಬ್ಲೂಟೂತ್ ನೆಕ್ಬ್ಯಾಂಡ್ಗಳನ್ನು (Bluetooth Neckbands), ಹೆಡ್ಫೋನ್ಗಳನ್ನು (Headphones) ಇಟ್ಟುಕೊಂಡಿರುತ್ತಾರೆ. ಇದೀಗ ದೇಶದಲ್ಲಿ SWOTT ನೆಕಾನ್ 102 (SWOTT Neckon 102) ಎಂಬ ಬ್ಲೂಟೂತ್ ನೆಕ್ಬ್ಯಾಂಡ್ (Bluetooth Neckband) ಬಿಡುಗಡೆಯಾಗುತ್ತಿದ್ದು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಇದನ್ನು ಖರೀದಿಸಬಹುದಾಗಿದೆ.
ಹೌದು, ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ಹೆಚ್ಚು ಬೇಡಿಕೆಯಲ್ಲಿರುವಂತಹ ಸಾಧನಗಳೆಂದರೆ ಬ್ಲೂಟೂತ್ ನೆಕ್ಬ್ಯಾಂಡ್ಗಳು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಕಂಪನಿಯೊಂದು ಈ ಬಾರಿ ಹೊಸ ಬ್ಕೂಟೂತ್ ನೆಕ್ಬ್ಯಾಂಡ್ ಅನ್ನು ಬಿಡುಗಡೆ ಮಾಡುತ್ತಿದೆ. ಇದರ ಫೀಚರ್ಸ್ ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ.
Swott ನೆಕಾನ್ 102 ನೆಕ್ಬ್ಯಾಂಡ್ನ ಸ್ಪೆಷಲ್ ಫೀಚರ್ಸ್:
ಈ ಬ್ಲೂಟೂತ್ ನೆಕ್ಬ್ಯಾಂಡ್ ಅನ್ನು ಸಿಲಿಕಾನ್ನಿಂದ ತಯಾರಿಸಲಾಗಿದೆ. ಆದ್ದರಿಂದ ಇದು ಬಳಕೆದಾರರ ಚರ್ಮಕ್ಕೆ ಹಾನಿಯಾಗುವುದಿಲ್ಲ. ಅಲ್ಲದೆ, ಬಳಕೆದಾರರು ಇದನ್ನು ದೀರ್ಘಕಾಲದವರೆಗೆ ಹಾಕಿಕೊಳ್ಳಬಹುದಾಗಿದೆ.
ಇದನ್ನೂ ಓದಿ: 200 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಎರಡು ಸ್ಮಾರ್ಟ್ಫೋನ್ಸ್ ಬಿಡುಗಡೆ! 12 ನಿಮಿಷದಲ್ಲಿ ಫುಲ್ ಚಾರ್ಜ್
ವ್ಯಾಯಾಮಗಳು, ಜಾಗಿಂಗ್, ಓಟ ಮತ್ತು ಕ್ರೀಡಾ ಅವಧಿಗಳಲ್ಲಿ ನೀವು ಈ ನೆಕ್ಬ್ಯಾಂಡ್ ಅನ್ನು ಆರಾಮವಾಗಿ ಬಳಸಬಹುದು. ಈ ನೆಕ್ಬ್ಯಾಂಡ್ ಅನ್ನು ನಿಮ್ಮ ಸ್ಮಾರ್ಟ್ಫೋನ್ಗೆ ಒಮ್ಮೆ ಕನೆಕ್ಟ್ ಮಾಡಿದರೆ ನಂತರ ಮ್ಯೂಸಿಕ್ ಕೇಳುವಾಗ, ಕಾಲ್ ಸ್ವೀಕರಿಸುವಾಗ, ಮಾತನಾಡುವಾಗ ಇದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ.
ಬ್ಯಾಟರಿ ಸಾಮರ್ಥ್ಯ
ನೆಕಾನ್ 102 ದೀರ್ಘ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಈ ನೆಕಾನ್ 102 ನೆಕ್ಬ್ಯಾಂಡ್ 40 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಮತ್ತು 40 ಗಂಟೆಗಳವರೆಗೆ ನಿರಂತರವಾಗಿ ಈ ಬ್ಲೂಟುತ್ ಅನ್ನು ಬಳಸಬಹುದಾಗಿದೆ. ಇನ್ನು ಈ ಬ್ಲೂಟೂತ್ ನೆಕ್ಬ್ಯಾಂಡ್ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು 2 ಸೆಕೆಂಡುಗಳ ಕಾಲ ಪವರ್ ಬಟನ್ ಅನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಸೌಂಡ್ ಅಸಿಸ್ಟೆಂಟ್ ಅನ್ನು ಆನ್ ಮಾಡಬಹುದಾಗಿದೆ.
ನಾಯ್ಸ್ ಕ್ಯಾನ್ಸಲೇಶನ್ ಫೀಚರ್ಸ್
ಇನ್ನು ಈ ನೆಕಾನ್ 102 ಬ್ಲೂಟೂತ್ ಕಾಲ್ನಲ್ಲಿ ಮಾತಾಡಬೇಕಾದರೆ ಸ್ಪಷ್ಟವಾಗಿ ಕೇಳುವಂತಹ ಫೀಚರ್ಸ್ ಅನ್ನು ಹೊಂದಿದೆ. ನಾವು ಕೂಡ ಮಾತಾಡಬೇಕಾದರೆ ಕೇಳುವವರಿಗೆ ಸರಿಯಾಗಿ ಅರ್ಥೈಸುತ್ತದೆ. ಈ ಬ್ಲೂಟೂತ್ ಮ್ಯಾಗ್ನಟಿಕ್ ಮೆಟಲ್ ಇಯರ್ಬಡ್ಗಳನ್ನು ಒಳಗೊಂಡಿದ್ದು ಬ್ಲೂಟೂತ್ 5.0 ದಲ್ಲಿ ಕಾರ್ಯನಿರ್ವಹಿಸುತ್ತದೆ.
ಎರಡು ಡಿವೈಸ್ಗಳಿಗೆ ಕನೆಕ್ಟ್ ಆಗುತ್ತದೆ
ಇನ್ನು ಈ ನೆಕಾನ್ 102 ಬ್ಲೂಟೂತ್ ನೆಕ್ಬ್ಯಾಂಡ್ನ ವಿಶೇಷತೆಯೆಂದರೆ ಏಕಕಾಲದಲ್ಲಿ ಎರಡು ಸಾಧನಗಳಿಗೆ ಕನೆಕ್ಟ್ ಆಗುವಂತಹ ಸಾಮರ್ಥ್ಯವನ್ನು ಇದು ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಈ ನೆಕಾನ್ 102 ಬ್ಲೂಟೂತ್ ನೆಕ್ಬ್ಯಾಂಡ್ ಅನ್ನು ಗ್ರಾಹಕರು ಪ್ರಮುಖ ಇಕಾಮರ್ಸ್ ವೆಬ್ಸೈಟ್ ಆಗಿರುವಂತಹ ಅಮೆಜಾನ್ ಮತ್ತು ನೆಕಾನ್ ಕಂಪನಿಯ ಅಧಿಕೃತ ವೆಬ್ ಸೈಟ್ನಿಂದ ಖರೀದಿಸಬಹುದು. ಕಂಪನಿಯು ಈ ಬ್ಲೂಟೂತ್ ನೆಕ್ಬ್ಯಾಂಡ್ ಅನ್ನು 899 ರೂಪಾಯಿಯ ಆರಂಭಿಕ ಬೆಲೆಯಲ್ಲಿ ಪರಿಚಯಿಸಿದೆ. ಇದು ಗ್ರೇ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.
ಇದು ಭಾರತದಲ್ಲಿ ಬಿಡುಗಡೆಯಾಗುತ್ತಿರುವಂತಹ ವಿಶೇಷ ಫೀಚರ್ಸ್ ಹೊಂದಿದ 1 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆ ಹೊಂದಿರುವ ಬ್ಲೂಟೂತ್ ನೆಕ್ಬ್ಯಾಂಡ್ ಆಗಿದೆ. ಈ ಬ್ಲೂಟೂತ್ 10 ಎಮ್ಎಮ್ ಡ್ರೈವರ್ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ